• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 3 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 3 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 3 ನೇ ವಾರ

13 May 2019 | 1 min Read

Sonali Shivlani

Author | 213 Articles

ನಿಮ್ಮ ಮಗು, ಇನ್ನೂ ಕೋಶಗಳ ಚೆಂಡು, ಭ್ರೂಣ ಆಗುವ ದಾರಿಯಲ್ಲಿ ಸಾಗುತ್ತಿದೆ! ಮತ್ತು ನೀವು ವ್ಯತ್ಯಾಸವನ್ನು ಅನುಭವಿಸುವಿರಿ. ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳ ಕುರಿತು ನಾವು ಹೇಳುತ್ತೇವೆ. ಓದಿ..

 

ನಿಮ್ಮ ಮಗು ಇನ್ನೂ ನೂರಾರು ಕೋಶಗಳಿಂದ ಮಾಡಲ್ಪಟ್ಟ ಸಣ್ಣ ಚೆಂಡಿನಂತೆ ಇರುತ್ತದೆ  ಮತ್ತು ಇದು ಗೋಚರಿಸುವುದು ಸಹ ಕಷ್ಟ. ನಿಮ್ಮ ಮಗುವನ್ನು ಇನ್ನೂ ಅಲ್ಟ್ರಾಸೌಂಡನಲ್ಲಿ ಸಹ  ನೋಡಲಾಗುವುದಿಲ್ಲ. ಜೀವಕೋಶಗಳ ಈ ಚೆಂಡು ಅಥವಾ ಬ್ಲಾಸ್ಟೊಸಿಸ್ಟ್ (ಇದು ಮುಂದೆ ನಿಮ್ಮ ಮಗುವಾಗಿ ರೂಪುಗೊಳ್ಳುತ್ತದೆ), ಗರ್ಭಕೋಶದಲ್ಲಿ ತನ್ನ ಸ್ಥಾನವನ್ನು ಹೊಂದಿದ್ದು,  ಈಗ ಒಳಪದರದಲ್ಲಿ ಸ್ಥಿರಗೊಳ್ಳಲು ಆರಂಭಿಸಿದೆ. ಈಗ ನಿಮ್ಮೊಳಗೆ ಜೀವವೊಂದು ರೂಪುಗೊಳ್ಳುತ್ತಿದೆ. ಇದು ಅದ್ಭುತವಲ್ಲವೇ.

 

ಕೆಲವು ಜೀವಕೋಶಗಳು ಈಗ ಪ್ಲೆಸೆಂಟಾ  ರೂಪಿಸುತ್ತವೆ ಮತ್ತು HCG ( ಹ್ಯೂಮನ್ ಕೊರೊನಿಕ್ ಗೋನಾಡೋಟ್ರೋಪಿನ್) ಎಂಬ ಹಾರ್ಮೋನನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಈ ಹಾರ್ಮೋನ್ ಮಟ್ಟವು ಈ ಹಂತದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ಮತ್ತು ಎಲ್ಲವೂ ನಿಮ್ಮ ಗರ್ಭಧಾರಣೆಯೊಂದಿಗೆ ಸರಿಹೋದರೇ ಒಳ್ಳೆಯದು. ಇದನ್ನು  ವೈದ್ಯರು ನಿಮ್ಮ ರಕ್ತ ಪರೀಕ್ಷೆಯ ಮೂಲಕ ಖಚಿತ ಪಡಿಸುತ್ತಾರೆ.

 

HCG  ಹಾರ್ಮೋನ್ ಅಂಡಾಶಯಗಳಿಗೆ ಸಿಗ್ನಲ್ ಕಳುಹಿಸುತ್ತದೆ, ಇನ್ನೂ  ಇದು  ಯಾವುದೇ ಮೊಟ್ಟೆಯನ್ನು  ಬಿಡುಗಡೆ ಮಾಡಬಾರದು  ಎಂದು ಕೇಳುತ್ತದೆ. ಅದರ ಸೊಂಪಾದ ಲೈನಿಂಗ್ ಅನ್ನು ಸರಿಯಾಗಿ ಇಡಲು ಗರ್ಭಕೋಶಕ್ಕೆ ಸೂಚನೆಯನ್ನು ಸಹ ನೀಡುತ್ತದೆ. ಇನ್ನೂ ನಿಮಗೆ ಮುಂದಿನ  ಒಂಬತ್ತು ತಿಂಗಳುಗಳ ಕಾಲ ಋತುಸ್ರಾವ ಉಂಟಾಗುದಿಲ್ಲ!

 

ಚಿಹ್ನೆಗಳು ಹಾಗೂ ಲಕ್ಷಣಗಳು

 

ನಿಮ್ಮ ಪರೀಕ್ಷೆಗಳು ಇನ್ನೂ ಧನಾತ್ಮಕವಾಗಿಲ್ಲದಿದ್ದರೂ  ಸಹ ನೀವು ನಿಜವಾಗಿಯೂ ಕೆಲವು ಗರ್ಭಧಾರಣೆಯ ಲಕ್ಷಣಗಳನ್ನು ಅನುಭವಿಸಬಹುದು. ಎರಡನೇ ಬಾರಿಗೆ ತಾಯಿ ಆಗುತ್ತಿರುವ ಗರ್ಭಿಣೆಯರು ಇದನ್ನು ಸುಲಭವಾಗಿ ಗುರುತಿಸುತ್ತಾರೆ.

 

ಈ ಸಮಯದಲ್ಲಿ ಸ್ತನದಲ್ಲಿ  ಮೃದುತ್ವದ ಭಾವನೆ ಉಂಟಾಗುತ್ತದೆ. ಇದೊಂದು   ಉತ್ತಮ ಚಿಹ್ನೆ ಆಗಿದೆ. ಈಗ ನಿಮ್ಮ ಸ್ತನಗಳು ಟಚ್-ಮಿ-ನಾಟ್ ನಂತೆ ವರ್ತಿಸಲು ಆರಂಭಿಸುತ್ತವೆ. ನಿಮ್ಮ ಮೊಲೆಯ ಸುತ್ತಲಿನ ಅರಿಯೋಲಾ  (ನಿಮ್ಮ ತೊಟ್ಟುಗಳ ಸುತ್ತಲೂ ಇರುವ ವೃತ್ತಾಕಾರದ ಪ್ರದೇಶ) ಸ್ವಲ್ಪ ವಿಸ್ತರಣೆ ಆಗಿರುವುದನ್ನು ನೀವು ಗಮನಿಸಬಹುದು ಮತ್ತು ಇದು ಕೊಂಚ ಗಾಢ ಬಣ್ಣವನ್ನು ಸಹ ಪಡೆಯುತ್ತದೆ.

 

ಮತ್ತೊಂದು  ಪ್ರಮುಖ ಲಕ್ಷಣವೆಂದರೆ ದಣಿದ ಭಾವನೆ ಮತ್ತು ನಿಧಾನತೆ ಉಂಟಾಗಬಹುದು. ನೀವು ಹೆಚ್ಚಿನ ವಿಶ್ರಾಂತಿ ಪಡೆಯಲು ಬಯಸಬಹುದು.  ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ವಿಶ್ರಾಂತಿಯನ್ನು ಆನಂದಿಸಿ. ಏಕೆಂದರೇ ನಿಮ್ಮ ಹೊಟ್ಟೆಯಲ್ಲಿ ಸುಂದರ ಮಗು ರೂಪುಗೊಳ್ಳುತ್ತಿದೆ!

 

ನಿಮಗೆ ಈ ಸಮಯದಲ್ಲಿ ಹೆಚ್ಚು ಬಾತರೂಮ್ ಬಳಸಬೇಕೆಂದು ಅನಿಸುವುದು. ಇದು ಸಹಜವಾಗಿದೆ. ನಿಮ್ಮ ಹೊಟ್ಟೆಗೆ ಗರ್ಭಾಶಯವು ತಾಗಲು ಆರಂಭಿಸಿರುವುದರಿಂದ ನಿಮಗೆ ಹಾಗೆ ಅನಿಸುತ್ತದೆ. ಇದು ಕೂಡ ನೀವು ಗರ್ಭಿಣಿ ಎನ್ನುವ ಮುಖ್ಯ ಲಕ್ಷಣವಾಗಿದೆ.

 

ಈ ಸಮಯದಲ್ಲಿ ಗರ್ಭಿಣಿ ಮಹಿಳೆಯರ ಆಹಾರ ರುಚಿಯು ಬದಲಾವಣೆ ಆಗುತ್ತದೆ.  ನೀವು ಇಲ್ಲಿಯವರೆಗೆ ಇಷ್ಟಪಡುತ್ತಿದ್ದ ಆಹಾರವೂ ನಿಮಗೆ ರುಚಿಸದೇ ಇರಬಹುದು. ಅಥವಾ ಇಷ್ಟಪಡದ ಆಹಾರ ನಿಮ್ಮ ನೆಚ್ಚಿನ ಆಹಾರವಾಗಿ ಬದಲಾಗಬಹುದು.  ಯಾವ ಆಹಾರಕ್ಕಾಗಿ ನೀವು ಹಂಬಲಿಸುತ್ತಿದ್ದೀರೋ ಅದನ್ನು ಮಿತವಾಗಿ ಸೇವಿಸಿ ಮತ್ತು ನಿಮ್ಮ ಆಹಾರವನ್ನು ಆನಂದಿಸಿ.

 

ದೈಹಿಕ ಬೆಳವಣಿಗೆ

 

ನಿಧಾನವಾಗಿ  ನಿಮ್ಮ ಗರ್ಭಾಶಯವು ಈಗ  ನಿಮ್ಮ ಮಗುವಿಗಾಗಿ ಅಮೂಲ್ಯವಾದ ಸುರಕ್ಷಿತ ಪರಿಸರ ಇರುವ ಸ್ಥಳವನ್ನು  ನಿರ್ಮಿಸಲು ಸಿದ್ಧವಾಗಿದೆ ಮತ್ತು ವೇಗವಾಗಿ ವಿಸ್ತರಿಸುತ್ತಿದೆ. ನೀವು ಯಾವಾಗಲೂ ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸಿದ್ದರೆ, ಈಗ  ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಬೇಕಾಗಿಲ್ಲ. ಆದರೆ ನಿಮಗೆ ಗರ್ಭಿಣಿಯಾಗುವುದರ ಸಾಧ್ಯತೆ ಇದೆ ಎಂದು ತಿಳಿದಿದ್ದರೆ ನೀವು ಜಾರಿಂಗ್ ಚಟುವಟಿಕೆಗಳು, ಹೆಚ್ಚಿನ ಸಾಮರ್ಥ್ಯ ಬಯಸುವ  ಕ್ರೀಡೆಗಳು, ಭಾರೀ ಔಷಧಗಳು ಮತ್ತು ಮದ್ಯಸಾರ ಸೇವಿಸುವಿಕೆಯನ್ನು ಕೈ ಬಿಡುವುದು ಅತ್ಯಂತ ಅಗತ್ಯವಾಗಿದೆ.

 

ಭಾವನಾತ್ಮಕ ಬದಲಾವಣೆಗಳು

 

ಈ ಸಮಯದಲ್ಲಿ ಬಹುತೇಕ ಮಹಿಳೆಯರು ತಾವು  ಗರ್ಭಿಣಿಯಾಗಬಹುದೆಂದು ಊಹಿಸಲು ಪ್ರಾರಂಭಿಸುತ್ತಾರೆ. ನೀವು ಮನೆಯಲ್ಲಿಯೇ ಮೂತ್ರ ಪರೀಕ್ಷೆಯನ್ನು ಮಾಡುವುದರ ಮೂಲಕ ಇದನ್ನು ತಿಳಿದುಕೊಳ್ಳಬಹುದು. ಟೆಸ್ಟ್ ಡ್ರಿಪ್‍ನಲ್ಲಿ ನಿಮ್ಮ ಮೂತ್ರದ ಕೆಲವು ಹನಿಗಳನ್ನು ಸೇರಿಸಿ. ಕೆಲವು ಸಲ ಇದು ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ. ಆದ್ದರಿಂದ ನೀವು ಈ ಫಲಿತಾಂಶವನ್ನು ನಂಬದಿರಿ. ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ನಿಮ್ಮ ಕೊನೆಯ ಋತುಸ್ರಾವ ಅವಧಿಯ  ಮೊದಲ ದಿನಾಂಕದ ನಂತರ ಸುಮಾರು 5 ವಾರಗಳಲ್ಲಿ ಪರೀಕ್ಷೆಯನ್ನು ಪುನರಾವರ್ತಿಸಿ. ಹೆಚ್ಚು ನಿಖರ ಫಲಿತಾಂಶವನ್ನು ಪಡೆಯಲು ರಕ್ತ ಪರೀಕ್ಷೆಗಳನ್ನು ಮಾಡಿ. ಈ ಕುರಿತು  ನಿಮ್ಮ ವೈದ್ಯರೊಂದಿಗೆ ನೀವು ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು.

 

ರೆಡ್ ಫ್ಲಾಗಗಳು

 

ಕೆಲವೊಮ್ಮೆ, ಕಸಿಯು ಸರ್ವಿಕ್ಸ್ ಮೇಲೆ ಅಥವಾ  ಗರ್ಭಾಶಯದ ಬಾಯಿಯ ಹತ್ತಿರ ನಡೆಯುತ್ತದೆ. ಪ್ರಾಯೋಗಿಕವಾಗಿ, ಇದನ್ನು ಲೋ ಲೈಯಿಂಗ್ ಪ್ಲೆಸೆಂಟಾ  ಅಥವಾ ಪ್ಲೆಸೆಂಟಾ ಪ್ರಿವಿಯಾ ಎಂದು ಉಲ್ಲೇಖಿಸಲಾಗುತ್ತದೆ. ಈ ಪರಿಸ್ಥಿತಿಯನ್ನು ಹೊಂದಿರುವ ಮಹಿಳೆಯರು ರಕ್ತದ ಸ್ಪಾಟಿಂಗ್ ಸರಣಿಗಳನ್ನು  ಅನುಭವಿಸುತ್ತಾರೆ. ಇದು ತುಂಬಾ ಹೆದರುವಂತೆ ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ವೈದ್ಯರು ನಿಮ್ಮ ವ್ಯಾಯಾಮಗಳ ಮೇಲೆ ಮಿತಿಯನ್ನು ಹೇರಬಹುದು. ಮತ್ತು ಹೆಚ್ಚು ವಿಶ್ರಾಂತಿಯನ್ನು ತೆಗೆದುಕೊಳ್ಳುವಂತೆ ಪ್ರೇರೆಪಿಸಬಹುದು.

 

ಹಳೆಯ ಹೆಂಡಂತಿಯರ ಕಥೆಗಳು

 

ಗರ್ಭಿಣೆ ಮಹಿಳೆಯರು ತಮ್ಮ ಮೊದಲ ತ್ರೈಮಾಸಿಕದ ಸಮಯದಲ್ಲಿ ಹುಳಿಯ ಆಹಾರಗಳನ್ನು ಮತ್ತು ಉಪ್ಪಿನಕಾಯಿಗಳನ್ನು ತಿನ್ನಲು ಬಯಸುತ್ತಾರೆ ಎಂಬ ತಪ್ಪು ಕಲ್ಪನೆ ಇದೆ.  ಗರ್ಭಧಾರಣೆಯ ಸಮಯದಲ್ಲಿನ ಹಾರ್ಮೋನುಗಳ ಕಾರಣದಿಂದಾಗಿ ನಾಲಿಗೆಯ ಗ್ರಹಣ ಶಕ್ತಿಯು ಹೆಚ್ಚಾಗುವ ಕಾರಣದಿಂದ ಇದು ಉಂಟಾಗುತ್ತದೆ. ಉಪ್ಪಿನಕಾಯಿಯು ನಿಮ್ಮ ನಾಲಿಗೆಗೆ ಹೆಚ್ಚು ಬಲವಾದ ಹುಳಿಯ ರುಚಿಯನ್ನು ಒದಗಿಸುತ್ತದೆ. ಹೀಗಾಗಿ ಈ ರೀತಿ ಆಗುತ್ತದೆ. ಮತ್ತೊಮ್ಮೆ,  ಯಾವುದಾದರೂ ಮತ್ತು ನೀವು ಹಂಬಲಿಸುವ ಎಲ್ಲವನ್ನೂ ಆನಂದಿಸಲು ಇದು ಸುಸಮಯವಾಗಿದೆ!

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.