• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 8 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 8 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 8 ನೇ ವಾರ

13 May 2019 | 1 min Read

Sonali Shivlani

Author | 213 Articles

ನಾವು ಈಗ ನಿಮ್ಮ ಗರ್ಭಾವಸ್ಥೆಯ 8 ನೇ ವಾರದಲ್ಲಿ ಇದ್ದೇವೆ. ನಿಮ್ಮ ಗರ್ಭಧಾರಣೆಯ ಪ್ರಯಾಣ ಸುಖಕರವಾಗಿದೆ. ನಿಮ್ಮ ಮಗು ಈಗಾಗಲೇ ತನ್ನ ಭ್ರೂಣ ಹಂತವನ್ನು ಪೂರ್ಣಗೊಳಿಸಿದೆ! ಮಗು  ಈಗ ಅಧಿಕೃತವಾಗಿ ಭ್ರೂಣವಾಗಿದೆ (ಕಿಡ್ನಿ ಬೀನ್ ಗಾತ್ರದಷ್ಟು ) ಮತ್ತು ಈಗ ಚಿಕ್ಕ ಕೈ ಮತ್ತು ಪಾದಗಳನ್ನು ಹೊಂದಿದೆ.

 

ನಿಮ್ಮ ಮಗುವಿನ  ಮೆದುಳು ಈಗ ವೇಗವಾಗಿ ಬೆಳೆಯುತ್ತಿದೆ ಮತ್ತು ಒಟ್ಟು ಭ್ರೂಣದ ತೂಕದಲ್ಲಿ ಸುಮಾರು 43% ರಷ್ಟಿದೆ. ಮಗುವಿನ ವೇಗವಾಗಿ ಬೆಳೆಯುತ್ತಿರುವ ಮಿದುಳು (ವೇಗವಾಗಿ ಉತ್ಪಾದಿಸುವ ನರಕೋಶಗಳು) ನಿಮ್ಮ ಸ್ಪರ್ಶಕ್ಕೆ ಮಗು ಸ್ಪಂದಿಸಲು ಹೇಗೆ  ಅವಕಾಶ ಮಾಡಿಕೊಡುತ್ತದೆ ಎಂದು ನಿಮಗೆ ತಿಳಿದರೇ ಆಶ್ಚರ್ಯವಾಗುತ್ತದೆ!

 

ಈ ಹಂತದಲ್ಲಿ, ನಿಮ್ಮ ಮಗು ಒಂದು ಕೋಶದಿಂದ ಒಂದು ಶತಕೋಟಿ ಜೀವಕೋಶಗಳವರೆಗೆ   ಬೆಳೆದಿದೆ ಮತ್ತು 90% ರಷ್ಟು ದೇಹದ ಭಾಗಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದು  ಚಿಕ್ಕ ಮನುಷ್ಯನನ್ನು ಹೋಲುತ್ತದೆ! ನಿಮ್ಮ ಸ್ವಂತದ್ದು.. ಈಗ ಮನುಷ್ಯರನ್ನು ಹೋಲುತ್ತಿದೆ.

 

ನಿಮ್ಮ ಮಗು  ಈಗ ಕೆಲವು ಚಲನೆಗಳನ್ನು  ಅಭ್ಯಾಸ ಮಾಡಲು ಸಮರ್ಥವಾಗಿದೆ; ನಿಧಾನ ಅಥವಾ ವೇಗ, ಸ್ವಾಭಾವಿಕ, ತ್ವರಿತ  ಅಥವಾ ರಿಫ್ಲೆಕ್ಸಿವ್ ದಂತಹ ಹಲವು ವಿಧದ ಚಲನೆಗಳನ್ನು ಮಾಡಲು ಸಮರ್ಥವಾಗಿದೆ.  ನಿಮ್ಮ ಮಗು ಈಗ ಚಲಿಸಬಹುದು! ಆದರೆ ನಿಮಗೆ ಇದರ ಅನುಭವ ಉಂಟಾಗುವುದಿಲ್ಲ. ನೀವು ಇದರ ಅನುಭೂತಿಯನ್ನು ಪಡೆಯಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಆದರೆ ನಿಮ್ಮ ಮಗು  ಒಳಗಡೆ ಚಲಿಸುತ್ತಿದೆ. ನಿಮಗೆ ಈ ಕುರಿತು ಕುತೂಹುಲ ತಡೆಯಲಾಗುತ್ತಿಲ್ಲವೇ? ನೀವು ಇದನ್ನು ಅನುಭವಿಸಲು ಸ್ವಲ್ಪ ಸಮಯದವರೆಗೆ ಕಾಯಲೇ ಬೇಕು.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಈ ಹಂತದಲ್ಲಿ ಬೆಳಗಿನ ಸುಸ್ತು  ಮತ್ತು ವಾಕರಿಕೆ ಇನ್ನೂ ಕೆಲವು ವಾರಗಳವರೆಗೆ ಹೋಗುವುದಿಲ್ಲ.  ನಿಮ್ಮ ದೇಹಕ್ಕೆ ವಿಶ್ರಾಂತಿ ಬೇಕೆನಿಸಿದಾಗ ಅದು ತನ್ನ ಅಗತ್ಯತೆಯನ್ನು ದಣಿವಿನ  ಮೂಲಕ ವ್ಯಕ್ತಪಡಿಸಬಹುದು. ಹೆಚ್ಚು ಆಯಾಸಗೊಳ್ಳಬೇಡಿ. ಆರೋಗ್ಯಕರವಾದ ಆಹಾರವನ್ನು ತಿನ್ನಿ. ನಿಯಮಿತವಾಗಿ ವಿಶ್ರಾಂತಿಯನ್ನು ಮಾಡಿ. ನಿಮ್ಮನ್ನು ಯಾವಾಗಲೂ ಹೈಡ್ರೇಟೇಡ್ ಆಗಿ ಇಟ್ಟುಕೊಳ್ಳಿ. ಇದನ್ನೇ ಪುನರಾವರ್ತಿಸಿ!  ಇದು ಒಳ್ಳೆಯ ಅಭ್ಯಾಸವಾಗಿದೆ.

 

ದೈಹಿಕ ಬೆಳವಣಿಗೆ

 

ನಿಮ್ಮ ಗರ್ಭಾಶಯವು ಈಗ ಒಂದು ದೊಡ್ಡದಾದ ಲಿಂಬೆಹಣ್ಣಿನ ಗಾತ್ರದಷ್ಟಿದೆ. ನಿಮ್ಮ ಮಗು ತೀವ್ರಗತಿಯಲ್ಲಿ ಬೆಳವಣಿಗೆಯನ್ನು ಹೊಂದುತ್ತಿದೆ. ನೀವು ಈಗ ಸಡಿಲವಾದ ಬಟ್ಟೆಗಳನ್ನು ಧರಿಸಲು ಆರಂಭಿಸಿ. ನಿಮ್ಮ ಹೊಟ್ಟೆ ಗಾತ್ರ ಹಿಗ್ಗುತ್ತಿದೆ.

ನಿಮ್ಮ ಸ್ತನಗಳು ಈಗ ನಿಮ್ಮ ಮಗುವಿಗೆ ಹಾಲುಣಿಸಲು ಸಿದ್ಧಗೊಳ್ಳುತ್ತಿವೆ. ನಿಮ್ಮ ಸ್ತನಗಳಲ್ಲಿ  ಈಗ ಕೆಲವು ಕೊಬ್ಬಿನ ಕೋಶಗಳು ಬೆಳೆಯುತ್ತವೆ. ನಿಮ್ಮ ಸ್ತನ ಗಾತ್ರ ಈಗ ಆಗಾಗ್ಗೆ ಬದಲಾಗುತ್ತದೆ ಆದ್ದರಿಂದ ನಿಮ್ಮ ಸ್ತನಗಳಿಗೆ  ಚೆನ್ನಾಗಿ ಹೊಂದಿಕೊಳ್ಳುವ ಮತ್ತು ಬೆಂಬಲಿಸುವ ಬ್ರಾಗಳನ್ನು ನೀವು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಈ ಹಂತದಲ್ಲಿ ಒಂದೇ  ಗಾತ್ರದ ಹಲವಾರು ಬ್ರಾಗಳನ್ನು ಖರೀದಿಸಬೇಡಿ, ಶೀಘ್ರದಲ್ಲೇ ದೊಡ್ಡ ಗಾತ್ರದ ಬ್ರಾಗಳು ನಿಮಗೆ ಬೇಕಾಗಬಹುದು!

 

ಭಾವನಾತ್ಮಕ ಬದಲಾವಣೆಗಳು

 

ನೀವು ನಿಮ್ಮ ಮಗುವಿನ ಲಿಂಗದ ಕುರಿತು ಕುತೂಹಲಗೊಂಡಿದ್ದೀರಿ ಎಂದು ನಮಗೆ ತಿಳಿದಿದೆ. ಆದರೆ ಬಾಹ್ಯವಾಗಿ ಅದರ ಜನನಾಂಗಗಳು ಇನ್ನೂ ಬೆಳೆಯಬೇಕಾಗಿದೆ. ಈ ಹಂತದಲ್ಲಿ ಅಲ್ಟ್ರಾ ಸೌಂಡ್ ಸಹ ಮಗುವಿನ ಲಿಂಗವನ್ನು ನಿರ್ಧರಿಸಲಾರದು.  ಆದ್ದರಿಂದ ಸಮಯಕ್ಕೂ ಮೊದಲೇ ಲಿಂಗದ ಕುರಿತು ಅತಿ ಹೆಚ್ಚು ಕುತುಹೂಲವನ್ನು ಹೊಂದದಿರಿ.  ಅಲ್ಲವೇ

 

ರೆಡ್ ಫ್ಲಾಗ್ ಗಳು

 

ನೀವು ಹೊಂದಿರಬಹುದಾದ  ಯಾವುದೇ ಅಸ್ವಸ್ಥತೆಗಳನ್ನು ಗುರುತಿಸಲು ನಿಮ್ಮ ವೈದ್ಯರು  ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಮತ್ತು ಮೂತ್ರದಂತಹ ಕೆಲವು ಮೂಲಭೂತ ಪರೀಕ್ಷೆಗಳನ್ನು ಶಿಫಾರಸು ಮಾಡುತ್ತಾರೆ. ಎಚ್ಐವಿ, ಹೆಪಟೈಟಿಸ್ ಬಿ, ಥಲಸ್ಸೆಮಿಯಾ ಮತ್ತು ರುಬೆಲ್ಲಾ ಪ್ರತಿಕಾಯಗಳಿಗೆ ನೀವು ಪರೀಕ್ಷೆಗಳನ್ನು ಮಾಡಿಸಲೇ ಬೇಕು, ಯಾವುದೇ ಅಸ್ವಸ್ಥತೆಯಿಂದ ದೂರವಿರಲು ಇದು ಅವಶ್ಯಕವಾಗಿದೆ.

 

ನೀವು ಹೆಚ್ಚಿನ ಅಪಾಯವನ್ನು ಹೊಂದಿರುವ  ರೋಗಿಯಾಗಿದ್ದರೆ ನಿಮಗೆ ನಿಮ್ಮ ವೈದ್ಯರು ಕೆಲವು ಹೆಚ್ಚುವರಿ ಪರೀಕ್ಷೆಗಳನ್ನು ಸೂಚಿಸಬಹುದು, ಅಂದರೆ ನೀವು ಆನುವಂಶಿಕ ಅಸ್ವಸ್ಥತೆಗಳ ಇತಿಹಾಸವನ್ನು ಹೊಂದಿದ್ದರೆ ಅಥವಾ ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ನಿಮಗೆ ಈ ಪರೀಕ್ಷೆಗಳನ್ನು ಸೂಚಿಸಲಾಗುತ್ತದೆ. ಈ ಪರೀಕ್ಷೆಗಳು ಅಗತ್ಯವಾಗಿದ್ದು ನಿಮ್ಮ ವೈದ್ಯರ ಬಳಿ ಇದರ ಸಾಧಕ  ಮತ್ತು ಬಾಧಕಗಳನ್ನು ಚರ್ಚಿಸುವುದು ಒಳ್ಳೆಯದು.

 

#babychakrakannada

A

gallery
send-btn

Related Topics for you