• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 6 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 6 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 6 ನೇ ವಾರ

13 May 2019 | 1 min Read

Sonali Shivlani

Author | 213 Articles

ಇದು ನಿಮ್ಮ ಮಗುವಿನ ಹೃದಯ ಬಡಿತ ಆರಂಭವಾಗುವ ಹಂತ. ಎಷ್ಟು ಸುಂದರವಲ್ಲವೇ! ನಿಮ್ಮ ಗರ್ಭಾಶಯವು ಈಗ ಪ್ಲಮ್ ಹಣ್ಣಿನ ಗಾತ್ರದಷ್ಟಿದೆ  ಮತ್ತು ನಿಮ್ಮ ಮಗು ಸುಮಾರು ಒಂದು ಇಂಚು ಉದ್ದ ಬೆಳೆದಿದೆ. ನಿಮ್ಮ ಮಗುವಿಗೆ ಈಗ ಚಿಕ್ಕ ತಲೆ ಇದೆ. ಜೊತೆಗೆ ಮೆದುಳು ಸಹ ರೂಪುಗೊಂಡಿದೆ. ನಿಮ್ಮ ಮಗುವಿನ ಮುಖವು ಈಗ   ಅಭಿವೃದ್ಧಿಗೊಳ್ಳಲು ಆರಂಭವಾಗಿದೆ. ಅದರ ದವಡೆಯಲ್ಲಿ ಚಿಕ್ಕ ದಂತಮೊಗ್ಗುಗಳು ಬೆಳೆಯುತ್ತಿವೆ. ನೀವು ಈಗ ಸಂಪೂರ್ಣವಾಗಿ ಮಗುವಿನ ರಚನೆಯ ಕುರಿತು ಯೋಚಿಸುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನಿಮ್ಮ ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಿಮ್ಮ ಹೊಟ್ಟೆಯಲ್ಲಿ ನಿಮ್ಮ ಮಗು ಮಾನವ ರೂಪತಳೆಯುತ್ತಿದೆ ಎಂಬುದೇ ಸಂತೋಷದ ವಿಷಯ.

 

ಮಗುವಿನ ಪರಿಚಲನೆ ವ್ಯವಸ್ಥೆ ಈಗ ಆರಂಭವಾಗುತ್ತದೆ  ಮತ್ತು ನಿಮ್ಮ ಮುಂದಿನ ವೈದ್ಯರ ಭೇಟಿಯ ಸಮಯದಲ್ಲಿ ನಿಮ್ಮ ಮಗುವಿನ ಹೃದಯ ಬಡಿತವನ್ನು ಡಾಪ್ಲರ್ (ನಿಮ್ಮ ಮಗುವಿನ ಆರೋಗ್ಯವನ್ನು ನಿರ್ಣಯಿಸಲು ಇರುವ  ಅಲ್ಟ್ರಾಸೌಂಡ್ ಸ್ಕ್ಯಾನಿನ ರೂಪ) ಮೂಲಕ ಕೇಳಲು ಸಾಧ್ಯವಾಗುತ್ತದೆ. ಬೆಳೆಯುತ್ತಿರುವ ಮಗುವಿನ ಹೃದಯದ ಬಡಿತವು ಪ್ರತಿ ನಿಮಿಷಕ್ಕೆ 100 -160 ಬೀಟ್‍ಗಳವರೆಗೆ ಇರಬೇಕು. ಇದು ವಯಸ್ಕರ ಹೃದಯದ ಬಡಿತಕ್ಕಿಂತ ಎರಡು ಪಟ್ಟು ಹೆಚ್ಚು. ಮಗುವಿನ ಹೃದಯದ ಬಡಿತ ತುಂಬಾ ವೇಗವಾಗಿದೆಯಲ್ಲವೇ!

 

ಒಂಬತ್ತನೆಯ ವಾರದಲ್ಲಿ ನಿಮಿಷಕ್ಕೆ 175 ಬೀಟ್ಸ್ ಸರಾಸರಿ ದರವನ್ನು ತಲುಪುವವರೆಗೆ ಹೃದಯ ಬಡಿತವು ಪ್ರತಿ ವಾರ ಕೆಲವು  ಬಡಿತಗಳಿಂದ ಹೆಚ್ಚಾಗುತ್ತದೆ.

 

ಪ್ಲೆಸೆಂಟಾ  ಸ್ಥಾನಮಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಮ್ಮ ಗರ್ಭದಲ್ಲಿ ಎಷ್ಟು ಶಿಶುಗಳಿವೆ  ಎಂದು ಪರೀಕ್ಷಿಸಲು ನಿಮ್ಮ ವೈದ್ಯರು ನಿಮಗೆ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಿಗದಿಪಡಿಸುತ್ತಾರೆ.

 

ಕೆಲವು ಸಲ ಅವಳಿಮಕ್ಕಳನ್ನು ಹಡೆಯುವ ಸಾಧ್ಯತೆ ವಂಶವಾಹಿಯಾಗಿರುತ್ತದೆ. ನಿಮ್ಮ ಕುಟುಂಬದ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿ. ನಿಮ್ಮ ಕುಟುಂಬ ಇತಿಹಾಸದಲ್ಲಿ ಅವಳಿ ಮಕ್ಕಳನ್ನು ಹಡೆದಿರುವ ಸಾಧ್ಯತೆಗಳು ಇರಬಹುದು.  ಹೀಗಾದಲ್ಲಿ ನೀವು ಅವಳಿ ಮಕ್ಕಳನ್ನು ಹೊಂದುವ ಸಾಧ್ಯತೆ ಇರಬಹುದು. ನೀವು ಸಹ ಅವಳಿ ಮಕ್ಕಳುಗಳ ನಿರೀಕ್ಷೆಯಲ್ಲಿದ್ದರೇ ನಿಮಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ. ನೀವು ಈಗ ಅವಳಿ ಶಿಶುಗಳನ್ನು ಪೋಷಿಸುವಷ್ಟು ಸರಿಯಾದ ಪೋಷಕಾಂಶಗಳನ್ನು ಸೇವಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಬೇಕು.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಬೆಳಗಿನ ಬೇನೆ, ವಾಕರಿಕೆ, ಆಯಾಸ, ಆಹಾರ ಕಡುಬಯಕೆಗಳು ಮತ್ತು ಕ್ರಮೇಣ ತೂಕ ಹೆಚ್ಚಾಗುವುದು ಇವೆಲ್ಲವೂ ನೀವು ತ್ರೈಮಾಸಿಕದ ಅರ್ಧ ಹಂತದಲ್ಲಿದ್ದೀರಿ  ಎಂದು ಸೂಚಿಸುತ್ತದೆ.

 

ನಿಮ್ಮ ಗೈನಕಾಲಜಿಸ್ಟ್ ನಿಮಗೆ ಈಗ ಯೋನಿ ಪರೀಕ್ಷೆಯನ್ನು ನಡೆಸಿದರೆ, ನಿಮ್ಮ ಯೋನಿಯು ಸಾಮಾನ್ಯ ಗುಲಾಬಿಗಿಂತ ಸ್ವಲ್ಪ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.   ಸರಿ, ನೀವು ಆತಂಕ ಪಡಬೇಕಾಗಿಲ್ಲ. ಆ ಪ್ರದೇಶದಲ್ಲಿ ಹೆಚ್ಚಿದ ರಕ್ತದ ಹರಿವುನಿಂದ ಈ ರೀತಿಯಾಗಿರುತ್ತದೆ.

 

ದೈಹಿಕ ಬೆಳವಣಿಗೆ

 

ನಿಮ್ಮ ಮಗು ಇನ್ನೂ ಹೆಚ್ಚು ಗೋಚರವಾಗುತ್ತಿಲ್ಲ. ಹೌದು ಅದು ಇನ್ನೂ ತುಂಬಾ ಚಿಕ್ಕದಾಗಿದೆ. ಮಗು ನಿಮ್ಮ ಹೊಟ್ಟೆಯಲ್ಲಿ ಅತ್ತಿಂದಿತ್ತ ಚಲಿಸುತ್ತಿದೆ. ನಿಮ್ಮ ಮಗು ತುಂಬಾ ಚಿಕ್ಕ ಮತ್ತು ಸೌಮ್ಯವಾಗಿರುವುದರಿಂದ ನಿಮಗೆ ಯಾವುದೇ ಚಲನೆಯ ಅನುಭವವಾಗುತ್ತಿಲ್ಲ.  ನೀವು ನಿಮ್ಮ ಮಗುವಿನ ಚಲನೆಯ ಕುರಿತು ಯೋಚಿಸಿ ಆನಂದ ಪಡುತ್ತಿದ್ದೀರಿ ಎಂಬುದು ನಮಗೆ ತಿಳಿದಿದೆ.

 

ಭಾವನಾತ್ಮಕ ಬದಲಾವಣೆಗಳು

 

ಈ ಹಂತದಲ್ಲಿ ನಿಮ್ಮ ಭಾವನೆಗಳಲ್ಲಿ, ಮೂಡ್‍ಗಳಲ್ಲಿ ಹಠಾತ್ ಬದಲಾವಣೆ ಸಹಜ. ಕೆಲವು ಸಲ ನೀವು ತಾಯಿಯಾಗುತ್ತಿದ್ದೀರಿ ಎಂಬ ಭಾವನೆಯೇ ಅಧಿಕಗೊಳ್ಳಬಹುದು.  ನೀವು ನಿಜವಾಗಿಯೂ ಆತಂಕಕ್ಕೆ ಒಳಗಾಗಿದ್ದರೇ ಬೇಬಿ ಚಕ್ರದಲ್ಲಿರುವ ತಾಯಂದಿರ ಚರ್ಚೆ ಮತ್ತು ಸಲಹೆಗಳನ್ನು ಓದಿ. ನಿಮ್ಮ ಭಾವನೆಗಳನ್ನು ಅಲ್ಲಿ ಹಂಚಿಕೊಳ್ಳಿ. ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೀವು ಇಂತಹ ಭಾವನೆಗಳನ್ನು ಅನುಭವಿಸುತ್ತಿರುವ ಏಕೈಕ ವ್ಯಕ್ತಿ ಅಲ್ಲ ಎಂದು ತಿಳಿಯುತ್ತದೆ.

 

ರೆಡ್ ಫ್ಲಾಗ್ ಗಳು

 

ನಿಮ್ಮ ಗೈನಕಾಲಜಿಸ್ಟ್  ಲೋ ಲೇಯಿಂಗ್ ಪ್ಲೆಸೆಂಟಾ ಅಥವಾ ಹಲವು ಶಿಶುಗಳಿರುವುದನ್ನು ಅಲ್ಟ್ರಾ ಸೌಂಡ್ ಮೂಲಕ ಗುರುತಿಸಿದರೇ, ಅವರು ನಿಮಗೆ ಮೊದಲ ಕೆಲವು ವಾರಗಳು ಯಾವುದೇ ಒತ್ತಡವಿಲ್ಲದೇ ಹೆಚ್ಚು ಆರಾಮವಾಗಿರುವಂತೆ ಸಲಹೆ ನೀಡಬಹುದು.  ಇದರಿಂದ ನೀವು ಗರ್ಭಾವಸ್ಥೆಯಲ್ಲಿ ಹೆಚ್ಚು ಶಾಂತವಾಗಿರಲು ಸಾಧ್ಯವಾಗುತ್ತದೆ. ನಿಮಗೆ ಈ ಕುರಿತು ಯಾವುದೇ ಸಂದೇಹ, ಸಮಸ್ಯೆಗಳಿದ್ದರೇ, ಅದನ್ನು ನಿಮ್ಮ ವೈದ್ಯರಿಗೆ ಕೇಳಿ ಪರಿಹರಿಸಿಕೊಳ್ಳಿ. ಮಗುವಿನ ತಲೆಯು ಸರಿಯಾದ ದಿಕ್ಕಿನಲ್ಲಿ ಸಾಗಲು ಇದು ಅಗತ್ಯವಾಗಿದೆ.

 

ಹಳೆಯ ಹೆಂಡತಿಯಂದಿರ ಕಥೆಗಳು

 

ನಿಮ್ಮ ಮಗುವಿನ ಲಿಂಗತ್ವ ಗುರುತಿಸಲು ಒಂದು ಜನಪ್ರಿಯ ಕಲ್ಪನೆಯೊಂದಿದೆ. ಅದೇನೆಂದರೇ ನಿಮ್ಮ ಮಗುವಿನ ಹೃದಯ ಬಡಿತವು ಪ್ರತಿ ನಿಮಿಷಕ್ಕೆ 140 ಬೀಟ್ಸ್ ಇದ್ದರೆ, ಅದನ್ನು ಹೆಣ್ಣು ಮಗು ಎಂದು , ಒಂದು ವೇಳೆ ಅದಕ್ಕಿಂತ ಕಡಿಮೆ ಇದ್ದರೆ. ಅದನ್ನು ಗಂಡು ಮಗು ಎಂದು ಹೇಳಲಾಗುತ್ತದೆ. ಈ ವಿಷಯದಲ್ಲಿ ಹಲವಾರು ಅಧ್ಯಯನಗಳು ನಡೆದಿವೆ ಮತ್ತು ಅವುಗಳಲ್ಲಿ  ಯಾವುದೂ ಈ ಕಲ್ಪನೆಯನ್ನು ಪುಷ್ಟೀಕರಿಸಿಲ್ಲ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.