• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 15 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 15 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 15 ನೇ ವಾರ

13 May 2019 | 1 min Read

Sonali Shivlani

Author | 213 Articles

ನೀವು ಈಗ ಪ್ರಮುಖ ಹಂತದಲ್ಲಿದ್ದೀರಿ. ಗರ್ಭಾವಸ್ಥೆಯ ಕುತುಹೂಲ ಮತ್ತು ಆನಂದಗಳನ್ನು ಅನುಭವಿಸುತ್ತಿದ್ದೀರಿ ಮತ್ತು ಸಂತೋಷಕರ ಹಾರ್ಮೋನಗಳು ನಿಮ್ಮಲ್ಲಿ ಹರಿಯುವಂತೆ ಮಾಡಿ.  ಖುಷಿ ಪಡಿ.

 

ಈ ವಾರ, ನಿಮ್ಮ ಮಗುವಿನ ಉದ್ದ 10 ಸೆಂ ಇರುತ್ತದೆ  ಮತ್ತು ತೂಕ ಸುಮಾರು 50 ಗ್ರಾಂ ನಷ್ಟಿರುತ್ತದೆ. ಮಗು ಈಗ  ಬಹುತೇಕ ಅರೆಪಾರದರ್ಶಕ ಚರ್ಮವನ್ನು ಹೊಂದಿದ್ದಾರೆ ಮತ್ತು ಈಗ ಮಗುವಿನ  ರಕ್ತ ನಾಳಗಳ ರೂಪರೇಖೆಯನ್ನು ನೋಡಬಹುದು.

 

ನಿಮ್ಮ ಮಗುವಿನ ಕಣ್ಣುಗಳು ಇನ್ನೂ ಅಗಲವಾಗಿರುತ್ತವೆ ಮತ್ತು ಹಣೆಯ ಎತ್ತರದ ಭಾಗದಲ್ಲಿ ಅದು ಇದೆ ಎಂದು ಅನಿಸುತ್ತದೆ. ನಿಮ್ಮ ಮಗು ಹೆಚ್ಚು ಚಲನಶೀಲತೆ ಮತ್ತು ನಮ್ಯತೆಯನ್ನು ಹೊಂದಿರುತ್ತದೆ.  ಅದು ಈಗ ತನ್ನ ಮೊಣ ಕೈ, ಮೊಣ ಕಾಲು ಮತ್ತು ಮಣಿಕಟ್ಟುಗಳನ್ನು ಬಾಗಿಸಬಹುದು. ನಿಮಗೆ ಕಿಕ್ ಮಾಡಲು ಈಗಿಂದಲೇ ಅದು ಕರಾಟೆಯ ಪಟ್ಟುಗಳನ್ನು ಕಲಿಯುತ್ತಿದೆ.

 

ನಿಮ್ಮ ಮಗುವಿನ  ಕಣ್ಣುರೆಪ್ಪೆಗಳು ಮುಚ್ಚಿರುವಾಗಲೂ  ಸಹ ಅದಕ್ಕೆ ಬೆಳಕನ್ನು ಗ್ರಹಿಸಲು ಸಾಧ್ಯವಾಗುತ್ತದೆ. ನೀವು ಕಿಬ್ಬೊಟ್ಟೆಯ ಮೇಲೆ  ಪ್ರಕಾಶಮಾನ ಟಾರ್ಚನ್ನು ಬೀರಿದಾಗ , ನಿಮ್ಮ ಮಗು ಅಲ್ಲಿಂದ ನುಸುಳಬಹುದು.

 

ಮಗುವಿನ ಶ್ರವಣೇಂದ್ರಿಯ ಶಕ್ತಿಯು  ಕೂಡಾ ಅಭಿವೃದ್ಧಿ ಹೊಂದುತ್ತದೆ, ಆದರೂ ಅವನು / ಅವಳು ಇನ್ನೂ ಧ್ವನಿಗೆ ಪ್ರತಿಕ್ರಿಯಿಸುವುದಿಲ್ಲ. ಹೇಗಾದರೂ, ನಿಮ್ಮ ಮಗು ನಿಮ್ಮ ಧ್ವನಿಯನ್ನು ಕೇಳುವುದರಿಂದ , ನಿಮ್ಮ ಮಗುವಿನೊಂದಿಗೆ ಮಾತನಾಡುವುದನ್ನು ಆರಂಭಿಸಲು ಇದು  ಉತ್ತಮ ಸಮಯವಾಗಿದೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಈ ವಾರದಲ್ಲಿ ಯಾವುದೇ ಪ್ರಮುಖ ಬದಲಾವಣಿಗಳು ಆಗುವುದಿಲ್ಲ. ನೀವು ದಂತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ.  ನಿಮ್ಮ ಒಸಡುಗಳು ಈಗ ಹೆಚ್ಚು ಮೃದುವಾಗಿದ್ದು , ಊತ ಮತ್ತು ಹಾರ್ಮೋನುಗಳ ಕಾರಣದಿಂದಾಗಿ ರಕ್ತಸ್ರಾವವಾಗಬಹುದು. ಹಲ್ಲಿನ ಪರೀಕ್ಷೆಯನ್ನು ಕಾರ್ಯಗತಗೊಳಿಸಲು ಇದು ಒಳ್ಳೆಯ ಸಮಯ.

 

ನಿಮ್ಮ ಹಲ್ಲುಗಳಲ್ಲಿ ಈಗ ಹೆಚ್ಚು ಹುಳುಕು ಮತ್ತು ಕಡ್ಡಿ ಉಂಟಾಗಬಹುದು. ಗರ್ಭಾವಸ್ಥೆಯ ಸಮಯದಲ್ಲಿ ದಂತ ಪರೀಕ್ಷೆಯನ್ನು ಮಾಡಿಸುವುದರಿಂದ ಯಾವುದೇ ಹಾನಿ ಇಲ್ಲ.  ಆದಾಗ್ಯೂ, ನಿಮಗೆ ಹೆಚ್ಚುವರಿ ಹಲ್ಲಿನ ಚಿಕಿತ್ಸೆಗಳ ಅಗತ್ಯವಿದ್ದರೆ, ನಿಮ್ಮ ವೈದ್ಯರನ್ನು ಪರೀಕ್ಷಿಸಿ.

ದೈಹಿಕ ಬೆಳವಣಿಗೆ

 

ನಿಮ್ಮ ಮುದ್ದಾದ ಮಗುವಿನ ಬಂಪ್ ಈಗ ಹೆಚ್ಚು ಹೆಚ್ಚು ಗೋಚರವಾಗುತ್ತಿದೆ. ನೀವು ಸ್ವಲ್ಪ ಬಿಗಿಯಾದ ಬಟ್ಟೆ ಧರಿಸಿದರೇ ನಿಮ್ಮ ಗರ್ಭವು ಸುಲಭವಾಗಿ ಕಾಣುತ್ತದೆ. ಹೀಗಾಗಿ ನೀವು ಸಡಿಲವಾದ ಮತ್ತು ನಿಮಗೆ ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

 

ಭಾವನಾತ್ಮಕ ಬೆಳವಣಿಗೆ

 

ಮೊದಲ ಬಾರಿಗೆ ನಿಮ್ಮ ಗರ್ಭದಲ್ಲಿರುವ ಮಗುವಿನೊಂದಿಗೆ ಮಾತನಾಡುವುದು ಸ್ವಲ್ಪ ವಿಲಕ್ಷಣ ಎನಿಸಬಹುದು. ಆದರೆ ಅಂತಿಮವಾಗಿ ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.  ನಿಮ್ಮ ಮಗುವಿನೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಲು ಇದು ಸಹಾಯ ಮಾಡುತ್ತದೆ. ನೀವು ನಿಮ್ಮ ಮಗುವಿಗಾಗಿ ಸುಂದರ ಕಥೆಯನ್ನು ಓದಬಹುದು. ಮಗುವಿಗಾಗಿ ಹಾಡಬಹುದು.

 

ನಿಮ್ಮ ಸಂಗಾತಿಯು ನಿಮ್ಮ ಮಗುವಿನೊಂದಿಗೆ ಮಾತನಾಡುವುದು ಒಳ್ಳೆಯದು.  ಇದರಿಂದ ತಂದೆಯ ಸಂಬಂಧ ಮಗುವಿನೊಂದಿಗೆ ಗಟ್ಟಿಯಾಗುತ್ತದೆ. ಆದರೆ ಹೊಟ್ಟೆಯನ್ನು ನೋಡುತ್ತಾ  ಮಾತನಾಡುವುದು ಅವರಿಗೆ ಕಷ್ಟ ಎನಿಸಬಹುದು. ಮಗು ನಿಮ್ಮ ಧ್ವನಿಯನ್ನು ಗುರುತಿಸುತ್ತದೆ ಎಂದು ತಿಳಿಸಿ. ಹೀಗೆ ಮಾತನಾಡುವುದರಿಂದ ಆಗುವ ಲಾಭಗಳನ್ನು ಮತ್ತು ಸಂತೋಷಗಳನ್ನು ನಿಮ್ಮ  ಸಂಗಾತಿಗೆ ತಿಳಿಸಿ.

 

ಗರ್ಭದಲ್ಲಿರುವ ನಿಮ್ಮ ಮಗು ನಿಮ್ಮ ಹೃದಯ ಬಡಿತಗಳನ್ನು, ಆಮ್ನೀಯೋಟಿಕ್ ದ್ರವದ ಸುಳಿದಾಡಿತ್ತಿರುವ ಶಬ್ದವನ್ನು , ನಿಮ್ಮ ಜೀರ್ಣಾಂಗ ಪ್ರಕ್ರಿಯೆಯ ಶಬ್ದವನ್ನು ಕೇಳುತ್ತದೆ.

 

ರೆಡ್ ಫ್ಲಾಗ್ಸ್

 

ನೀವು ಇದೀಗ ನಿಮ್ಮ ಡಬಲ್, ಟ್ರಿಪಲ್ ಅಥವಾ ಕ್ವಾಡ್ರುಪಲ್ ಮಾರ್ಕರ್ ಪರೀಕ್ಷೆಗಳ ಫಲಿತಾಂಶಗಳನ್ನು ಸ್ವೀಕರಿಸಿದ್ದೀರಿ. ಈ ಪರೀಕ್ಷೆಗಳು ನಿಮ್ಮ ದೇಹದಲ್ಲಿ ವಿವಿಧ ಹಾರ್ಮೋನ್ ಮಟ್ಟವನ್ನು ಅಳೆಯುತ್ತವೆ.

 

ಫಲಿತಾಂಶಗಳು ಸಾಮಾನ್ಯಕ್ಕಿಂತ ಭಿನ್ನವಾಗಿದ್ದರೇ  ಅಥವಾ ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೇ  ಅಥವಾ ಕ್ರೋಮೋಸೋಮಲ್ ಅಸಹಜತೆಗಳ ಒಂದು ಆನುವಂಶಿಕ ಇತಿಹಾಸವನ್ನು ಹೊಂದಿದ್ದರೆ, ನಿಮ್ಮ ವೈದ್ಯರು ಆಮ್ನಿಯೊಸೆನ್ಟೆಸಿಸ್ ಅಥವಾ ಕೊರಿಯಾನಿಕ್ ವಿಲಸ್ ಸ್ಯಾಂಪ್ಲಿಂಗ್ (ಸಿವಿಎಸ್) ಎಂಬ ಹೆಚ್ಚು ತೀವೃತೆಯುಳ್ಳ  ಪರೀಕ್ಷೆಯನ್ನು ಸೂಚಿಸಬಹುದು.

 

ಈ ಪರೀಕ್ಷೆಗಳು 5% ಗರ್ಭಪಾತದ ಅಪಾಯವನ್ನು ಹೊಂದುತ್ತವೆ ಆದ್ದರಿಂದ ನೀವು ಈಗ ಪರೀಕ್ಷೆಗೆ  ಒಳಗಾಗುವ ಮೊದಲು ಅನುಕೂಲತೆ ಮತ್ತು ಅನಾನುಕೂಲತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.

 

ಹಳೆಯ ಹೆಂಡತಿಯರ ಕಥೆಗಳು

 

ನೀವು ಸುಂದರ ಮುದ್ದಾದ ಮಕ್ಕಳುಗಳ ಫೋಟೊವನ್ನು ನೋಡುತ್ತಿದ್ದರೇ ಅಂತಹುದೇ  ಮುಂದಾದ ಸುಂದರ ಮಗುವಿಗೆ ಜನ್ಮ ನೀಡುತ್ತೀರಿ ಎಂದು ಜನರು ನಿಮಗೆ ಹೇಳಬಹುದು.

 

ನಿಮ್ಮ ಮಗುವಿನ ಹೊರ ನೋಟವು  ಸಂಪೂರ್ಣವಾಗಿ ವಂಶವಾಹಿಯ ಮೇಲೆ  ಅವಲಂಬಿತವಾಗಿದೆ. ಆದರೆ ನಿಮಗೆ ಮಕ್ಕಳ ಚಿತ್ರವನ್ನು ನೋಡಿದಾಗ ನಿಮಗೆ ಆನಂದವಾಗುತ್ತಿದ್ದರೇ ಖಂಡಿತವಾಗಿಯೂ ನೋಡಿ.

 

#babychakrakannada

A

gallery
send-btn

Related Topics for you