ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 9 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 9 ನೇ ವಾರ

ನೀವು ಈಗ ಗರ್ಭಾವಸ್ಥೆಯ 9 ನೇ ವಾರದಲ್ಲಿದ್ದೀರಿ. ನಿಮ್ಮ ಮಗುವಿನ ದೇಹದ ಎಲ್ಲ ಭಾಗಗಳು ಈಗ ಬಹುತೇಕ ರೂಪುಗೊಂಡು, ಚಿಕ್ಕ ಮಾನವನಂತೆ ಕಾಣುತ್ತಿದೆ! 2 ಗ್ರಾಂ ಗಳಷ್ಟು ತೂಕವನ್ನು ಹೊಂದಿದ್ದು, ಒಂದು ಇಂಚು ಎತ್ತರವಾಗಿದೆ.

 

ಈಗ ನಿಮ್ಮ ಪ್ಲೆಸೆಂಟಾ ಸಂಪೂರ್ಣವಾಗಿಬೆಳೆದಿದೆ.  ನಿಮ್ಮ ಮಗುವನ್ನು ನಿಮ್ಮ ಗರ್ಭದಲ್ಲಿ  ಸುರಕ್ಷಿತವಾಗಿ ಉಳಿಸುವ ಜವಾಬ್ದಾರಿ ಅದರದಾಗಿದೆ. ಮಗುವಿನ ಪೌಷ್ಟಿಕತೆಯ ಕುರಿತು ಇದು ಕಾಳಜಿಯನ್ನು ವಹಿಸುತ್ತದೆ. ಈ ವಾರದಲ್ಲಿ ನಿಮ್ಮ ಮಗುವಿನ  ಬೆನ್ನೆಲುಬು ಸಹ ಬೆಳವಣಿಗೆ ಹೊಂದುತ್ತಿದೆ. ಹಿಂಭಾಗವು ನೇರವಾಗಲು ಆರಂಭವಾಗಿದೆ ಆದರೆ ತಲೆ ಇನ್ನೂ ಪ್ರಮಾಣದಲ್ಲಿ ದೊಡ್ಡದಾಗಿದ್ದು ಅದು ಎದೆಯ ಕಡೆಗೆ ಬಾಗುತ್ತದೆ.

 

ಈ ಹಂತದಲ್ಲಿ, ನಿಮ್ಮ ಮಗುವಿನ ಕಣ್ಣುಗಳು ಪೊರೆಯಿಂದ ಮುಚ್ಚಲ್ಪಡುತ್ತವೆ  ಮತ್ತು ಕೆಲವು ವಾರಗಳವರೆಗೆ ಇದು ಹೀಗೆ ಮುಚ್ಚಲ್ಪಡುತ್ತವೆ. ಆದಾಗ್ಯೂ ಅದರ ಸ್ನಾಯುಗಳು ಬಲಗೊಳ್ಳಲು ಪ್ರಾರಂಭಿಸಿವೆ ಮತ್ತು ನಿಮ್ಮ ಚಿಕ್ಕಮಗು  ಈಗ ಚಲನೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದೆ! ಈ ವಾರದಲ್ಲಿ ನಿಮ್ಮ ಮಗು ಹೆಬ್ಬೆರಳು ಚೀಪುವಿಕೆಯನ್ನು ಸಹ ಆರಂಭಿಸಬಹುದು. ಇದು ಅತ್ಯಂತ ಸ್ವಾಭಾವಿಕವಾಗಿದೆ.

 

ಈ ವಾರದಿಂದ ನಿಮ್ಮ ಮಗುವಿನ ಚೇಷ್ಟೆಗಳು ಆರಂಭವಾಗುತ್ತದೆ.  ಅದು ಅಮ್ನಿಯೋಟಿಕ ದ್ರವವನ್ನು ನುಂಗಲು ಆರಂಭಿಸಬಹುದು ಮತ್ತು ತನ್ನ ಸುತ್ತಲಿರುವ ವಸ್ತುಗಳನ್ನು ಹಿಡಿಯಲು ಪ್ರಯತ್ನಿಸಬಹುದು. ಅಂಬಿಲಿಕಲ್ ಕಾರ್ಡ್ ಸಹ ಹಿಡಿಯಲು ಪ್ರಯತ್ನಿಸಬಹುದು.  ಇದು ಎಷ್ಟು ಸುಂದರವಾಗಿದೆಯಲ್ಲವೇ?

 

ನಿಮ್ಮ ಗರ್ಭದಲ್ಲಿ ಹೆಣ್ಣು ಮಗು ಇದ್ದರೇ,  ಆಕೆಯ ಗರ್ಭಾಶಯ ಮತ್ತು ಸಂತಾನೋತ್ಪತ್ತಿ ಅಂಗಗಳು ಈಗಾಗಲೇ ರೂಪುಗೊಂಡಿವೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಈ ವಾರದಿಂದ, ನಿಮ್ಮ ಚರ್ಮದಲ್ಲಿ ಬದಲಾವಣೆಗಳನ್ನು ನೋಡಬಹುದು. ಹಾರ್ಮೋನುಗಳ ಬದಲಾವಣೆಯಿಂದಾಗಿ ನಿಮ್ಮ ಸುಕ್ಕುಗಳು ಮತ್ತು ಗಾಢ ಚುಕ್ಕೆಗಳು ಮಂಕಾಗುತ್ತವೆ ಒಂದು ಸುಂದರವಾದ ಗರ್ಭಾವಸ್ಥೆಯ ಹೊಳಪು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.  ಈ ಲಕ್ಷಣದಿಂದ ನೀವು ಎಲ್ಲರ ಅಚ್ಚುಮೆಚ್ಚಿನವರಾಗಲಿದ್ದೀರಿ.

 

ಆಯಾಸ, ಸ್ವಲ್ಪ ನೋವು ಮತ್ತು ಬ್ಲೋಟಿಂಗಗಳು ನಿಮಗೆ ತೊಂದರೆಯನ್ನು ನೀಡುತ್ತಿವೆ ಎಂದು ನಮಗೆ ತಿಳಿದಿದೆ. ಈ ಸಮಯದಲ್ಲಿ ಕೆಲವು  ಗರ್ಭಿಣಿ ಮಹಿಳೆಯರ ಒಸಡುಗಳು ಮೃದುವಾಗುವುದನ್ನು ನೀವು ಗಮನಿಸಿರಬಹುದು.

 

ದೈಹಿಕ ಬೆಳವಣಿಗೆ

 

ನಿಮಗೆ ಅನುಕೂಲವಾಗುವಂತಹ ಬಟ್ಟೆಗಳನ್ನು ಧರಿಸಿ. ತುಂಬಾ ಶಾಂತತೆಯಿಂದ ನಿಮಗೆ ಆರಾಮದಾಯಕವಾದ ಬಟ್ಟೆಗಳನ್ನು ಖರೀದಿಸಿ ನಿಮ್ಮ ವಾರ್ಡ್ ರೋಬ್ ತುಂಬಿಕೊಳ್ಳಿ. ಈಗ ಮೆಟರ್ನಿಟಿ ಕ್ಲೋಥ್ಸ್ ಸಹ ಹೆಚ್ಚು ಫ್ಯಾಷನ್ ಆಗಿದೆ. ಇದು ಈಗ  ವೇಗವಾಗಿ ಬೆಳೆಯುತ್ತಿದೆ ಇದು ನಿಮ್ಮ ಸಮಯ!

 

ಭಾವನಾತ್ಮಕ ಬದಲಾವಣೆಗಳು

 

ನೀವು ಉದ್ಯೋಗಸ್ಥ ಮಹಿಳೆಯರಾಗಿದ್ದರೇ ಗರ್ಭಾವಸ್ಥೆಯ ಮುಂಚಿನ ಮತ್ತು ನಂತರದ ರಜೆಗಳನ್ನು ಸರಿಯಾಗಿ ನಿರ್ವಹಿಸಲು ನೀವು ತಿಳಿದಿರಬೇಕು. ಭಾರತದಲ್ಲಿ ಮಾತೃತ್ವ ರಜೆ ಕಾಯಿದೆ ಪ್ರಕಾರ, ಗರ್ಭಿಣೆಯರು  ಆರು ತಿಂಗಳ ಮಾತೃತ್ವ ರಜೆಗೆ ಅರ್ಹರಾಗಿರುತ್ತಾರೆ. ಇದನ್ನು ನೀವು ನಿಮ್ಮ ಹೆರಿಗೆ ದಿನಾಂಕದ ಒಂದು ತಿಂಗಳು ಮುಂಚೆ ತೆಗೆದುಕೊಂಡು ಹೆರಿಗೆ ನಂತರವೂ ಅಂದರೆ ಮುಂದಿನ 5 ತಿಂಗಳುವರೆಗೂ ಮುಂದುವರೆಸಬಹುದು.

 

ಪ್ರತಿ ಸಂಸ್ಥೆಯೂ ಭಿನ್ನವಾದ ಮಾತೃತ್ವ ರಜೆ ನೀತಿಯನ್ನು ಹೊಂದಿರುತ್ತದೆ. ನೀವು ನಿಮ್ಮ ಸಂಸ್ಥೆಯ  ಮಾನವ ಸಂಪನ್ಮೂಲ ವಿಭಾಗದಿಂದ ನಿಮ್ಮ ಕಂಪನಿಯ ನೀತಿಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

 

ನೀವು ಈಗಲೇ ಈ ಸಂತೋಷದ ವಿಷಯವನ್ನು ಹಂಚಿಕೊಳ್ಳಲು ಸಿದ್ಧವಾಗಿಲ್ಲವಾದರೇ, 12 ವಾರಗಳ ವರೆಗೆ ಕಾಯಿರಿ.  ಮಾತೃತ್ವ ರಜೆಗೆ ಸಂಬಂಧಿಸಿದ ನೀತಿಗಳನ್ನು ಚೆನ್ನಾಗಿ ತಿಳಿದುಕೊಳ್ಳಿ. ಗರ್ಭಾವಸ್ಥೆಯಲ್ಲಿ ಅನಾರೋಗ್ಯ, ವಹಿಸಬಹುದಾದ ಕಾರ್ಯ ಮತ್ತು ತಪ್ಪು ವಜಾಗೊಳಿಸುವಿಕೆ ಇಂತಹ ಮುಂತಾದ ವಿಷಯಗಳ ಕುರಿತು ತಿಳಿದುಕೊಳ್ಳಿ.

 

ಹಳೆಯ ಹೆಂಡತಿಯಂದಿರ ಕಥೆಗಳು

 

ಕೆಲವರ ಪ್ರಕಾರ ಗರ್ಭಿಣಿಯು ತುಂಬಾ ಹೊಳಪಿನಿಂದ ಕೂಡಿದ್ದರೇ, ಅವಳಿಗೆ ಗಂಡು ಮಗು ಅಥವಾ ಅವಳ ಚರ್ಮವು ತುಂಬಾ ನೀರಸವಾಗುತ್ತೆಂದರೇ ಅವಳು ಹೆಣ್ಣು ಮಗುವಿನ ತಾಯಿ ಆಗುತ್ತಾಳೆ ಎಂದು ಹೇಳುತ್ತಾರೆ.  ಹೆಣ್ಣು ಮಗುವು ತಾಯಿಯ ಸೌಂದರ್ಯವನ್ನು ಕಸಿದುಕೊಳ್ಳುತ್ತದೆ ಎಂಬುದು ಅವರ ಹೇಳಿಕೆಯಾಗಿದೆ! ಇದು ಕೂಡ  ಒಂದು ಸುಳ್ಳು ಕಲ್ಪನೆ ಆಗಿದೆ. ಇದನ್ನು ನೀವು ಕೇಳಿದರೇ ಸುಮ್ಮನೇ ನಕ್ಕು ಬಿಡಿ.

 

ರೆಡ್ ಫ್ಲಾಗ್ ಗಳು

 

ನೀವು ಉತ್ತಮ ದಂತ ಆರೋಗ್ಯವನ್ನು  ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ನಿಮ್ಮ ಒಸಡುಗಳು ಮೃದುವಾಗಿರುವುದರಿಂದ  ರಕ್ತಸ್ರಾವ ಉಂಟಾಗಬಹುದು. ನೀವು ಗರ್ಭಾವಸ್ಥೆಯ ಮೂರು ತಿಂಗಳುಗಳನ್ನು ಪೂರೈಸಿದ ನಂತರ ದಂತವೈದ್ಯರ ಭೇಟಿಯನ್ನು ಮಾಡಿರಿ. ನಿಮ್ಮ ಹಲ್ಲುಗಳಲ್ಲಿ ಹುಳುಕು, ಕಡ್ಡಿಗಳಂತಹ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.  ಇವು ಒಸಡು ಕಾಯಿಲೆಗಳಿಗೆ ಕಾರಣವಾಗಿ ಪ್ರಸವ ಸಂಕೋಚನವನ್ನು ಉಂಟು ಮಾಡುತ್ತದೆ.

 

#babychakrakannada
logo

Select Language

down - arrow
Personalizing BabyChakra just for you!
This may take a moment!