• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 10 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 10 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 10 ನೇ ವಾರ

13 May 2019 | 1 min Read

Sonali Shivlani

Author | 213 Articles

ವ್ಹಾ! ನೀವು ಈಗ ಹನ್ನೆರಡು ವಾರಗಳಿಗೆ ಸಮೀಪದಲ್ಲಿದ್ದೀರಿ. ನಿಮ್ಮ ದೇಹವು ಈಗ ನಿಮ್ಮ ಮಗುವಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಸಂಪೂರ್ಣವಾಗಿ ಮಾಡಿಕೊಂಡಿದೆ. ನಿಮ್ಮ ಸುಂದರ ಮಗು ನಿಮ್ಮ ಗರ್ಭಾಶಯದಲ್ಲಿ ಸುರಕ್ಷಿತವಾಗಿದೆ.  ಈಗ ನಿಮ್ಮಮಗು ಒಂದು ಪ್ಲಮ್ ಹಣ್ಣಿನ ಗಾತ್ರದಷ್ಟಿದೆ. ಅಂದರೇ 4-5 ಸೆಂ ಮೀ ಉದ್ದವಾಗಿದ್ದು 5 ಗ್ರಾಂಗಳಷ್ಟು ತೂಕವನ್ನು ಹೊಂದಿದೆ.

 

ನಿಮ್ಮ ಮಗುವಿನ ಸಂವೇದಕ ಅಂಗಗಳು ಬೆಳೆದಿವೆ. ಅದರ ಹಲ್ಲಿನ ಬಡ್‍ಗಳು ಸಹ ಅಭಿವೃದ್ಧಿಯಾಗಿವೆ! ಅದರ ಮೂಗು ಮತ್ತು ತುಟಿ ಸಂಪೂರ್ಣವಾಗಿ ರೂಪುಗೊಂಡಿವೆ. ನಿಮ್ಮ ಮಗು ಈಗ ವ್ಯಾಪಕ ಶ್ರೇಣಿಯ ಮುಖದ ಅಭಿವ್ಯಕ್ತಿಗಳನ್ನು ಪ್ರದರ್ಶಿಸಬಹುದು. ಇದರರ್ಥ ನಿಮ್ಮ ಮಗು ಈಗ ಕಿರುನಗಬಹುದು, ಅಳಬಹುದು.  ಗಂಟುಮೋರೆಯನ್ನು ಸಹ ಹಾಕಿಕೊಳ್ಳಬಹುದು. ಎಂತಹ ಆಶ್ಚರ್ಯಕರ ಸಂಗತಿಯಲ್ಲವೇ?

 

ಈಗ ನಿಮ್ಮ ಮಗು  ಆಮ್ನಿಯೋಟಿಕ್ ದ್ರವವನ್ನು ನುಂಗಲು ಮುಂದುವರೆಸುತ್ತದೆ ಮತ್ತು ತಮ್ಮ ತೋಳುಗಳು  ಮತ್ತು ಕಾಲುಗಳನ್ನು ಹುರುಪಿನೊಂದಿಗೆ ಅತ್ತಿತ್ತ ಅಲ್ಲಾಡಿಸುತ್ತದೆ.

 

ಈ ವಾರದ ಹೊತ್ತಿಗೆ ನಿಮ್ಮ ಮಗು ಸಂಪೂರ್ಣವಾಗಿ ರೂಪುಗೊಂಡಿರುತ್ತದೆ ಮತ್ತು ಚಿಕ್ಕ ಚಿಕ್ಕ ವಿಷಯಗಳು ಸಹ ರೂಪುಗೊಳ್ಳಲು ಆರಂಭವಾಗಿರುತ್ತದೆ. ನೀವು ತುಂಬಾ ಹತ್ತಿರದಿಂದ ನೋಡಿದರೇ ನಿಮ್ಮ ಮಗುವಿನ ದೇಹದ ಮೇಲೆ ಚಿಕ್ಕ ಚಿಕ್ಕ ಕೂದಲುಗಳು ಮತ್ತು ಕೈ ಮತ್ತು ಕಾಲುಗಳಲ್ಲಿ ಉಗುರುಗಳನ್ನು ಗಮನಿಸಬಹುದು.  ಈಗ ನಿಮ್ಮ ಮಗುವಿನ ಮೆದುಳು ಪ್ರತಿ ನಿಮಿಷಕ್ಕೂ ಒಂದು ಮಿಲಿಯನ್ ನರಕೋಶಗಳ ಕಾಲು ಭಾಗದಷ್ಟು ಅದ್ಭುತ ದರದಲ್ಲಿ ಬೆಳೆಯುತ್ತಾ ಹೋಗುತ್ತದೆ!

 

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಬೆಳಿಗ್ಗೆ ಕಾಯಿಲೆ ಮತ್ತು ವಾಕರಿಕೆ ಇನ್ನೂ ಸುಮಾರು  ದಿನಗಳವರೆಗೆ ಹಾಗೆಯೇ ಮುಂದುವರೆಯುತ್ತದೆ, ಅದು ಮುಂದಿನ ಎರಡು ವಾರಗಳಲ್ಲಿ ಸಾಕಷ್ಟು ಕಡಿಮೆ ಆಗುತ್ತದೆ. ಬ್ಲೋಟಿಂಗ್, ಕೋಮಲ ಸ್ತನಗಳು ಮತ್ತು ಆಗಾಗ್ಗೆ ಮೂತ್ರವಿಸರ್ಜನೆ  ಇನ್ನೂ ಮುಂದುವರಿಯುತ್ತದೆ.ಈಗ ನಿಮ್ಮ ಯೋನಿ ಸ್ರವಿಸುವಿಕೆ ಹೆಚ್ಚಾಗಿರುವುದನ್ನು ನೀವು ಗಮನಿಸಬಹುದು.

 

ನೀವು ಆರೋಗ್ಯಕರ ಬಾಡಿ ಮಾಸ್ ಇಂಡೆಕ್ಸ್ (BMI ಮೌಲ್ಯವು 18.5 ರಿಂದ 24.9 ರವರೆಗೆ) ಹೊಂದಿದ್ದರೆ ನೀವು ಮೊದಲ ತ್ರೈಮಾಸಿಕದಲ್ಲಿ  ನಿಮ್ಮ ತೂಕ 1-2 ಕೆಜಿಯಷ್ಟು ಹೆಚ್ಚಾಗುತ್ತದೆ. ನೀವು ತೀವ್ರವಾದ ಬೆಳಿಗ್ಗೆ ಕಾಯಿಲೆ/ ಆಯಾಸ ಹೊಂದಿದ್ದರೇ ಅಥವಾ ಯಾವುದೇ ಆಹಾರಗಳು ನಿಮಗೆ ಇಷ್ಟವಾಗುತ್ತಿಲ್ಲವಾದರೇ , ನೀವು ಯಾವುದೇ ತೂಕವನ್ನು ಪಡೆಯಲು ಸಾಧ್ಯವಾಗದಿರಬಹುದು, ಬದಲಿಗೆ ನೀವು ತೂಕವನ್ನು ಕಳೆದುಕೊಳ್ಳಬಹುದು. ಚಿಂತೆ ಬೇಡ. ನಿಮ್ಮ ಮಗು ಬೆಳೆಯುತ್ತಿದ್ದಂತೆ ತನಗೆ ಬೇಕಾದ ಪೌಷ್ಟಿಕಾಂಶಗಳನ್ನು ನಿಮ್ಮ ದೇಹದಿಂದ ಹೀರಿಕೊಳ್ಳುತ್ತದೆ.

 

ಭಾವನಾತ್ಮಕ ಬದಲಾವಣೆಗಳು

 

ನಿಮಗೆ ಈಗ ನೀವು ಆತಂಕಕ್ಕೆ ಒಳಗಾಗಿದ್ದೀರಿ ಎಂದು ಎನಿಸಬಹುದು.  ಆತಂಕ ಬೇಡ. ಇದು ಸಹಜ. ಇದು ನೀವು ಮಮ್ಮಿ ಆಗುತ್ತಿದ್ದೀರಿ ಎಂದು ಹೇಳುವ ಗಾಢ ಚಿಹ್ನೆ.  ಇದು ನಿಮ್ಮ ಭಾವನಾತ್ಮಕತೆಯ ಕೊಂಡಿ.

 

ಈ ವಾರದ ನಂತರ, ನಿಮ್ಮ ವೈದ್ಯರು  ನಿಮ್ಮ ಪ್ರತಿ ಭೇಟಿಯಲ್ಲಿ ನಿಮ್ಮ ಮಗುವಿನ ಹೃದಯ ಬಡಿತವನ್ನು ಡಾಪ್ಲರ್ ಸಹಾಯದಿಂದ ಪರಿಶೀಲಿಸುತ್ತಾರೆ. ಈ ಸಮಯದಲ್ಲಿ ನಿಮ್ಮೊಂದಿಗೆ ನಿಮ್ಮ ಸಂಗಾತಿ ಇದ್ದರೇ ಒಳ್ಳೆಯದು. ಇದು ತಂದೆ-ಮಗುವಿನ ಬಂಧಕ್ಕೆ ಮುಂಚೆಯೇ  ನಾಂದಿ ಹಾಡಲು ಕಾರಣವಾಗುತ್ತದೆ! ವೈದ್ಯರೊಂದಿಗೆ ಪ್ರಸವಪೂರ್ವ ಭೇಟಿಯ ಸಂದರ್ಭಗಳಲ್ಲಿ ಅವರನ್ನು ಕರೆದುಕೊಂಡು ಹೋಗಿ. ಇದರಿಂದ ನಿಮ್ಮ ಗರ್ಭಧಾರಣೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಸಂಗಾತಿಗೆ ಸಾಧ್ಯವಾಗುತ್ತದೆ.

 

ದೈಹಿಕ ಬೆಳವಣಿಗೆ

 

ನಿಮ್ಮ ಗರ್ಭಾಶಯವು ವೇಗವಾಗಿ ಬೆಳೆಯುತ್ತಿದೆ, ಆದರೆ ಇದು ಇನ್ನೂ ಶ್ರೋಣಿ ಕುಹರದ ಕುಳಿಯಲ್ಲಿರುವುದರಿಂದ ಬೇರೆಯವರಿಗೆ ಅದು ಗೋಚರಿಸುವುದಿಲ್ಲ. ಈ ಸಮಯದಲ್ಲಿ ಉಂಟಾಗುವ ವಾಂತಿ, ವಾಕರಿಕೆ ಮತ್ತು ಬ್ಲೋಟಿಂಗ್ ಕಾರಣದಿಂದ ನೀವು ಗರ್ಭಿಣಿ ಎಂಬ ಭಾವನೆ ಬಂದು ಸಂತೋಷ ಹೊಂದುತ್ತೀರಿ!

 

ನೀವು ಗರ್ಭ ಧರಿಸುವ ಮುಂಚಿನಿಂದ ಯೋಗ-ವ್ಯಾಯಾಮಗಳನ್ನು  ಮಾಡುತ್ತಿದ್ದರೆ, ಗರ್ಭ ಧರಿಸಿದ ನಂತರವೂ ಅದನ್ನು ಮುಂದುವರೆಸಿ. ಆದರೆ ಮಾಡುವ ಮುಂಚೆ ನಿಮ್ಮ ವೈದ್ಯರ ಮತ್ತು ವ್ಯಾಯಾಮ ಪರಿಣಿತರ ಸಲಹೆಗಳನ್ನು ಪಡೆದುಕೊಳ್ಳಿ. ನೀವು ಗರ್ಭ ಧರಿಸುವ ಮುಂಚೆ ಯಾವುದೇ ವ್ಯಾಯಾಮವನ್ನು ಮಾಡುತ್ತಿಲ್ಲವಾದರೇ  ಗರ್ಭ ಧರಿಸಿದ ನಂತರ ಒಂದು ಚಿಕ್ಕ ವಾಕ್‍ನೊಂದಿಗೆ ಆರಂಭಿಸಿ. ವಾಕಿಂಗ್ ಒಂದು ಉತ್ತಮ ವ್ಯಾಯಾಮವಾಗಿದ್ದು, ಇದಕ್ಕೆ ಯಾವುದೇ ಮೇಲ್ವಿಚಾರಣೆಯ ಅಗತ್ಯವಿಲ್ಲ.

 

ರೆಡ್ ಫ್ಲಾಗ್ ಗಳು

 

ಈ ಹಂತದಲ್ಲಿ ನೀವು ಹೆಚ್ಚು ಸಮಯದವರಿಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಡಿ. ಇದು ಯೂರಿನರಿ ಟ್ರಾಕ್ಟ್ ಇನ್ಫೆಂಕ್ಷನಗೆ (ಯುಟಿಐ) ಗೆ ಕಾರಣವಾಗಬಹುದು.  ಗರ್ಭಾವಸ್ಥೆಯಲ್ಲಿ ನಿಮ್ಮ ರಕ್ತದಲ್ಲಿ ಪ್ರೊಜೆಸ್ಟರಾನ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಯುಟಿಐಗೆ ನೀವು ಒಳಗಾಗಬಹುದು.

 

ನೀವು ಕುಳಿತುಕೊಳ್ಳಲು ಸಾಧ್ಯವಾಗದೇ ಇರುವ ಸಾರ್ವಜನಿಕ ಟಾಯ್ಲೆಟಗಳಿಗೆ ಹೋಗುವುದನ್ನು ನಿರ್ಭಂದಿಸಿ.  ಈ ಸಮಯದಲ್ಲಿ ಹೆಚ್ಚಾದ ಯೋನಿ ಸ್ರವಿಸುವಿಕೆಯು ಹೆಚ್ಚು ಯೋನಿ ಸೋಂಕುಗಳಿಗೆ ಕಾರಣವಾಗುತ್ತದೆ. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಸ್ವಚ್ಛವಾದ ಒಳ ಉಡುಪು ಧರಿಸಿ. ದಿನಪೂರ್ತಿ  ತಾಜಾವಾಗಿ ಉಳಿಯಲು ಅವುಗಳನ್ನು ಆಗಾಗ್ಗೆ ಬದಲಾಯಿಸಿ.

 

ಹಳೆಯ ಹೆಂಡತಿಯಂದಿರ ಕಥೆಗಳು

 

ಜನರು ನಿಮಗೆ  ಬಿಳಿಯಾದ ಮಗುವನ್ನು ಪಡೆಯಲು ಬಿಳಿ  ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಲು ಹೇಳಬಹುದು. ಹಾಲು ಮತ್ತು ಅದರ ಉತ್ಪನ್ನಗಳಂತಹ ಆಹಾರ ವಸ್ತುಗಳು. ಏಕೆಂದರೆ ಇವುಗಳನ್ನು ಸೇವಿಸಿದರೇ ನಿಮಗೆ ಬಿಳಿ ಬಣ್ಣದ  ಮಗು ಜನಿಸುತ್ತದೆ ಎಂಬುದು ಅವರ ಅನಿಸಿಕೆ ಆಗಿದೆ. ಈ ರೀತಿ ಆಗುವುದಿಲ್ಲ. ಇದೊಂದು ಮಿಥ್ಯ ಕಲ್ಪನೆ ಆಗಿದೆ.

 

ನಿಮ್ಮ ಮಗುವಿನ ಚರ್ಮದ ಬಣ್ಣವು ಅವಳ /ಅವನ ಆನುವಂಶಿಕ ಮೇಕ್ಅಪ್ ಅವಲಂಬಿಸಿರುತ್ತದೆ ಮತ್ತು ನೀವು ಸೇವಿಸುವ ಆಹಾರದ ಮೇಲೆ ಅವಲಂಬಿಸಿರುವುದಿಲ್ಲ. ನಿಮ್ಮ ಬಿಳಿ ಆಹಾರವನ್ನು ತಿನ್ನಲು ಬಯಸಿದರೂ ಸಹ ಆಹಾರ ಪಥ್ಯಕ್ಕೆ ಅನುಗುಣವಾಗಿ ಸೇವಿಸಿ.

 

#babychakrakannada

A

gallery
send-btn

Related Topics for you