anonymous
follow-btn
ಮಗುವಿಗೆ ಘನ ಆಹಾರ ಯಾವಾಗ ಶುರು ಮಾಡಬಹುದು?
ಶಿಶುಗಳಿಗೆ ಘನ ಆಹಾರವನ್ನು ಪರಿಚಯಿದುವುದು ಬೆಳವಣಿಗೆಯಲ್ಲಿ ಒಂದು ಪ್ರಮುಖವಾದ ಮೈಲಿಗಲ್ಲು.;

ಮಗುವಿಗೆ 6 ತಿಂಗಳುಗಳ ನಂತರ ಮಾತ್ರ ಘನ ಆಹಾರವನ್ನು ಪರಿಚಯಿಸಬೇಕು. ಎದೆ ಹಾಲು ಅಥವಾ ಫಾರ್ಮುಲಾ ಹಾಲು ಬೆಳೆಯುತ್ತಿರುವ ಮಗುವಿಗೆ 6 ತಿಂಗಳು ತನಕ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ. 6 ತಿಂಗಳ ನಂತರ,;ಮಗುವಿಗೆ ಹೆಚ್ಚುವರಿ ಪೌಷ್ಟಿಕತೆ,;ಹೆಚ್ಚು ಕಬ್ಬಿಣಾಂಶದ ಅಗತ್ಯವಿರುತ್ತದೆ.

ಭಾರತಿಯ ಆರೋಗ್ಯ ಸಂಘಟನೆ IHO (ಇಂಡಿಯನ್ ಹೆಲ್ತ್ ಆರ್ಗನೈಸೇಷನ್) ಮತ್ತು;WHO (ವಿಶ್ವ ಆರೋಗ್ಯ ಸಂಸ್ಥೆ) ಕೂಡ ಇದನ್ನು ಶಿಫಾರಸು ಮಾಡುತ್ತವೆ.
ಮಗುವಿನ ಘನ ಆಹಾರವನ್ನು ಶುರು ಮಾಡಲು 4 ಸಂಕೇತಗಳನ್ನು ಗಮನಿಸಿ ;:
ಹುಟ್ಟಿನಿಂದ 6 ತಿಂಗಳುಗಳವರೆಗೆ ಎದೆ ಹಾಲು ಮಾತ್ರ ನೀಡಬೇಕು ನಂತರ ಹಾಲಿನ ಜೊತೆ ಪೂರಕ ಆಹರ ನೀಡುವ ಅವಧಿಯು ಪ್ರಾರಂಭವಾಗುತ್ತದೆ. ಆದರೆ ಪ್ರತಿ ಮಗು ವಿಭಿನ್ನವಾಗಿರುವುದು,;ಆದ್ದರಿಂದ ಬಲವಂತವಾಗಿ ಮತ್ತು ಆತುರ ಮಾಡಬಾರದು. ಇದಕ್ಕಾಗಿ ಗಮನಿಸಬೇಕಾದ ಮುಖ್ಯ ಅಂಶಗಳು –
ಮಗುವು ತಂತಾನೇ ಅಥವಾ ಸಹಾಯದಿಂದ ಕುಳಿತುಕೊಳ್ಳ ಬಲ್ಲದು, ಮತ್ತು ಮಗುವಿನ ತಲೆ ನಿಲ್ಲುತ್ತದೆ.
ಊಟದ ಸಮಯದಲ್ಲಿ ಆಸಕ್ತಿ ತೋರಿಸುವುದು ಮತ್ತು ಅಗಿಯುವ ಕ್ರಿಯೆಯನ್ನು ಗಮನಿಸುವುದು.
ಆಹಾರವನ್ನು ಕೈಯಿಂದ ತೆಗೆದು ಬಾಯಿಯಲ್ಲಿ ಇಟ್ಟುಕೊಳ್ಳುವುದು.
ಮಗುವಿಗೆ ಆಹಾರ ಪರಿಚಯಿಸಿದಾಗ ಆಹಾರವನ್ನು ನುಂಗುವುದನ್ನು ತೂರಿಸಿ.
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು:
ಯಾವಾಗಲೂ ಮಗುವನ್ನು ಕೂರಿಸಿಕೊಂಡು ತಿನ್ನಿಸಬೇಕು. ಮಲಗಿರುವಾಗ ತಿನ್ನಿಸಬೇಡಿ.
ತಿನ್ನಿಸುವಾಗ ಮಗುವನ್ನು ಒಂಟಿಯಾಗಿ ಗಮನಿಸದೇ ಬಿಡಬೇಡಿ ಉಸಿರು ಕಟ್ಟುವಿಕೆ, ನೆತ್ತಿಗೆರುವುವ ಸಾಧ್ಯತೆಗಳಿರುತ್ತದೆ.
ಮಗುವಿಗೆ ಆಹಾರ ತಿನ್ನಿಸಲು ಬಳಸುವ ಪಾತ್ರೆಗಳನ್ನು -ಬಟ್ಟಲು,;ಸ್ಪೂನ್,;ಬಿಸಿ ನೀರಿನಲ್ಲಿ ತೊಳೆದು ಸ್ವಚ್ಚವಾಗಿರಬೇಕು.
1 ವರ್ಷದ ;ತನಕ ಮಗುವಿನ ಆಹಾರಕ್ಕೆ ಉಪ್ಪು,;ಸಕ್ಕರೆ ಅಥವಾ ಜೇನುತುಪ್ಪ ಬಳಸಬೇಡಿ.
ಹೊಸದಾಗಿ ಘನ ಆಹಾರಗಳನ್ನು ಪ್ರಾರಂಭಿಸುವ ಮೊದಲು ಶಿಶುವೈದ್ಯರ ಸಲಹೆ ಪಡೆಯಿರಿ.
ಕನಿಷ್ಠ;ಒಂದು ವರ್ಷದ ತನಕ ;ಸ್ತನ್ಯಪಾನ ಅಥವಾ ಫಾರ್ಮುಲ ಹಾಲು ಆರೋಗ್ಯಕರ ಬೆಳವಣಿಗೆಗೆ ತುಂಬಾ ಅಗತ್ಯ.
ಗಮನಿಸಬೇಕಾದ ಮುಖ್ಯ ಅಂಶಗಳು :

ತುಂಬಾ ಬೇಗ ಘನ ಆಹಾರ ಪ್ರಾರಂಭಿಸಬೇಡಿ.
ವಿವಿಧ ಬಗೆಯ ವಿಭಿನ್ನ ಆಹಾರ ಪರಿಚಯಿಸಿ.
ವಿಭಿನ್ನ ಆಹಾರವನ್ನು ಪರಿಚಯಿಸಿ, ನೀಡಲು ಹಿಂಜರಿಯಬೇಡಿ.
ಎಂದಿಗೂ ಒತ್ತಾಯ ಅಥವಾ ಬಲವಂತ ಮಾಡಬೇಡಿ.
ಅಲರ್ಜಿಯನ್ನು ಉಂಟು ಮಾಡುವ ಆಹಾರವನ್ನು ವಿಳಂಬ ಮಾಡಬೇಡಿ.
ಮಗುವಿನ ಸೂಚನೆಗಳನ್ನು ಗಮನಿಸಿ ತಕ್ಕಂತೆ ಅನುಸರಿಸಿ.
Like

6

Likes

Comment

1

Comment

Share

0

Shares

settings
Anonymous

Sowmya Prithvi

ಹೊಸ ಅಮ್ಮಂದಿರಿಗೆ ಒಂದು ಮಾಹಿತಿ ...👍

Like

Reply

lifestage
gallery
send