• ಮೊದಲಿಗೆ ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಂಡು ಬೇಯಿಸಿಕೊಳ್ಳಬೇಕು. ಸಂಪೂರ್ಣವಾಗಿ ನುಣ್ಣಗೆ ಆಗದಂತೆ ಬೇಯಿಸಿಕೊಳ್ಳಬೇಕು.
• ನಂತರ ಒಂದು ಪಾತ್ರೆಗೆ ಮೈದಾಹಿಟ್ಟು, ಜೋಳದ ಹಿಟ್ಟು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದ ಪುಡಿ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
• ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಕಾದ ನಂತರ ಮಿಶ್ರಣಕ್ಕೆ ಅಲೂಗಡ್ಡೆಗಳನ್ನು ಚೆನ್ನಾಗಿ ಅದ್ದಿ, ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದುಕೊಳ್ಳಬೇಕು.
• ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಸೋಯಾ ಸಾಸ್, ಟೊಮೆಟೋ ಸಾಸ್, ವಿನೆಗರ್, ಚಿಲ್ಲಿ ಸಾಸ್, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಅರ್ಧ ಚಮಚದಷ್ಟು ಜೋಳದ ಹಿಟ್ಟಿಗೆ ನೀರು ಮಿಶ್ರಣ ಮಾಡಿಕೊಂಡು ಮಂಚೂರಿ ಮಸಾಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈಗಾಗಲೇ ಎಣ್ಣೆಯಲ್ಲಿ ಕರಿದುಕೊಂಡ ಆಲೂಗಡ್ಡೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಆಲೂ ಮಂಚೂರಿ ಸವಿಯಲು ಸಿದ್ಧ. #bengalurumom #nesting #kannadamom#bbcreatorsmom#bbcreatorsclub #recipes#eveningsnackrecipes #kannadamombuddy
28 Dec 2019
4
Likes
2
Comments
0
Shares
Sowmya Prithvi
ಮಲ ವಿಸರ್ಜನೆ ವೇಳೆ ಮಗು ಅಳುವುದು ಯಾಕೆ? ನವಜಾತ ಶಿಶುಗಳ ಆರೈಕೆ ಮಾಡುವುದು ಒಂದು ಅಗ್ನಿಪರೀಕ್ಷೆ ಎಂದರೆ ತಪ್ಪಾಗದು. ಯಾಕೆಂದರೆ ಕೇವಲ ತನ್ನ ಅಳುವಿನ ಮೂಲಕ ಮಾತ್ರ ಎಲ್ಲವನ್ನು ತಿಳಿಸುವ ಶಿಶುಗಳು ಯಾವ ಸಂದರ್ಭದಲ್ಲಿ ಯಾಕಾಗಿ ಅಳುತ್ತಿವೆ ಎಂದು ತಿಳಿಯುವುದು ತುಂಬಾ ಕಠಿಣ ಕೆಲಸ. ನವಜಾತ ಶಿಶುವಿಗೆ ಎಲ್ಲವೂ ಹೊಸತು ಆಗಿರುವ ಕಾರಣದಿಂದಾಗಿ ಪ್ರತಿಯೊಂದಕ್ಕೂ ಅದು ಅಳುವುದು. ಇದೇ ವೇಳೆ ಅದು ಮಲ ವಿಸರ್ಜನೆ ಮಾಡಿದರೂ ಅಳುವುದು. ಪ್ರತೀ ಸಲ ಮಲ ವಿಸರ್ಜನೆ ವೇಳೆ ಮಗು ಅಳುತ್ತಾ ಇದ್ದರೆ ಆಗ ಹೊಸ ಅನುಭವಕ್ಕೆ ಅದರ ಪ್ರತಿಕ್ರಿಯೆ ಆಗಿದೆ. ಮಗು ಅಳುತ್ತಿದ್ದರೆ ಆಗ ಅದಕ್ಕೆ ನೋವಾಗುತ್ತಿದೆ ಎಂದು ಹೇಳಲು ಬರದು. ಹೀಗಾಗಿ ಮೊದಲ ಸಲ ತಾಯಿ ಆಗುತ್ತಿರುವವರು ಮಗು ಮಲ ವಿಸರ್ಜನೆ ವೇಳೆ ಅಳುವುದು ಯಾಕೆ ತಿಳಿಯಿರಿ. ಅಪ್ರೌಢ ದೇಹ: ಮಲಗಿರುವ ವೇಳೆ ಮಲ ವಿಸರ್ಜನೆ ಮಾಡುವುದು ತುಂಬಾ ಕಠಿಣ. ಕರುಳಿನ ಕ್ರಿಯೆಗಳಿಂದಾಗಿ ಮಗುವಿಗೆ ಮಲ ವಿಸರ್ಜನೆ ವೇಳೆ ಹೆಚ್ಚು ಒತ್ತಡ ಬೀಳಬಹುದು. ಮಗು ಕುಳಿತುಕೊಂಡು ಮಲ ವಿಸರ್ಜನೆ ಮಾಡುವುದಿಲ್ಲ. ಇದರಿಂದಾಗಿ ಮಗುವಿಗೆ ಮಲ ವಿಸರ್ಜನೆ ಮಾಡಲು ಹೆಚ್ಚು ಶಕ್ತಿ ಬೇಕಾಗುವುದು. ಮಗು ಬೆಳವಣಿಗೆ ಆಗದೆ ಇರುವ ಕಾರಣದಿಂದಾಗಿ ಇದು ತುಂಬಾ ಕಠಿಣವಾಗಿರುವುದು. ಇದರಿಂದಾಗಿ ಮಗು ಮಲ ವಿಸರ್ಜನೆ ವೇಳೆ ಅಳುವುದು. ಮಗುವಿನ ಮಲಬದ್ಧತೆ: ಮಲ ಹೊರಹಾಕಲು ಮಗು ತುಂಬಾ ಅಳುತ್ತಿದ್ದರೆ ಆಗ ನೀವು ಮಗುವಿಗೆ ಮಲಬದ್ಧತೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಗಟ್ಟಿ, ಒಣ ಮಲ ವಿಸರ್ಜನೆ ಮಾಡುತ್ತಲಿದ್ದರೆ, ಸ್ತನಪಾನ ಮಾಡುತ್ತಿರುವ ಮಗು ಒಂದು ವಾರ ಅಥವಾ ಬಾಟಲಿ ಹಾಲು ಕುಡಿಯುವ ಮಗು ಮೂರು ದಿನಗಳ ಕಾಲ ಮಲ ವಿಸರ್ಜನೆ ಮಾಡದೆ ಇದ್ದರೆ ಆಗ ಮಗುವಿಗೆ ಮಲಬದ್ಧತೆ ಆಗಿದೆ ಎಂದು ತಿಳಿಯಬೇಕು. ಮಲಬದ್ಧತೆ ಪರಿಣಾಮವಾಗಿ ಮಗುವಿಗೆ ಮಲ ವಿಸರ್ಜನೆ ಮಾಡಲು ತುಂಬಾ ಕಷ್ಟವಾಗಬಹುದು. ಇದರಿಂದ ಅದಕ್ಕೆ ನೋವು ಆಗಬಹುದು. ಆಹಾರಕ್ರಮ ಹೀಗಿರಲಿ: ಮಗುವಿಗೆ ಮಲಬದ್ಧತೆ ಕಡಿಮೆ ಮಾಡಲು ತಾಯಂದಿರು ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯಬೇಕು. ಮಗುವಿಗೆ ನೀಡುವಂತಹ ಆಹಾರದಲ್ಲಿ ಸಕ್ಕರೆ ದ್ರಾವಣ ಬೆರೆಸಿಕೊಳ್ಳಿ. 6+ ತಿಂಗಳಿಗಿಂತ ದೊಡ್ಡ ಮಗುವಾಗಿದ್ದರೆ ಆಗ ತಾಜಾ ಹಣ್ಣಿನ ಜ್ಯೂಸ್ ನೀಡಿ. ಮಗು ಘನ ಆಹಾರ ಸೇವನೆ ಮಾಡುತ್ತಲಿದ್ದರೆ ಆಗ ನೀವು ಮಗುವಿಗೆ ನಾರಿನಾಂಶವು ಹೆಚ್ಚಾಗಿರುವ ಆಹಾರ ನೀಡಬೇಕು. ಇದರಲ್ಲಿ ಮುಖ್ಯವಾಗಿ ಬಸಳೆ, ಬಟಾಣಿ ಕಾಳು ಇತ್ಯಾದಿಗಳು. ಈ ಮದ್ದುಗಳು ಫಲ ನೀಡದೆ ಇದ್ದರೆ ಆಗ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಮಕ್ಕಳಲ್ಲಿ ಮಲಬದ್ಧತೆ ಕಾಡಲು ಪ್ರಮುಖ ಕಾರಣವೆಂದರೆ ಅವರ ದೇಹಕ್ಕೆ ಸರಿಯಾಗಿ ದ್ರವಾಹಾರ ಸಿಗದೆ ಇರುವುದು ಮತ್ತು ಹೊಸ ಆಹಾರ ಅಥವಾ ಬೇರೆ ಯಾವುದೇ ಆಹಾರ ನೀಡಿದರೆ ಹೀಗೆ ಆಗಬಹುದು. ಗ್ಯಾಸ್ನ ನೋವು ಮಲ ವಿಸರ್ಜನೆ ವೇಳೆ ಮಗು ಅಳಲು ಮತ್ತೊಂದು ಕಾರಣವೆಂದರೆ ಅದು ಗ್ಯಾಸ್ ನ ನೋವು. ಮಲ ವಿಸರ್ಜನೆ ಮಾಡುವ ವೇಳೆ ನೋವು ಹೆಚ್ಚಾಗುವುದು. ಗ್ಯಾಸ್ ಹೊಟ್ಟೆಯಲ್ಲಿ ತುಂಬಿರುವ ಕಾರಣದಿಂದಾಗಿ ಮಗು ಅಳುತ್ತಾ ಇರಬಹುದು. ಸ್ತನದ ಹಾಲು ಅಥವಾ ಹಾಲು ಅತಿಯಾಗಿ ಸೇವನೆಯಿಂದಾಗಿ ಕೆಲವೊಂದು ಪೋಷಕಾಂಶಗಳು ಕರಗದೆ ಗ್ಯಾಸ್ ನಿರ್ಮಾನವಾಗಬಹುದು. ಆಹಾರ ನೀಡುವ ಕ್ರಮ, ಮಲಬದ್ಧತೆ ಮತ್ತು ಕರುಳಿನ ಸೋಂಕು ಮಗುವಿನಲ್ಲಿ ಗ್ಯಾಸ್ ಉಂಟು ಮಾಡಬಹುದು. ಗ್ಯಾಸ್ನ ನೋವು-ಮಗುವಿಗೆ ಆಹಾರ ನೀಡಿದ ಬಳಿಕ ತೇಗು ಬರಿಸಿದರೆ ಮಗುವಿಗೆ ಗ್ಯಾಸ್ ಸಮಸ್ಯೆ ಕಡಿಮೆ ಆಗುವುದು. ಹೊಟ್ಟೆಯಲ್ಲಿ ಕಟ್ಟಿಕೊಂಡಿರುವ ಗ್ಯಾಸ್ ಹೊರಗಡೆ ಬರಲು ಮಸಾಜ್ ಮಾಡಬೇಕು ಮತ್ತು ಸಾಕಷ್ಟು ನೀರು ಕುಡಿಸಿ. ಮಲ ವಿಸರ್ಜನೆ ವೇಳೆ ಮಗು ತುಂಬಾ ಅಳುತ್ತಿದ್ದರೆ ಅಥವಾ ಕಿರುಚಿದರೆ, ಮುಖದಲ್ಲಿನ ಹಾವಭಾವ ಬದಲಾದರೆ ಆಗ ನೀವು ಚಿಂತೆ ಮಾಡಬೇಕಾಗಿಲ್ಲ. ಇದು ಒಂದು ವೈದ್ಯಕೀಯ ಸಮಸ್ಯೆ ಎಂದು ಭಾವಿಸಬೇಕಾಗಿಲ್ಲ. ಆದರೆ ಕೆಲವು ದಿನಗಳಿಂದ ಮಗು ಮಲ ವಿಸರ್ಜನೆ ಮಾಡದೆ ಇದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಮಗುವಿನ ಹೊಟ್ಟೆಗೆ ನೀವು ಮಸಾಜ್ ಮಾಡಿ ಗ್ಯಾಸ್ ಹೊರಗೆ ಬರಲು ಪ್ರಯತ್ನಿಸಬಹುದು ಅಥವಾ ಮಗುವಿಗೆ ನೀಡುವಂತಹ ಆಹಾರದಲ್ಲಿ ಬದಲಾವಣೆ ಮಾಡಿ ಪರೀಕ್ಷಿಸಬಹುದು. #bengalurumom #nesting #kannadamom
ಟೊಮೆಟೊ ಪುಲಾವ್🍅 ಬೇಕಾಗುವ ಸಾಮಾಗ್ರಿ: ತುಪ್ಪ- 2 ಚಮಚ ಮಸಾಲೆ ಪದಾರ್ಥಗಳು -ಸ್ವಲ್ಪ ಗೇರುಬೀಜ-ಸ್ವಲ್ಪ ಬೆಳ್ತಕ್ಕಿ - 1 ಕಪ್ ಟೊಮೆಟೊ- 4 ಈರುಳ್ಳಿ-2 ಬಟಾಣಕಾಳು-ಸ್ವಲ್ಪ ಅರಶಿನ ಪುಡಿ-1/4 ಚಮಚ ಧನಿಯಾ ಪುಡಿ-1 ಚಮಚ ಕಾಶ್ಮೀರಿ ಮೆಣಸು ಪುಡಿ-1 ಚಮಚ ಉಪ್ಪು-1ಚಮಚ ಸಕ್ಕರೆ-1/2 ಚಮಚ ಶುಂಠಿ, ಬೆಳ್ಳುಳ್ಳಿ-ಸ್ವಲ್ಪ ಹಸಿಮೆಣಸು-4 ನೀರು-ಒಂದೂವರೆ ಕಪ್ ಕೊತ್ತಂಬರಿ ಸೊಪ್ಪು-ಸ್ವಲ್ಪ ಪುದೀನಾ ಸೊಪ್ಪು-ಸ್ವಲ್ಪ ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನೆಸಿಡಿ. ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು, ಕಾಶ್ಮೀರಿ ಕೆಂಪು ಮೆಣಸು ಮತ್ತು ಗೋಡಂಬಿಯನ್ನು ಮಿಕ್ಸಿ ಜಾರ್ ನಲ್ಲಿ ನುಣ್ಣಗೆ ರುಬ್ಬಿ ಪಕ್ಕದಲ್ಲಿಡಿ. ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಲು ಇಡಿ. ಅದಕ್ಕೆ ಮಸಾಲೆ ಪದಾರ್ಥ ಮತ್ತು ಇಡಿ ಗೋಡಂಬಿಯನ್ನು ಸೇರಿಸಿ ಹುರಿಯಿರಿ. ಅದಕ್ಕೆ ಪೇಸ್ಟ್ ಮಾಡಿಟ್ಟ ವಸ್ತುಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯುತ್ತಿರಿ. ನಂತರ ಅದಕ್ಕೆ ಹೆಚ್ಚಿಟ್ಟ ಈರುಳ್ಳಿ, ಬಟಾಣಿ ಕಾಳು ಸೇರಿಸಿ ಹುರಿಯಿರಿ. ನಂತರ ಈ ಮಿಶ್ರಣಕ್ಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ. 30 ಸೆಕೆಂಡು ಹುರಿಯಿರಿ. ಈಗ ಹೆಚ್ಚಿ ಇಟ್ಟ ಟೊಮಾಟೊವನ್ನು ಸೇರಿಸಿ ಕಡಾಯಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಎಲ್ಲವನ್ನೂ ಬಿಸಿ ಮಾಡಿ. ಟೊಮಾಟೊ ಸ್ವಲ್ಪ ಮೃದುವಾಗಲಿ. ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು ಸೇರಿಸಿ. ಈಗ ಮಸಾಲೆ ಸಿದ್ದವಾಗಿದೆ. ಇದಕ್ಕೆ ನೀರಿನಲ್ಲಿ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಬೇಕಾದಷ್ಟು ನೀರು ಹಾಕಿ.ಸ್ವಲ್ಪ ಹೊತ್ತು ಕುದಿಯಲು ಬಿಟ್ಟು ಪ್ರೆಶರ್ ಮುಚ್ಚಲು ಮುಚ್ಚಿ, ಒಂದು ಕೂಗು ಬರುವವರೆಗೆ ಬಿಸಿ ಮಾಡಿ. ಕುಕ್ಕರ್ ನಿಂದ ಗ್ಯಾಸ್ ಹೋದ ಮೇಲೆ ತೆರೆದು ಬಿಸಿ ಬಿಸಿ ತಿನ್ನಲು ನೀಡಿ. ಟೊಮಾಟೊ ಪುಲಾವ್ ,ರಾಯತಾ ತಯಾರಿಸಿ ಸೇರಿಸಿ ತಿಂದರೆ ಇನ್ನೂ ಚೆನ್ನಾಗಿರುತ್ತದೆ. #bengalurumom #nesting #kannadamom#bbcreatorsmom#bbcreatorsclub #recipes#lunchboxrecipe #kannadamombuddy
27 Dec 2019
6
Likes
1
Comment
0
Shares
Sowmya Prithvi
ಸಸ್ಯಗಳಿಗೆ ನೀರುಹಾಕುವುದು, ಪ್ರತಿದಿನ ಬೆಳಿಗ್ಗೆ ನಮ್ಮ ಮೊದಲ ಕೆಲಸ...🌱