ನಿಮಗೆ ಉಸಿರಾಡಲು ತೊಂದರೆಯಾಗುತ್ತಿದೆಯೇ

cover-image
ನಿಮಗೆ ಉಸಿರಾಡಲು ತೊಂದರೆಯಾಗುತ್ತಿದೆಯೇ

ಇದ್ದಕ್ಕಿದ್ದಾಗೆ ಕೆಲವರಿಗೆ ಉಸಿರಾಡಲು ಕಷ್ಟವಾಗುತ್ತದೆ. ಜನಜಂಗುಳಿ ಇದ್ದಾಗ, ಮಾಲಿನ್ಯ ತುಂಬಿದ ಪ್ರದೇಶದಲ್ಲಿ ಓಡಾಡುವಾಗ, ಬಸ್ಸು ಕಾರು ಜೀಪು ಪ್ರಯಾಣಿಸುತ್ತಿರುವಾಗ, ನಾಯಿ ಬೆಕ್ಕು ಹತ್ತಿರ ಬಂದಾಗ, ಪಟಾಕಿಯ ವಾಸನೆ, ಪೆಟ್ರೋಲ್ ಮತ್ತು ಡೀಸೆಲ್ ವಾಸನೆ, ಇವೇ ಮುಂತಾದ ಸಹ್ಯವಲ್ಲದ ಪರಿಸರದಲ್ಲಿ ನಾವು ಇದ್ದಾಗ ನಮಗೆ ಉಸಿರುಗಟ್ಟಿದ ಅನುಭವವಾಗುತ್ತದೆ. ಒಂದು ರೀತಿಯಲ್ಲಿ ಇದ್ದಕ್ಕಿದ್ದಹಾಗೆ ಕೆಮ್ಮು ಬರುತ್ತದೆ. ಇದು ಅಲರ್ಜಿಯ ಲಕ್ಷಣಗಳು. ಇದನ್ನು ನಾವು ಗಮನದಲ್ಲಿಟ್ಟು ಸರಿಯಾದ ಚಿಕಿತ್ಸೆ ಮಾಡದೇ ಹೋದರೆ, ಮುಂದೆ ಬೃಹದಾಕಾರವಾಗಿ ಬೆಳೆದು ಅಸ್ತಮಾಗೆ ಗುರಿಯಾಗುತ್ತೇವೆ. 

 

ಒಂದು ರೀತಿಯಲ್ಲಿ ಹೇಳಬೇಕೆಂದರೆ ಕಲುಷಿತ ವಾತಾವರಣದಲ್ಲಿ ನಮಗೆ ಉಸಿರುಗಟ್ಟಿದ ಪರಿಸ್ಥಿತಿ ಸೃಷ್ಟಿಯಾಗುತ್ತದೆ.  

 

ಉಸಿರುಗಟ್ಟುವ ಮುನ್ನ, ಈ ಹಿಂದೆ ಯಾವುದಾದರೂ ಅಲರ್ಜಿಕಾರಕ ಪ್ರದೇಶದಲ್ಲಿ ಅಥವಾ ಪರಿಸರ ಮಾಲಿನ್ಯದ ಸ್ಥಳದಲ್ಲಿ ನಿಮಗೆ ಹೀಗಾಗಿದೆ ಎಂದು ಊಹಿಸಿಕೊಳ್ಳಿ. ಈ ಲೇಖನದಲ್ಲಿ ಅಸ್ತಮಾದ ಲಕ್ಷಣಗಳು ಮತ್ತು ಕೆಲವು ಮಾಹಿತಿಯನ್ನು ಬೇಬಿ ಜತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ.

 

“ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾದಾಗ ಅಲರ್ಜಿಯ ಪ್ರಭಾವ ಹೆಚ್ಚುತ್ತದೆ.”

 

 • ಅಲರ್ಜಿ ಹೆಚ್ಚಿದಾಗ ಜ್ವರ ಹೆಚ್ಚಾಗುವುದು ಅಥವಾ ಅಲರ್ಜಿಕ್ ರೈನಟೀಸ್ ಕಂಡುಬರುತ್ತದೆ. ಅಂದರೆ ಮೂಗು ಮತ್ತು ಕಣ್ಣಿನ ಒಳಚರ್ಮದಲ್ಲಿ ಊತ ಉಂಟಾಗುತ್ತದೆ.

 

 • ಅಲರ್ಜಿಕ್ ರೈನಟೀಸ್ ಉಂಟಾದಾಗ ಮೂಗಿನಿಂದ ಸೋರುವುದು, ಮೂಗಿನಿಂದ ಉಸಿರಾಟದ ತೊಂದರೆ, ಗಂಟಲು, ಕಣ್ಣು ತುರಿಕೆ ಕಾಣಿಸಿಕೊಳ್ಳುತ್ತದೆ.

 

 • ಅಲರ್ಜಿಕ್ ರೈನಟೀಸ್ ಎಂಬುದು ಧೂಳು, ಪ್ರಾಣಿಯ ಕೂದಲು, ಜಿರಳೆ, ವಿವಿಧ ಬಗೆಯ ಹೂವಿನಗಿಡಗಳು, ಸೆಂಟುಗಳು, ಹೂವಿನ ಸುವಾಸನೆಗೆ ಆರಂಭವಾಗುತ್ತದೆ.

 

 • ಅಲರ್ಜಿ ನಿಮ್ಮನ್ನು ಕಾಡಿದಾಗ ಮೊದಲು ನಿಮ್ಮ ಶ್ವಾಸಕೋಶದ ನಳಿಕೆಯಲ್ಲಿ ಊಟ ಉಂಟಾಗಿ ಶ್ವಾಸನಾಳವು ಬಿಗಿದುಕೊಳ್ಳುತ್ತದೆ. ಇದರ ಪರಿಣಾಮ ಉಸಿರುಗಟ್ಟಿದಂತಾಗುತ್ತದೆ.

 

 • ಆಸ್ತಮಾ ರೋಗಿಗಳಲ್ಲಿ ಬ್ರೊಂಚಿಯಲ್ ಹೈಪರ್ ರಿಯಾಕ್ಟಿವಿಟಿ ಹೆಚ್ಚಿರುತ್ತದೆ ‌‌‌‌‌. ಆದ್ದರಿಂದ ಬಿ ಹೆಚ್ ಆರ್ ಅಸ್ತಮಾ ಮತ್ತು ಅಲರ್ಜಿಕ್ ರೋಗಿಗಳು ತಂಬಾಕಿನ ಹೊಗೆ, ವಾಹನದ ಹೊಗೆ, ಅಡಿಗೆ ಮಾಡುವಾಗ ಹುರಿಯುವ ಹೊಗೆ, ತಮ್ಮನ್ನು ಒಡ್ಡಿಕೊಳ್ಳಬಾರದು. 

 

 • ದೇಹದಲ್ಲಿನ ರೆಸಿಸ್ಟಿವಿಟಿ ಕಡಿಮೆಯಾದಾಗ ಅಲರ್ಜಿಯ ತೀವ್ರತೆ ಹೆಚ್ಚಾಗಿರುತ್ತದೆ. ಗರ್ಭಿಣಿಯರಲ್ಲಿ ಮತ್ತು ಬಾಣಂತಿಯರಲ್ಲಿ ರೋಗನಿರೋಧಕ ಶಕ್ತಿ ತುಂಬಾ ಕಡಿಮೆ ಇರುವುದರಿಂದ ಅಲರ್ಜಿಕಾರಕ ಬಹುಬೇಗನೆ ಕಾಣಿಸಿಕೊಳ್ಳುತ್ತದೆ.

 

 • ಕೆಲವರಿಗೆ ಅಲರ್ಜಿ ಮತ್ತು ಅಸ್ತಮಾ ವಂಶಪಾರಂಪರ್ಯವಾಗಿ ಬಂದಿರುತ್ತದೆ. ತಂದೆ-ತಾಯಿಗೆ ಇಲ್ಲದೆ ಅಜ್ಜ ಅಜ್ಜಿಗೆ ಇದ್ದರೂ ಕೂಡ ಮೊಮ್ಮಕ್ಕಳಿಗೆ ಬಾಧಿಸುತ್ತದೆ. ಅಥವಾ ತಂದೆತಯಿಯರಿಂದ ಬರಬಹುದು. 

 

ಕಾರಣಗಳು

 

 • ಪ್ರಾಣಿಗಳ (ಚರ್ಮ, ಕೂದಲು )
 • ಬ್ಯಾಕ್ಟೀರಿಯ
 • ಧೂಳಿನ ಕಣ
 • ಬಿಡಿ ಮತ್ತು ಸಿಗರೇಟಿನ ಹೊಗೆ
 • ವಾಯುಮಾಲಿನ್ಯ
 • ವಿವಿಧ ಸುವಾಸನೆಯ ವಸ್ತುಗಳು (ಊದುಬತ್ತಿ, ಸೆಂಟು, ವಿವಿಧ ಕ್ರೀಡೆಗಳು, ಹೂವಿನ ಸುವಾಸನೆ)
 • ವಿಪರೀತ ಚಳಿ ಅಥವಾ ತಂಪು ಪದಾರ್ಥದ ಸೇವನೆ
 • ಅಡುಗೆಯ ಘಾಟು ಅಥವಾ ಎಣ್ಣೆ ಪದಾರ್ಥದ ಕರಿದ ವಾಸನೆ
 • ಸೋಂಕು
 • ಅನುವಂಶಿಯತೆ
 • ಭಾವನೆಯ ಏರುಪೇರು (ಖಿನ್ನತೆ, ಒತ್ತಡ)
 • ಅಲರ್ಜಿಕಾರಕ ರಾಸಾಯನಿಕಗಳು
 • ಸ್ಥೂಲಕಾಯ ಮತ್ತು ಅನಾರೋಗ್ಯ ಸಮಸ್ಯೆ ಇರುವವರಿಗೆ
 • ಮನೆಯಲ್ಲಿ ಉಪಯೋಗಿಸುವ ಕಟ್ಟಿಗೆಯ ಹೊಗೆ, 
 • ಆಹಾರದಲ್ಲಿ ಸಲ್ಫೇಟ್ ಗಳು
 • ಶಿಲೀಂದ್ರ ಅಥವಾ ಫಂಗಸ್ ಇರುವ ಆಹಾರಗಳು (ಅಣಬೆ)

 

ಚಿನ್ಹೆ ಮತ್ತು ಲಕ್ಷಣ

 

 • ಉಸಿರಾಟದಲ್ಲಿ ತೊಂದರೆ
 • ಹಠಾತ್ ಉಸಿರುಗಟ್ಟಿದ ಹಾಗಾಗುವುದು
 • ಗೊರಲು ಶಬ್ದ
 • ತೇಗು ಉಬ್ಬಸ
 • ಕಾಫಿ ಮಿಶ್ರಿತ ಕೆಮ್ಮು
 • ಇಂಟರ್ ಕೋಸ್ಟಲ್ ರೆಟ್ರಾಕ್ಷನ್ (ಎದೆಬಿಗಿತ)
 • ರಾತ್ರಿ ಮತ್ತು ಮುಂಜಾವಿನ ಸಮಯದಲ್ಲಿ ಉಸಿರಾಟದಲ್ಲಿ ತೊಂದರೆ.

 

ಪರಿಹಾರ

 

ನೀಲಗಿರಿ ತೈಲ:- ಉಸಿರಾಟದ ತೊಂದರೆ ಕಾಣಿಸಿದಾಗ ರಾತ್ರಿಯಾಗಲಿ ಅಥವಾ ಹಗಲಾಗಲಿ ನೀಲಗಿರಿ ತೈಲವನ್ನು 3-4 ಹನಿ ಬಟ್ಟೆಯಲ್ಲಿ ಹಾಕಿ ಉಸಿರಲ್ಲಿ ತೆಗೆದುಕೊಳ್ಳಿ.

 

ಅಂಜೂರ:- ಅಂಜೂರದ ಹಣ್ಣನ್ನು ರಾತ್ರಿಯಲ್ಲಿ ನೆನೆಯಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ಉಸಿರಾಟದ ತೊಂದರೆ ಮತ್ತು ಕಫ ದೋಷ ನಿವಾರಣೆಯಾಗುತ್ತದೆ.

 

ಜೇನುತುಪ್ಪ: ಇದು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದ ಸಾಂಪ್ರದಾಯಿಕ. ಕಫವನ್ನು ಕರಗಿಸುವ ಸಾಮರ್ಥ್ಯ ಜೇನಿನಲ್ಲಿ ಇದೆ. ಅರ್ಧ ಚಮಚ ಜೇನಿಗೆ ಚಿಟಿಕೆ ಕರಿಮೆಣಸಿನ ಪುಡಿ ಮತ್ತು ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಬೆಳಗ್ಗೆ-ಸಂಜೆ ತೆಗೆದುಕೊಳ್ಳುವುದು.

 

ನಿಂಬೆ:- ವಿಟಮಿನ್ ಸಿ ಕೊರತೆಯಿಂದ ನರಳುತ್ತಿರುವವರಿಗೆ ಆಸ್ತಮ ಸಮಸ್ಯೆ ಬಹುಬೇಗ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಿಂಬೆಹಣ್ಣಿನ ಬಳಕೆಯನ್ನು ಮಾಡಿರಿ.

 

ಬೆಚ್ಚಗಿನ ನೀರು:- ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಯನ್ನು ಹೊಂದಿರುವವರು, ಅಸ್ತಮಾ ಉಬ್ಬಸ ಸಮಸ್ಯೆ ಹೊಂದಿರುವವರು ಬಿಸಿ ನರನ್ನು ಕುಡಿದರೆ ಒಳ್ಳೆಯದು

 

ಅಲರ್ಜಿ ಮತ್ತು ಆಸ್ತಮಾದ ಮಾಹಿತಿಯನ್ನು ಕೊಟ್ಟಿರುವ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ. 

#afterdeliveryfood #mothercare
logo

Select Language

down - arrow
Personalizing BabyChakra just for you!
This may take a moment!