• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 5 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 5 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 5 ನೇ ವಾರ

13 May 2019 | 1 min Read

Sonali Shivlani

Author | 213 Articles

ಈ 5 ನೇ ವಾರದಲ್ಲಿಯೂ ಸಹ ನಿಮ್ಮ ಮಗು ಇನ್ನೂ ತುಂಬಾ ಚಿಕ್ಕದಾಗಿದೆ. ಅಂದರೇ ಕೇವಲ 3.3.ಮೀಮೀ ಉದ್ದವಿದೆ. ಹೆಚ್ಚು ಕಡಿಮೆ ಒಂದು ಅಕ್ಕಿ ಕಾಳಿನಷ್ಟು. ಈ ಹಂತದಲ್ಲಿ ನಿಮ್ಮ ಮಗು ಮೂರು ಲೇಯರಗಳನ್ನು ಒಳಗೊಂಡಿರುತ್ತದೆ-  ಎಕ್ಟೋಡರ್ಮ್, ಮೆಸೋಡಿಮ್ ಮತ್ತು ಎಂಡೋಡರ್ಮ್. ಈ ಕ್ಲಿಷ್ಟಕರವಾದ ವೈದ್ಯಕೀಯ ಪರಿಭಾಷೆಗಳನ್ನು ನಾವು ನಿಮಗಾಗಿ ಮುಂದೆ ಸರಳಗೊಳಿಸುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ದೇಹವು ನಿರ್ವಹಿಸಲು ಸಮರ್ಥವಾಗಿರುವ ಅದ್ಭುತವಾದ ವಿಷಯಗಳ ಕುರಿತು  ಎಲ್ಲವನ್ನೂ ತಿಳಿಯಲು ನೀವು ಅರ್ಹರಾಗಿದ್ದೀರಿ

 

ಎಕ್ಟೋಡರ್ಮ್ ಈ ಹಂತದಲ್ಲಿ ಅತೀ ಮೇಲಿನ ಪದರ  ಆಗಿದ್ದು , ಇದು ಮೆದುಳು, ಬೆನ್ನುಹುರಿ, ನರಗಳು ಮತ್ತು ಬೆನ್ನೆಲುಬುಗಳನ್ನು  ಬೆಳೆಸುತ್ತದೆ.  ಮಧ್ಯಮ ಪದರ ಅಥವಾ ಮೆಸೋಡಿಮ್ ಅಂತಿಮವಾಗಿ ಹೃದಯ, ರಕ್ತಪರಿಚಲನಾ ವ್ಯವಸ್ಥೆ, ಸ್ನಾಯುಗಳು, ಕಾರ್ಟಿಲೆಜಗಳು ಮತ್ತು  ಮೂಳೆಗಳನ್ನು ರೂಪಿಸುತ್ತದೆ. ಮೂರನೆಯ ಪದರ – ಎಂಡೋಡರ್ಮ್, ಇದು ಶ್ವಾಸಕೋಶಗಳು, ಕರುಳುಗಳು, ಮೂತ್ರದ ವ್ಯವಸ್ಥೆ, ಥೈರಾಯಿಡ್, ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ರೂಪಿಸುತ್ತದೆ.

 

ಪ್ಲೆಸೆಂಟಾ  ಮತ್ತು ಅಂಬಿಲಿಕಲ್ ಕಾರ್ಡ್  (ನಿಮ್ಮ ಮಗುವನ್ನು ಬೆಳೆಸುವ ಅಂಗಗಳು) ಈಗಾಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಮತ್ತು  ಇದು ನಿಮ್ಮ ಮಗುವಿಗೆ ಆಮ್ಲಜನಕವನ್ನು ಮತ್ತು ಇತರ ಪೋಷಕಾಂಶಗಳನ್ನು ನೀಡುತ್ತಿವೆ. ಇದು ನಿಮ್ಮ ರಕ್ತದಲ್ಲಿ ಸೇರಬಹುದಾದ ತ್ಯಾಜ್ಯಗಳನ್ನು  ವಿಸರ್ಜನೆಗಾಗಿ ತೆಗೆಯುವ ಜವಾಬ್ದಾರಿಯನ್ನು ಹೊಂದಿರುತ್ತವೆ.

 

ಈ ವಾರದ ಕೊನೆಯಲ್ಲಿ , ನಿಮ್ಮ ಮಗುವು ಒಂದು  ಚಿಕ್ಕ ಗೊದಮೊಟ್ಟೆ (ಟಾಡ್‍ಪೋಲ್) ಹೋಲುತ್ತದೆ. ನಿಮ್ಮ ಮಗುವನ್ನು ಈ ರೀತಿ ಊಹಿಸಿಕೊಳ್ಳುವುದು ಕಷ್ಟವಾಗಿದೆ. ಇನ್ನೂ ಕೆಲವು ವಾರಗಳಲ್ಲಿ  ನಿಮ್ಮ ಮಗು ಚಿಕ್ಕ ಮಾನವ ರೂಪವನ್ನು ಪಡೆಯಲಿದೆ ಎಂದು ಭರವಸೆ ನೀಡುತ್ತೇವೆ.

 

ದೈಹಿಕ ಬೆಳವಣಿಗೆ

 

ನಿಮ್ಮ ಮಗುವಿನ ಬಂಪ್ ಇನ್ನೂ ಸರಿಯಾಗಿ ಕಾಣುತ್ತಿಲ್ಲವಾದರೂ ಸಹ ಈಗ ಯಾವುದೇ ಪರೀಕ್ಷೆಯು ನಿಮ್ಮ ಗರ್ಭಾವಸ್ಥೆಯನ್ನು ದೃಢೀಕರಿಸುತ್ತದೆ. ನೀವು ಈಗಲೂ ಸಹ ಸಾಮಾನ್ಯವಾದ , ಆರಾಮದಾಯಕವಾದ ಎಂದಿನಂತೆ ಧರಿಸುವ ಬಟ್ಟೆಗಳನ್ನು ಧರಿಸಬಹುದು. ನಿಮಗೆ ಆ ಬಟ್ಟೆಗಳಲ್ಲಿ ಆರಾಮದಾಯಕ ಎಂದು ಎನಿಸಬೇಕು. ಈ ಸಮಯದಲ್ಲಿ ನೀವು ಹೊಟ್ಟೆಯ ಮೇಲೆ ಸಹ ಮಲಗಬಹುದು. ಏಕೆಂದರೇ  ನಿಮ್ಮ ಗರ್ಭಾಶಯ ಮತ್ತು ಶಿಶು ಇನ್ನೂ ಶ್ರೋಣಿ ಕುಹರದ (ಪೆಲ್ವಿಕ್ ಕಾವಿಟಿ) ಆಳದಲ್ಲಿದೆ. ಹೆಚ್ಚು ಚಿಂತಿಸದಿರಿ. ನಿಮ್ಮ ಗರ್ಭಾವಸ್ಥೆಯ ಹಂತಗಳು ಸಹಜವಾಗಿ ಮುಂದುವರೆಯಲಿ. ಇದನ್ನು ನೀವು ಆನಂದಿಸಿ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ನಿಮ್ಮ ಗರ್ಭಾವಸ್ಥೆಯ   ಹಾರ್ಮೋನುಗಳು ಈಗ ಉಲ್ಬಣಗೊಳ್ಳುತ್ತಿವೆ, ಏಕೆಂದರೆ ನಿಮ್ಮ ಸುಂದರ ಮಗುವನ್ನು  ತಯಾರಿಸಲು ನಿಮ್ಮ ದೇಹವು ಶ್ರಮಿಸುತ್ತಿದೆ. ಈ ಸಮಯದಲ್ಲಿ ನೀವು ವಾಕರಿಕೆ, ವಾಂತಿ ಮತ್ತು ದಣಿವಿನಿಂದ ಕೂಡಿದ ಬೆಳಗಿನ ಕಾಯಿಲೆ ಮತ್ತು ಸುಸ್ತನ್ನು ಹೆಚ್ಚು  ಅನುಭವಿಸಬಹುದು. ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿ 10 ಮಹಿಳೆಯರಲ್ಲಿ 8 ಮಹಿಳೆಯರಿಗೆ ಇದರ ಅನುಭವವಾಗುತ್ತದೆ. ನಿಮಗೂ ಸಹ ಇಂತಹ ಅನುಭವವಾಗುತ್ತಿದ್ದರೇ ಹೆಚ್ಚಿಗೆ ಚಿಂತಿಸಬೇಡಿ. ಇದು ಕೆಲವು ಗರ್ಭಿಣೆ ಸ್ತ್ರೀಯರಲ್ಲಿ ಸಹಜವಾಗಿದೆ.

 

ಈಗ ಮತ್ತೊಂದು ಸಮಸ್ಯೆ! ನಿಮಗೆ ಈಗ ಬೆಳಗಿನ ಸುಸ್ತು ಯಾವಾಲಾದರೂ ಕಾಡಬಹುದು ಅಥವಾ ಒಂದೊಂದು ಸಲ ಬೆಳಗಿನ ಸುಸ್ತು  ನಿಮ್ಮನ್ನು ದಿನಪೂರ್ತಿ ಸತಾಯಿಸಬಹುದು. ಹೀಗಾಗಿ ಇದನ್ನು ಯಾವುದೇ ಸಮಯದ ಅನಾರೋಗ್ಯ ಎಂದು ಕರೆಯಲಾಗುತ್ತದೆ.

 

ಸಾಮಾನ್ಯವಾಗಿ, ಕೆಲವು ನಿರ್ದಿಷ್ಟವಾದ  ಆಹಾರಗಳು ಅಥವಾ ವಾಸನೆಗಳು ನಿಮ್ಮಲ್ಲಿ    ವಾಕರಿಕೆ ಮತ್ತು ವಾಂತಿಗಳನ್ನು ಪ್ರಚೋದಿಸಬಹುದು. ಇಂತಹ ಪ್ರಚೋದಕಗಳನ್ನು ನೀವೇ ಗುರುತಿಸಿ ಮತ್ತು ಅವುಗಳಿಂದ ದೂರವಿರಿ.  ನೀವು ಈಗ ಕೆಲವು ಡ್ರೈ ಟೋಸ್ಟ್ ಮತ್ತು ಸಪ್ಪೆ ಬಿಸ್ಕತ್ತುಗಳನ್ನು ತಿನ್ನಲು ಬಯಸಬಹುದು. ಇದರಿಂದ ನಿಮ್ಮ ಹೊಟ್ಟೆ ಸ್ಥಿರವಾಗಿರುವಂತೆ ಅನುಭವವಾಗುತ್ತದೆ. ಶುಂಠಿಯ ಒಂದು ಚಿಕ್ಕ ತುಣುಕು ವಾಕರಿಕೆ ಮತ್ತು ವಾಂತಿಯನ್ನು ಕಡಿಮೆಗೊಳಿಸುತ್ತದೆ ಎಂದು ಹಲವು ಮಹಿಳೆಯರು ಹೇಳಿದ್ದಾರೆ.

 

ನಿಮ್ಮ ಮಗುವಿಗೆ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತಿವೆಯೇ? ಎಂಬುದರ ಕುರಿತು ನೀವು ಚಿಂತಿತರಾಗಿದ್ದೀರಾ? ಚಿಂತಿಸಬೇಡಿ. ನಿಮ್ಮ ಮಗು ಇನ್ನೂ ತುಂಬಾ ಚಿಕ್ಕದು. ಅದಕ್ಕೆ ನಿಮ್ಮ ದೇಹದಲ್ಲಿ ಸಂಗ್ರಹಗೊಂಡಿರುವ ಪೋಷಕಾಂಶಗಳೇ ಸಾಕು. ಅದು ನಿಮ್ಮ ದೈಹಿಕ ನಿಕ್ಷೇಪಗಳ ಪೋಷಕಾಂಶಗಳಿಂದ ಪೋಷಿಸಲ್ಪಟ್ಟಿದೆ. ಹೀಗಾಗಿ ನೀವು ನಿಮ್ಮ ಆಹಾರವನ್ನು ಹೆಚ್ಚು ಆರೋಗ್ಯಕರವಾಗಿರಿಸಿಕೊಳ್ಳಿ. ಚಿಕ್ಕ ಚಿಕ್ಕ ಪ್ರಮಾಣಗಳಲ್ಲಿ ಹಲವು ಬಾರಿ ತಿನ್ನಿ. ಇದರಿಂದ ನಿಮ್ಮ ಶಕ್ತಿಯ ಮಟ್ಟ ಯಾವಾಗಲೂ ಹೆಚ್ಚಿರುತ್ತದೆ.

 

ಭಾವನಾತ್ಮಕ ಬದಲಾವಣೆಗಳು

 

ನೀವು ಈಗ ವಿನಾಕಾರಣವಾಗಿ  ಕಿರಿಕಿರಿ ಅಥವಾ ಅತಿಯಾದ ಭಾವನಾತ್ಮಕತೆಯನ್ನು ಅನುಭವಿಸಬಹುದು.  ನಿಮ್ಮ ಗರ್ಭಾವಸ್ಥೆಯಲ್ಲಿ ಹಾರ್ಮೋನ್‍ಗಳು ವ್ಯತ್ಯಾಸವಾಗುವುದರಿಂದ ಈ ಮನಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮೂಡ್‍ನಲ್ಲಿ ಬದಲಾವಣೆಗಳು ಆಗುವುದು ಸಹಜ.  ನಿಮ್ಮ ಸಂಗಾತಿಗೆ ಈ ಕುರಿತು ತಿಳಿಸಿ.

 

ಈ ಹಂತದಲ್ಲಿ ನಿಮ್ಮ ನಡುವಳಿಕೆಗಳನ್ನು ವಿವರಿಸುವುದು ಸ್ವಲ್ಪ ಕಷ್ಟವೇ. ಆದಾಗ್ಯೂ ನೀವು ಕೆಲವು ಉಸಿರಾಟದ ಅಭ್ಯಾಸಗಳನ್ನು ಕೈಗೊಳ್ಳಿ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ನಿಮಗೆ ಏನು ಅನಿಸುತ್ತಿದೆ ಮತ್ತು ಯಾವ ಭಾವನೆಗಳನ್ನು ಅನುಭವಿಸುತ್ತೀದ್ದೀರಿ ಎಂದು ನಿಮ್ಮ ಸಂಗಾತಿಗೆ ಹೇಳಿ. ಅವರನ್ನು ನಂಬಿರಿ.  ಸುಮಧುರವಾದ ಸಂಗೀತವನ್ನು ಕೇಳಿ, ಮನಸ್ಸಿಗೆ ಮುದ ನೀಡುವ ಕಾದಂಬರಿಗಳನ್ನು ಓದಿ ಮತ್ತು ನಿಮ್ಮ ಪ್ರಿಯರಾದವರೊಂದಿಗೆ ಚಾಟಿಂಗ್ ಮಾಡಿ.

 

ರೆಡ್ ಫ್ಲಾಗ್‍ಗಳು

 

ನಿಮಗೆ ಯಾವುದೇ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲವಾದರೇ, ಈ ಕುರಿತು ನಿಮ್ಮ ವೈದ್ಯರಿಗೆ ಮಾಹಿತಿ ನೀಡಿ. ತೀವ್ರವಾದ ವಾಂತಿ ವೈದ್ಯಕೀಯ ಮಧ್ಯಸ್ಥಿಕೆ ಅಗತ್ಯವಿರುವ ಹೈಪರ್ಮೆಮಿಸ್ ಗ್ರ್ಯಾವಿಡಾರ್ಮ್ ಎಂಬ ಸ್ಥಿತಿಯ ಸೂಚನೆಯಾಗಿರಬಹುದು!

 

ನೀವು ಈಗಲೂ ಧೂಮಪಾನವನ್ನು ಮಾಡುತ್ತೀದ್ದೀರಾ? ಈಗ ನೀವು ಇದನ್ನು ಕಡ್ಡಾಯವಾಗಿ ತೊರೆಯಲೇ ಬೇಕು. ಈಗ ನೀವು ನಿಷ್ಕ್ರಿಯ ಧೂಮಪಾನವನ್ನು ಸಹ ತ್ಯಜಿಸಬೇಕು. ಇದು ನಿಮಗೆ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.

 

ಮನೆಯ ಸುತ್ತಲೂ ಮತ್ತು ಕೆಲಸದಲ್ಲಿ ರಾಸಾಯನಿಕ ಬಳಕೆಯನ್ನು ಆದಷ್ಟು ಮಿತಗೊಳಿಸಿ ಅಥವಾ ಬಳಸಲೇ ಬೇಡಿ.  ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಸೌಂದರ್ಯ ಚಿಕಿತ್ಸೆಯನ್ನು ಮತ್ತು ಬಲವಾದ ಆಮ್ಲ ಹಾಗೂ ಸೋಂಕುನಿವಾರಕಗಳ ಬಳಕೆಯನ್ನು ನಿಲ್ಲಿಸಿ.

 

ನಿಮ್ಮ ಮೊದಲ ಪ್ರಸವಪೂರ್ವ ಭೇಟಿಯಲ್ಲಿ  ನಿಮ್ಮ ಎಲ್ಲ ಸಮಸ್ಯೆಗಳನ್ನು ವೈದ್ಯರೊಂದಿಗೆ ಕೇಳಿ ಪರಿಹರಿಸಿಕೊಳ್ಳಿ. ನಿಮ್ಮ ಪೂರ್ಣ ವೈದ್ಯಕೀಯ ಇತಿಹಾಸವನ್ನು ನಿಮ್ಮ ವೈದ್ಯರೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮಗೆ ಸರಿಯಾಗಿ ಯೋಜನೆಯನ್ನು  ಯೋಜಿಸಲು ಸಾಧ್ಯವಾಗುತ್ತದೆ.

 

ನಿಮಗೆ ಯಾವುದಾದರೂ ಪ್ರಾಣಿ ಅತಿ ಮೆಚ್ಚಿನದ್ದು ಆಗಿತ್ತೆಂದರೇ, ಅದರಲ್ಲೂ ವಿಶೇಷವಾಗಿ ಬೆಕ್ಕು.. ನೀವು ಈಗ ಅದರ ಕಾಳಜಿಯನ್ನು ತೆಗೆದುಕೊಳ್ಳುವಿಕೆಯನ್ನು ಮಿತಗೊಳಿಸಿ. ಅದರ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈ ಹಾಕಬೇಡಿ. ನಿಮ್ಮ ಬೆಕ್ಕಿನ ಲಿಟರ್ ಬಾಕ್ಸ್ ( ತ್ಯಾಜ್ಯ ಇರುವ ಪೆಟ್ಟಿಗೆ)   ಹರಡುವ ಟಾಕ್ಸೊಪ್ಲಾಸ್ಮಾಸಿಸನಂತಹ ಸೋಂಕುಗಳನ್ನು ಉಂಟುಮಾಡಬಹುದು.

 

ಹಳೆಯ ಹೆಂಡತಿಯಂದಿರ ಕಥೆಗಳು

 

ನೀವು ಗರ್ಭಿಣಿ ಎಂದು ನೀವು ಕುಟುಂಬಕ್ಕೆ ಮಾಹಿತಿ ನೀಡಿದ್ದರೇ, ನಿಮ್ಮ ಕುಟುಂಬದವರು ನಿಮಗೆ ಇಬ್ಬರ ಆಹಾರವನ್ನು ಸೇವಿಸಬೇಕು ಎಂಬ ಸಲಹೆಯನ್ನು ನೀಡಬಹುದು.  ಇದು ಉತ್ತಮ ಸಲಹೆಯಂತೆ ತೋರಬಹುದು. ಆದರೆ ಇದು ನಿಮಗೆ ಅನಪೇಕ್ಷಿತ ತೂಕವನ್ನು ಉಂಟುಮಾಡುತ್ತದೆ. ಸತ್ಯಾಂಶವೇನೇಂದರೇ ನೀವು ಗರ್ಭಿಣೆಯಾದಾಗಲೂ ಸಹ ಮೊದಲ ತ್ರೈಮಾಸಿಕದಲ್ಲಿ ಅಗತ್ಯಕ್ಕಿಂತ  ಹೆಚ್ಚಿನ ಊಟವನ್ನು ಸೇವಿಸುವ ಅಗತ್ಯವಿಲ್ಲ. ಆದರೆ ಆರೋಗ್ಯಕರ ಊಟಕ್ಕೆ ನೀವು ಪ್ರಾಶಸ್ತ್ಯವನ್ನು ನೀಡಲೇಬೇಕು.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.