“ನವಜಾತ ಶಿಶುವಿನ ಶರೀರ ತುಂಬಾ ಸೂಕ್ಷ್ಮವಾದುದು. ಸಾಂಪ್ರದಾಯಿಕ ವಿಧಾನದ ಹಲವಾರು ಹಂತಗಳಲ್ಲಿ ಮಗುವಿನ ಆರೈಕೆ ನಡೆಯುತ್ತದೆ. ಮಾವಿಗೆ ಸಾಂಪ್ರದಾಯದಾ ಪ್ರಕಾರವಾಗಿ ಔಷಧಿಯನ್ನು ನೀಡುವುದರಿಂದ ಮಗುವಿಗೆ ವಿರುದ್ಧ ಪರಿಣಾಮವನ್ನು ಬೀರಬಹುದು. “
ಮಗು ಈ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೆ ಮನೆಯ ಮಂದಿಯಲ್ಲಾ ಒಂದು ರೀತಿಯಲ್ಲಿ ಈ ಹಬ್ಬವನ್ನು ಆಚರಿಸಿದಂತೆ ಸಂಭ್ರಮ ಪಡುತ್ತಾರೆ. ಮನೆಯಲ್ಲಿ ಹಿರಿಯ ವಯಸ್ಸಾದ ಹೆಂಗಸರಿದ್ದರಂತೂ ಮುಗಿಯಿತು. ಸಾಂಪ್ರದಾಯಿಕ ವಿಧಾನದ ಆರೈಕೆ ಜೊತೆಗೆ ಕೆಲವು ಔಷಧಗಳ ಪ್ರಯೋಗ ಮನೆಮದ್ದುಗಳ ಪ್ರಯೋಗ ಮಗು ಮತ್ತು ಬಾಣಂತಿಯ ಮೇಲೆ ನಡೆಯುತ್ತದೆ. ಕೆಲವರಲ್ಲಿ ಮಗು ತುಂಬಾ ಸಣ್ಣ ಇದೆ ಬಹುಬೇಗ ದಪ್ಪಗಾಗಬೇಕು ಎಂಬ ಆಸೆಯಿಂದ ಮಗುವಿನ ತಾಯಿಯನ್ನು ಸರಿಯಾಗಿ ಹಾಲು ಕೊಡುತ್ತಿಲ್ಲ ಎಂದು ದೂರುತ್ತಾರೆ. ಇತ್ತೀಚೆಗೆ ಬಹಳಷ್ಟು ತಾಯಂದಿರು ಮಗುವಿಗೆ ಆರು ತಿಂಗಳು ತುಂಬುವ ಮುನ್ನವೇ ಆಹಾರವನ್ನು ನೀಡುತ್ತಾರೆ. ಅಷ್ಟೇ ಅಲ್ಲ, ಮಕ್ಕಳು ದೊಡ್ಡವರು ತಿನ್ನುವ ಹಾಗೆ ಆಹಾರವನ್ನು ಅರಗಿಸಿ ಕೊಳ್ಳುತ್ತದೆ ಎಂಬುದು ಕೆಲವು ಜನರಲ್ಲಿ ಅಪನಂಬಿಕೆ ಇದೆ. ಆದರೆ ತಿಳಿದುಕೊಳ್ಳಿ ಮಗು ಹಸಿದಾಗ ತಾಯಿಯ ಎದೆಹಾಲನ್ನು ಕೇಳುತ್ತದೆ. ಮಗುವಿನ ಭಾಷೆಯೇ ಅಳು. ಅದು ಹಸಿವಾದಾಗ, ನಿದ್ರೆ ಬಂದಾಗ, ತನ್ನ ತಾಯಿ ಜೊತೆ ಇಲ್ಲದಾಗ, ಅಳುತ್ತಾ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತದೆ.
ನವಜಾತ ಶಿಶು ಜನಿಸಿದ 28 ದಿನಗಳು ತುಂಬಾ ಸೂಕ್ಷ್ಮ ದಿನಗಳಾಗಿರುತ್ತವೆ. ಈ ಅವಧಿಯಲ್ಲಿ ಮಗುವನ್ನು ಕಣ್ಣ ರೆಪ್ಪೆಯಲ್ಲಿ ಕಾಯುವಂತೆ ಮನೆಯವರು ಮಗುವಿನ ತಾಯಿ ಸೇರಿ ಕಾಪಾಡಬೇಕಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ಮಗುವಿನ ಅನಿರೀಕ್ಷಿತ ಅನಾರೋಗ್ಯ ಕಾಡುತ್ತದೆ. ಮಗುವಿನ ಆರೈಕೆಯಲ್ಲಿ ನಾವು ಗಮನಿಸಿಕೊಳ್ಳಬೇಕಾದ ಮುಖ್ಯ ಅಂಶವೆಂದರೆ,
- ಕಡಿಮೆ ತೂಕದಲ್ಲಿ ಜನಿಸಿದ ಮಗು
- ಮಗುವಿನ ಜನನದ ಸಮಯದಲ್ಲಾಗುವ ಕೆಲವು ತೊಡಕುಗಳು
- ಜನ್ಮಜಾತವಾಗಿ ಬಂದಿರುವ ಕಾಯಿಲೆ.
ಈ ಮೇಲ್ಕಂಡ ಯಾವುದೇ ಸಮಸ್ಯೆಗಳು ಮಗುವಿನಲ್ಲಿ ಇದ್ದಾರೆ ಅಂತ ಮಕ್ಕಳನ್ನು ತೀವ್ರ ನಿಗಾ ವಹಿಸಿ ನೋಡಬೇಕಾಗುತ್ತದೆ.
ಮಗುವಿನ ಆರೈಕೆಯಲ್ಲಿ ನಾವು ಮಾಡುವ ತಪ್ಪುಗಳು
- ಮಗುವನ್ನು ಬೆಚ್ಚಗಿಡದೇ ಇರುವುದು.
- ಮಗುವಿಗೆ ಸಮರ್ಪಕವಾದ ಹಾಲು ಕೊಡದಿರುವುದು
- ಸಾಂಪ್ರದಾಯಿಕ ವಿಧಾನವೆಂದು ವಿಪರೀತವಾದ ಆಯುರ್ವೇದ ಮದ್ದುಗಳನ್ನು ಮನೆಯವರೇ ತಯಾರಿಸಿ ಮಗುವಿಗೆ ಕುಡಿಸುವುದು.
- ಸರಿಯಾದ ಸಮಯಕ್ಕೆ ಮಗುವಿಗೆ ಚುಚ್ಚುಮದ್ದನ್ನು ಹಾಕದೆ ಇರುವುದು
- ಮಗುವಿನ ತೂಕ ಹೆಚ್ಚಾಗಲಿ ಎಂದು ಶೀಘ್ರವೇ ಮನೆಯಲ್ಲಿ ತಯಾರಿಸಿದ ಆಹಾರವನ್ನು ಕೊಡುವುದು.
- ಮಗುವಿಗೆ ದೃಷ್ಟಿ ತಾಗಿದ ಎಂದು ವಿ ಪರೀತವಾದ ಧೂಪ ಹೊಗೆಯನ್ನು ಹಾಕಿ ಕೊಠಡಿಯನ್ನು ಹೋಗಿ ಮಾಡಿ ಮಗುವಿಗೆ ಉಸಿರುಕಟ್ಟಿದಂತೆ ಮಾಡುವುದು
- ಬಾಣಂತಿ ಮತ್ತು ಮಗುವಿನ ಕೊಠಡಿಯನ್ನು ಗಾಳಿಯಾಡಲು ಬೆಳಕು ಇಲ್ಲದೆ ಕತ್ತಲಾಗಿ ಸುವುದು
- ಮಗುವಿಗೆ ಹಸುವಿನ ಹಾಲನ್ನು ನೀಡುವುದು
- ಕೆಲವು ಜ್ಯೋತಿಷ್ಯಶಾಸ್ತ್ರದ ಅನುಗುಣವಾಗಿ ತಾಯಿ ಮತ್ತು ಮಗುವನ್ನು ದೂರಮಾಡುವುದು ಅಪನಂಬಿಕೆಯನ್ನು ಅನುಸರಿಸುವುದು.
- ಎದೆ ಹಾಲು ಕಡಿಮೆ ಇದೆ ಎಂದು ಹಲವು ನೀಡದೇ ಇರುವುದು. ಬಾಟಲಿ ಹಾಲಿನ ಅಭ್ಯಾಸ ಮಾಡುವುದು.
- ಸ್ತನದ ತೊಟ್ಟಲ್ಲಿ ಸೀಳು , ಸ್ತನದ ನೋವು, ಸ್ಥಾನ ಗಟ್ಟಿಯಾಗುವಿಕೆ ಕಂಡಾಗ ಮಗುವಿಗೆ ಹಾಲು ನೀಡದೆ ಇರುವುದು.
ಮಗುವಿನ ಆರೈಕೆಯನ್ನು ಹೇಗೆ ಮಾಡಬೇಕು
- ನವಜಾತ ಶಿಶುವಿನ ಹೊಕ್ಕಳುಬಳ್ಳಿ ಹುಟ್ಟಿದಾಗ ದಪ್ಪಗಿರುತ್ತದೆ ಮತ್ತು ಗಾಯ ಒಣಗಿರುವುದಿಲ್ಲ. ಮಗುವನ್ನು ಸ್ನಾನ ಮಾಡಿದ ಬಳಿಕ ಚೆನ್ನಾಗಿ ಬಿಸಿ ಶಾಖ ಕೊಟ್ಟು ಒದ್ದೆಯನ್ನು ಆರಿಸಬೇಕು.
- ಹೊಕ್ಕಳು ಬಳ್ಳಿಗೆ ಪೌಡರ್ ಬಳಕೆ ಮಾಡಬೇಡಿ. ಗಾಯ ಒಳಗೂ ದರ ಬದಲು ನೀವು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಕಸ್ಮಾತ್ ಮಗುವಿನ ಗಾಯ ಒಣಗದೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು
- ಮಗುವಿಗೆ ಜ್ವರ ಬಂದಾಗ, ಮೂಗು ಕಟ್ಟಿ ಉಸಿರಾಟದ ತೊಂದರೆ ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಿ.
- ತಾಯಿ ಮತ್ತು ಮಗು ಉಪಯೋಗಿಸುವ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿ ಸ್ವಚ್ಛವಾಗಿ ಉಪಯೋಗಿಸಿ
- ಮಗುವಿಗೆ ಯಾವಾಗಲೂ ಸ್ನಾನಕ್ಕೆ ಮುಂಚೆ ಎಣ್ಣೆಯನ್ನು ಲೇಪಿಸಿ ತೈಲಾಭ್ಯಂಜನ ಮಾಡಿ ಮಲಗಿಸಿ.
- ಮಗುವನ್ನು ತಾಯಿ ಮತ್ತು ಮನೆಯ ಹಿರಿಯ ಹೆಂಗಸರು ಬಿಟ್ಟರೆ ಉಳಿದವರು ಮಗುವನ್ನು ಪದೇಪದೇ ಮುಟ್ಟಬೇಡಿ.
- ಮನೆಯವರು ಬಿಟ್ಟರೆ ಹೊರಗಡೆಯವರು ಮಗುವನ್ನು ನೋಡಲು ಬಂದರೆ ಮಗುವನ್ನು ಅವರ ಕೈಗೆ ಕೊಡಬೇಡಿ.
- ನೆಂಟರಿಷ್ಟರು, ಸ್ನೇಹಿತರು ಮಗುವನ್ನು ನೋಡಲು ಮನೆಗೆ ಬಂದಾಗ ಕೈಕಾಲು ತೊಳೆಯಲು ನೀರು ಕೊಡಿ ಮತ್ತು ಸ್ಯಾನಿಟೈಸರ್ ಬಳಕೆ ಮಾಡುವಂತೆ ಹೇಳಿ.
- ಅವಧಿಗೆ ಪೂರ್ಣ ಜನಿಸಿದ ಮಗು ಮತ್ತು ತೂಕ ಕಡಿಮೆ ಇರುವ ಮಗುವಿಗೆ ಸ್ನಾನ ಮಾಡಿಸಬೇಡಿ. ಅವರಿಗೆ ಸ್ಪಾಂಜ್ ಬಾತ್ ಸೂಕ್ತ.
ನವಜಾತ ಶಿಶುವಿನ ಆರೈಕೆಯ ಬಗ್ಗೆ ತಿಳಿಸಿಕೊಟ್ಟ ಈ ಲೇಖನ ನಿಮಗೆ ಇಷ್ಟವಾಗಿದ್ದರೆ, ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ಪ್ರತಿಕ್ರಿಯೆ ನೀಡಿ.
#infantcare #infantfood