#BBCreatorsClub
#newborncare #newborn #babycare
#firsttimemom #care #firstmonth #kannadapost
#kannada
#babycare ನವಜಾತ ಶಿಶುವಿನ ಆರೈಕೆಯ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿಯಲೇಬೇಕಾದ ಸಂಗತಿಗಳು:
ಗರ್ಭಧಾರಣೆ ಸಂದರ್ಭದಲ್ಲಿ ಮಗುವಿನ ಲಾಲನೆ ಪಾಲನೆ ಬಗ್ಗೆ ತಾಯಿಯು ತಿಳಿದುಕೊಳ್ಳುವರು. ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ಬಗ್ಗೆ ಈಗಲೂ ನಿಮಗೆ ಗೊಂದಲವಿದ್ದರೆ ಆಗ ನೀವು ಕೆಲವೊಂದು ಆರೈಕೆಯ ಕ್ರಮಗಳನ್ನು ತಿಳಿಯಬೇಕು.
ಮಗುವಿನ ಜನನದ ಬಳಿಕ ಪೋಷಕರು ತುಂಬಾ ಎಚ್ಚರಿಕೆ ವಹಿಸುವರು. ಮಕ್ಕಳ ಆರೈಕೆ ಎನ್ನುವುದು ಅಷ್ಟು ಸುಲಭದ ಕೆಲಸವಲ್ಲ, ಅದಕ್ಕೆ ತುಂಬಾ ಜವಾಬ್ದಾರಿ ಹಾಗೂ ಏಕಾಗ್ರತೆ, ತಾಳ್ಮೆ ಬೇಕು.
ಆದರೆ ಮೊದಲ ಸಲ ಪೋಷಕರಾಗುವಂತಹವರು ಯಾವುದು ತಪ್ಪು ಹಾಗೂ ಯಾವುದು ಸರಿ ಎಂದು ತಿಳಿಯಲು ಸಮರ್ಥರಾಗಿ ಇರುವುದಿಲ್ಲ. ನವಜಾತ ಶಿಶು ತುಂಬಾ ಸೂಕ್ಷ್ಮ ಹಾಗೂ ಕೋಮಲವಾಗಿರುವ ಕಾರಣದಿಂದಾಗಿ ಅತ್ಯಧಿಕ ಗಮನ ಹರಿಸಬೇಕಾಗುತ್ತದೆ. *ಮಗುವಿಗೆ ಹಾಲುಣಿಸುವ ಭಂಗಿ ತಿಳಿಯಿರಿ:
ಮಗುವಿಗೆ ಸರಿಯಾದ ರೀತಿಯಲ್ಲಿ ದಿನದಲ್ಲಿ ಹಲವು ಬಾರಿ ಹಾಲನ್ನು ನೀಡಿ. ಎರಡನೇಯದಾಗಿ ಮಗುವಿಗೆ ಹಾಲು ನೀಡುವ ಭಂಗಿ ಸರಿಯಾಗಿ ಇದೆಯಾ ತಿಳಿಯಿರಿ. ಮಗುವಿಗೆ ಹಾಲುಣಿಸುವ ಭಂಗಿಯು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಮಗು ತೇಗು ಬರುವಂತೆ ಮಾಡಿದ ಬಳಿಕ ಮಲಗುವುದನ್ನು ಅಭ್ಯಾಸ ಮಾಡಿಸಿಕೊಳ್ಳಿ.
ನವಜಾತ ಶಿಶುವಿಗೆ ಮಗುವಿನ ಹಾಲು ಮಾತ್ರ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು. ಎದೆಹಾಲಿನಿಂದ ಮಗುವಿನ ಬೆಳವಣಿಗೆ ಆಗುವುದು. ವೈದ್ಯರು ಸೂಚಿಸಿರುವಂತಹ ಸರಿಯಾದ ಪ್ರಮಾಣದಲ್ಲಿ ಮಗುವಿಗೆ ಹಾಲು ನೀಡಿ. #nesting
Renuka Pillai
Like
Reply
24 Aug 2019