ಸಾವಿರ ಸಂಬಾರ ಸೊಪ್ಪು

;coleus aromaticus;;Benth;;;;;;;; ; ; ;

;ಇದಕ್ಕೆ ಸಾಂಬಾರು ಸೊಪ್ಪಿನಬಳ್ಳಿ, ದೊಡ್ಡಪತ್ರೆ:- ಇತ್ಯಾದಿ ಕನ್ನಡ ಹೆಸರುಗಳಿವೆ.

ಸಾವಿರ ಸಂಬಾರಗಿಡವು ನೆಲದ ಮೇಲೆ ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಇದರ ಹೆಸರಿನ ಜೊತೆ ಬಳ್ಳಿ ಶಬ್ದ ಸೇರಿದ್ದರೂ ಇದು ;ಬಳ್ಳಿಯಲ್ಲ. ಆದರೆ ನೆರಳಿರುವಲ್ಲಿ ಅಥವಾ ಆಧಾರವು ದೊರೆತರೆ ಬಸಲೆಯಂತೆ ತುಸು ಉದ್ದವಾಗಿ ಹಬ್ಬಿಕೊಳ್ಳುತ್ತದೆ.ಎದುರು ಬದುರು ಇರುವ ದಪ್ಪ ರಸಭರಿತ ಎಲೆಗಳು ಹಸುರಾಗಿದ್ದು ತುಂಬಾ ಸುವಾಸನೆಯುಳ್ಳದ್ದಾಗಿವೆ.

ಅನೇಕರು ಇದನ್ನು ಮನೆಮದ್ದು ಮತ್ತು ಅಡುಗೆಯಲ್ಲಿ ಬಳಸುತ್ತಾರೆ. ಎಲೆಯಿಂದ . ರಸ ತೆಗೆಯುವ ಮುನ್ನ ಅಡುಗೆ ಮಾಡಲು,ಕಟ್ಟಿಗೆ ಒಲೆ ಉರಿಸಿದ ನೆಲದ ಮೇಲೆ ಎಲೆಗಳನ್ನು ಇಟ್ಟು ಬಾಡಿಸಿಕೊಳ್ಳುತ್ತಾರೆ ಎಲೆಗಳು ಬಾಡಿಸಿದರೆ ರಸವನ್ನು ಹಿಂಡಿಕೊಳ್ಳುವದು ಸುಲಭವಾಗುತ್ತದೆ. ಈಗ ಕಟ್ಟಿಗೆ ಒಲೆ ಬಳಕೆಯಿಲ್ಲದ ಕಡೆ, ಎಲೆಗಳನ್ನು ಬಿಸಿಲಿನಲ್ಲಿ ಬಾಡಿಸಿ ಅಥವಾ ಸಣ್ಣ ಉರಿಯ ಮೇಲಿಟ್ಟು ಕಾಸಿದ ಪಾತ್ರೆಯ ಮೇಲೆ ಎಲೆಗಳನ್ನಿಟ್ಟು ಬಾಡಿಸಿಕೊಳ್ಳಬಹುದು. ಎಲೆಗಳನ್ನು ಬಾಳೆ ಎಲೆಯಲ್ಲಿಟ್ಟು ಬಾಳೆ ಎಲೆಯನ್ನು ಸುತ್ತಿ ಅದನ್ನು ಬೂದಿಮುಚ್ಚಿದ ಕೆಂಡದಲ್ಲಿ ಹುಗಿದು ಬಾಳೆ ಎಲೆಯು ತುಸು ಬಾಡಿದಾಗ ಹೊರತೆಗೆದು ಒಳಗಿರುವ ಸಂಬಾರ ಸೊಪ್ಪನ್ನು ಹಿಂಡಿದ ರಸವನ್ನು ;ಮಕ್ಕಳಿಗೆ ಶುದ್ಧ ಕಲ್ಲುಸಕ್ಕರೆ ಬೆರೆಸಿ ಕುಡಿಯಲು ಕೊಡಬೇಕು. ಆರೆಂಟು ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಅದಕ್ಕೆ ಸಿಹಿಯಾಗುವಷ್ಟು ಜೇನು ಅಥವಾ ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು. ಮಕ್ಕಳಿಗೆ ಒಂದು ಚಮಚ ರಸದಂತೆ ದಿನಕ್ಕೆ ಮೂರು ಬಾರಿ ಕೊಡಬೇಕು.

ಇದರ ಎಲೆಯ ರಸವನ್ನು ಸೇವಿಸುವದು, ಮತ್ತು ಮೈಗೆ ಬಳಿಯುವದರಿಂದ ಮಕ್ಕಳಲ್ಲಿ ನೆಗಡಿ ಕಡಿಮೆ ಆಗುವುದು .ಎಲೆಯ ರಸಕ್ಕೆ ಕಫವನ್ನು ಕರಗಿಸುವ ಗುಣವಿದೆ.

ಎಲೆಗಳ ರಸ ವನ್ನು ತಲೆಗೆ ಹಾಕುವದರಿಂದ ತಲೆ ತಂಪಾಗುವುದು.

ಅನೇಕ ರೋಗವನ್ನು ಹತೋಟಿಯಲ್ಲಿಡುವ ಔಷಧೀಯ ಗುಣಗಳುಳ್ಳ ಸಾವಿರ ಸಂಬಾರ ಸೊಪ್ಪಿನ ಬೇಡಿಕೆ ಇತ್ತೀಚಿಗೆ ಹೆಚ್ಚುತ್ತಿರುವುದು ಗಮನಾರ್ಹ.

ಸಾವಿರ ಸಂಬಾರ ಸೊಪ್ಪಿನ ಈ ಗಿಡವನ್ನು ಕುಂಡದಲ್ಲಿ ಅಥವಾ ಮನೆಯ ಮುಂದೆ ಬೆಳೆಸಿಕೊಂಡರೆ ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಒಂದು ಗಿಡ ಬೆಳೆ ಸಲು ಒಂದು ; ಗೇಣುದ್ದದ ;ಟೊಂಗೆ ಸಾಕು. ಪ್ರಯತ್ನಿಸಿರಿ. ಮನೆಯಲ್ಲಿ ಮಗು ಇದೆ ಅಂದರೆ ಆ ಮನೆಗೆ ಹಲವಾರು ಔಷಧಿಯ ಗುಣ ಹೊಂದಿರುವ ಈ ಗಿಡ ಇರುವುದು ಅಷ್ಟೇ ಅಗತ್ಯ.


Very informative ! :)

Thank you fr this helpful post :)

Very nice 👍 keep posting...


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.
Scan QR Code
to open in App
Image
http://app.babychakra.com/feedpost/136580