Rewards
ಆ್ಯಪಲ್ ಕೀರು

ಬೇಕಾಗುವ ಪದಾರ್ಥಗಳು:

• ಆ್ಯಪಲ್ -2

• ತುಪ್ಪ- ಸ್ವಲ್ಪ

• ಹಾಲು- 3 ಬಟ್ಟಲು

• ಕೇಸರಿ- ಸ್ವಲ್ಪ

• ಮಿಲ್ಕ್ ಮೇಡ್ - ಮುಕ್ಕಾಲು ಬಟ್ಟಲು

• ಏಲಕ್ಕಿ- ಸ್ವಲ್ಪ

• ಬಾದಾಮಿ ಚೂರುಗಳು- ಸ್ವಲ್ಪ

ಮಾಡುವ ವಿಧಾನ:

• ಮೊದಲು ಆ್ಯಪಲ್'ನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ತುರಿದಿಟ್ಟುಕೊಳ್ಳಬೇಕು.

• ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ 2-3 ಚಮಚ ತುಪ್ಪ ಹಾಕಿ ತುರಿದ ಆ್ಯಪಲ್'ನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು.

• ಪಾತ್ರೆಯೊಂದಕ್ಕೆ ಹಾಲು ಹಾಕಿ ಚೆನ್ನಾಗಿ ಕಾಯಲು ಬಿಡಬೇಕು. ಹಾಲು ಕೆಂಪಗೆ ಕಾದ ಬಳಿಕ ಕೇಸರಿ ಹಾಗೂ ಮಿಲ್ಕ್ ಮೇಡ್ ಹಾಕಬೇಕು. ಮಿಲ್ಕ್ ಮೇಡ್ ಇಲ್ಲದಿದ್ದರೆ, ಅಳತೆಗೆ ತಕ್ಕಷ್ಟು ಸಕ್ಕರೆ ಹಾಕಬಹುದು.

• ಬಳಿಕ ಏಲಕ್ಕಿ ಪುಡಿ ಹಾಕಿ ಸ್ವಲ್ಪ ಹೊತ್ತು ಕಾಯಿಸಿ, ಆ್ಯಪಲ್ ಹಾಗೂ ಬಾದಾಮಿ ಚೂರುಗಳನ್ನು ಸೇರಿಸಿ, ಕೆಲ ಗಂಟೆಗಳ ಕಾಲ ಫ್ರಿಡ್ಜ್'ನಲ್ಲಿಟ್ಟು ತೆಗೆದರೆ ರುಚಿಕರವಾದ ಆ್ಯಪಲ್ ಕೀರು ಸವಿಯಲು ಸಿದ್ಧ. #bengalurumom #nesting #kannadamom

#bbcreatorsmom #bbcreatorsclub #foodforkids #recipe #applekheer


Vidya Rathod Vani Kulkarni Khushboo Chouhan Rashmi Gowda meghana kiran
Shridevi Pawan Shilwant
pallavi vijay Pushpa Sambrani Mahalakshmi ravi Shwetha Tejaswini Patil Cc kavyavinay P V radha reddy Bhagya sunil Hema naveen
Sangamesh Padadali
nagu nagu Laxmi ammu Divya Prakash sneha mubbi geetha chandregowda Dhanu Yathish manjula j
Deepika sunil ವಿದ್ಯಾ
asma jyothi
Manju Bangara
Revati Dhannur
Divya Sugan Sunitha
Sushmitha Kp mubbi
Pooja t o laxmi patil


Get the BabyChakra app
Ask an expert or a peer mom and find nearby childcare services on the go!
Phone
Scan QR Code
to open in App
Image
http://app.babychakra.com/feedpost/140860