babychakra-rewards
ಅಂಡೋತ್ಪತ್ತಿಯ(ovulation) ದಿನಗಳ ಬಗ್ಗೆ ಮಾಹಿತಿ-

ಸಂತಾನವನ್ನು ಬಯಸುವ ದಂಪತಿಗಳಿಗೆ ಅಂಡೋತ್ಪತ್ತಿಯ ದಿನಗಳ ಬಗ್ಗೆ ಅರಿವಿರಬೇಕಾದುದು ತುಂಬಾ ಅವಶ್ಯಕ.

ಮಹಿಳೆಯ ಮಾಸಿಕ ಚಕ್ರ:

ಒಂದು ವೇಳೆ ಮಹಿಳೆಯ ಮಾಸಿಕ ಚಕ್ರ ಮೂವತ್ತು ಅಥವಾ ಮೂವತ್ತೊಂದು ದಿನಗಳ ಅವಧಿಯಲ್ಲಿ ಪುನರಾವರ್ತನೆಯಾಗುತ್ತಿದ್ದರೆ ಅಂಡೋತ್ಪತ್ತಿಯಾಗುವ ದಿನ ಸುಮಾರು ಹನ್ನೊಂದರಿಂದ ಹದಿನಾಲ್ಕರ ದಿನಗಳ ನಡುವೆ ಇರುತ್ತದೆ. ಈ ದಿನಗಳನ್ನು ಖಚಿತಪಡಿಸಿಕೊಂಡು ಈ ದಿನಗಳಲ್ಲಿ ಕೂಡುವ ಮೂಲಕ ಸಫಲ ಗರ್ಭಧಾರಣೆಯಾಗಲು ಸಾಧ್ಯ.

ನೆನಪಿಡಿ, ಮಹಿಳೆಯ ದೇಹವನ್ನು ಪ್ರವೇಶಿಸಿದ ಬಳಿಕ ವೀರ್ಣಾಣುಗಳು ಸುಮಾರು ಮೂರರಿಂದ ಐದು ದಿನಗಳವರೆಗೂ ಜೀವಂತವಿರುತ್ತವೆ. ಆದರೆ ಬಿಡುಗಡೆಯಾದ ಅಂಡಾಣು ಕೇವಲ ಆರರಿಂದ ಹನ್ನೆರಡು ಗಂಟೆಗಳ ಕಾಲ ಮಾತ್ರವೇ ಕಾಯುತ್ತದೆ. ಈ ಸಮಯದಲ್ಲಿ ಫಲಿತಗೊಂಡರೆ ಮಾತ್ರ ಗರ್ಭಾಂಕುರವಾಗಲು ಸಾಧ್ಯ.

ಅಂಡೋತ್ಪತ್ತಿ ಲಕ್ಷಣಗಳು:

ಗರ್ಭಕಂಠದಿಂದ ಸ್ರವಿಸುವ ದ್ರವ:

ಅಂಡೋತ್ಪತ್ತಿಯಾಗಿರುವ ಇನ್ನೊಂದು ಸ್ಪಷ್ಟ ಸೂಚನೆಯೆಂದರೆ ಗರ್ಭಕಂಠದಿಂದ ಸ್ರವಿಸುವ ದ್ರವ. ಈ ದಿನ ಸ್ರವಿಸುವ ದ್ರವ ಹೆಚ್ಚೂ ಕಡಿಮೆ ಮೊಟ್ಟೆಯ ಬಿಳಿಭಾಗದಷ್ಟು ಗಾಢವಾಗಿರುತ್ತದೆ ಹಾಗೂ ಅಂಟು ಅಂಟಾಗಿರುತ್ತದೆ.

ಲಘುವಾಗಿ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ:

ಕೆಲವು ಮಹಿಳೆಯರಿಗೆ ಈ ಸಮಯದಲ್ಲಿ ಅತಿ ಲಘುವಾಗಿ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೂ ಹೀಗೇ ಆಗುತ್ತದಾದರೂ ಈ ಬಗ್ಗೆ ಗಮನ ಕೊಡದ ಕಾರಣ ಅನುಭವಕ್ಕೆ ಬಂದಿರಲಾರದು. ಆದರೆ ಮಾಸಿಕ ಋತುಚಕ್ರದ ದಿನಗಳನ್ನು ಲೆಕ್ಕಹಾಕಿದಾಗ ನಡುವಣ ದಿನಗಳಲ್ಲಿ ಈ ಅನುಭವವಾಗುವುದು ಗಮನಕ್ಕೆ ಬರುತ್ತದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಈ ನೋವು ಇತರ ಸಮಯಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿರುತ್ತದೆ.

ನಿಮ್ಮ ಅಂಡೋತ್ಪತ್ತಿಯನ್ನು ಪತ್ತೆಹಚ್ಚಲು ನೀವು ಮಾರುಕಟ್ಟೆಯಲ್ಲಿ ಅಂಡೋತ್ಪತ್ತಿ ಕಿಟ್ (ovulation kit)ಅನ್ನು ಸಹ ಪಡೆಯಬಹುದು.



Get the BabyChakra app
Ask an expert or a peer mom and find nearby childcare services on the go!
Phone
Scan QR Code
to open in App
Image
http://app.babychakra.com/feedpost/141267