• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 13 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 13 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 13 ನೇ ವಾರ

13 May 2019 | 1 min Read

Sonali Shivlani

Author | 213 Articles

ನಿಮಗೆ ನೀವೇ ಶಹಭಾಷ ಕೊಟ್ಟುಕೊಳ್ಳಿ. ಏಕೆಂದರೇ ನೀವು ಈಗ ಎರಡನೇ ತ್ರೈಮಾಸಿಕವನ್ನು ಪ್ರವೇಶಿಸಿದ್ದೀರಿ! ಈ ಅವಧಿಯನ್ನು ಗರ್ಭಾವಸ್ಥೆಯ ವಿನೋದ ಹಂತವೆಂದು ಕರೆಯಲಾಗುತ್ತದೆ, ಏಕೆಂದರೆ  ಈ ತ್ರೈಮಾಸಿಕದಿಂದ ಸಾಮಾನ್ಯವಾಗಿ ಕಿರಿಕಿರಿಗೊಳಿಸುವ ಗರ್ಭಧಾರಣೆಯ ಲಕ್ಷಣಗಳು ಸಾಮಾನ್ಯವಾಗಿ ಈಗ ಮಾಯವಾಗುತ್ತವೆ. ಸಂತೋಷದ ವಿಷಯವಲ್ಲವೇ?

 

ನಿಮ್ಮ ಮಗುವಿನ ಬೆಳವಣಿಗೆ ಈಗ ವ್ಯಕ್ತವಾಗುತ್ತಿದೆ. ನಿಮ್ಮ ಮಗು 14 ರಿಂದ 20 ಗ್ರಾಂ ತೂಕವನ್ನು ಹೊಂದಿದ್ದು 8 ಸೆಂ ಮೀ ಉದ್ದವಿದೆ. ಅದರ  ಕಣ್ಣುರೆಪ್ಪೆಗಳು ಸಂಪೂರ್ಣವಾಗಿ ರೂಪುಗೊಳ್ಳುತ್ತವೆ ಆದರೆ ಅವು ಮುಚ್ಚಲ್ಪಟ್ಟಿವೆ ಮತ್ತು ಕೆಲವು ವಾರಗಳವರೆಗೆ ತೆರೆದುಕೊಳ್ಳುವುದಿಲ್ಲ. ಈಗ ಅದರ ಬೆರಳಚ್ಚುಗಳು ಕೂಡ ಈ ವಾರದಿಂದ ರೂಪುಗೊಳ್ಳಲು ಆರಂಭವಾಗಿದೆ. ವಾವ್, ನಿಮ್ಮ ಮಗು ಈಗ ಸ್ವಯಂ ಐಡೆಂಟಿಟಿಯನ್ನು ಪಡೆಯುತ್ತಿದೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ನಿಮ್ಮ ಹಸಿವು ಮರುಕಳಿಸುವಿಕೆಯನ್ನು  ನೀವು ಕಾಣಬಹುದು. ನಿಮ್ಮಿಂದ ವಾಕರಿಕೆ ಈಗ ಕಣ್ಮರೆ ಆಗಿರುತ್ತದೆ.  ಆರೋಗ್ಯಕರವಾಗಿ ತಿನ್ನುವುದರ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಿ.

 

ಗರ್ಭಾಶಯವು ಈಗ ಬ್ಲಾಡರ್‌ನಿಂದ  ದೂರದಲ್ಲಿದ್ದುದರಿಂದ ಆಗಾಗ್ಗೆ ಮೂತ್ರ ವಿಸರ್ಜಿಸುವ ಅಗತ್ಯತೆ ಕಡಿಮೆಯಾಗುತ್ತದೆ.

 

ನೀವು ಒಂದು ಸಲಕ್ಕೆ  ಭಾರಿ ಊಟವನ್ನು ಮಾಡಿದರೆ ನಿಮಗೆ  ಸುಸ್ತು ಎನಿಸಬಹುದು. ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಲು 5-6 ಮಿನಿ ಊಟಗಳನ್ನು ತಿನ್ನಲು ಪ್ರಯತ್ನಿಸಿ!

 

ಸಾಧ್ಯವಾದರೇ, ಹಗಲಿನಲ್ಲಿ ಒಂದು ಸುಂದರ ಕಿರು ನಿದ್ದೆಯನ್ನು ಮಾಡಿ.  ನೀವು ವಿಶ್ರಾಂತಿಯಲ್ಲಿರುವಾಗಲೇ ನಿಮ್ಮ ಮಗು ಚೆನ್ನಾಗಿ ಬೆಳೆಯುತ್ತದೆ. ನೀವು ಉದ್ಯೋಗಸ್ಥ ಮಹಿಳೆಯಾಗಿದ್ದರೇ, ಪದೇ ಪದೇ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದರೇ ಆಗಾಗ ನಿಮ್ಮ  ಕಣ್ಣುಗಳನ್ನು ಮುಚ್ಚಿ ಮತ್ತು ನಂತರ ಕೆಲವು ಆಳವಾದ ಉಸಿರನ್ನು ತೆಗೆದುಕೊಳ್ಳಿ. ಶಾಂತಿಯನ್ನು ಅನುಭವಿಸಿ!

 

ದೈಹಿಕ ಬೆಳವಣಿಗೆ

 

ನೀವು ಈಗಲೂ ಸಹ  ಖಂಡಿತವಾಗಿ ನಿಮ್ಮ ಕೆಳ ಹೊಟ್ಟೆ ಬಳಿ ಚಿಕ್ಕ ವಿಶಿಷ್ಟ ಬಂಪ್ ಹೊಂದಿದ್ದೀರಿ. ನೀವು ಬಯಸಿದರೇ ನೀವು ಈಗಲೂ ಸಹ ನಿಮ್ಮ ಗರ್ಭಾವಸ್ಥೆಯನ್ನು  ಸಡಿಲ ಬಟ್ಟೆ ಧರಿಸಿ ಮರೆ ಮಾಡಬಹುದು. ಎ-ಲೈನ್ ಉಡುಪುಗಳು ಈ ಸಮಯಕ್ಕೆ ಸೂಕ್ತ.

 

ಭಾವನಾತ್ಮಕ ಅಭಿವೃದ್ಧಿ

 

ನಿಮ್ಮ ಗರ್ಭಾವಸ್ಥೆಯ ಬಗ್ಗೆ ತಿಳಿದಿದ್ದರೆ ನಿಮ್ಮ ಸುತ್ತಲಿರುವ ಜನರು ನಿಮ್ಮೊಂದಿಗೆ ವಿಭಿನ್ನವಾಗಿ ವರ್ತಿಸಬಹುದು. ಸ್ನೇಹಿತರು ಮತ್ತು ಕುಟುಂಬವು ಅನೇಕವೇಳೆ ನಿಮಗೆ ಕಿರುನಗೆ ನೀಡಬಹುದು.  ನಿಮಗಾಗಿ ಬಾಗಿಲುಗಳನ್ನು ಹಿಡಿದುಕೊಳ್ಳುತ್ತಾರೆ ಮತ್ತು ನಿಮ್ಮ ಯೋಗಕ್ಷೇಮದ ಕುರಿತು ಕೇಳುತ್ತಾರೆ. ಈ ಬದಲಾವಣೆಯು ನಿಮಗೆ ಸ್ವಲ್ಪ ವಿಲಕ್ಷಣವಾಗಿರಬಹುದು ಆದರೆ ಅದು ಇಂದಿನಿಂದ ಹೀಗೆ ಇರುತ್ತದೆ ಎಂದು ತಿಳಿದಿರಲಿ. ಎಲ್ಲರ ಆರ‍ೈಕೆಯನ್ನು ಆನಂದಿಸಿ.

 

ರೆಡ್ ಫ್ಲಾಗ್ಸ

 

ನಿಮ್ಮ ಮಗು ಈಗ ನಿಮ್ಮಿಂದ ತನಗೆ ಅವಶ್ಯಕ ಇರುವ ಪೋಷಕಾಂಶಗಳನ್ನು ಎಳೆದುಕೊಳ್ಳುವುದರಿಂದ ನಿಮ್ಮ ಹೀಮೊಗ್ಲೋಬಿನ್ ಮಟ್ಟ ಕಡಿಮೆ ಆಗುತ್ತದೆ. ಇದು ನಿಮಗೆ ದಣಿದ ಮತ್ತು ನಿಧಾನಗತಿಯ ಅನುಭವವನ್ನು ನೀಡುತ್ತದೆ. ಹಾಗಾಗಿ ನಿಯಮಿತವಾಗಿ ವೈದ್ಯರು ಶಿಫಾರಸು ಮಾಡಿದಂತೆ ನಿಮ್ಮ ಕಬ್ಬಿಣದ ಪೂರಕಗಳನ್ನು ನೀವು ತೆಗೆದುಕೊಳ್ಳುತ್ತೀರಾ ಎಂದು ಖಚಿತಪಡಿಸಿಕೊಳ್ಳಿ.

 

ಇದಲ್ಲದೇ, ನಿಮಗೆ   ಕಬ್ಬಿಣದ ಭರಿತ ಆಹಾರಗಳಾದ ಪಾಲಕ, ಬೀನ್ಸ್, ಹುರಿದ ಬೀಜಗಳು, ಒಣದ್ರಾಕ್ಷಿ, ಏಪ್ರಿಕಾಟ್ ಮತ್ತು ಸಮುದ್ರಾಹಾರವನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುವ ಕಾರಣದಿಂದಾಗಿ ವಿಟಮಿನ್ C ಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

 

ಆಮ್ಲಾ (ಭಾರತೀಯ ಗೂಸ್‍ಬೆರ್ರಿ), ಹಸಿರು ಎಲೆಗಳ ತರಕಾರಿಗಳು, ಸಿಟ್ರಸ್ ಹಣ್ಣುಗಳು, ಟೊಮ್ಯಾಟೊ ಇತ್ಯಾದಿಗಳು ಹೆಚ್ಚು ವಿಟಾಮಿನ್ ಸಿ ಹೊಂದಿರುವ ಆಹಾರಗಳಾಗಿವೆ.

 

ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇರಿವೆ ಎಂದು ಖಚಿತಪಡಿಸಿಕೊಳ್ಳಿ. ಕೋಶ ಮತ್ತು ಮಿದುಳಿನ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ ಮತ್ತು ಕ್ಯಾಲ್ಷಿಯಂ ನಿಮ್ಮ ಮಗುವಿನ ಹಲ್ಲುಗಳು ಮತ್ತು ಮೂಳೆಗಳನ್ನು ಪೋಷಿಸಲು ಅಗತ್ಯವಾಗಿದೆ. ನಿಮ್ಮ ಊಟವನ್ನು ಯೋಜಿಸಲು ನಿಮಗೆ ಸಹಾಯ ಬೇಕೆಂದು ನಿಮಗೆ ಅನಿಸಿದರೇ  ಪ್ರಸವಪೂರ್ವ ಪೌಷ್ಟಿಕ ಸಲಹೆಗಾರರನ್ನು ಸಂಪರ್ಕಿಸಿ.

 

ಹಳೆಯ ಹೆಂಡತಿಯಂದಿರ ಕಥೆಗಳು

 

ನಿಮ್ಮ ಹಿತೈಷಿಗಳು ನಿಮಗೆ ಊಟದ ಜೊತೆಗೆ ಪೂರ್ಣ-ಕೊಬ್ಬು ಇರುವ  ಹಲವು ಗ್ಲಾಸುಗಳ ಹಾಲನ್ನು ಕುಡಿಯಲು ಹೇಳಬಹುದು. ಹಾಲು ಖಂಡಿತವಾಗಿಯೂ ಪ್ರೋಟಿನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವನ್ನು ಹೊಂದಿದೆ. ಮತ್ತು ನಿಮ್ಮ ಗರ್ಭಾವಸ್ಥೆಯಲ್ಲಿ ಈ ಪೋಷಕಾಂಶಗಳ ಸಾಕಷ್ಟು ಪ್ರಮಾಣದ ಅಗತ್ಯವಿರುತ್ತದೆ.

 

ಆದಾಗ್ಯೂ, ನಿಮಗೆ ಸಂಪೂರ್ಣ ಕೆನೆ ಮತ್ತು ಅಧಿಕ ಕೊಬ್ಬಿನ ಹಾಲು ಅಗತ್ಯವಿಲ್ಲ ಎಂದರೇ  ನೀವು ಟೋನ್ಡ್ ಅಥವಾ ಕೆನೆ ತೆಗೆದ ಹಾಲನ್ನು ಸೇವಿಸಬಹುದು. ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶಗಳು ಒಂದೇ ರೀತಿ ಆಗಿರುತ್ತವೆ. ನೀವು ಹಾಲನ್ನು ಇಷ್ಟಪಡದಿದ್ದರೆ, ಸ್ಕಿಮ್ಡ್ ಹಾಲಿನಿಂದ ತಯಾರಿಸಲಾದ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಿ.

 

#babychakrakannada

A

gallery
send-btn

Related Topics for you