ಸನ್ನಿ ಬಾಣಂತಿಯರಿಗೆ ಕಾಡುವ ಮಾನಸಿಕ ಕಾಯಿಲೆ ಹೆರಿಗೆಯಾದ ನಂತರ ಕೆಲ ಮಹಿಳೆಯರಲ್ಲಿ ತೀವ್ರ ರೀತಿಯ ಖಿನ್ನತೆ ಉಂಟಾಗುತ್ತದೆ. ಊಟ ನಿದ್ದೆ ಯಾವುದರಲ್ಲೂ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಮಗುವಿನ ಮೇಲೆ ಪ್ರೀತಿ ತೋರಿಸುವುದಿಲ್ಲ ಸದಾ ಮಂಕಾಗಿ ಇರುತ್ತಾಳೆ. ಈ ರೀತಿಯ ಕಾಯಿಲೆಯನ್ನು ಬಾಣಂತಿ ಸನ್ನಿ(puereperal psychossis) ಅಂತ ಕರೆಯುತ್ತಾರೆ.
ಹೆರಿಗೆಯ ಸಮಯದಲ್ಲಿ ಉಂಟಾದ ತೀವ್ರವಾದ ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಂದ ಈ ರೀತಿ ಉಂಟಾಗುವುದು. ಕೆಲವೊಮ್ಮೆ ಅನುವಂಶೀಯವಾಗಿ ಕೂಡ ಬರುತ್ತದೆ. ಈ ಕಾಯಿಲೆ ಕಾಣಿಸಿ ಕೊಂಡರೆ ಕೂಡಲೇ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಇಲ್ಲದಿದ್ದರೆ ಇದು ಬಾಣಂತಿಯ ಮಾನಸಿಕ ಸಮತೋಲನವನ್ನು ತಪ್ಪಿಸುವಷ್ಟು ಅಪಾಯಕಾರಿಯಾಗುವುದು.
ಸನ್ನಿಯ ಸಾಮಾನ್ಯ ಲಕ್ಷಣಗಳು: * ಖಿನ್ನತೆ ಹೆರಿಗೆ ನಂತರದ 8ನೇ ಅಥವಾ 10 ನೇ ದಿನದಲ್ಲಿ ಕಾಣಿಸಿಕೊಳ್ಳುತ್ತದೆ. * ಮಂಕಾಗಿರುವುದು ಅಥವಾ ಚಟುವಟಿಕೆ. * ಅರ್ಥವಿಲ್ಲದೆ ನಗುವುದು, ಅಳುವುದು, ಕೋಪ ಮತ್ತು ಭಯಪಟ್ಟುಕೊಳ್ಳುವುದು * ಭ್ರಮೆಯಲ್ಲಿರುವುದು * ಶಿಶುವಿನ ಕಡೆ ನಿರ್ಲಕ್ಷ್ಯ * ಇದ್ದಕ್ಕಿದ್ದ ಹಾಗೆ ವಿಚಿತ್ರ ನಡುವಳಿಕೆ * ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯ * ಹಿಂಸಾಚಾರ ಮತ್ತು ಆತ್ಮ ಹತ್ಯೆ ಪ್ರಯತ್ನ * ತೀವ್ರವಾದ ಗೊಂದಲ ಕಾಣಿಸಿಕೊಳ್ಳಲು ಕಾರಣವಾದ ಅಂಶಗಳು:
1. ಚೊಚ್ಚಲ ಹೆರಿಗೆ 2. ಇಷ್ಟವಾಗದ ಗರ್ಭಧಾರಣೆ 3.ಕುಟುಂಬದವರಲ್ಲಿ ಮಾನಸಿಕ ಖಾಯಿಲೆಯಿದ್ದರೆ 4.ಗರ್ಭಾವಸ್ಥೆಯಲ್ಲಿ ಆರೋಗ್ಯದ ಕೊರತೆ ಇದ್ದಿದ್ದರೆ 5. ಗರ್ಭಧಾರಣೆಯ ಅಂತಿಮ ಅವಧಿಯಲ್ಲಿ ನಂಜೇರುವುದು, ರಕ್ತದೊತ್ತಡ ಏರುವುದು, ಫಿಟ್ಸ್ 6. ಹೆರಿಗೆಯಲ್ಲಿ ತೀವ್ರ ಕಷ್ಟ ಮತ್ತು ಮಾನಸಿಕ ಒತ್ತಡ ಅನುಭವಿಸಿದಾಗ 7.ಬಾಣತಿಯಲ್ಲಿ ವಿಪರೀತ ರಕ್ತ ಸ್ರಾವ 8. ಬಾಣಂತಿ ಸೋಂಕು ತಗುಲಿ ಜ್ವರ ಕಾಣಿಸಿಕೊಂಡರೆ 9. ಅನಾರೋಗ್ಯ ಪೀಡಿತ ಮಗುವಿನ ಜನನ ಸನ್ನಿಗೆ ಪರಿಹಾರ:
1. ಬಾಣಂತಿ ಸನ್ನಿ ಕಾಣಿಸಿದ ಕೂಡಲೇ ಸಾಮಾನ್ಯ ವೈದ್ಯರು ಅಥವಾ ಮನೋವೈದ್ಯರಿಗೆ ತೋರಿಸಿ 2. ಸೂಕ್ತವಾದ ಚಿಕಿತ್ಸೆ ನೀಡಿ. 3. ವಿಪರೀತಕ್ಕೆ ತಲುಪಿದ್ದರೆ ವಿದ್ಯುತ್ ಕಂಪನ ಚಿಕಿತ್ಸೆ(ECT) ನೀಡಬೇಕಾಗುತ್ತದೆ 4. ರಕ್ತಹೀನತೆಯನ್ನು ಗುಣಪಡಿಸಬೇಕು. 5.ಮಗುವಿನ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಗಮನ ನೀಡುವಂತೆ ಪ್ರೋತ್ಸಾಹ ನೀಡಬೇಕು. 6. ಈ ಸಮಯದಲ್ಲಿ ಮನೆಯವರು ಅವರ ಹತ್ತಿರ ಹೆಚ್ಚು ವಿಶ್ವಾಸದಿಂದ ನಡೆದುಕೊಳ್ಳಬೇಕು.
veena s
Like
Reply
23 Dec 2019