• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 11 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 11 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 11 ನೇ ವಾರ

13 May 2019 | 1 min Read

Sonali Shivlani

Author | 213 Articles

ನೀವು ಈಗ  ಮೊದಲ ತ್ರೈಮಾಸಿಕದ ಕೊನೆಯಲ್ಲಿದ್ದೀರಿ ಮತ್ತು  ಇನ್ನು ಮುಂದೆ ನಿಮ್ಮ ಗರ್ಭವು ಇನ್ನೂ ಸುಂದರವಾಗಿ ಅರಳಲಿದೆ.  ಈಗ ನಿಮ್ಮ ಮಗು ಒಂದು ಲಿಂಬೆಹಣ್ಣಿನಷ್ಟು ಇದೆ. ಅದರ ತೂಕ 8 ಗ್ರಾಂಗಳು. ಮುಂದಿನ 3 ವಾರಗಳಲ್ಲಿ ಮಗುವಿನ ಬೆಳವಣಿಗೆಯು ಹೆಚ್ಚಾಗುತ್ತದೆ ಮತ್ತು ಶೀಘ್ರದಲ್ಲೇ ಗಾತ್ರದಲ್ಲಿ ದ್ವಿಗುಣಗೊಳ್ಳಲಿದೆ!

 

ಈಗ ನಿಮ್ಮ ಮಗುವಿನ ಎಲ್ಲ ಪ್ರಮುಖ ಅಂಗಗಳು ರೂಪುಗೊಂಡಿವೆ ಮತ್ತು ಗರ್ಭಾಶಯದಲ್ಲಿ ತನ್ನ ಹೆಚ್ಚಿನ ಬೆಳವಣಿಗೆಯನ್ನು ಆರಾಮದಾಯಕವಾಗಿ ಮುಂದುವರೆಸುತ್ತದೆ. ಎಷ್ಟೊಂದು ರೋಮಾಂಚಕಾರಿ ಅಲ್ಲವೇ?

 

ಚಿಹ್ನೆ ಮತ್ತು ಲಕ್ಷಣಗಳು

 

ನೀವು ಎರಡನೇ ತ್ರೈಮಾಸಿಕಕ್ಕೆ ಕಾಲಿಡುವ ಸಮಯದಲ್ಲಿ ನಿಮಗೆ ವಾಕರಿಕೆ, ಆಯಾಸ ಮುಂತಾದವುಗಳ ಭಾವನೆ ಮೂಡಬಹುದು. ಕೆಲವು ಮಹಿಳೆಯರಿಗೆ ವಾಕರಿಕೆ ಮುಂದುವರೆಯುವುದು..

 

ಮತ್ತೊಂದು ಕಡೆಯಲ್ಲಿ ಈ ಸಮಯದಲ್ಲಿ ನಿಮ್ಮ ಲೈಂಗಿಕ ಭಾವನೆ ಹೆಚ್ಚಾಗಬಹುದು. ಇದಕ್ಕೆ ಹಾರ್ಮೋನ್ಗಳ ಕೈವಾಡವೇ ಕಾರಣ. ನಿಮ್ಮ ಸಂಗಾತಿಯೊಂದಿಗೆ ಸಲ್ಲಾಪದಲ್ಲಿ ತೊಡಗಲು ಇದು ಸುಸಮಯ. ಇದರಿಂದ ನಿಮಗೆ ಆನಂದ ಸಿಗುವುದು.

 

ಈ ವಾರದಲ್ಲಿ ನಿಮ್ಮ ಶಕ್ತಿಯ ಮಟ್ಟಗಳು ಹೆಚ್ಚಾಗುತ್ತವೆ. ಇದು ನೀವು  ಪ್ರಸವ ಶಿಕ್ಷಣ ತರಗತಿಗಳಿಗೆ  ಸೇರಲು ಉತ್ತಮ ಸಮಯವನ್ನು ನೀಡುತ್ತದೆ.

 

ಹಾಗೆಯೇ, ಕನಿಷ್ಠ ಕೆಲವು ಚಟುವಟಿಕೆಗಳಿಗೆ ನಿಮ್ಮ ಪಾಲುದಾರರನ್ನು ಒಳಗೊಳ್ಳುವ ಒಂದು ತರಗತಿಯನ್ನು  ಆಯ್ಕೆ ಮಾಡಲು ಪ್ರಯತ್ನಿಸಿ. ಇದರಿಂದ ಅವರಿಗೆ ಮಗುವಿನೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ.

 

ಕೆಲವು ಮಹಿಳೆಯರು ಗರ್ಭಧಾರಣೆಯ ಸಮಯದಲ್ಲಿ ಮಣ್ಣು, ಚಾಕ್, ಕೊಳಕು, ಇದ್ದಿಲು , ಮರಳು ಇಂತಹ  ಪದಾರ್ಥಗಳನ್ನು ತಿನ್ನಲು ಹಂಬಲಿಸುತ್ತಾರೆ. ಗರ್ಭಿಣಿಯರಲ್ಲಿ ಕಬ್ಬಿಣ ಮತ್ತು ಪೋಷಕಾಂಶಗಳ ಕೊರತೆ ಇದ್ದರೇ ಈ ಭಾವನೆ ಬರುತ್ತದೆ.  ನಿಮಗೆ ಈ ರೀತಿಯ ಅನುಭವವಾಗುತ್ತಿದ್ದರೇ, ಕೂಡಲೇ ನಿಮ್ಮ ವೈದ್ಯರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಿ.

 

ದೈಹಿಕ ಬೆಳವಣಿಗೆ

 

ನಿಮಗೆ ಈ ಹಂತದಲ್ಲಿಯೂ ಹೊಟ್ಟೆಯು ಮುಂದೆ ಕಾಣುತ್ತಿಲ್ಲವೇ? ಹಾಗಾದರೆ ನಿಮಗೆ ಬೆನ್ನು ನೋವು ಕಾಡಬಹುದು. ಕೆಟ್ಟ ಭಂಗಿಯ ಕಾರಣದಿಂದಾಗಿ ಹೀಗೆ ಆಗುತ್ತದೆ.  ಸರಿಯಾದ ಭಂಗಿಯತ್ತ ಗಮನ ಹರಿಸಿ! ನಿಮ್ಮ ನಿಲುವು ಸರಿಪಡಿಸಲು ಗಮನ ನೀಡಬೇಕಾದ ಸಮಯ! ಉದ್ದೇಶಪೂರ್ವಕವಾಗಿ ನಿಮ್ಮ ಹೆಗಲನ್ನು ಸ್ವಲ್ಪ ಹಿಂದಕ್ಕೆ ತಳ್ಳಿ ಮತ್ತು ಎದೆಯನ್ನು ಮುಂದಕ್ಕೆ ತಳ್ಳಿ ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ.

 

ನಿಮ್ಮ ಅಜ್ಜಿಯವರು ಗರ್ಭಿಣಿ ಆಗಿದ್ದಾಗ  ನೆಲವನ್ನು ಒರೆಸುತ್ತಿದ್ದೆವು . ಒಳಕಲ್ಲಿನಲ್ಲಿ ಹಿಟ್ಟು ರುಬ್ಬುತ್ತಿದ್ದೆವು . ಇದೆಲ್ಲವೂ ಗರ್ಭಿಣಿಯರು ಮಾಡಬೇಕಾದ ಕೆಲಸ ಎಂದು ಹೇಳಬಹುದು. ಆದರೆ ಇದು ನಿಜವಲ್ಲ. ನೀವು  ಇವುಗಳನ್ನು ಪ್ರಯತ್ನಿಸುವ ಅಗತ್ಯವಿಲ್ಲ. ಇದಕ್ಕಾಗಿ ನೀವು ಪ್ರಸವಪೂರ್ವ ವ್ಯಾಯಾಮ ವರ್ಗವನ್ನು ಸೇರಿ.

 

ನಿಮ್ಮ ಆಸ್ಪತ್ರೆ / ಕ್ಲಿನಿಕ್  ಇಂತಹ ತರಗತಿಗಳನ್ನು ನಡೆಸುತ್ತದೆಯೇ ಎಂದು ಪರಿಶೀಲಿಸಿ. ಈ ತರಗತಿಯನ್ನು  ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಸಕ್ರಿಯವಾಗಿರಿಸುತ್ತವೆ. ನೀವು ಇಲ್ಲಿ ಸುರಕ್ಷಿತ ಮೇಲ್ವಿಚಾರಣೆಯಲ್ಲಿ ವರ್ಕ್ ಔಟ್ ಮಾಡುತ್ತೀರಿ.  ಇಲ್ಲಿ ನಿಮ್ಮಂತೆ ಇರುವ ಅನೇಕ ತಾಯಂದಿರನ್ನು ಭೇಟಿ ಮಾಡಲು ನಿಮಗೆ ಅವಕಾಶ ಸಿಗುತ್ತದೆ.

 

ಭಾವನಾತ್ಮಕ ಬೆಳವಣಿಗೆ

 

ಗರ್ಭಾವಸ್ಥೆಯಲ್ಲಿ ನಿಮ್ಮ ಸಂಗಾತಿ ಮತ್ತು ನೀವು ಭೌತಿಕ ಅನ್ಯೋನ್ಯತೆಯಿಂದ ದೂರವಿರುವ ಅಗತ್ಯವಿಲ್ಲ. ವಿಶ್ರಾಂತಿ, ನಿಮ್ಮ  ಮಗುವಿಗೆ ಹಾನಿ ಮಾಡುವುದಿಲ್ಲ. ನಿಮ್ಮ ಬೆಳೆಯುತ್ತಿರುವ ಕಿಬ್ಬೊಟ್ಟೆಯ ಮೇಲೆ ಒತ್ತಡ ಹೇರದೇ, ಪ್ರೀತಿ ಸ್ಫುರಿಸುವ ಕೆಲವು  ವಿವಿಧ ಪ್ರೇಮ ಭಂಗಿಗಳನ್ನು ಪ್ರಯತ್ನಿಸಿ. ಮಗ್ಗುಲಿನಲ್ಲಿ ಮಲಗುವ ಭಂಗಿ ಅಥವಾ ಮಹಿಳೆಯು ಪುರುಷನ ಮೇಲೆ ಇರುವ ಭಂಗಿಯನ್ನು ಪ್ರಯತ್ನಿಸಿ. ನಿಮಗೆ ಈ ಭಂಗಿಯು ಆರಾಮದಾಯಕವಾಗಿರಬೇಕು. ಈ ಸಮಯದಲ್ಲಿ ಹೆಚ್ಚು ಸೃಜನಾತ್ಮಕತೆ ಮತ್ತು ಸಂತೋಷದಿಂದ ಕೂಡಿರಿ.

 

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆಯ ಕುರಿತು  ನೀವು ಅನುಮಾನ ಹೊಂದಿದ್ದರೆ ನಿಮ್ಮ ವೈದ್ಯರನ್ನು ನೀವು ಕೇಳಿ ಖಚಿತಪಡಿಸಿಕೊಳ್ಳಿ. ನೀವು ಸಂಕೀರ್ಣವಾದ ಗರ್ಭಾವಸ್ಥೆಯನ್ನು ಹೊಂದಿದ್ದರೆ, ನೀವು ಎರಡನೇ ತ್ರೈಮಾಸಿಕಕ್ಕೆ ಕಾಲಿಡುವರೆಗೆ ಸೆಕ್ಸ್ ಬೇಡ ಎಂದು ಸಲಹೆ ನೀಡುತ್ತಾರೆ. ಅಲ್ಲಿಯವರೆಗೆ  ಅಪ್ಪುಗೆ ಮತ್ತು ಚುಂಬನ.

 

ರೆಡ್ ಫ್ಲಾಗ್ ಗಳು

 

ನಿಮ್ಮ ದೇಹದಲ್ಲಿ ಆಗುತ್ತಿರುವ ಯಾವುದೇ ಪ್ರಮುಖ ಬದಲಾವಣೆಯನ್ನು  ಗುರುತಿಸಿ. ಗರ್ಭಾವಸ್ಥೆಯಲ್ಲಿ ನಿಮ್ಮ ಆರೋಗ್ಯವನ್ನು ರಕ್ಷಿಸಲು ನಿಮ್ಮ ವೈದ್ಯರಿಂದ ಸಮಯೋಚಿತ ಮಧ್ಯಸ್ಥಿಕೆ ಮುಖ್ಯವಾಗಿದೆ.

 

ನೀವು ಈಗ ಹೆಚ್ಚು ಹೀಲ್ಸ್ ಇರುವ ಚಪ್ಪಲಿಗಳು ಅಥವಾ ಶೂಗಳನ್ನು ಧರಿಸಬೇಡಿ. ಫ್ಲಾಟ್ ಅಥವಾ ಕಡಿಮೆ ಹೀಲ್‍ಗಳಿರುವ ಚಪ್ಪಲಿ ಅಥವಾ ಶೂಗಳನ್ನು ಧರಿಸಿ. ಬೇಜಾರಾಗಬೇಡಿ. ಫ್ಲಾಟ್ ಚಪ್ಪಲಿಗಳು ನಿಮ್ಮನ್ನು ಆರಾಮದಾಯಕ ಮತ್ತು ಸುರಕ್ಷಿತವಾಗಿಡುತ್ತವೆ.

 

ಹಳೆಯ ಹೆಂಡತಿಯಂದಿರ ಕಥೆಗಳು

 

ಕೆಲವು ಜನರು ಗರ್ಭಿಣಿಯರು ಪ್ರತಿ ದಿನವೂ ಸ್ನಾನ ಮಾಡಬಾರದು. ಇದರಿಂದ ಅವರ ಮೈ ಬಣ್ಣ ಮಸಕಾಗುತ್ತದೆ ಎಂದು ಹೇಳುತ್ತಾರೆ. ಇದು ಸಂಪೂರ್ಣ ಸುಳ್ಳು.  ಸ್ನಾನವು ನಿಮ್ಮನ್ನು ಸ್ವಚ್ಛವಾಗಿಡುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಆದರೆ ಪ್ರತಿದಿನವೂ ಸೌನಾ ಬಾತ್ ಮಾಡುವುದು ಮತ್ತು ಅತಿ ಬಿಸಿ ನೀರು ಬಳಸುವುದು ಒಳ್ಳೆಯದಲ್ಲ. ಏಕೆಂದರೇ ಇದು ನಿರ್ಜಲಿಕರಣ ಮತ್ತು  ತಲೆ ತಿರುಗುವಿಕೆಯನ್ನು ಹೆಚ್ಚಿಸುತ್ತದೆ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.