ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 7 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 7 ನೇ ವಾರ

ಗರ್ಭಾವಸ್ಥೆಯ ಏಳನೇ ವಾರವು ನಿಮ್ಮ ಮಗುವಿನಲ್ಲಿ  ಹೊಸ ಬೆಳವಣಿಗೆಗಳನ್ನು ತರುತ್ತದೆ. ಮತ್ತು ಅವೆಲ್ಲವೂ ನಿರ್ಣಾಯಕವಾಗಿವೆ! ಈ  ಹಂತದಲ್ಲಿ ನಿಮ್ಮ ಮಗುವು ಹೇಗೆ ರೂಪುಗೊಳ್ಳುತ್ತದೆ ಎಂಬುದರ ಕುರಿತು ವಿವರಣೆಯನ್ನು  ಹಂತಹಂತವಾಗಿ ಇಲ್ಲಿ ನೀಡಲಾಗಿದೆ....

 

ನಿಮ್ಮ ಮಗು ಈಗ ವೇಗವಾಗಿ ಬೆಳೆಯುತ್ತಿದೆ ಮತ್ತು ಕಳೆದ ವಾರಕ್ಕೆ ಹೋಲಿಸಿದರೇ ಈಗ ಅದು ಗಾತ್ರದಲ್ಲಿ ದ್ವಿಗುಣಗೊಂಡಿದೆ. ನಿಮ್ಮ ಮಗು ಈಗ ಅರ್ಧ ಇಂಚಿನಷ್ಟು ಮಾತ್ರವೇ ಇದೆ.  ಹೆಚ್ಚು ಕಡಿಮೆ ತೋಳುಗಳನ್ನು ಹೋಲುವ ಚಿಕ್ಕ ಪ್ಯಾಡಲ್ ತರಹದ ಅಂಗಾಂಗದ ಚಿಕ್ಕ ಮೊಗ್ಗುಗಳನ್ನು ಹೊಂದಿದೆ ಮತ್ತು ಇದು ಬಾಲವಾಗಿ ಕಾಣುತ್ತದೆ, ಅದು ನಿಧಾನವಾಗಿ ಕುಗ್ಗಲು ಆರಂಭಿಸುತ್ತದೆ  ಮತ್ತು ಟೇಲ್ ಬೋನ್ ಆಗಿ ವಿಕಸನಗೊಳ್ಳುತ್ತದೆ!

 

ನಿಮ್ಮ ಚಿಕ್ಕ ಮಗುವಿನ ಮೆದುಳು ಈಗ ಬೆಳೆಯುತ್ತಿದೆ ಜೊತೆಗೆ ಅದರ ಆಂತರಿಕ ಅಂಗಗಳು ಸಹ ಬೆಳವಣಿಗೆಯನ್ನು ಹೊಂದುತ್ತಿವೆ. ಯಕೃತ್ತು ಈಗ ಕೆಂಪು ರಕ್ತ ಕಣಗಳನ್ನು ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ಉತ್ಪಾದಿಸುತ್ತಿದೆ ಮತ್ತು ಅಪೆಂಡಿಕ್ಸ್ ಸಹ  ರೂಪುಗೊಂಡಿದೆ. ಈಗ ನಿಮ್ಮ ಮಗುವಿಗೆ ಕಣ್ಣುಗಳು ಸಹ ಇವೆ. ಈ ವಾರದ ಕೊನೆಯಲ್ಲಿ ಅದರ ಕಣ್ಣು ರೆಪ್ಪೆಗಳು ಸಹ ರೂಪಗೊಳ್ಳಲು ಆರಂಭವಾಗುತ್ತದೆ!

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಈ ಸಮಯದಲ್ಲಿ ನಿಮ್ಮ ವಾಕರಿಕೆಯು ತುಂಬಾ ಹೆಚ್ಚಾಗಿರುತ್ತದೆ! ಹಲವು ಗರ್ಭಿಣೆ ಮಹಿಳೆಯರಿಗೆ ಇದರ ಅನುಭವವಾಗುತ್ತದೆ.  ಹೆಚ್ಚಿನ ಸಂದರ್ಭಗಳಲ್ಲಿ, ಇದು ಮುಂದಿನ ಆರ ರಿಂದ ಎಂಟು ವಾರಗಳಲ್ಲಿ ಕಡಿಮೆ ಆಗುತ್ತದೆ. ಕೆಲವು ಮಹಿಳೆಯರು ಯಾವುದೇ ವಾಕರಿಕೆಯನ್ನು  ಅನುಭವಿಸದಿರುವಷ್ಟು ಅದೃಷ್ಟವಂತರು!

 

ಈ ಹಂತದಲ್ಲಿ ನಿಮಗೆ ಪದೇ ಪದೇ ವಾಷ್ರೂಮ್ಗೆ ಹೋಗಬೇಕಾದ ಅವಶ್ಯಕತೆ ಉಂಟಾಗಬಹುದು. ಪದೇ ಪದೇ ಮೂತ್ರ ಮಾಡುವ ಮನಸ್ಸಾಗಬಹುದು. ಇದು ಸಹಜವಾಗಿದೆ. ಆದರೆ ನೀವು ಯಾವುದೇ ಕಾರಣಕ್ಕೂ ದ್ರವ ಸೇವನೆಯ  ಪ್ರಮಾಣವನ್ನು ಕಡಿಮೆಗೊಳಿಸಬಾರದು. ನಿಮ್ಮ ದೇಹವು ಯಾವಾಗಲೂ ಹೈಡ್ರೇಟೆಡ್ ಆಗಿರುವಂತೆ ನೋಡಿಕೊಳ್ಳಿ. ಇದು ತುಂಬಾ ಅವಶ್ಯಕವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆಮ್ನಿಯೋಟಿಕ್ ದ್ರವ ಮಟ್ಟವನ್ನು ನಿರ್ವಹಿಸುತ್ತದೆ.

 

ನಿಮ್ಮ ಪೌಷ್ಟಿಕ ಸೇವನೆಯನ್ನು ಹೆಚ್ಚಿಸಲು ನೀವು  ಸಾಕಷ್ಟು ತಾಜಾ ನಿಂಬೆ ರಸ, ಚಹಾ ಅಥವಾ ಎಳನೀರನ್ನು ಸೇವಿಸಿ.

 

ದೈಹಿಕ ಬೆಳವಣಿಗೆ

 

ನಿಮ್ಮ ಗರ್ಭಾಶಯವು ಇದೀಗ ಗಾತ್ರದಲ್ಲಿ ದ್ವಿಗುಣಗೊಂಡಿದೆ ಮತ್ತು ನೀವು  ನಿಮ್ಮ ಕೆಳ ಹೊಟ್ಟೆಯಲ್ಲಿ ಒಂದು ಚಿಕ್ಕ ಬಲ್ಜ್ ಅನುಭವಿ ಸಬಹುದು. ಆದರೆ  ಹೊರ ಜಗತ್ತಿಗೆ ನೀವು ಇನ್ನೂ ಸಾಮಾನ್ಯವಾಗಿಯೇ ಕಾಣುತ್ತೀರಾ.. ಹೌದು ಈಗಲೂ ಸಹ ನಿಮ್ಮ ಮಗು ಇತರರಿಗೆ ಒಂದು ಸುಂದರ ರಹಸ್ಯ!

ನೀವು ಡಾಕ್ಟರ್ ಹೇಳಿದ ಎಲ್ಲ ಭೇಟಿಗಳನ್ನು ಪೂರ್ಣಗೊಳಿಸಬೇಕು. ಇದು ತುಂಬಾ ಅವಶ್ಯಕವಾಗಿದೆ. ಗರ್ಭಾವಸ್ಥೆಗೆ ಸಂಬಂಧಿಸಿದ ಎಲ್ಲ ಸಂದೇಹಗಳನ್ನು ಮತ್ತು ಸಂಬಂಧಿತ ಯಾವುದೇ ವಿಚಾರಗಳನ್ನು ಪರಿಹರಿಸಿಕೊಳ್ಳಬೇಕು! ವೈದ್ಯರನ್ನು ಭೇಟಿ ಮಾಡುವಾಗ ನೀವು ನಿಮ್ಮ ಪತಿ, ಅತ್ತೆ, ತಾಯಿಯನ್ನು ಕರೆದುಕೊಂಡು ಹೋಗಿ. ಇದರಿಂದ ಅವರಿಗೆ ನಿಮ್ಮ ಕುರಿತಾಗಿ ಕಾಳಜಿ ಹೆಚ್ಚಾಗುತ್ತದೆ.  ನಿಮ್ಮ ಗರ್ಭಾವಸ್ಥೆಯ ಪ್ರಕ್ರಿಯೆಯಲ್ಲಿ ಅವರೂ ಸಹ ಈ ಮೂಲಕ ಭಾಗಿ ಆಗುತ್ತಾರೆ.

 

ಭಾವನಾತ್ಮಕ  ಬದಲಾವಣೆಗಳು

 

ನಿಮ್ಮ ಮುಂದಿನ ಸ್ಕ್ಯಾನ್ ತನಕ ನಿಮ್ಮ ಮಗುವಿನ ಬೆಳವಣಿಗೆಯ ಕುರಿತು  ನಿರಂತರವಾಗಿ ಆತಂಕಕ್ಕೊಳಗಾಗಬಹುದು. ಈ ಕುರಿತು ಚಿಂತೆ ಆಗುವುದು ಸ್ವಾಭಾವಿಕ ಆದರೇ ತೀವ್ರ ಕುತುಹೂಲ ಬೇಡ! ನಿಮಗೆ ಸಂತೋಷಕರವಾದ ಗರ್ಭಾವಸ್ಥೆಯನ್ನು ಅನುಭವಿಸಬೇಕಾದರೇ ನೀವು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಎಲ್ಲವೂ ಚೆನ್ನಾಗಿದೆ ಎಂದು ನಿಮ್ಮ ಮಗುವಿಗೆ ಭರವಸೆ ನೀಡಿ. ಆಲ್ ಈಜ್ ವೆಲ್!

 

ರೆಡ್ ಫ್ಲಾಗ್‍ಗಳು

 

ನಿಮ್ಮ ಯೋನಿಯಲ್ಲಿ ರಕ್ತಸ್ರಾವ ಅಥವಾ ಸ್ಪಾಟಿಂಗ್ ಆಗುತ್ತಿದ್ದರೇ, ಹೊಟ್ಟೆಯ ಕೆಳಭಾಗದಲ್ಲಿ ತೀವೃ ತರದ ನೋವು ಕಂಡು ಬಂದರೇ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಹಿಂಜರಿಕೆ ಬೇಡ. ಇದು ಒಳ್ಳೆಯದು. ಈ ಸಮಯದಲ್ಲಿ ಸ್ವಯಂ ವೈದ್ಯಕೀಯ ಒಳ್ಳೆಯದಲ್ಲ. ಇದು ನಿಮ್ಮ ಮೇಲೆ  ಮತ್ತು ನಿಮ್ಮ ಮಗುವಿನ ಮೇಲೆ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ನೀವು ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರೊಂದಿಗೆ ಪರಿಶೀಲಿಸಿ ಮತ್ತು ಇದು ಮಾತ್ರೆಗಳು ಮತ್ತು ಸಿರಪ್ ಗಳನ್ನು ಒಳಗೊಂಡಿದೆ.

 

ಹಳೆಯ ಹೆಂಡತಿಯಂದಿರ ಕಥೆಗಳು

 

ನೀವು ಗರ್ಭಿಣೆಯಾದಾಗ ನೀವು ಬೆಳಗಿನ ಸುಸ್ತು ಅಥವಾ ವಾಕರಿಕೆಯನ್ನು ಅನುಭವಿಸದಿದ್ದರೇ, ಆಗ ಜನರು ನಿಮ್ಮ  ಗರ್ಭಾವಸ್ಥೆಯು ಅಸಹಜವಾಗಿದೆ ಎಂದು ಹೇಳಬಹುದು. ಇದು ಸಂಪೂರ್ಣವಾಗಿಯೂ ಸುಳ್ಳು! ಬೆಳಗಿನ ಸುಸ್ತು ನಿಮ್ಮ ದೇಹವು ಇತರರಿಗಿಂತ ಹಾರ್ಮೋನುಗಳ ಬದಲಾವಣೆಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲದು ಎಂದರ್ಥವಲ್ಲ.ಗರ್ಭಧಾರಣೆಯನ್ನು  ಆನಂದಿಸಿ!

 

#babychakrakannada
logo

Select Language

down - arrow
Personalizing BabyChakra just for you!
This may take a moment!