ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 4 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 4 ನೇ ವಾರ

ಆ ಅಮೂಲ್ಯವಾದ ಒಂಬತ್ತು ತಿಂಗಳ 4 ನೇ ವಾರದಲ್ಲಿ ನೀವು ಹೆಜ್ಜೆ ಇಡುತ್ತಿದ್ದೀರಿ, ಈ ಕುರಿತು  ಎಲ್ಲಾ ಆರೈಕೆ ಮತ್ತು ಮುನ್ನೆಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಬೇಕಾದ ಅಗತ್ಯವಿದೆ ..

 

ನಿಮ್ಮ ಮಗು ಈಗ ಭ್ರೂಣವಾಗಿದೆ. ಅದು ಈಗ ಗಸಗಸೆ ಬೀಜದ ಗಾತ್ರದಷ್ಟಿದ್ದು ಮತ್ತು ಸುಮಾರು 1 ಮಿಮೀ ಉದ್ದವಿದೆ.  ನಿಮ್ಮ ಗರ್ಭಾವಸ್ಥೆಯ ಈ ಹಂತವು ಅತ್ಯಂತ ಕ್ಲಿಷ್ಟಕರವಾದ ಬೆಳವಣಿಗೆಯ ಅವಧಿಯಾಗಿದೆ ಮತ್ತು ಸುಮಾರು 10 ವಾರಗಳ ಕಾಲ ಇರುತ್ತದೆ. ಇದು ನಿಮ್ಮ ಮಗುವಿನ ಎಲ್ಲ ಅಂಗಗಳು ಅಭಿವೃದ್ಧಿಗೊಳ್ಳಲು ಪ್ರಾರಂಭವಾಗುವ  ಸಮಯ ಮತ್ತು ಅವುಗಳಲ್ಲಿ ಕೆಲವು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ನಿಮ್ಮ ಮಗುವಿನ ದೇಹವು ರೂಪಗೊಳ್ಳುವ ಹಂತ ಇದಾಗಿದೆ, ಎಂತಹ ಅದ್ಭುತ!

 

ಆಮ್ನಿಯೋಟಿಕ್ ಚೀಲವು  (ನಿಮ್ಮ ಮಗುವನ್ನು ಸುರಕ್ಷಿತವಾಗಿ ಹಿಡಿದಿಡುವ  ಗೂಡು) ಈಗ ರೂಪುಗೊಳ್ಳುತ್ತದೆ ಮತ್ತು ನೀರಿನಿಂದ ತುಂಬಿರುತ್ತದೆ. ಇದು ನಿಮ್ಮ ಮಗುವನ್ನು ಮೆತ್ತಗೆ ಇಡುವುದಲ್ಲದೇ  ಮತ್ತು ಅವನನ್ನು / ಅವಳನ್ನು ಪ್ರಪಂಚದ ಬಾಹ್ಯ ಒತ್ತಡಗಳಿಂದ ರಕ್ಷಿಸುತ್ತದೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

* ಈ ಸಮಯದಲ್ಲಿ ನಿಮ್ಮ  ಸ್ತನಗಳು ಹೆಚ್ಚು ಮೃದುವಾಗಿ ಪರಿಣಮಿಸಬಹುದು ಮತ್ತು ನಿಮ್ಮ ವಾಸನೆಯ ಗ್ರಹಿಕೆಯ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಕೆಲವು ಮಹಿಳೆಯರು ಕೆಲವು ನಿರ್ದಿಷ್ಟ ವಸ್ತು ಅಥವಾ ಆಹಾರಗಳೊಂದಿಗೆ ವಾಕರಿಕೆಯ ಭಾವನೆಯನ್ನು ಹೊಂದುತ್ತಾರೆ. ಗರ್ಭಾವಸ್ಥೆ ಮುಂದುವರೆದಂತೆ  ಇದೂ ಸಹ ಮುಂದುವರೆಯುತ್ತದೆ.

ಈ ವಾರದಲ್ಲಿ ನಿಮ್ಮ ಮಗುವಿನ (ನರಮಂಡಲದ) ಮಿದುಳು ಮತ್ತು ಬೆನ್ನುಮೂಳೆಯು ಅಭಿವೃದ್ಧಿಗೊಳ್ಳಲು ಪ್ರಾರಂಭವಾಗುತ್ತದೆ, ಆದ್ದರಿಂದ ನೀವು ಫೋಲಿಕ್ ಆಸಿಡ್ ಪೂರಕಗಳನ್ನು ತೆಗೆದುಕೊಳ್ಳುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೇ ಇದು ಯಾವುದೇ ಬೆನ್ನುಹುರಿ ದೋಷಗಳನ್ನು ತಡೆಯಲು ಸಹಾಯ ಮಾಡುತ್ತದೆ.  ಇದಕ್ಕಿಂತ ಹೆಚ್ಚಾಗಿ ನಿಮ್ಮ ಮಗುವಿಗೆ ಬಲವಾದ ಅಡಿಪಾಯ ಹಾಕಲು ನೀವು ಬಯಸುತ್ತೀರಿ!

 

ದೈಹಿಕ ಬೆಳವಣಿಗೆ

 

ಈಗಲೂ ನಿಮಗೆ ಸಡಿಲವಾದ ಬಟ್ಟೆಗಳನ್ನು ಧರಿಸುವ ಸಮಯ ಬಂದಿಲ್ಲ.  ಇನ್ನೂ ಸ್ವಲ್ಪ ಸಮಯಾವಕಾಶ ಬೇಕು. ನಿಮ್ಮ ಹೊಟ್ಟೆ ಇನ್ನೂ ದೊಡ್ಡದಾಗಿಲ್ಲ. ಆದಾಗ್ಯೂ ನೀವು ಹಿತಕರವಾದ ಬಟ್ಟೆಯನ್ನು ತೊಡಬೇಕು.  ನಯವಾದ ಬಟ್ಟೆಗಳನ್ನು ಬಳಸಲು ಆರಂಭಿಸಿ. ನಿಮ್ಮ ಗರ್ಭಧಾರಣೆಯು ಮಜವಾಗಿರಲಿ .

 

ಭಾವನಾತ್ಮಕ ಬದಲಾವಣೆಗಳು

 

ಧನಾತ್ಮಕವಾದ ಗರ್ಭಧಾರಣೆಯ ಪರೀಕ್ಷೆಯು ನಿಮ್ಮನ್ನು ಭಾವನೆಗಳ ಸಂಕ್ಷೋಭೆ ಅನುಭವಿಸಲು ಕಾರಣವಾಗಬಹುದು. ನೀವು ಗರ್ಭಿಣೆಯಾದ  ಸುದ್ದಿಯು ನಿಮ್ಮನ್ನು ಉತ್ಸಾಹಿತರನ್ನಾಗಿ ಮತ್ತು ಅದೇ ಸಮಯದಲ್ಲಿ ಸಂತೋಷ ಮತ್ತು ಅಸ್ಥಿರತೆಯುಳ್ಳವರನ್ನಾಗಿ ಮಾಡಬಹುದು.  ಈ ಸಮಯದಲ್ಲಿ ಕೆಲವು ವೃತ್ತಿಪರ ಸಲಹೆಗಳಿಗಾಗಿ ನೀವು ಪ್ರಸೂತಿ ತಜ್ಞರು ಮತ್ತು ನಿಮ್ಮ ಸ್ತ್ರೀರೋಗತಜ್ಞರನ್ನು ಭೇಟಿ ಮಾಡುವುದು ಅವಶ್ಯಕವಾಗಿದೆ.  ಮತ್ತು ಇತರ ಸಲಹೆಗಳಿಗಾಗಿ ನಿಮ್ಮ ಕುಟುಂಬದವರ ಅಥವಾ ಸ್ನೇಹಿತರ ಸಹಾಯ ಪಡೆಯಬಹುದು. ಅಥವಾ ಬೇಬಿ ಚಕ್ರದಲ್ಲಿ ಇತರ ತಾಯಂದಿರ ಸಲಹೆ ಮತ್ತು ವಿಮರ್ಶೆಗಳನ್ನು ಓದಬಹುದು. ಮತ್ತು ನಿಮ್ಮ ಮನೆಗೆ ಹತ್ತಿರ ಇರುವ ವಿಶ್ವಾಸಾರ್ಹ ವೈದ್ಯರನ್ನು ಭೇಟಿ ಮಾಡಬಹುದು.

 

ನೀವು  ಮದ್ಯಪಾನದಂತಹ ವಿಷಕಾರಿ ವಸ್ತುಗಳ  ಸೇವನೆಯನ್ನು ತಕ್ಷಣವೇ ನಿಲ್ಲಿಸುವುದು ಅತಿ ಮುಖ್ಯವಾಗಿದೆ! ನೀವು ಸಾಮಾಜಿಕವಾಗಿ ಬೆರೆಯಲು ಕುಡಿಯುತ್ತಿದ್ದರೇ, ಈಗ ಪಾರ್ಟಿಗಳಲ್ಲಿ ಆಲ್ಹೋಹಾಲಿಕ್ ಪಾನೀಯಗಳನ್ನು ಸೇವನೆಯನ್ನು ಬಿಡುವುದು ಒಳ್ಳೆಯದಾಗಿದೆ.  ಏಕೆಂದರೆ ಸುಂದರ ಮಗು ನಿಮ್ಮ ಹೊಟ್ಟೆಯಲ್ಲಿ ರೂಪ ತಳೆಯುತ್ತಿದೆ. ಈ ಸಂತಸದ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.

 

ಈಗ ನೀವು ಪಾರ್ಟಿಗಳಿಗೆ ಎಂದು ಹೊರಗಡೆ ಹೋದಾಗ ಹಣ್ಣಿನ ರಸಗಳನ್ನು ಸೇವಿಸಬೇಕು. ಆಲ್ಕೋಹಾಲ್ ಮತ್ತು ಇತರ ಸಂಬಂಧಿತ ವಸ್ತುಗಳನ್ನು ಮುಟ್ಟಲೇ ಬಾರದು. ನಿಮ್ಮ ಹೊಟ್ಟೆಯ ಸುರಕ್ಷೆ ನಿಮ್ಮ ಕೈ  ಮತ್ತು ಕಣ್ಣಿನಲ್ಲಿದೆ. ಇದರ ರಹಸ್ಯ ನಿಮಗೆ ಮಾತ್ರ ಗೊತ್ತು. ಕೇವಲ ಹಣ್ಣಿನ ರಸಗಳನ್ನು ಮಾತ್ರ ಸೇವಿಸಿ. ನೀವು ಸೇವಿಸುವ ಎಲ್ಲವೂ ನಿಮ್ಮ ರಕ್ತದ ಮೂಲಕ ಮಗುವಿಗೆ ಹಾದುಹೋಗುತ್ತದೆ, ಆದ್ದರಿಂದ ನೀವು ಆರೋಗ್ಯಕರ ಆಹಾರ ತಿನ್ನುವುದನ್ನು ಖಚಿತ ಪಡಿಸಿಕೊಳ್ಳಿ.

 

ರೆಡ್ ಫ್ಲಾಗ್ ಗಳು

 

ಈ ನಿರ್ಣಾಯಕ ಅವಧಿಯಲ್ಲಿ ಗರ್ಭಿಣೆಯರು ಸಾರ್ವಜನಿಕ ಸಾರಿಗೆಗಳಾದ ಆಟೋ ರಿಕ್ಷಾ, ಬಸ್ ಅಥವಾ ದ್ವಿಚಕ್ರವಾಹನಗಳಲ್ಲಿ ಸಂಚರಿಸುವುದು ನಿಷೇಧಿಸಲಾಗುತ್ತದೆ. ಇನ್ನೂ ಬಂಪ್ಸ್ ಇರುವ ರೋಡ್ಗಳಲ್ಲಿ ಅವರು ವಾಹನಗಳಲ್ಲಿ ಹೋಗಬಾರದು ಎಂದು ಎಚ್ಚರಿಸಲಾಗುತ್ತದೆ. ಆದರೇ ಈ ರೀತಿಯ ಸ್ಥಳಗಳಲ್ಲಿ ಮತ್ತು ವಾಹನಗಳಲ್ಲಿ ಸಂಚರಿಸುವುದರಿಂದ ಭ್ರೂಣಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಈ ಕುರಿತು ಯಾವುದೇ ಸಾಕ್ಷಿಗಳಿಲ್ಲ.   ಆದಾಗ್ಯೂ, ನೀವು ಪ್ರಯಾಣಿಸಲು ಪರ್ಯಾಯ ಮಾರ್ಗವನ್ನು ಬಳಸಬಹುದಾದರೆ ಹಾಗೆ ಮಾಡಿ. ಕೆಲವೊಮ್ಮೆ ಬಂಪ್ಸ ರೋಡಿನ ಮೇಲಿನ ಸವಾರಿ ಸಂಕೀರ್ಣ ಗರ್ಭಧಾರಣೆಯ ಸಂದರ್ಭದಲ್ಲಿ ಸ್ಪಾಟಿಂಗ್ ಅಥವಾ ಸ್ವಲ್ಪ ಮಟ್ಟದ ರಕ್ತ ಸ್ರಾವಕ್ಕೆ ಕಾರಣವಾಗಬಹುದು. ಇದರ ಕುರಿತು ನಿಮ್ಮ ವೈದ್ಯರೊಂದಿಗೆ ಮಾತನಾಡಿ.

 

ಹಳೆಯ ಹೆಂಡಂತಿಯಂದಿರ ಕಥೆಗಳು

 

ಕೆಲವು ಕಡೆಗಳ ಸಂಸ್ಕೃತಿ, ಸಂಪ್ರದಾಯಗಳಲ್ಲಿ 12 ವಾರದ ಮುಂಚಿನ ಗರ್ಭಧಾರಣೆಯ ಸುದ್ದಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಕೆಟ್ಟ ಸಂಗತಿ ಎಂದು ಭಾವಿಸಲಾಗಿದೆ. ಮೊದಲಿನ   12 ವಾರಗಳಲ್ಲಿ ಗರ್ಭಧಾರಣೆಯ ಶೇಕಡ 26%ರಷ್ಟು ಕಳೆದು ಹೋಗುತ್ತದೆ ಎಂಬ ಅಪನಂಬಿಕೆ ಇದಕ್ಕೆ ಕಾರಣವಾಗಿದ್ದು, ಇದೊಂದು  ಮೂರ್ಖತನದ ಭಾವನೆ ಆಗಿದೆ.

 

#babychakrakannada
logo

Select Language

down - arrow
Rewards
0 shopping - cart
Personalizing BabyChakra just for you!
This may take a moment!