4 Jul 2019 | 1 min Read
Medically reviewed by
Author | Articles
ನಿರೀಕ್ಷಿತ ತಾಯಂದಿರ ಗರ್ಭಾವಸ್ಥೆಯ ವಾರಗಳ ಲೆಕ್ಕ ಹಾಕುವಿಕೆ, ಗರ್ಭಧಾರಣೆಯ ಆರೈಕೆಯ ಪ್ರಮುಖವಾದ ಅಂಶಗಳು
ಮಹಿಳೆ ಗರ್ಭಿಣಿಯಾಗಿರುವ ವಾರಗಳ ಸಂಖ್ಯೆಯನ್ನು ಗೆಸ್ಟೇಶನಲ್ ಏಜ್ ಅಥವಾ ಮೇನ್ಸ್ಟ್ರುಅಲ್ ಏಜ್ ಎಂದು ವೈದ್ಯಕೀಯವಾಗಿ ಹೇಳಲಾಗುತ್ತದೆ. ಗೆಸ್ಟೇಶನಲ್ ಏಜ್ ಸಾಮಾನ್ಯವಾಗಿ ಕಳೆದುಹೋದ ವಾರಗಳನ್ನು ಪ್ರತಿನಿಧಿಸುತ್ತದೆ. ಬೆಳೆಯುತ್ತಿರುವ ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿಯಲು ನಿಮ್ಮ ವೈದ್ಯರ ಭೇಟಿ ಸಮಯದಲ್ಲಿ ಗೆಸ್ಟೇಶನಲ್ ಏಜ್ ಅನ್ನು ದಾಖಲಿಸುವುದು ಅತ್ಯಗತ್ಯ.
ವಿವಿಧ ವಿಧಾನಗಳನ್ನು ಬಳಸಿಕೊಂಡು ಗೆಸ್ಟೇಶನಲ್ ಏಜ್ ಅನ್ನು ಲೆಕ್ಕಹಾಕಬಹುದು. ನೀವು ಎಷ್ಟು ವಾರಗಳ ಗರ್ಭಿಣಿಯಾಗಿದ್ದೀರಿ ಎಂದು ತಿಳಿಯಲು ಒಂದು ಕ್ಯಾಲ್ಕುಲೇಟರ್ ಬಳಸುವುದು ಅತ್ಯಂತ ಅನುಕೂಲಕರ ವಿಧಾನವಾಗಿದೆ. ಇದು ಹೆರಿಗೆಯ ದಿನಾಂಕವನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳುವುದು ಸಾಮಾನ್ಯ ಗರ್ಭಾವಸ್ಥೆಯ ಮೈಲಿಗಲ್ಲುಗಳನ್ನು ಮೌಲ್ಯಮಾಪನ ಮಾಡಲು ಮಾತ್ರವಲ್ಲ, ಮಗುವಿನಲ್ಲಿ ಬೆಳವಣಿಗೆ ದೋಷಗಳು ಇದ್ದರೇ ಪತ್ತೆ ಹಚ್ಚುವುದು ಕೂಡಾ ಮುಖ್ಯ. ಕೆಲವು ಸಂದರ್ಭಗಳಲ್ಲಿ, ಮಗುವಿನ ಬೆಳವಣಿಗೆಗೂ ಗೆಸ್ಟೇಶನಲ್ ಎಜೆಗೂ ಹೊಂದಿಕೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಗರ್ಭಾವಸ್ಥೆಯ ಇತರ ತೊಡಕುಗಳನ್ನು ಸಹ ಒಳಗೊಂಡಿರುತ್ತದೆ, ಗೆಸ್ಟೇಶನಲ್ ಏಜ್ ಹೆರಿಗೆಯ ದಿನಾಂಕವನ್ನು ನಿರ್ಧರಿಸುವಲ್ಲಿ ಸಹಾಯ ಮಾಡುತ್ತದೆ.
ಸಾಮಾನ್ಯ ಗರ್ಭಧಾರಣೆ 40 ವಾರಗಳವರೆಗೆ ವಿಸ್ತರಿಸುತ್ತದೆ. ಈ ಕೆಳಗಿನಂತೆ ವಿವಿಧ ವಿಧಾನಗಳನ್ನು ಬಳಸಿಕೊಂಡು ಮಹಿಳೆ ಎಷ್ಟು ವಾರಗಳವರೆಗೆ ಗರ್ಭಿಣಿಯಾಗಿರಬಹುದೆಂದು ಲೆಕ್ಕಹಾಕುತ್ತದೆ:
ಇತ್ತೀಚಿನ ದಿನಗಳಲ್ಲಿ, ಗೆಸ್ಟೇಶನಲ್ ಏಜ್ ಅನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಮಹಿಳೆ ಎಷ್ಟು ವಾರಗಳ ಗರ್ಭಿಣಿ ಎಂದು ತಿಳಿಯಲು ಉಚಿತ ಆನ್ಲೈನ್ ಕ್ಯಾಲ್ಕುಲೇಟರ್ ಲಭ್ಯವಿದೆ.
ಎಲ್ಎಂಪಿ ಮತ್ತು ಯುಎಸ್ಜಿ ವಿಧಾನದ ನಡುವಿನ ಗರ್ಭಧಾರಣೆಯ ವಯಸ್ಸಿನಲ್ಲಿ 7 ದಿನಗಳ ವ್ಯತ್ಯಾಸದ ಸಂದರ್ಭದಲ್ಲಿ, ಎಲ್ಎಂಪಿ ವಿಧಾನದಿಂದ ಲೆಕ್ಕಹಾಕಲ್ಪಟ್ಟ ಗೆಸ್ಟೆಶನಲ್ ಏಜ್ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ. ಇದನ್ನು 7-ದಿನದ ನಿಯಮ ಎಂದು ಕರೆಯಲಾಗುತ್ತದೆ. 10 ದಿನ ನಿಯಮದಲ್ಲಿ, ಯುಎಸ್ಜಿ ಸ್ಕ್ಯಾನ್ ಪಡೆದ ಗೆಸ್ಟೆಶನಲ್ ಏಜ್ 10 ದಿನಗಳಿಗಿಂತ ಹೆಚ್ಚು ವ್ಯತ್ಯಾಸವಾಗಿದ್ದಾಗ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ.
ದೊಡ್ಡ ದೋಷಗಳನ್ನು ತಪ್ಪಿಸಲು ಎಲ್ಎಂಪಿ ಮತ್ತು ಯುಎಸ್ ಜಿ ವಿಧಾನಗಳನ್ನು ಬಳಸಿಕೊಂಡು ಲೆಕ್ಕಹಾಕುವ ಗೆಸ್ಟೆಶನಲ್ ಏಜ್ ಅನ್ನು ಸಂಯೋಜನೆಯಲ್ಲಿ ಬಳಸಲಾಗುತ್ತದೆ.
ಹಕ್ಕುತ್ಯಾಗ: ಲೇಖನದಲ್ಲಿನ ಮಾಹಿತಿಯು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗಾಗಿ ಪರ್ಯಾಯವಾಗಿ ಉದ್ದೇಶಿಸಿಲ್ಲ ಅಥವಾ ಸೂಚಿಸಲ್ಪಟ್ಟಿಲ್ಲ. ನಿಮ್ಮ ವೈದ್ಯರ ಸಲಹೆಯನ್ನು ಯಾವಾಗಲೂ ಪಡೆಯಿರಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.