ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 14 ನೇ ವಾರ

ನೀವು ಈಗಾಗಲೇ ನಿಮ್ಮ ಎರಡನೇ ತ್ರೈಮಾಸಿಕದ ಆನಂದವನ್ನು ಅನುಭವಿಸುತ್ತಿದ್ದೀರಿ. ನಿಮ್ಮ ಮಗು 28 ಗ್ರಾಂ ತೂಕವನ್ನು ಹೊಂದಿದೆ. ಅದರ ಎತ್ತರ 10 ಸೆಂ, ಮೀ. ನಿಮ್ಮ ಹೊಟ್ಟೆಯಲ್ಲಿ ಒಂದು ಚಿಕ್ಕ ಮಾನವ ರೂಪುಗೊಂಡಿದ್ದಾನೆ.

 

ನಿಮ್ಮ ಮಗುವಿನ ಮುಖವು ಅಭಿವೃದ್ಧಿ ಹೊಂದುತ್ತಿದೆ. ಈಗ ಅದು ಮುಖ ಗಂಟಿಕ್ಕುತ್ತಿದೆ, ನಗುತ್ತದೆ, ಬೇಜಾರು ವ್ಯಕ್ತಪಡಿಸುತ್ತದೆ.  ಮಗುವಿನ ಮೂತ್ರಪಿಂಡಗಳು ಮೂತ್ರವನ್ನು ಉತ್ಪತ್ತಿ ಮಾಡುತ್ತವೆ ಮತ್ತು ಇದು ಆಮ್ನಿಯೋಟಿಕ್ ದ್ರವದಲ್ಲಿ ಹಾದುಹೋಗುತ್ತದೆ.

 

ಲನುಗೋ ಅಭಿವೃದ್ಧಿ ಎಂದರೇ  ಈ ವಾರದ ಪ್ರಮುಖ ಬೆಳವಣಿಗೆಗಳಲ್ಲಿ ಒಂದು. ನಿಮ್ಮ ಮಗುವಿನ ಸಂಪೂರ್ಣ ದೇಹದ ಮೇಲೆ ಬೆಳೆಯುವ ಉತ್ತಮ ಕೂದಲು. ನಿಮ್ಮ ಮಗುವಿನ ಸೂಕ್ಷ್ಮ ಚರ್ಮದ ಸುತ್ತ ರಕ್ಷಣಾತ್ಮಕ ಪದರವನ್ನು ರಚಿಸುವುದು ಲನುಗೋನ ಉದ್ದೇಶವಾಗಿದೆ.  ಇದು ಜನನದ ಮುಂಚೆಯೇ ಹೊರಟು ಹೋಗಿ ಆ ಜಾಗದಲ್ಲಿ ದಪ್ಪವಾದ, ಒರಟಾದ ಕೂದಲು ಬೆಳೆಯುತ್ತದೆ.

 

ನಿಮ್ಮ ಮಗು ಈಗ ಹುಬ್ಬುಗಳನ್ನು ಹೊಂದಿದೆ ಮತ್ತು ಅದರ ತಲೆಯ ಮೇಲೆ ಕೂದಲುಗಳು ಚಿಗುರೊಡೆದಿವೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಈ ವಾರದಿಂದ ದಣಿವು ಮತ್ತು ನಿಧಾನತೆಯ ಭಾವನೆಯು ಬಹುತೇಕವಾಗಿ ಕಣ್ಮರೆಯಾಗುತ್ತದೆ. ಪ್ರಸವಪೂರ್ವ ವರ್ಗಕ್ಕೆ ಸೇರ್ಪಡೆಗೊಳ್ಳುವ ಮೂಲಕ ನಿಮ್ಮ ಶಕ್ತಿಯನ್ನು ಇಲ್ಲಿ ವ್ಯಯಿಸಿ. ನಿಯಮಿತವಾದ ವ್ಯಾಯಾಮಗಳು ನಿಮ್ಮ ಸ್ನಾಯುಗಳನ್ನು ಹೆರಿಗೆ ನೋವು  ಮತ್ತು ಹೆರಿಗೆಗಾಗಿ ಸಿದ್ಧಗೊಳಿಸುತ್ತದೆ. ಹೊಂದುತ್ತದೆ, ಹಾಗೆಯೇ ನಿಮ್ಮನ್ನು ಬೆನ್ನು ನೋವು ಮತ್ತು ಕೈಕಾಲು ನೋವುಗಳಿಂದ ಮುಕ್ತಗೊಳಿಸುತ್ತದೆ.

 

ನೀವು ನಿಮ್ಮ ಹೊಟ್ಟೆಯ ಮಧ್ಯದಲ್ಲಿ ಒಂದು ಕಪ್ಪು ರೇಖೆ ಅಭಿವೃದ್ಧಿ ಆಗುವುದನ್ನು ನೋಡಬಹುದು. ಇದನ್ನು ಲೈನಿಯಾ ನಿಗ್ರಾ ಎಂದು ಕರೆಯುತ್ತಾರೆ.  ಇದೊಂದು ರೇಖೆ ಆಗಿದೆ. ಇತರ ಹಾರ್ಮೋನುಗಳ ಬದಲಾವಣೆಯೊಂದಿಗೆ ಹುಟ್ಟಿದ ಕೆಲವು ವಾರಗಳ ನಂತರ ಇದು ಕಣ್ಮರೆಯಾಗುತ್ತದೆ.

 

ದೈಹಿಕ ಬೆಳವಣಿಗೆ

 

ನಿಮ್ಮ ಬಂಪ್ ಬೆಳೆಯುತ್ತಾ ಹೋದಂತೆ ನೀವು  ಸ್ವಲ್ಪ ಬಾಗಬಹುದು. ಆದರೆ ನಿಮ್ಮ ಭುಜಗಳನ್ನು ಹಿಂದಕ್ಕೆ ಜಗ್ಗಿ  ಮತ್ತು ನೆಟ್ಟಗೆ ಕುಳಿತುಕೊಳ್ಳಲು ಉದ್ದೇಶಪೂರ್ವಕವಾಗಿ ನಿಮ್ಮನ್ನು ನೆನಪಿಸಿಕೊಳ್ಳಿ. ಇದರಿಂದ ನಿಮಗೆ ಬೆನ್ನು ನೋವು ಕಾಣಿಸಿಕೊಳ್ಳಲಾರದು.

 

ಭಾವನಾತ್ಮಕ ಅಭಿವೃದ್ಧಿ

 

ನಿಮ್ಮ ಮಗುವಿನ ಹೃದಯ ಬಡಿತವನ್ನು ಮತ್ತೆ ಮತ್ತೆ ಕೇಳಲು ನೀವು ಬಯಸಿದರೆ, ಅದು ನಿಮ್ಮೊಳಗೆ ಬೆಳೆಯುತ್ತಿರುವ ಚಿಕ್ಕ ಜೀವನದೊಂದಿಗೆ ಬಂಧ ಬೆಳೆಸಿಕೊಳ್ಳಲು ಮತ್ತು ಸಂಪರ್ಕಹೊಂದಲು ಸಹಾಯ ಮಾಡುತ್ತದೆ.

 

ಈಗ ನಿಮ್ಮ ಸ್ಮಾರ್ಟ್ ಫೋನಿನಲ್ಲಿ  ನಿಮ್ಮ ಮಗುವಿನ ಹೃದಯ ಬಡಿತವನ್ನು ಕೇಳಲು ಮತ್ತು ಬಡಿತಗಳ  ರೆಕಾರ್ಡಿಂಗ್‍ಗಳನ್ನು ಮಾಡಲು ಅನುಕೂಲವಾಗುವಂತೆ ಹಲವು ಅಪ್ಲಿಕೇಶನ್‍ಗಳು ಲಭ್ಯವಿದೆ. ಆದಾಗ್ಯೂ, ಇವುಗಳು ಇನ್ನೂ ನಿಖರವಾದವು ಎಂದು ಸಾಬೀತಾಗಿಲ್ಲ, ಮತ್ತು ಡಾಪ್ಲರನಂತೆ ಸೂಕ್ಷ್ಮವಾಗಿರುವುದಿಲ್ಲ.

 

ನಿಮ್ಮ ಮಗುವಿನ ಹೃದಯ ಬಡಿತ ನಿಮಗೆ ಕೇಳಲಿಲ್ಲವೆಂದರೇ ನೀವು ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ.

 

ನೀವು ತಿನ್ನುವುದರ ಕಡೆಗೆ ನಿಮ್ಮ ಗಮನ ಇರಲಿ. ನೀವು ಆರ‍ೋಗ್ಯಕರವಾದ ಗರ್ಭಾವಸ್ಥೆಯ ತೂಕವನ್ನು ಹೊಂದಬೇಕು. ಅನಾರೋಗ್ಯಕವಾದ  ತೂಕ ಒಳ್ಳೆಯದಲ್ಲ. ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳುವುದು ತುಂಬಾ ಕಷ್ಟಕರ.

 

ನೀವು ಈಗ  ಅಟೋ ರಿಕ್ಷಾದಲ್ಲಿ ಸ್ವಲ್ಪ ದೂರವರೆಗೆ ಚಲಿಸಬಹುದು. ನೀವು ಈಗ ಸುರಕ್ಷಿತ ವಲಯದಲ್ಲಿದ್ದೀರಿ.  ನೀವು ಡ್ರೈವರಗೆ ನಿಧಾನವಾಗಿ ಹೋಗಲು ಹೇಳಿ. ನಿಮಗೆ ಏನಾದರೂ ತೊಂದರೆ ಎನಿಸಿದರೇ ವಾಹನವನ್ನು ನಿಲ್ಲಿಸಲು ಹೇಳಿ.

 

ಹಳೆ ಮುದುಕಮ್ಮಕಥೆಗಳು

 

ಲೈನ್ ನಗ್ರಾ ಗೋಚರಿಸುವಿಕೆಯು ಪುರುಷ ಸಂತತಿಯನ್ನು ಸೂಚಿಸುತ್ತದೆ ಎಂಬ ಕಲ್ಪನೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಜನಪ್ರಿಯ ಆಗಿದೆ. ಆದಾಗ್ಯೂ ಇದು ನಿಜವಲ್ಲ. ಕೆಲವು ಹಾರ್ಮೋನ್‍ಗಳ  ಬದಲಾವಣೆಯಿಂದಾಗಿ ಹೆಚ್ಚಿನ ಮಹಿಳೆಯರಲ್ಲಿ ಇದು ಕಾಣಿಸುತ್ತದೆ.

ಪ್ರಸಕ್ತ ಕಲ್ಪನೆ ಎಂದರೇ  ನೇರ ನಯವಾದ ರೇಖೆಯು ಹೆಣ್ಣು  ಸಂತತಿಯನ್ನು ಸೂಚಿಸುತ್ತದೆ ಮತ್ತು ಕರ್ವ್ ರೇಖೆ ಗಂಡು ಸಂತತಿಯನ್ನು ಸೂಚಿಸುತ್ತದೆ. ಆದಾಗ್ಯೂ  ಅದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ!

 

#babychakrakannada

Pregnancy

Read More
ಕನ್ನಡ

Leave a Comment

Recommended Articles