#BBCreatorsClub
#newborncare #newborn #babycare
#firsttimemom #care #firstmonth #kannadapost
#kannada
#babycare ನವಜಾತ ಶಿಶುವಿನ ಆರೈಕೆಯ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿಯಲೇಬೇಕಾದ ಸಂಗತಿಗಳು:
ಗರ್ಭಧಾರಣೆ ಸಂದರ್ಭದಲ್ಲಿ ಮಗುವಿನ ಲಾಲನೆ ಪಾಲನೆ ಬಗ್ಗೆ ತಾಯಿಯು ತಿಳಿದುಕೊಳ್ಳುವರು. ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ಬಗ್ಗೆ ಈಗಲೂ ನಿಮಗೆ ಗೊಂದಲವಿದ್ದರೆ ಆಗ ನೀವು ಕೆಲವೊಂದು ಆರೈಕೆಯ ಕ್ರಮಗಳನ್ನು ತಿಳಿಯಬೇಕು.
ಮಗುವಿನ ಜನನದ ಬಳಿಕ ಪೋಷಕರು ತುಂಬಾ ಎಚ್ಚರಿಕೆ ವಹಿಸುವರು. ಮಕ್ಕಳ ಆರೈಕೆ ಎನ್ನುವುದು ಅಷ್ಟು ಸುಲಭದ ಕೆಲಸವಲ್ಲ, ಅದಕ್ಕೆ ತುಂಬಾ ಜವಾಬ್ದಾರಿ ಹಾಗೂ ಏಕಾಗ್ರತೆ, ತಾಳ್ಮೆ ಬೇಕು.
ಆದರೆ ಮೊದಲ ಸಲ ಪೋಷಕರಾಗುವಂತಹವರು ಯಾವುದು ತಪ್ಪು ಹಾಗೂ ಯಾವುದು ಸರಿ ಎಂದು ತಿಳಿಯಲು ಸಮರ್ಥರಾಗಿ ಇರುವುದಿಲ್ಲ. ನವಜಾತ ಶಿಶು ತುಂಬಾ ಸೂಕ್ಷ್ಮ ಹಾಗೂ ಕೋಮಲವಾಗಿರುವ ಕಾರಣದಿಂದಾಗಿ ಅತ್ಯಧಿಕ ಗಮನ ಹರಿಸಬೇಕಾಗುತ್ತದೆ. *ಮಗುವಿಗೆ ಹಾಲುಣಿಸುವ ಭಂಗಿ ತಿಳಿಯಿರಿ:
ಮಗುವಿಗೆ ಸರಿಯಾದ ರೀತಿಯಲ್ಲಿ ದಿನದಲ್ಲಿ ಹಲವು ಬಾರಿ ಹಾಲನ್ನು ನೀಡಿ. ಎರಡನೇಯದಾಗಿ ಮಗುವಿಗೆ ಹಾಲು ನೀಡುವ ಭಂಗಿ ಸರಿಯಾಗಿ ಇದೆಯಾ ತಿಳಿಯಿರಿ. ಮಗುವಿಗೆ ಹಾಲುಣಿಸುವ ಭಂಗಿಯು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಮಗು ತೇಗು ಬರುವಂತೆ ಮಾಡಿದ ಬಳಿಕ ಮಲಗುವುದನ್ನು ಅಭ್ಯಾಸ ಮಾಡಿಸಿಕೊಳ್ಳಿ.
ನವಜಾತ ಶಿಶುವಿಗೆ ಮಗುವಿನ ಹಾಲು ಮಾತ್ರ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು. ಎದೆಹಾಲಿನಿಂದ ಮಗುವಿನ ಬೆಳವಣಿಗೆ ಆಗುವುದು. ವೈದ್ಯರು ಸೂಚಿಸಿರುವಂತಹ ಸರಿಯಾದ ಪ್ರಮಾಣದಲ್ಲಿ ಮಗುವಿಗೆ ಹಾಲು ನೀಡಿ. *ನಿಮ್ಮ ಕೈಗಳು ಸ್ವಚ್ಛವಾಗಿರಲಿ: ಮಗುವಿನ ಚರ್ಮ ಹಾಗು ಪ್ರತಿರೋಧಕ ವ್ಯವಸ್ಥೆಯು ಬೇಗನೆ ಕೀಟಾಣು ಮತ್ತು ಸೋಂಕಿಗೆ ಒಳಗಾಗುವುದು. ಮಗುವಿಗೆ ಕೀಟಾಣುವಿನಿಂದ ತೊಂದರೆ ಆಗದಂತೆ ತಡೆಯಲು ನೀವು ಆದಷ್ಟು ಮಟ್ಟಿಗೆ ಕೈಗಳನ್ನು ಸರಿಯಾಗಿ ತೊಳೆಯಿರಿ. ಬೇರೆಯವರು ಕೂಡ ಮಗುವನ್ನು ಮುಟ್ಟುವ ಮೊದಲು ಕೈಗಳನ್ನು ತೊಳೆಯಲು ಹೇಳಿ.
ಯಾಕೆಂದರೆ ಹೊರಗಡೆ ತುಂಬಾ ಕೀಟಾಣುಗಳು ಇರುವುದು ಮತ್ತು ಇದು ನಿಮ್ಮ ಮಗುವಿಗೆ ತುಂಬಾ ಹಾನಿ ಉಂಟು ಮಾಡಬಹುದು. *ಮಗುವಿನ ಉತ್ಪನ್ನಗಳನ್ನು ಅತಿಯಾಗಿ ಬಳಸಬೇಡಿ: ನೀವು ಬಳಸುವಂತಹ ಉತ್ಪನ್ನಗಳು ಮಗುವಿನ ಚರ್ಮಕ್ಕಾಗಿ ಮಾಡಲ್ಪಟ್ಟಿರುವುದು ಎಂದು ನೀವು ತಿಳಿಯಿರಿ. ಮಗುವಿಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಆಗ ನೀವು ತಕ್ಷಣವೇ ಇಂತಹ ಉತ್ಪನ್ನಗಳ ಬಳಕೆ ಮಾಡುವುದನ್ನು ನಿಲ್ಲಿಸಿಬಿಡಿ.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಗುವಿನ ಉತ್ಪನ್ನಗಳು ಲಭ್ಯವಿದೆ. ಇದು ತ್ವಚೆ ಹಾಗೂ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಆದರೆ ಈ ಉತ್ಪನ್ನಗಳನ್ನು ಅತಿಯಾಗಿ ಬಳಸಿಕೊಂಡರೆ ಆಗ ಮಗುವಿನ ಮೇಲೆ ಮತ್ತು ಚರ್ಮಕ್ಕೆ ಹಾನಿ ಆಗುವ ಸಾಧ್ಯತೆಗಳು ಇವೆ. *ಸರಿಯಾಗಿ ತಯಾರಾಗಿ: ಗರ್ಭಧಾರಣೆಯ ಮೊದಲ ದಿನದಿಂದಲೇ ನೀವು ನವಜಾತ ಮಗುವಿನ ಆರೈಕೆ ಬಗ್ಗೆ ತಯಾರಿ ಮಾಡಿಕೊಳ್ಳಿ. ನೀವು ಅತ್ಯುತ್ತಮ ವಿಧಾನದಿಂದ ಮಗುವಿನ ಆರೈಕೆ ಮಾಡಲು ತಯಾರು ಮಾಡಿಕೊಳ್ಳಿ. ನಿಮಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಅಥವಾ ಮಗು ನಿರಂತರವಾಗಿ ಅಳುತ್ತಿದ್ದರೆ ಆಗ ವೈದ್ಯರನ್ನು ಭೇಟಿ ಮಾಡಿ. ವೈದ್ಯರನ್ನು ಸಂಪರ್ಕಿಸದೆ ಯಾವುದೇ ರೀತಿಯ ಔಷಧಿ ಮಗುವಿಗೆ ನೀಡಬೇಡಿ.
ನವಜಾತ ಮಗುವಿನ ಆರೈಕೆ ಮಾಡಲು ಗರ್ಭಧಾರಣೆಯ ಸಮಯವು ನಿಮಗೆ ತಯಾರು ಮಾಡಿಕೊಳ್ಳಲು ಅವಕಾಶ ನೀಡುವುದು. ಆದಷ್ಟು ಮಟ್ಟಿಗೆ ನೀವು ಪುಸ್ತಕಗಳನ್ನು ಓದಿಕೊಳ್ಳಿ. ಇದರೊಂದಿಗೆ ಹಿರಿಯರಿಂದ ಸರಿಯಾದ ಮಾರ್ಗದರ್ಶನ ಪಡೆಯಿರಿ. *ಸುರಕ್ಷಾ ಕ್ರಮಗಳನ್ನು ಮರೆಯಬೇಡಿ: ಮಗುವಿನ ಬಗ್ಗೆ ತೀರ ಎಚ್ಚರಿಕೆ ವಹಿಸಬೇಕು ಮತ್ತು ಅದರ ಸುತ್ತಲು ಯಾವುದೇ ವಸ್ತುಗಳನ್ನು ಇಡಬಾರದು. ತುಂಬಾ ಹರಿತವಾದ ಅಥವಾ ಭಾರವಾಗಿರುವ ವಸ್ತುಗಳನ್ನು ಮಗುವಿನ ಬಳಿ ಇಡಬಾರದು. ಮಗು ಮಲಗಿರುವ ವೇಳೆ ಮಗುವಿನ ಬಳಿಯಲ್ಲಿ ಯಾವುದೇ ರೀತಿಯ ಆಟಿಕೆಗಳನ್ನು ಇಡಬೇಡಿ. ಮಗು ಮಲಗಿರುವಾಗ ಅಥವಾ ಹಾಸಿಗೆ ಮೇಲೆ ಇರುವಾಗ ನೀವು ಅದರ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅದರ ಸುತ್ತಲು ತಲೆದಿಂಬನ್ನು ಇಟ್ಟುಕೊಳ್ಳಬೇಕು. ಯಾಕೆಂದರೆ ಮಗು ಮಂಚದಿಂದ ಕೆಳಗಿ ಬೀಳುವಂತಹ ಸಂಭವ ಇರುವುದು.
ನವಜಾತ ಶಿಶುವಿನ ರಕ್ಷಣೆಯು ನಿಮ್ಮ ಮೊದಲ ಆದ್ಯತೆ ಆಗಿರಬೇಕು. *ಮಗುವಿನೊಂದಿಗೆ ಮಾತನಾಡಿ:
ಎದೆ ಹಾಲುಣಿಸುವುದರಿಂದ ಮಗುವಿನೊಂದಿಗಿನ ಭಾಂದವ್ಯವು ಹೆಚ್ಚಾಗುವುದು. ಅದೇ ರೀತಿ ಮಗುವಿನೊಂದಿಗೆ ಭಾಂದವ್ಯ ಹೆಚ್ಚಾಗಲು ನೀವು ಅದರೊಂದಿಗೆ ಮಾತನಾಡುತ್ತಲಿರಬೇಕು. ಮಗು ನಿದ್ರೆಯಿಂದ ಎದ್ದ ಬಳಿಕ ಅದರೊಂದಿಗೆ ಮಾತನಾಡಿ ಮತ್ತು ಸ್ವಲ್ಪ ಹೀಗೆ ಆಟವಾಡಿ.
*ಮಗುವಿನ ನಿದ್ರೆಯ ಸಮಯ ತಿಳಿಯಿರಿ: ಮೊದಲ ತಿಂಗಳಲ್ಲಿ ಮಗುವಿನ ನಿದ್ರೆಯ ಅವಧಿಯನ್ನು ನೀವು ತುಂಬಾ ಎಚ್ಚರಿಕೆಯಿಂದ ಗಮನಿಸಬೇಕು. ಮಗುವಿಗೆ ಅನುಕೂಲವಾಗುವಂತೆ ನೀವು ಒಂದು ತಿಂಗಳ ಕಾಲ ಅದಕ್ಕೆ ನಿದ್ರೆ ಮಾಡಲು ಬಿಡಬೇಕು. ಮಗು ಯಾವ ಹೊತ್ತಿನಲ್ಲಿ ನಿದ್ರೆ ಮಾಡುತ್ತಿದೆ ಎಂದು ತಿಳಿದು ಬಳಿಕ ಅದಕ್ಕೆ ಎದೆ ಹಾಲುಣಿಸಬೇಕು. *ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಿ: ನವಜಾತ ಶಿಶುವಿನ ದೇಹವು ತುಂಬಾ ಕೋಮಲವಾಗಿರುವುದು. ಅದರಲ್ಲೂ ಮಗುವಿನ ಸ್ವಚ್ಛತೆ ವಿಚಾರದಲ್ಲಿ ಗಮನ ಹರಿಸುವುದು ಅತೀ ಅಗತ್ಯ. ಯಾಕೆಂದರೆ ಮಗುವಿನ ದೇಹವು ಸೂಕ್ಷ್ಮವಾಗಿರುವ ಕಾರಣ ಸೋಂಕು ಹಾಗೂ ಬ್ಯಾಕ್ಟೀರಿಯಾ ದಾಳಿಯು ಬೇಗನೆ ಆಗುವುದು. ಈ ಕಾರಣದಿಂದಾಗಿ ಮಗು ಮಲಗುವ ಜಾಗ, ಮಗುವಿನ ಬಟ್ಟೆಬರೆ ಇತ್ಯಾದಿಗಳನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವುದೇ ರೀತಿಯ ಇಂಜೆಕ್ಷನ್ ಅಥವಾ ಮದ್ದು ಕೊಡುವುದನ್ನು ನೀವು ತಪ್ಪಿಸಬಾರದು. ನವಜಾತ ಶಿಶುವಿನ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವುದು.
ಸರಿಯಾಗಿ ಕೈಕಾಲು ಮುಖ ತೊಳೆದುಕೊಂಡ ಬಳಿಕ ಮಗುವನ್ನು ಮುಟ್ಟಿ. ಇತರರಿಗೂ ನೀವು ಇದೇ ಸೂಚನೆ ನೀಡಿ.
ಮೊದಲ ಸಲ ತಾಯಿಯಾದವರಿಗೆ ಮಗುವಿನ ಆರೈಕೆಗೆ ಮೊದಲ ತಿಂಗಳಲ್ಲಿ ತುಂಬಾ ಕಷ್ಟವಾಗಬಹುದು ಮತ್ತು ಆ ಬಳಿಕ ಅವರು ಹೊಂದಿಕೊಂಡು ಹೋಗುವರು. ನೀವು ಮಗುವಿಗೆ ಜನ್ಮ ನೀಡಿದ್ದರೆ ಅಥವಾ ಮೊದಲ ಸಲ ತಾಯಿಯಾಗಿದ್ದರೆ ಆಗ ನೀವು ನವಜಾತ ಶಿಶುವಿನ ಆರೈಕೆ ಬಗ್ಗೆ ಕೆಲವು ವಿಚಾರಗಳನ್ನು ತುಂಬಾ ಸೂಕ್ಷ್ಮವಾಗಿ ಗಮನದಲ್ಲಿಡಬೇಕು. ಹಲವಾರು ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಇರುವುದು. ವೈದ್ಯರು ಮತ್ತು ತಜ್ಞರನ್ನು ಕೇಳಿ ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ.
#nesting
19 Aug 2019
18
Likes
6
Comments
0
Shares
Madhavi Cholera
so cute pic ! plz translate in english or hindi too dear
Madhavi Cholera
Like
Reply
27 Aug 2019