ಮೊದಲ ವರ್ಷದಲ್ಲಿ ಮಗುವಿಗೆ ಯಾವ ಬಗೆಯ ಆಹಾರಗಳನ್ನು ನೀಡಬೇಕು??

ನಿಮ್ಮ ಮಗುವಿನ ಜೀವನದ ಮೊದಲ ವರ್ಷದಲ್ಲಿ ಸರಿಯಾದ ಆಹಾರ ಬಹಳ ಮುಖ್ಯ. ತಾಯಂದಿರು ಸಾಮಾನ್ಯವಾಗಿ ತಮ್ಮ ಮಗುವಿಗೆ ಸಾಕಷ್ಟು ಪೌಷ್ಠಿಕಾಂಶವನ್ನು ಪಡೆಯುತ್ತಾರೋ ಇಲ್ಲವೋ ಎಂಬ ಆತಂಕ. ಮೊದಲ ವರ್ಷದಲ್ಲಿ ಮಗುವಿಗೆ ಏನು ನೀಡಬೇಕು ಎಂಬುದರ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಆರಂಭಿಕ ಹಂತದಿಂದ ಸರಿಯಾದ ಪೌಷ್ಠಿಕ ಆಹಾರವು ನಿಮ್ಮ ಮಗುವಿನ ಸರಿಯಾದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ. ನಿಮ್ಮ ಮಗುವಿನ ಜೀವನದ ಪ್ರಾರಂಭದ ವರ್ಷದಿಂದಲೇ ನೀವು ಆರೋಗ್ಯಕರ ತಿನ್ನುವ ಮಾದರಿಯನ್ನು ರಚಿಸಬೇಕು. ನೀವು ಏನು ನೀಡಬೇಕು ಮತ್ತು ಯಾವಾಗ ಎಂದು ಗೊಂದಲಕ್ಕೊಳಗಾಗಿದ್ದರೆ, ನಿಮ್ಮ ಮಗುವಿಗೆ ಅದರ ಮೊದಲ ವರ್ಷದಲ್ಲಿ ಸರಿಯಾದ ಆಹಾರವನ್ನು ನೀಡಲು ನಿಮಗೆ ಸಂಪೂರ್ಣ ಮಾರ್ಗ ಇಲ್ಲಿದೆ.

0-6 ತಿಂಗಳುಗಳು: ಎದೆ ಹಾಲು ಅಥವಾ ಫಾರ್ಮುಮಿಲ್ಕ್ ಮಾತ್ರ ನೀಡಿ.

6-8 ತಿಂಗಳು ಮಗುವಿಗೆ ಆರು ತಿಂಗಳು ಕಳೆದ ಬಳಿಕ ಅದರ ಆಹಾರ ಕ್ರಮದಲ್ಲಿ ಬೇರೆ ಆಹಾರಗಳನ್ನು ಕೂಡ ಸೇರಿಸಿಕೊಳ್ಳಬಹುದು. ಎದೆ ಹಾಲಿನೊಂದಿಗೆ ಬೇರೆ ಆಹಾರಗಳನ್ನು ನೀಡುವ ಮೂಲಕವಾಗಿ ನೀವು ಮಗುವಿಗೆ ಬೇಕಾಗಿರುವ ಪೋಷಕಾಂಶ ನೀಡಬಹುದು. ಹಣ್ಣುಗಳು ಮತ್ತು ತರಕಾರಿಗಳನ್ನು ಮಗುವಿಗೆ ನೀಡಬಹುದು. ಮಗುವಿಗೆ ಸಿಹಿ ಹಣ್ಣುಗಳು ಹೆಚ್ಚು ಇಷ್ಟವಾಗಬಹುದು. ಮಗುವಿಗೆ ಇಷ್ಟವಾಗದೆ ಇರುವಂತಹ ಆಹಾರವನ್ನು ಅದು ತಿನ್ನದು. ಮಗುವಿಗೆ ಬಾಳೆಹಣ್ಣು, ಸೇಬು ನೀಡಬಹುದು. ಮೊದಲು ಹಣ್ಣುಗಳನ್ನು ಸರಿಯಾಗಿ ಜಜ್ಜಿಕೊಂಡು ಮಗುವಿಗೆ ತಿನ್ನಲು ಸುಲಭವಾಗುವಂತೆ ಕೊಡಬೇಕು. ಬಟಾಟೆ ಮತ್ತು ಕ್ಯಾರೆಟ್ನ್ನು ಮಗುವಿಗೆ ನೀಡಿ.

ನೀರು ನೀಡಿ, ಆಹಾರವನ್ನು ನೀರಿನ ರೂಪದಲ್ಲಿ ತಯಾರಿಸಿ. ಅಕ್ಕಿ ನೀರು, ದಾಲ್ ನೀರು, ತರಕಾರಿ ಸೂಪ್ ನೀಡಿ.

8-12 ತಿಂಗಳು ಈ ಹಂತದಲ್ಲಿ ಮಗು ಹೆಚ್ಚು ಘನ ಆಹಾರ ಸೇವನೆ ಮಾಡುವುದು. ಇದರಿಂದ ಸಂಪೂರ್ಣವಾಗಿ ಹಾಲಿನ ಮೇಲೆ ಅವಲಂಬಿತವಾಗುವುದು ತಪ್ಪುವುದು. ಮಗುವಿಗೆ ಬೇಕಾಗಿರುವಂತಹ ಪೋಷಕಾಂಶಗಳು ಸಿಗುವಂತಹ ಆಹಾರವನ್ನು ಅದು ಸೇವಿಸುವುದು. ಹಣ್ಣುಗಳು ಮತ್ತು ತರಕಾರಿ ಬದಲಿಗೆ ಬೇರೆ ಘನ ಆಹಾರ ಕೂಡ ಅದು ಸೇವಿಸುವುದು. ತುಂಬಾ ಗಟ್ಟಿ ಮತ್ತು ಖಾರವಾಗಿರುವ ಆಹಾರವನ್ನು ಮಗುವಿಗೆ ನೀಡಬೇಡಿ. ಸರಿಯಾಗಿ ನಯವಾಗಿಸಿರುವ ಆಹಾರ ನೀಡಿ. ಮಗುವಿನ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವಂತಹ ಆಹಾರ ನೀಡಲು ಹೋಗಬೇಡಿ. ಮೊಸರು, ಹಣ್ಣುಗಳು ಮತ್ತು ಬೇರೆ ತರಕಾರಿಗಳನ್ನು ನೀಡಬಹುದು. ಆದರೆ ಎದೆಹಾಲನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಡಬೇಡಿ. ಮಗು ಸರಿಯಾಗಿ ಎದೆ ಹಾಲು ಸೇವಿಸುವಂತೆ ಮಾಡಿ.

ಮಗು ಸೇವಿಸುವ ಆಹಾರವು ಅದರ ಜೀರ್ಣಕ್ರಿಯೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಹೀಗಾಗಿ ಮೊದಲ ಸಲ ತಾಯಿಯಾಗುವಂತವರಿಗೆ ಮಗುವಿನ ಆರೈಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮೊದಲ ಆರು ತಿಂಗಳಲ್ಲಿ ಮಗುವಿನ ತಾಯಿಯ ಎದೆಹಾಲು ಅತೀ ಅಗತ್ಯ ಪೋಷಣೆ ನೀಡುವುದು. ನೀವು ಎದೆಹಾಲಿನೊಂದಿಗೆ ಕೆಲವೊಂದು ಆರೋಗ್ಯಕಾರ ಆಹಾರವನ್ನು ಮಗುವಿಗೆ ನೀಡುವ ಮೂಲಕವಾಗಿ ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು.

ಸೂಚನೆ:

* ಮಗುವಿಗೆ ಆರು ತಿಂಗಳ ನಂತರ ಮಾತ್ರ ಆಹಾರ ಮತ್ತು ನೀರನ್ನು ಪರಿಚಯಿಸಿ.

* ಒಂದು ಸಮಯದಲ್ಲಿ ಒಂದು ಆಹಾರವನ್ನು ಪರಿಚಯಿಸಿ. 3 ದಿನಗಳವರೆಗೆ ಕೇವಲ ಒಂದು ಆಹಾರವನ್ನು ನೀಡಿ ಮತ್ತು ಮಗುವಿಗೆ ಅದನ್ನು ಜೀರ್ಣಿಸಿಕೊಳ್ಳಬಹುದೇ ಅಥವಾ ಇಲ್ಲವೇ ಎಂದು ನೋಡಿ.

* ಮಗು ವಾಂತಿ ಮಾಡಿದರೆ ವೈದ್ಯರನ್ನು ಭೇಟಿ ಮಾಡಿ.

* ಮಗುವಿಗೆ ಒಂದು ವರ್ಷ ತುಂಬುವವರೆಗೆ ಉಪ್ಪು, ಸಕ್ಕರೆ ಮತ್ತು ಹಸುವಿನ ಹಾಲನ್ನು ಸೇರಿಸಬೇಡಿ ಅಥವಾ ನೀಡಬೇಡಿ. ಮಗುವಿನ ಆಹಾರದಲ್ಲಿ ನೀವು ತುಪ್ಪವನ್ನು ಸೇರಿಸಬಹುದು.

*ಆಹಾರವನ್ನು ಸರಿಯಾಗಿ ಬೇಯಿಸಿ ನಂತರ ಮಾತ್ರ ಮಗುವಿಗೆ ನೀಡಿ.

*ತಾಳ್ಮೆ ಹೊಂದಿರಿ, ಮತ್ತು ಮಗುವನ್ನು ತಿನ್ನಲು ಒತ್ತಾಯಿಸಬೇಡಿ. #bengalurumom

#nesting

#kannadamom

#bbcreatorsmom #bbcreatorsclub

#foodforbaby

#informationonbabysfood


Vidya Rathod Vani Kulkarni Khushboo Chouhan Rashmi Gowda meghana kiran
Shridevi Pawan Shilwant
pallavi vijay Pushpa Sambrani Mahalakshmi ravi Shwetha Tejaswini Patil Cc kavyavinay P V radha reddy Bhagya sunil Hema naveen
Sangamesh Padadali
nagu nagu Laxmi ammu Divya Prakash sneha mubbi geetha chandregowda Dhanu Yathish manjula j
Deepika sunil ವಿದ್ಯಾ
asma jyothi
Manju Bangara
Revati Dhannur
Divya Sugan Sunitha
Sushmitha Kp mubbi
Pooja t o laxmi patil

Wow very well said Sowmya Prithvi

Vrycute picture,


Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.

Recommended Articles

Scan QR Code
to open in App
Image
http://app.babychakra.com/feedpost/137001