anonymous
follow-btn
*ಭಕ್ತಿಗೀತೆ*
ಕರವನು ಜೋಡಿಸಿ ಬೇಡುವೆ ದೇವಿಯೇ

ವರವನು ನೀಡೆನಗೆ ಧನಲಕ್ಷ್ಮಿಯೇ
ಗುಡಿಕಟ್ಟಿ ಎದೆಯಲ್ಲಿ ಪೂಜೆ ಗೈಯುತಿರುವೆ

ಮಡಿಯುಟ್ಟು ಮನದಿ ಸ್ಮರಣೆ ಮಾಡುತಿರುವೆ

ಉಡಿತುಂಬಿ ನನ್ನನ್ನು ಉದ್ಧರಿಸು ಬಂದು

ಅಡಿಗಡಿಗೆ ಕೋರುವೆನು ರಕ್ಷಿಸೆನ್ನನು ಎಂದು |೧|
ಮನೆಮನವ ಬೆಳಗುವ ಬೆಳಕಾಗಿ ಬಾರೇ

ಧನಕನಕ ನೀಡುವ ಫಲವಾಗಿ ಬಾರೇ

ಮನುಜನೆದೆಯಲ್ಲಿ ಧೈರ್ಯವ ತಾರೇ

ಅನುದಿನ ಬಾಳಲ್ಲಿ ನೆಮ್ಮದಿಯ ತಾರೇ|೨|
ನಗುಮೊಗದ ಸಿರಿದೇವಿ ಬಾರಮ್ಮ ತಾಯೇ

ಜಗವನುದ್ಧರಿಸಲು ತೋರಮ್ಮ ಮಾಯೆ

ಹಗಲಿರುಳು ಬೇಡುವೆನು ನಿನ್ನನ್ನು ನಾನು

ಮಗುವೆಂದು ತಿಳಿದು ಹರಸಮ್ಮ ನೀನು |೩|
ಭಕುತಿಯಲಿ ಫಲಪುಷ್ಪ ನಿನಗಾಗಿ ತಂದಿರುವೆ

ಶಕುತಿಯನು ನೀಡೆಂದು ನಿನಮುಂದೆ ನಿಂತಿರುವೆ

ರಕುತದಲಿ ನಿನ್ನ ನಾಮವದು ಹರಿಯುತಿದೆ

ಮುಕುತಿಯನು ಕರುಣಿಸಿ ಕಾಪಾಡು ಎನುತಿದೆ |೪|
✍ *ಚಂದ್ರಶೇಖರ ಶೆಟ್ಟಿ ಕೊಡ್ಲಾಡಿ*✍
Like

3

Likes

Comment

3

Comments

Share

0

Shares

settings
Anonymous

Anon_9482835763

Tq all

Like

Reply

Anonymous

Sowmya Prithvi

ತುಂಬಾ ಚೆನ್ನಾಗಿದೆ..

Like

Reply

Anonymous

Madhavi Cholera

<b><span style="color:#3B5998;"> @61dbd6dada536000136e401c </span></b>

Like

Reply

lifestage
gallery
send