ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 1 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 1 ನೇ ವಾರ

ಅಭಿನಂದನೆಗಳು. ನೀವು ಈಗಾಗಲೇ ಮಗುವಿನ ನಿರೀಕ್ಷೆಯಲ್ಲಿದ್ದೀರಿ!  ನಿಮಗೆ ಈ ಕುರಿತು ಭರವಸೆ ಇಲ್ಲದಿದ್ದರೇ, ನಿಮ್ಮ ಮೊದಲ ಗರ್ಭಧಾರಣೆಯ ಕುರಿತು ನಿಮಗೆ ಸರಿಯಾದ ಮಾಹಿತಿ ನೀಡಲು ನಮಗೆ ಅವಕಾಶ ಕೊಡಿ.

 

ತಾಂತ್ರಿಕವಾಗಿ ಹೇಳುವುದಾದರೇ ನಿಮ್ಮ ಗರ್ಭಧಾರಣೆಯ ಮೊದಲ ವಾರವು ನಿಮ್ಮ ಋತುಸ್ರಾವ ಚಕ್ರದ ಮೊದಲ ದಿನದಿಂದಲೇ ಆರಂಭವಾಗುತ್ತದೆ.  ನೀವು 3-5 ದಿನಗಳವರೆಗೆ ಇರುವ ಋತುಸ್ರಾವ ಚಕ್ರವನ್ನು ಹೊಂದಿರುತ್ತೀರಿ. ಈ ವಾರದ ಕೊನೆಯಲ್ಲಿ ನಿಮ್ಮ ಯೂಟ್ರಸ್ (ಗರ್ಭಾಶಯ) ( ನೀವು ಗರ್ಭ ಧರಿಸಿದಾಗ ಅದು ನಿಮ್ಮ ಮಗುವಿನ ಚಿಕ್ಕ ಗೂಡು) ಸ್ವಚ್ಛಗೊಳ್ಳುತ್ತದೆ ಮತ್ತು ನಿಮ್ಮ ಮಗುವಿನ ನಿರೀಕ್ಷೆಯಲ್ಲಿ ಸಿದ್ಧಗೊಳ್ಳುತ್ತದೆ.

 

ಈ ಸಮಯದಲ್ಲಿ ನೀವು ಗರ್ಭಿಣಿಯಾಗಿದ್ದೀರಿ ಎಂದು ತಿಳಿಯುವುದು ಅಸಂಭವವಾಗಿದೆ. ನಿಮ್ಮ ಗರ್ಭಾಶಯವು ನಿಮ್ಮ ಮಗುವನ್ನು ಹಿಡಿದಿಡಲು ಇನ್ನೂ ಸಿದ್ದವಾಗಿರುವುದಿಲ್ಲ ಮತ್ತು ಅಂಡಾಶಯವು ಇನ್ನೂ ಅಂಡಾಣುವನ್ನು  ಬಿಡುಗಡೆ ಮಾಡಬೇಕಾಗಿರುತ್ತದೆ. ಏಳನೇಯ ದಿನದಿಂದ ನಿಮ್ಮ ದೇಹವು ಹಾರ್ಮೋನ್ಗಳಾದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಆರಂಭಿಸುತ್ತದೆ. ಸಂಭಾವ್ಯ ಫಲವತ್ತಾದ ಅಂಡಾಣುವಿನ ಸಿದ್ಧತೆಗಾಗಿ ಗರ್ಭಕೋಶವು ದಪ್ಪ ಮತ್ತು ಸೊಂಪಾದ ಲೈನಿಂಗ್ ಅನ್ನು ರೂಪಿಸಲು ಈ ಹಾರ್ಮೋನುಗಳು ಅನುವು ಮಾಡಿಕೊಡುತ್ತವೆ.

 

ಈ ಹಂತದಲ್ಲಿ ನೀವು ಗರ್ಭಿಣಿಯಾಗಿದ್ದೀರಿ ಎಂದು ನೀವು ಸ್ವತಃ  ತಿಳಿದುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಹೇಗಾದರೂ, ನಿಮ್ಮ ವೈದ್ಯರು ನಿಮ್ಮ ಕೊನೆಯ ಮುಟ್ಟಿನ ಅವಧಿಯ  (ಎಲ್ಎಂಪಿ) ಮೊದಲ ದಿನವನ್ನು ನೀವು ಗರ್ಭಿಣಿಯಾಗಲು ಸಾಧ್ಯವಾಗುವ ತಿಂಗಳಿನ ಆರಂಭ ಎಂದು ಪರಿಗಣಿಸುತ್ತಾರೆ.

 

 

ದೈಹಿಕ ಬೆಳವಣಿಗೆ

 

ಈ ಮೊದಲ ವಾರದಲ್ಲಿ ನಿಮ್ಮ ದೇಹದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಆದರೆ ದೇಹದ ಒಳಗಡೆ ಸಾಕಷ್ಟು ಬದಲಾವಣೆಗಳು ಆಗುತ್ತವೆ.  ನೀವು ಗರ್ಭಧಾರಣೆಗಾಗಿ ಯೋಜಿಸುತ್ತಿದ್ದರೇ, ನೀವು ಫೋಲಿಕ್ ಆಮ್ಲ ಪೂರಕಗಳು ಮತ್ತು ಪ್ರಸವಪೂರ್ವ ವಿಟಮಿನ್‍ಗಳನ್ನು ತೆಗೆದುಕೊಳ್ಳುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ.

 

ಭಾವನಾತ್ಮಕ ಬದಲಾವಣೆಗಳು

 

ಈ ಹಂತದಲ್ಲಿ, ನಿಮಗೆ ನಿಮ್ಮ ಗರ್ಭಾವಸ್ಥೆಯ ಕುರಿತು ಯಾವುದೇ ಅನುಭವ ಉಂಟಾಗುವುದಿಲ್ಲ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ನಿಮಗೆ  ಈ ಹಂತದಲ್ಲಿ ಗರ್ಭಾವಸ್ಥೆಯ  ನಿರ್ದಿಷ್ಟ ಚಿಹ್ನೆಗಳನ್ನು ಅನುಭವಿಸಲು ಸ್ವಲ್ಪ ಸಮಯ ಬೇಕಾಗಬಹುದು. ಈ ಹಂತದಲ್ಲಿ, ನೀವು ಇದನ್ನು ಗ್ರಹಿಸಲು  ಪ್ರಯತ್ನಿಸುತ್ತಿದ್ದರೆ ನೀವು ನಿರೀಕ್ಷೆಯನ್ನು ಬೆಳೆಸಿಕೊಳ್ಳಬಹುದು.

 

ನೀವು ಈಗಾಗಲೇ ಒಂದು ಸುಂದರ ಮಗುವನ್ನು ಹೊಂದುವ ಬಯಕೆ ಉಳ್ಳವರಾಗಿದ್ದರೇ, ಆಲ್ಕೋಹಾಲ್, ಸಿಗರೇಟ್ ಮತ್ತು ಇತರ ಕಾನೂನು ಬಾಹಿರ ಡ್ರಗ್‍ಗಳನ್ನು ಸೇವಿಸುವುದನ್ನು ನಿಲ್ಲಿಸಿ. ಇವುಗಳು ನಿಮ್ಮ ಮೇಲೆ ಮತ್ತು ನಿಮ್ಮ  ಮೊದಲ ಮೂರು ತಿಂಗಳ ಗರ್ಭದಲ್ಲಿರುವ ಮಗುವಿನ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟು ಮಾಡುತ್ತದೆ.

ನೀವು ಈಗಾಗಲೇ ಕೆಲವು ಔಷಧಿಗಳ ಪಥ್ಯದಲ್ಲಿದ್ದರೇ, ಸೂಚಿತ  ಔಷಧಿಗಳನ್ನು ನಿಲ್ಲಿಸಬೇಕೆ ಅಥವಾ ಬದಲಾಯಿಸಬೇಕೆ ಎಂದು ನೀವು ನಿಮ್ಮ ವೈದ್ಯರನ್ನು ಕೇಳಬೇಕು.

 

ಹಳೆಯ ಹೆಂಡತಿಯಂದಿರ ಕಥೆಗಳು

 

ನಿಮ್ಮ ಮಗುವಿನ ಲಿಂಗತ್ವವನ್ನು  ಯೋಜಿಸುವುದು ಬಹಳ ಕಷ್ಟ. ಕೆಲವರು ಗಂಡು ಮಗು ಅಥವಾ ಹೆಣ್ಣು ಮಗುವನ್ನು ಪಡೆಯಲು ಚೀನೀ ಕ್ಯಾಲೆಂಡರ್ ಅನ್ನು ಬಳಸುತ್ತಿದ್ದಾರೆ ಅಥವಾ ನಿರ್ದಿಷ್ಟ ಆಹಾರವನ್ನು ತಿನ್ನುತ್ತಿದ್ದಾರೆ  ಎಂದು ನೀವು ಕೇಳಿರಬಹುದು. ಈ ವಿಧಾನಗಳು ಅವೈಜ್ಞಾನಿಕ ಅಥವಾ ಅತ್ಯಂತ ವಿಶ್ವಾಸಾರ್ಹವಲ್ಲ.

#babychakrakannada
logo

Select Language

down - arrow
Personalizing BabyChakra just for you!
This may take a moment!