babychakra-rewards
WE ARE NOW TAKING ONLINE ORDERS.
Order your Babychakra products today !!
ಪುಟ್ಟ ಮಕ್ಕಳೇಕೆ ಅಷ್ಟು ರಭಸದಿಂದ ಉಸಿರಾಡುತ್ತವೆ?

ಪಾಲಕರಿಗೆ ತಮ್ಮ ಪುಟ್ಟ ಮಕ್ಕಳು ವೇಗವಾಗಿ ಉಸಿರಾಡುವುದು ಅಚ್ಚರಿ ತರಿಸಬಹುದು. ಅದರಲ್ಲೂ ನಿಮ್ಮ ಮನೆಯಲ್ಲಿ ಈಗತಾನೇ ಹುಟ್ಟಿದ ಪುಟ್ಟ ಮಗುವಿದ್ದರೆ ಇದರ ಉಸಿರಾಟದ ಗತಿಯನ್ನು ಕೊಂಚ ಗಮನಿಸಿ. ಇದು ಪಾಲಕರಿಗೆ ಮಾತ್ರವಲ್ಲ ವೈದ್ಯರೂ ಗಮನಿಸಬೇಕಾದ ಅಂಶವಾಗಿದ್ದು ಕೆಲವು ದಿನಗಳವರೆಗಾದರೂ ಮಗುವಿನ ಉಸಿರಾಟವನ್ನು ಗಮನಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಪಾಲಕರ ಪ್ರಶ್ನೆಯೂ ಒಂದೇ ಆಗಿರುತ್ತದೆ: ಪುಟ್ಟ ಮಕ್ಕಳೇಕೆ ಇಷ್ಟು ಜೋರಾಗಿ ಉಸಿರಾಡಬೇಕು? ವಾಸ್ತವವಾಗಿ ಪುಟ್ಟಮಕ್ಕಳ ಉಸಿರಾಟದ ಗತಿ ಹಾಗೂ ಪ್ರಮಾಣ ಇತರ ಮಕ್ಕಳ ಅಥವಾ ಹಿರಿಯರ ಉಸಿರಾಟದ ಗತಿಗಿಂತಲೂ ಭಿನ್ನವಾಗಿರುವುದೇ ಇದಕ್ಕೆ ಕಾರಣ.

ಆದರೆ ಪುಟ್ಟ ಮಗುವಿನ ಎದೆಯಲ್ಲಿರುವ ಪುಟ್ಟ ಶ್ವಾಸಕೋಶಕ್ಕೆ ಅಷ್ಟು ಪ್ರಮಾಣದ ಗಾಳಿಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಮಕ್ಕಳ ಉಸಿರಾಟದ ಗತಿ ಕೊಂಚ ಹೆಚ್ಚಾಗಿರುತ್ತದೆ. ಮಗು ಬೆಳೆಯುತ್ತಾ ಹೋದಂತೆ ನಿಧಾನವಾಗಿ ಶ್ವಾಸಕೋಶವೂ ಬೆಳೆದು ಹೆಚ್ಚಿನ ಕ್ಷಮತೆ ಪಡೆದುಕೊಳ್ಳುವ ಮೂಲಕ ಉಸಿರಾಟದ ಗತಿ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ

ಪುಟ್ಟ ಮಗುವಿನ ಉಸಿರಾಟದ ಗತಿಯನ್ನು ಅಳೆಯುವುದು ಹೇಗೆ?

ಈ ಪ್ರಶ್ನೆಯನ್ನು ನಿಮ್ಮ ಕುಟುಂಬ ವೈದ್ಯರಲ್ಲಿಯೂ ಕೇಳಬಹುದು. ವೈದ್ಯರು ನಿಖರವಾದ ವಿವರಗಳನ್ನು ನೀಡುತ್ತಾರೆ. ಒಂದು ವೇಳೆ ನೀವೇ ಅಳೆಯಬಹುದು. ಇದಕ್ಕಾಗಿ ಮಗುವಿನ ಒಂದು ಉಸಿರಿನ ಉಶ್ವಾಸದಿಂದ ತೊಡಗಿ ಮೂವತ್ತು ಸೆಕೆಂಡುಗಳ ಕಾಲ ಎಷ್ಟು ಉಸಿರು ಪಡೆದುಕೊಂಡಿತು ಎಂದು ಅಳೆಯಿರಿ. ಇದನ್ನು ಎರಡರಿಂದ ಗುಣಿಸಿದಾಗ ಬಿಪಿಎಂ ಅಳತೆ ಸಿಗುತ್ತದೆ. ಕೆಲವೊಮ್ಮೆ ಮಗುವಿನ ಉಸಿರಾಟದ ವೇಗ ಕೊಂಚ ಹೆಚ್ಚು ಕಡಿಮೆಯಾಗುತ್ತಿರಬಹುದು. ಈ ಸಮಯದಲ್ಲಿ ಮಾಡಿದ ಅಳತೆ ಸರಿಯಾಗಿ ಸಿಗುವುದಿಲ್ಲ. ಹೀಗಿದ್ದರೆ ಮಗುವನ್ನು ವೈದ್ಯರ ಬಳಿ ತಪ್ಪದೇ ಕರೆದೊಯ್ಯಬೇಕು.

ಅಳೆಯುವ ಇನ್ನೊಂದು ವಿಧಾನ:

ಮಗುವಿನ ಉಸಿರಾಟವನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿ. ಎದೆ ಮೇಲೆ ಕೆಳಗೆ ಹೋಗುವುದನ್ನು ಸ್ಪಷ್ಟವಾಗಿ ಗಮನಿಸತೊಡಗಿದ ಬಳಿಕ ಒಂದು ಉಸಿರಿನಲ್ಲಿ ಎದೆ ಮೇಲೆ ಇದ್ದಾಗಿನ ಕ್ಷಣದಿಂದ ಪ್ರಾರಂಭಿಸಿ ಒಂದು ನಿಮಿಷದ ಅವಧಿಯಲ್ಲಿ ಎಷ್ಟು ಬಾರಿ ಎದೆ ಕೆಳಗಿಳಿಯಿತು ಎಂಬುದನ್ನು ಲೆಕ್ಕಹಾಕಿ. ಸಾಮಾನ್ಯವಾಗಿ ಕಣ್ಣಿನಲ್ಲಿ ಈ ಲೆಕ್ಕವನ್ನು ಮಾಡಲು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಬದಲಿಗೆ ಮಗುವಿನ ಎದೆಯ ಮೇಲೆ ಒಂದು ಬೆರಳನ್ನು ಭಾರವಿಲ್ಲದಂತೆ ಇರಿಸಿ ಬೆರಳು ಮೇಲೆ ಬಂದಾಗ ಲೆಕ್ಕಹಾಕಿ ಉಸಿರಾಟದ ಗತಿಯನ್ನು ಅಳೆಯಬಹುದು.

bengalurumom #nesting #kannadamom #bbcreatorsmom #bbcreatorsclub #newbornbaby #breath

Pic: my baby as snale😀


Vidya Rathod Vani Kulkarni Khushboo Chouhan Rashmi Gowda meghana kiran
Shridevi Pawan Shilwant
pallavi vijay Pushpa Sambrani Mahalakshmi ravi Shwetha Tejaswini Patil Cc kavyavinay P V radha reddy Bhagya sunil

Hema naveen
Sangamesh Padadali
nagu nagu Laxmi ammu Divya Prakash sneha mubbi geetha chandregowda Dhanu Yathish manjula j
Deepika sunil ವಿದ್ಯಾ
asma jyothi
Manju Bangara
Revati Dhannur
Divya Sugan Sunitha
Sushmitha Kp mubbi
Pooja t o laxmi patil


Get the BabyChakra app
Ask an expert or a peer mom and find nearby childcare services on the go!
Phone
Scan QR Code
to open in App
Image
http://app.babychakra.com/feedpost/143935