• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 2 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 2 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 2 ನೇ ವಾರ

13 May 2019 | 1 min Read

Sonali Shivlani

Author | 213 Articles

ನೀವು ಇನ್ನೂ ಗರ್ಭಿಣಿಯಾಗಿಲ್ಲ ಆದರೆ ನೀವು ಗರ್ಭಿಣಿಯಾಗಲು ಯೋಜಿಸುತ್ತಿದ್ದರೆ ಆತಂಕ ಮತ್ತು ಉತ್ಸಾಹದ ಮಟ್ಟಗಳು ಖಂಡಿತವಾಗಿಯೂ  ಹೆಚ್ಚಾಗುತ್ತವೆ! ಇದನ್ನು ನಿಮ್ಮ ‘ಹೊಟ್ಟೆಯಲ್ಲಿ ಚಿಟ್ಟೆಗಳು ಹಾರುವ ಹಂತ‘ ಎಂದು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆದಾಗ್ಯೂ, ನಿಮ್ಮ ಶಾಂತತೆಯನ್ನು ಕಾಪಾಡಿಕೊಳ್ಳಲು ಮತ್ತು ಒತ್ತಡವನ್ನು ತಡೆಗಟ್ಟಲು ಇದು ಮುಖ್ಯವಾಗಿದೆ. ಈ ಒತ್ತಡವು ಮಹಿಳೆಯರಲ್ಲಿನ ಫಲವತ್ತತೆಯ ದರವನ್ನು ಕಡಿಮೆ ಮಾಡುತ್ತದೆ  ಮತ್ತು ನೀವು ಗರ್ಭ ಧರಿಸುವ ಅವಕಾಶವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಮಹಿಳೆಯರೇ ಶಾಂತವಾಗಿರಿ, ಸಮಾಧಾನ ಹೊಂದಿರಿ. ಮತ್ತು ನಿಮ್ಮ ಗರ್ಭಧಾರಣೆಯು ನೈಸರ್ಗಿಕವಾಗಿ ಸರಿಯಾದ ದಾರಿಯಲ್ಲಿ ಸಾಗಲು ಅವಕಾಶ ನೀಡಿ.

 

ಈ ವಾರದಲ್ಲಿ, ನಿಮ್ಮ ಅಂಡಾಶಯಗಳಲ್ಲಿರುವ ಅಂಡಾಣುಗಳು ಹಣ್ಣಾಗುತ್ತವೆ. ಪ್ರತಿ ತಿಂಗಳು, ಈ ಮೊಟ್ಟೆಗಳಲ್ಲಿ ಒಂದು ಅದರ ಕೋಶದಿಂದ ಹೊರಹೊಮ್ಮುತ್ತದೆ ಮತ್ತು ಅಂಡಾಶಯವನ್ನು ಫಾಲೋಪಿಯನ್ ಟ್ಯೂಬನಲ್ಲಿ  ಪ್ರವೇಶಿಸಲು ಅನುಮತಿಸುತ್ತದೆ. ಇದನ್ನೇ ನಾವು ಅಂಡೋತ್ಪತ್ತಿ ಎಂದು ಕರೆಯುತ್ತೇವೆ.

 

28 ದಿನದ ಋತು ಚಕ್ರದಲ್ಲಿ, ಇದು ಸಾಮಾನ್ಯವಾಗಿ 14 ರಿಂದ 17 ದಿನಗಳ ಮಧ್ಯದಲ್ಲಿ ಸಂಭವಿಸುತ್ತದೆ. ಇದನ್ನು ಹೆಚ್ಚು ಫಲವತ್ತಾದ ಅವಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಅವಧಿಯಲ್ಲಿ ನೀವು ಲೈಂಗಿಕ ಸಂಪರ್ಕವನ್ನು  ಮಾಡಿದರೆ, ಗರ್ಭಧಾರಣೆಯ ಸಾಧ್ಯತೆಯು ಅತ್ಯಧಿಕವಾಗಿದೆ.

 

ಸ್ಖಲನ  ಸಮಯದಲ್ಲಿ, ನಿಮ್ಮ ಪುರುಷನು  ಲಕ್ಷಾಂತರ ವೀರ್ಯಗಳನ್ನು ನಿಮ್ಮ ಯೋನಿಯೊಳಗೆ ಬಿಡುಗಡೆ ಮಾಡುತ್ತಾರೆ ಮತ್ತು ಇವುಗಳು ಈಗ  ನಿಮ್ಮ ಗರ್ಭಾಶಯ ಮತ್ತು ನಿಮ್ಮ ಫಾಲೋಪಿಯನ್ ಟ್ಯೂಬನಲ್ಲಿರುವ ಮೊಟ್ಟೆಯ  ಕಡೆಗೆ ವೇಗವಾಗಿ ಈಜಲು ತೊಡಗುತ್ತವೆ.

 

ಮುಂದಿನ 24 ಗಂಟೆಗಳಲ್ಲಿ, ವೀರ್ಯಗಳಲ್ಲಿ ಕೇವಲ ಒಂದು ವೀರ್ಯವು  ಮೊಟ್ಟೆಯನ್ನು ಸಂಧಿಸಿ ಮತ್ತು ಅದನ್ನು ಭೇದಿಸುವುದಕ್ಕೆ ಸಮರ್ಥವಾದರೆ ಫಲೀಕರಣವು ಸಂಭವಿಸುತ್ತದೆ. ನಂತರ  ವೀರ್ಯದ ಬೀಜಕಣಗಳು ಮೊಟ್ಟೆಯ ಬೀಜಕಣಗಳೊಂದಿಗೆ ವಿಲೀನಗೊಳ್ಳುತ್ತವೆ ಮತ್ತು ನಿಮ್ಮೊಳಗೆ ಒಂದು ವಿಶಿಷ್ಟವಾದ ಅನುವಂಶಿಕ ಸಂಯೋಜನೆಯನ್ನು ರಚಿಸಲು ಸಿದ್ಧವಾಗುತ್ತವೆ. ಇದು ಜೀವನದ ಮಾಂತ್ರಿಕ ರಚನೆಯಾಗಿದ್ದು, ಅದು ನಿಮ್ಮ ಮಗುವಾಗಿ ರೂಪಗೊಳ್ಳಲಿದೆ!

 

ನಿಮ್ಮ ಮೊಟ್ಟೆಯು  X ಕ್ರೋಮೋಸೋಮ್ ಗಳನ್ನು  ಮಾತ್ರ ಹೊಂದಿರುತ್ತದೆ, ಆದರೆ ನಿಮ್ಮ ಪುರುಷನ  ವೀರ್ಯವು X ಅಥವಾ Y ಕ್ರೋಮೋಸೋಮ್ ಗಳನ್ನು ಹೊಂದಿರುತ್ತದೆ. ಇದರರ್ಥ ಏನೆಂದರೇ- ನಿಮ್ಮ ಪುರುಷನು  X ಕ್ರೋಮೋಸೋಮ್‍ನೊಂದಿಗೆ  ನಿಮ್ಮ ಮೊಟ್ಟೆಯನ್ನು ಫಲವತ್ತಾಗಿಸಿದರೆ ನೀವು ಹೆಣ್ಣು ಮಗುವನ್ನು ನಿರೀಕ್ಷಿಸಬಹುದು ಮತ್ತು   Y ಕ್ರೋಮೋಸೋಮ್‍ನೊಂದಿಗೆ   ನಿಮ್ಮ ಮೊಟ್ಟೆಯನ್ನು  ಫಲವತ್ತಾಗಿಸಿದರೆ ನೀವು  ಗಂಡು ಮಗುವನ್ನು ನಿರೀಕ್ಷಿಸಬಹುದು. ಮಗು ಯಾವುದೇ ಇರಲಿ, ಆಚರಣೆ, ಸಂಭ್ರಮವಂತೂ ಇರಲೇ ಬೇಕು.

 

ಈ ಹಂತದಲ್ಲಿ, ನಿಮ್ಮ ಮಗು ಒಂದೇ ಕೋಶವಾಗಿದ್ದು, ಶೀಘ್ರದಲ್ಲೇ ಲಕ್ಷ ಕೋಟಿ ಜೀವಕೋಶಗಳಾಗಿ ದ್ವಿಗುಣಗೊಳ್ಳುತ್ತದೆ. ಪ್ರತಿ ಹಂತವನ್ನು ಯಶಸ್ವಿಯಾಗಿ ಪೂರೈಸಲು ಸಿದ್ಧಗೊಳ್ಳುತ್ತದೆ.

 

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಗರ್ಭಾಶಯದೊಳಗೆ ಝೈಗೋಟ್  ಸ್ವತಃ ಕಸಿಗೊಳ್ಳುವುದರಿಂದ , ಸ್ವಲ್ಪ ರಕ್ತಸ್ರಾವ ಸಂಭವಿಸಬಹುದು, ಇದು  ಚಿಕ್ಕ ಕಲೆಯಾಗಿ ಕಂಡು ಬರುತ್ತದೆ.

ಕೆಲವು ಮಹಿಳೆಯರು ಈ ಅವಧಿಯಲ್ಲಿ ಆಯಾಸ ಅಥವಾ ತಲೆ ಸುತ್ತುವಿಕೆಯಂತಹ  ಗರ್ಭಧಾರಣೆಯ ಆರಂಭಿಕ ಲಕ್ಷಣಗಳನ್ನು ತೋರಿಸಬಹುದು. ಆದರೇ ಹೆಚ್ಚಿನ ಮಹಿಳೆಯರು  ಈ ಸಮಯದಲ್ಲಿ ಯಾವುದೇ ವ್ಯತ್ಯಾಸವನ್ನು ಅನುಭವಿಸುವುದಿಲ್ಲ.

 

ದೈಹಿಕ ಬೆಳವಣಿಗೆ

 

ಫಲೀಕರಣದ ನಂತರ, ಮೊಟ್ಟೆ ದ್ವಿಗುಣಗೊಳ್ಳಲು ಆರಂಭವಾಗುತ್ತದೆ  ಮತ್ತು ಗರ್ಭಾಶಯದೊಳಗೆ ತನ್ನ ಮಾರ್ಗವನ್ನು ಕಂಡುಕೊಳ್ಳಲು ಆರಂಭಿಸುತ್ತದೆ. ಈ ಮೊಟ್ಟೆಯನ್ನು  ಈಗ ಝೈಗೋಟ್ ಎಂದು ಕರೆಯಲಾಗುತ್ತದೆ. ಈ ಝೈಗೋಟ್ ಗರ್ಭಕೋಶದೊಳಗೆ ತೇಲುತ್ತದೆ, ಅಷ್ಟೇ ಅಲ್ಲ ಕಸಿಗೊಳ್ಳಲು ಸೂಕ್ತವಾದ ಸ್ಥಳವನ್ನು ಸ್ವತಃ ಹುಡುಕಿಕೊಳ್ಳುತ್ತದೆ. ನಂತರ ಗರ್ಭಾಶಯದ ಸೊಂಪಾದ ಒಳಪದರದಲ್ಲಿ ಬೆಳೆಯಲು  ಪ್ರಾರಂಭವಾಗುತ್ತದೆ. ಮಗು ಈಗ ನಿಮ್ಮ ಗರ್ಭದಲ್ಲಿ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಮತ್ತು ಇದನ್ನು ಬ್ಲಾಸ್ಟೊಸಿಸ್ಟ್ ಎಂದು ಕರೆಯಲಾಗುತ್ತದೆ.

ನಿಮ್ಮ ದೇಹವು ಯಾವುದೇ ಗಮನಾರ್ಹವಾದ ಬಾಹ್ಯ ಬದಲಾವಣೆಗಳನ್ನು ತೋರಿಸಲು ಪ್ರಾರಂಭಿಸುವುದಕ್ಕೆ ಇನ್ನೂ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ.

 

ಭಾವನಾತ್ಮಕ ಬದಲಾವಣೆಗಳು

 

ತಿಳಿದುಕೊಳ್ಳಬೇಕೆಂಬ ಉತ್ಸಾಹವು  ನಿಮ್ಮ ತಾಳ್ಮೆಗೆ ಸ್ವಲ್ಪ ಭಂಗವನ್ನು ತರಬಹುದು. ಮತ್ತು ನೀವು ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಮೂತ್ರ  ಪರೀಕ್ಷೆಗೆ ಒಳಗಾಗಲು ಇಚ್ಛಿಸಬಹುದು. ಆದರೆ ಈ ಸಮಯದಲ್ಲಿ ಫಲಿತಾಂಶಗಳು ಇನ್ನೂ ಋಣಾತ್ಮಕವಾಗಿ ತೋರುತ್ತವೆ.

 

ರೆಡ್ ಪ್ಲಾಗ್‍ಗಳು

 

ಗರ್ಭ ಕಸಿಗೊಂಡ ನಂತರ ಕೆಲವು ಸಲ ಅಲ್ಪ ಪ್ರಮಾಣದ ರಕ್ತ ಸೋರಿಕೆ ಕಂಡು ಬರಬಹುದು. ಇದಕ್ಕೆ ಚಿಂತೆಗೆ ಒಳಗಾಗುವ ಅಗತ್ಯವಿಲ್ಲ.  ಏಕೆಂದರೆ ಇದು ಮಾರ್ಜಿನಲ್ ಸ್ಪಾಟಿಂಗ್ ಆಗಿದೆ.

ರಕ್ತದ ಹರಿವು ತೀವ್ರವಾದರೆ ಅಥವಾ ನಿಮ್ಮ ಕೆಳ ಹೊಟ್ಟೆಯ ಸುತ್ತಲೂ ನೀವು ವೀಪರಿತ ನೋವನ್ನು  ಅನುಭವಿಸಿದರೆ, ತಕ್ಷಣವೇ ನಿಮ್ಮ ಗೈನಾಕಾಲಜಿಸ್ಟರನ್ನು/ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.

 

ಹಳೆಯ ಹೆಂಡತಿಯಂದಿರ ಕಥೆಗಳು

 

ಕೆಲವು ಕಡೆ ಗರ್ಭಿಣೆಯರು ಪಪ್ಪಾಯ ಹಣ್ಣುಗಳನ್ನು ಸೇವಿಸುವಿಕೆಯನ್ನು ನಿಷೇಧಿಸಲಾಗುತ್ತದೆ.  ಏಕೆಂದರೇ ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಇತ್ತೀಚೆಗೆ ನಡೆದ ಅಧ್ಯಯನಗಳು ಗರ್ಭಿಣೆಯರು ಪಪ್ಪಾಯ ಸೇವಿಸುವುದರಿಂದ ಏನೂ ಹಾನಿಯಾಗುವುದಿಲ್ಲ ಎಂದು ಖಚಿತಪಡಿಸಿವೆ. ಯಾರಾದರೂ ಈ ರೀತಿ ಸಲಹೆ ನೀಡಿದರೇ, ತುಂಬಾ ಗಂಭೀರವಾಗಿ ಪರಿಗಣಿಸಬೇಡಿ.

ನಿಜ ಹೇಳಬೇಕೆಂದರೇ   ಮಾಗಿದ ಪಪ್ಪಾಯಿಗಳು ಜೀವಸತ್ವಗಳಲ್ಲಿ ಸಮೃದ್ಧವಾಗಿವೆ ಮತ್ತು ಮಲಬದ್ಧತೆಯನ್ನು ಕಡಿಮೆಗೊಳಿಸುತ್ತವೆ. ಆದಾಗ್ಯೂ, ಕಚ್ಚಾ ಪಪ್ಪಾಯಿಗಳು ಲ್ಯಾಟೆಕ್ಸ್ ಅನ್ನು ಒಳಗೊಂಡಿರುತ್ತವೆ, ಇದು ಗರ್ಭಾಶಯದ ಕುಗ್ಗುವಿಕೆಯನ್ನು ಉಂಟುಮಾಡಬಹುದು ಮತ್ತು ಹೀಗಾಗಿ ಕಚ್ಚಾ ಪಪ್ಪಾಯವನ್ನು ಸೇವಿಸಬೇಡಿ.

 

#babychakrakannada

A

gallery
send-btn

Related Topics for you