13 May 2019 | 1 min Read
Sonali Shivlani
Author | 213 Articles
ವಾವ್! ನೀವು ಈ ವಾರದ ಕೊನೆಯಲ್ಲಿ ಅಧಿಕೃತವಾಗಿ ಎರಡನೇ ತ್ರೈಮಾಸಿಕವನ್ನು ಪ್ರವೇಶಿಸುತ್ತಿದ್ದೀರಿ. ಇದರರ್ಥ, ಗರ್ಭಪಾತದ ಅಪಾಯವು ವಾರ 12 ರ ನಂತರ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಮೂಲಕ ನೀವು ಅಂತಿಮವಾಗಿ ಗರ್ಭಾವಸ್ಥೆಯ ಸುರಕ್ಷಿತ ವಲಯವನ್ನು ಪ್ರವೇಶಿಸಿದ್ದೀರಿ.
ನಿಮ್ಮ ಮಗು ಈಗ 7 ರಿಂದ 8 ಸೆಂ.ಮೀ ಉದ್ದವಿರುತ್ತದೆ ಮತ್ತು 10 ರಿಂದ 12 ಗ್ರಾಂ ತೂಕವನ್ನು ಹೊಂದಿರುತ್ತದೆ. ನಿಮ್ಮ ಮಗು ಈಗ ಕೈಕಾಲುಗಳನ್ನು ಆಡಿಸಬಲ್ಲದು. ಈಗ ಅವು ರೂಪುಗೊಂಡಿವೆ! ಈಗ ಅದರ ಮಿದುಳು ಕೂಡ ರೂಪುಗೊಂಡಿದ್ದರಿಂದ ಅದನ್ನು ಸ್ವಲ್ಪ ಮುಟ್ಟಿದರೇ ಸಂವೇದನೆಗೆ ಒಳಗಾಗುತ್ತದೆ.
ಇದರರ್ಥವೆಂದರೇ ನಿಮ್ಮ ಮಗು ಈಗ ನೋವನ್ನು ಅನುಭವಿಸಬಹುದು. ನೀವು ನಿಮ್ಮ ಕಿಬ್ಬೊಟ್ಟೆಯ ಮೇಲೆ ಒತ್ತಡವನ್ನು ಹಾಕಿದರೇ ನಿಮ್ಮ ಮಗು ಆ ಒತ್ತಡದ ಸ್ಥಳದಿಂದ ಬೇರೆ ಕಡೆಗೆ ತೆವಳುವ ಮೂಲಕ ಪ್ರತಿಕ್ರಿಯೆ ನೀಡಬಹುದು. ಆದರೆ ಇದು ನಿಮ್ಮ ಅನುಭವಕ್ಕೆ ಬರುವುದಿಲ್ಲ.
ನಿಮ್ಮ ಮಗುವು ತನ್ನ 18 ವಾರಗಳನ್ನು ಪೂರೈಸಿದ ಮೇಲೆಯೇ ನಿಮಗೆ ಅದು ಹೊಟ್ಟೆಯಲ್ಲಿ ಚಲಿಸಿದ ಸ್ಪಷ್ಟ ಅನುಭವವಾಗುತ್ತದೆ. ಇದಕ್ಕಿಂತ ಮುಂಚೆ ನಿಮಗೇನಾದರೂ ಅನಿಸಿದರೇ ಬಹುಶಃ ಅದು ಕೇವಲ ಗ್ಯಾಸ್ ಆಗಿರಬಹುದು.
ಚಿಹ್ನೆಗಳು ಮತ್ತು ಲಕ್ಷಣಗಳು
ನೀವು ಬೆಳಗಿನ ಕಾಯಿಲೆ ಮತ್ತು ವಾಕರಿಕೆಯಿಂದ ಮುಕ್ತಿ ಪಡೆದರೆ ಗರ್ಭಾವಸ್ಥೆಯಲ್ಲಿ ನಿಮಗೆ ಹೆಚ್ಚು ವಿಶ್ರಾಂತಿ ಸಿಗಲು ಸಾಧ್ಯವಾಗುತ್ತದೆ. ಸರಿಯಾದ, ಸಮತೋಲಿತ ಆಹಾರವನ್ನು ತಿನ್ನಿರಿ. ವ್ಯಾಯಾಮವನ್ನು ಮಾಡಿ.
ಡೌನ್ ಸಿಂಡ್ರೋಮ್‍ನಂತಹ ಯಾವುದೇ ಅಸಹಜತೆಯನ್ನು ಗುರುತಿಸಲು ನಿಮ್ಮ ವೈದ್ಯರು ಈ ವಾರ ಕೆಲವು ಪರೀಕ್ಷೆಗಳಿಗೆ ಒಳಗಾಗಲು ನಿಮ್ಮನ್ನು ಕೇಳಬಹುದು. ವಿಶೇಷವಾಗಿ ಇದನ್ನು ಇದು ನಿಮ್ಮ ಮೂವತ್ತರ ವಯಸ್ಸಿನಲ್ಲಿದ್ದರೆ ಅಥವಾ ಅನುವಂಶಿಕ ಅಸ್ವಸ್ಥತೆಗಳ ಕೌಟುಂಬಿಕ ಇತಿಹಾಸವನ್ನು ಹೊಂದಿದ್ದರೇ ಈ ಪರೀಕ್ಷೆಯನ್ನು ನಿಮಗೆ ಶಿಫಾರಸ್ಸು ಮಾಡಲಾಗುವುದು.
ಈ ವಾರದ ತಪಾಸಣೆ ನಂತರ, ನಿಮ್ಮ ವೈದ್ಯರು ನಿಮ್ಮ ಗರ್ಭಧಾರಣೆಯ ಸಿಹಿ ಸುದ್ದಿಯನ್ನು ಎಲ್ಲರಿಗೂ ನೀಡಲು ಹಸಿರು ಸಿಗ್ನಲ್ ನೀಡುತ್ತಾರೆ. ನೀವು ಗರ್ಭಿಣಿ ಆಗಿರುವುದರ ವಿಷಯವನ್ನು ನೀವು ಜಗತ್ತಿಗೆ ತಿಳಿಸಬಹುದು. ನಿಮಗೆ ಸಲಹೆ ಮತ್ತು ಅಭಿನಂದನೆ ಸಂದೇಶಗಳ ಮಹಾಪೂರವೇ ಹರಿದು ಬರಲಿದೆ.
ದೈಹಿಕೆ ಬೆಳವಣಿಗೆ
ನೀವು ಶೀಘ್ರದಲ್ಲಿಯೇ ನಿಮ್ಮ ಮಗುವನ್ನು ಗಮನಿಸಲಿದ್ದೀರಿ. ನಿಮ್ಮ ಗರ್ಭಾಶಯವು ಈಗ ಪೆಲ್ವಿಕ್ ಮೂಳೆಯ ಮೇಲೆ ಬರಲಿದೆ. ಏಕೆಂದರೆ ಮಗುವಿಗೆ ಇಲ್ಲಿ ಬೆಳೆಯಲು ಸಾಕಷ್ಟು ಸ್ಥಳಾವಕಾಶ ದೊರೆಯಲಿದೆ.
ನೀವು ಈಗಲೂ ಹೈ ಹೀಲ್ಸ್ ಮತ್ತು ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಿದ್ದೀರಾ? ಈಗಲೇ ಬಿಟ್ಟು ಬಿಡಿ. ನೀವು ಈಗಲೇ ಮೆಟರ್ನಿಟಿ ಕ್ಲೋಥ್ಸ್ ಧರಿಸಿ. ಇದು ಈಗ ನಿಮ್ಮ ಹೊಸ ಫ್ಯಾಷನ್ ಮಂತ್ರ!
ನಿಮ್ಮ ಕುಟುಂಬದ ಸದಸ್ಯರು ನಿಮಗೆ ಇಬ್ಬರ ಊಟ ಮಾಡಬೇಕೆಂದು ಸಲಹೆ ನೀಡಬಹುದು. ಆದರೆ ಇದು ಸೂಕ್ತ ಸಲಹೆಯಲ್ಲ. ಏಕೆಂದರೇ ಹೊಟ್ಟೆಯಲ್ಲಿರುವ ನಿಮ್ಮ ಮಗು ಕೇವಲ 10 ಗ್ರಾಂಗಳಷ್ಟಿದೆ.
ನಿಮ್ಮ ದೇಹಕ್ಕೆ ಈಗ 300 ಹೆಚ್ಚುವರಿ ಕ್ಯಾಲೋರಿಗಳ ಅಗತ್ಯವಿದೆ. ಅಂದರೇ ಇದು ಎರಡು ರೊಟ್ಟಿಗಳಿಗೆ ಸಮ. ಒಂದು ಚಿಕ್ಕ ಕಪ್ ತರಕಾರಿ ಮತ್ತು ಟೋನ್/ಸ್ಕೀಮ್ ಆದ ಹಾಲು. 24 ಗಂಟೆಗಳ ಅವಧಿಯಲ್ಲಿ ನೀವು ಇಷ್ಟು ಹೆಚ್ಚುವರಿ ಆಹಾರಗಳನ್ನು ಸೇವಿಸಬೇಕು.
ಭಾವನಾತ್ಮಕ ಬದಲಾವಣೆಗಳು
ನೀವು ಒಂದು ಸಲ ಈ ಸಂತೋಷಕರ ಸುದ್ದಿಯನ್ನು ಬಹಿರಂಗ ಪಡಿಸಿದ ನಂತರ ನಿಮಗೆ ಸಲಹೆಗಳೇ ಹರಿದು ಬರಲಿದೆ. ಇದು ನಿಮಗೆ ಭಾರ ಎನಿಸಬಹುದು. ಇದನ್ನು ಆರಾಮದಾಯಕವಾಗಿ ತೆಗೆದುಕೊಳ್ಳಿ ಮತ್ತು ನಿಮಗೆ ಯಾವುದೇ ಸಮಸ್ಯೆಗಳು, ಸಂದೇಹಗಳು ಇದ್ದರೇ ನಿಮ್ಮ ವೈದ್ಯರಿಗೆ ಕೇಳಿ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಿ. ನಿಮ್ಮ ದೇಹ ಮತ್ತು ನಿಮ್ಮ ಮಗು ಸುರಕ್ಷಿತವಾಗಿರುವುದು ಮುಖ್ಯ.
ರೆಡ್ ಫ್ಲಾಗ್ ಗಳು
ನೀವು ಹೊರಗಿನ ರೆಸ್ಟೊರೇಂಟ್ ಆಹಾರ ಸೇವಿಸುವುದನ್ನು ಕಡಿಮೆ ಮಾಡಿ. ಇದು ಹೆಚ್ಚು ಕೊಬ್ಬು ಮತ್ತು ಸ್ಯಾಚುರೇಟೇಡ್ ಕೊಬ್ಬು ಇರುತ್ತದೆ. ಹೊರಗಡೆ ತಿನ್ನಬೇಕಾದ ಸಂದರ್ಭ ಒದಗಿದರೇ ಸರಿಯಾದ ಆಹಾರವನ್ನು ಆಯ್ಕೆ ಮಾಡಿ. ತರಕಾರಿಗಳು ಮತ್ತು ಹಣ್ಣುಗಳನ್ನು ಸರಿಯಾಗಿ ಸೇವಿಸಿ. ಈ ಅಭ್ಯಾಸ ಕ್ಯಾಲೋರಿಯನ್ನು ಚೆಕ್ ಮಾಡಲು ಅವಕಾಶ ನೀಡುತ್ತದೆ.
ಹಳೆಯ ಹೆಂಡತಿಯಂದಿರ ಕಥೆಗಳು
ನೀವು ಈ ಸಮಯದಲ್ಲಿ ಪಪ್ಪಾಯ ಮತ್ತು ಪೈನಾಪಲ್ ದಂತಹ ಹಣ್ಣುಗಳನ್ನು ತಿನ್ನಬಾರದು ಎಂದು ಹಲವರು ಸಲಹೆ ನೀಡಬಹುದು. ನೆನೆಪಿಡಿ. ಪೈನಾಪಲ್ ಮತ್ತು ಪಪ್ಪಾಯ ಹಣ್ಣುಗಳ ಚಿಕ್ಕ ತುಂಡು ನಿಮ್ಮ ಮಗುವಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.