13 May 2019 | 1 min Read
Sonali Shivlani
Author | 213 Articles
ನೀವು ಈಗ ನಿಮ್ಮ ಗರ್ಭಾವಸ್ಥೆಯ ಕಾರಣದಿಂದಾಗಿ ಹೊಳೆಯುತ್ತಿದ್ದೀರಿ! ನಿಮ್ಮ ಹೊಟ್ಟೆ ಈಗ ಸುಲಭವಾಗಿ ಹೊರ ಜಗತ್ತಿಗೆ ಕಾಣುತ್ತಿದೆ. ಗರ್ಭಾವಸ್ಥೆ ನಿಜವಾಗಲೂ ಆನಂದಮಯವಾಗಿದೆ!
ನಿಮ್ಮ ಮಗು ಈಗ 12 ಸೆಂ ಮೀ ಉದ್ದ ಮತ್ತು 100 ಗ್ರಾಂ ತೂಕವುಳ್ಳದ್ದಾಗಿದೆ. ಈ ವಾರದಲ್ಲಿ, ಕೊಬ್ಬು ನಿಮ್ಮ ಮಗುವಿನ ಚರ್ಮದ ಅಡಿಯಲ್ಲಿ ರೂಪುಗೊಳ್ಳಲು ಪ್ರಾರಂಭವಾಗುತ್ತದೆ ಮತ್ತು ನಿಮ್ಮ ಮಗುವಿನ ಜನನ ತನಕ ಇದು ಮುಂದುವರಿಯುತ್ತದೆ. ಶಾಖದ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಇದು ಕೊಬ್ಬು ಮುಖ್ಯವಾಗುತ್ತದೆ. ಇದು ನಿಮ್ಮ ಮಗುವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ!
ನಿಮ್ಮ ಗರ್ಭಾಶಯವು ಇದೀಗ ನಿಮ್ಮ ಹೊಕ್ಕುಳ ಮತ್ತು ಪ್ಯೂಬಿಕ್ ಮೂಳೆಯ ನಡುವೆ ಅರ್ಧದಲ್ಲಿದೆ ಮತ್ತು ನಿಮ್ಮ ಮಗು ಪ್ಲೆಸೆಂಟಾಗಿಂತ ದೊಡ್ಡದಾಗಿದೆ. ನಿಮ್ಮ ಮಗುವನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ಪ್ಲೆಸೆಂಟದ್ದಾಗಿದೆ. ಮತ್ತು ನಿಮ್ಮ ಅಂಬಿಲಿಕಲ್ ಕಾರ್ಡ್ ನಿಮ್ಮ ಮಗುವಿನ ಜೀವಸೆಲೆ ಆಗಿದೆ.
ಚಿಹ್ನೆಗಳು ಮತ್ತು ಲಕ್ಷಣಗಳು
ನಿಮ್ಮ ದೇಹದಲ್ಲಿನ ದ್ರವ ಪ್ರಮಾಣಗಳು ಈಗ ಹೆಚ್ಚಾಗುತ್ತಿದೆ ಮತ್ತು ಇದರಿಂದಾಗಿ ನೀವು ತುಂಬಾ ಶಾಖದಿಂದ ಕೂಡಿರುತ್ತೀರಿ. ಈ ಸಮಯದಲ್ಲಿ ಗರ್ಭಿಣೆಯರು ತಾವು ಸಾಮಾನ್ಯಕ್ಕಿಂತ ಹೆಚ್ಚು ಬೆವರುವುದನ್ನು ಕಂಡುತ್ತಾರೆ. ಈಗ ನೀವು ಹಲವು ಸಲ ಸ್ನಾನ ಮಾಡಿ ಪ್ರೆಶ್ ಆಗಬಹುದು ಮತ್ತು ಆರಾಮದಾಯಕವಾಗಿ ಇರಲು ಕಾಟನ್ ಬಟ್ಟೆಯನ್ನು ಧರಿಸಿ ಮತ್ತು ನಿಮ್ಮ ಚರ್ಮಕ್ಕೆ ಉಸಿರಾಡಲು ಅವಕಾಶ ನೀಡಿ.
ನೀವು ಎಲ್ಲಾ ಸಮಯದಲ್ಲೂ ಸ್ನಿಫಿಂಗ್ (ಸೀನುವಿಕೆ) ಮಾಡಬಹುದು. ಈ ಸಮಯದಲ್ಲಿ ನಿಮ್ಮ ಮೂಗಿನ ಪ್ಯಾಸೇಜ್‍ಗಳು ನಿರಂತರವಾಗಿ ನಿರ್ಬಂಧಿತವಾಗಬಹುದು. ಇದು ತುಂಬಾ ಸಾಮಾನ್ಯವಾಗಿದೆ.
ಈ ನಿಮ್ಮ ಕಣ್ಣಿನ ತಪಾಸಣೆಯನ್ನು ಮಾಡಿಸುವುದು ಉತ್ತಮವಾಗಿದೆ. ನಿಮ್ಮ ಗರ್ಭಾವಸ್ಥೆಯ ಹಾರ್ಮೋನುಗಳು ನಿಮ್ಮ ದೃಷ್ಟಿಯನ್ನು ಕುಂದಿಸಬಹುದು. ನಿಮಗೆ ಉತ್ತಮ ಮುದ್ರಣವನ್ನು ಓದಲು ಕಷ್ಟವಾಗುತ್ತಿದ್ದರೆ ಅಥವಾ ದುರ್ಬಲ ದೃಷ್ಟಿಯನ್ನು ಅನುಭವಿಸಿದರೇ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ.
ದೈಹಿಕ ಬೆಳವಣಿಗೆ
ನಿಮ್ಮ ಹೊಟ್ಟೆಯು ಈಗ ಬೆಳೆಯುತ್ತಿದ್ದರೂ ಸಹ ನೀವು ಅಷ್ಟೊಂದು ಭಾರವಾಗಿಲ್ಲ. ಒಳ್ಳೆಯ ಆರಾಮದಾಯಕವಾದ ಪಾದರಕ್ಷೆಗಳನ್ನು ತೆಗೆದುಕೊಳ್ಳಿ. ಹೆಚ್ಚು ಸಮಯದವರೆಗೆ ನಿಂತುಕೊಂಡಿರಬೇಡಿ. ಈ ಸಮಯದಲ್ಲಿ ನೀವು ಪ್ಯಾಡೆಡ್ ಹೀಲ್ಸ್ ಧರಿಸಿ. ಏಕೆಂದರೆ ಇದು ನಿಮ್ಮ ಪಾದದ ಅಡಿಭಾಗವನ್ನು ಮೆತ್ತಿಸುತ್ತದೆ ಮತ್ತು ನಿಮ್ಮ ಶೂಗಳ ಸೋಲ್ ಮೇಲೆ ಪ್ಯಾಡೆಡ್ ಹಿಲ್ಸ್ ಹಾಕಿಕೊಳ್ಳಲು ಸಹಾಯಮಾಡುತ್ತದೆ.
ನಿಮ್ಮ ವೈದ್ಯರು ಶೀಘ್ರದಲ್ಲೇ ನಿಮಗಾಗಿ ಅನಾಮಲಿ ಸ್ಕ್ಯಾನ್ ಮಾಡುತ್ತಾರೆ. ಇದು ನಿಮ್ಮ ಮಗುವಿನ ದೇಹದ ಭಾಗಗಳ ಅಸಹಜತೆಯನ್ನು ಪರಿಶೀಲಿಸುವ ಒಂದು ವಿವರವಾದ ಅಲ್ಟ್ರಾಸೌಂಡ್ ಆಗಿದೆ.
ಈ ಸಮಯದಲ್ಲಿ ನಿಮ್ಮೊಂದಿಗೆ ನಿಮ್ಮ ಸಂಗಾತಿಯನ್ನು ಕರೆದುಕೊಂಡು ಹೋಗಿ. ನಿಮ್ಮ ಮಗುವಿನ ಉತ್ತಮ ಮುದ್ದಾದ ನೋಟವನ್ನು ನೋಡಲು ಇದು ಸುಸಮಯ. ಈ ಸಮಯದಲ್ಲಿ ಸ್ಕ್ಯಾನಿನಲ್ಲಿ ನಿಮ್ಮ ಮಗು ತನ್ನ ಹೆಬ್ಬೆರಳನ್ನು ಹೀರುತ್ತಿರಬಹುದು ಅಥವಾ ಕಿಕ್ ಮಾಡುತ್ತಿರಬಹುದು! ನಿಮ್ಮ ಗರ್ಭಾವಸ್ಥೆಯು ಒಂದು ಮಹತ್ವದ ಮೈಲಿಗಲ್ಲು ಇದಾಗಿದೆ.
ಹೆಚ್ಚಿನ ಚಿಕಿತ್ಸಾಲಯಗಳು ಗರ್ಭದಲ್ಲಿರುವ ನಿಮ್ಮ ಮಗುವಿನ ಚಿತ್ರಗಳ ಸ್ಕ್ಯಾನ್ ಮತ್ತು ಸಿಡಿಯನ್ನು ಒದಗಿಸುತ್ತದೆ. ಇದು ನಿಮ್ಮ ಸುಮಧುರ ನೆನೆಪುಗಳಾಗಬಹುದು.
ಭಾವನಾತ್ಮಕ ಬೆಳವಣಿಗೆ
ಈ ಸಮಯದಲ್ಲಿ ಗರ್ಭಿಣೆ ಮಹಿಳೆಯರು ತಾವು ಗರ್ಭಿಣೆ ಎಂಬುದನ್ನೇ ಮರೆಯುತ್ತಾರೆ. ( ಹೌದು, ಈ ರೀತಿ ಆಗುತ್ತದೆ). ಏಕೆಂದರೇ ಹೆಚ್ಚಿನ ಕಿರಿಕಿರಿ ಗರ್ಭಧಾರಣೆಯ ಲಕ್ಷಣಗಳು ಸಂಪೂರ್ಣವಾಗಿ ಈ ವಾರ ಕಳೆದುಹೋಗುತ್ತವೆ.
ಇವುಗಳನ್ನು ನೆನೆಪಿಡಿ: ಯಾವಾಗಲೂ ಆರಾಮದಾಯಕವಾಗಿರಿ. ನಿಧಾನವಾಗಿ ನಡೆಯಿರಿ. ಮೆತ್ತಗಿನ ಆರಾಮದಾಯಕ ಚಪ್ಪಲಿಗಳನ್ನು ಧರಿಸಿರಿ. ನಿಮ್ಮ ಕುರಿತು ಯಾವಾಗಲೂ ಎಚ್ಚರಿಕೆಯನ್ನು ಹೊಂದಿರಿ.
ನೀವು ಬೆವರುತ್ತಿದ್ದಾಗ ಟಾಲ್ಕಮ್ ಪೌಡರ್ ಬಳಸಬೇಡಿ. ಇದು ನಿಮ್ಮ ರಂಧ್ರಗಳನ್ನು ನಿರ್ಬಂಧಿಸುತ್ತದೆ ಮತ್ತು ಚರ್ಮದ ಸೋಂಕನ್ನು ಉಂಟುಮಾಡುತ್ತದೆ.
ನಿಮ್ಮ ಮುಚ್ಚಲ್ಪಟ್ಟ ಮೂಗಿನ ಮಾರ್ಗಗಳಿಂದಾಗಿ ನೀವು ಶೀತ ಮತ್ತು ಕೆಮ್ಮುಗಳಿಗೆ ಒಳಗಾಗಬಹುದು. ಇದು ನಿಮ್ಮ ನಿದ್ರೆಗೆ ತಡೆಯನ್ನು ಉಂಟು ಮಾಡಬಹುದು. ನಿಮ್ಮ ಮೂಗಿನ ಹೊಳ್ಳೆಗಳನ್ನು ಚೆನ್ನಾಗಿ ಹೈಡ್ರೀಕರಿಸಿದಂತೆ ಉಳಿಸಿಕೊಳ್ಳಲು ಸಾಕಷ್ಟು ಪ್ರಮಾಣದ ದ್ರವ ಪದಾರ್ಥಗಳನ್ನು ಸೇವಿಸಿ ಮತ್ತು ಕಟ್ಟಿದ ಮೂಗಿನಿಂದ ಬಿಡುಗಡೆ ಹೊಂದಲು ನಾಸಲ್ ಡ್ರಾಪ್‍ಗಳನ್ನು ಬಳಸಿ. ಕೆಲವು ನೀಲಗಿರಿ ತೈಲದ ಬಳಕೆಯು ಸಹ ನೀವು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡಬಹುದು.
ಹಳೆಯ ಮುದುಕಮ್ಮ ಕಥೆಗಳು
ಗರ್ಭಾವಸ್ಥೆಯಲ್ಲಿ ವಾಯು ಸಂಚಾರ(ವಿಮಾನ) ಮಾಡುವುದು ಒಳ್ಳೆಯದಲ್ಲ ಎಂದು ಹೇಳಬಹುದು. ಇದು ಸ್ವಲ್ಪ ಭಾಗಶಃ ಸತ್ಯ. ವಿಮಾನ ಸುರಕ್ಷತೆಯ ಮೂಲಕ ಹಾದುಹೋಗುವುದು ಅಥವಾ ವಿಮಾನದಿಂದ ಹಾರುವುದು ಗರ್ಭಾವಸ್ಥೆಯಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಈ ಕುರಿತು ನಿಮಗೆ ಸಂದೇಹವಿತ್ತು ಎಂದರೇ ಏರಲೈನ್ ಕೌಂಟರನಲ್ಲಿರುವ ವ್ಯಕ್ತಿಯನ್ನು ವಿಚಾರಿಸಿ. ಅವರು ನಿಮಗೆ ಸೂಕ್ತ ಸಲಹೆಯನ್ನು ನೀಡುತ್ತಾರೆ. ನೀವು ಆಗಾಗ ವಿಮಾನಯಾನ ಮಾಡುವವರಾಗಿದ್ದರೇ ವಿಕಿರಣ, ನಿರ್ಜಲೀಕರಣ ಮತ್ತು ಗಾಳಿ ಕಾಯಿಲೆಗಳಂತಹ ಅಂಶಗಳು ನಿಮ್ಮ ಮತ್ತು ನಿಮ್ಮ ಮಗುವಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಕುರಿತು ಎಚ್ಚರದಿಂದ ಇರಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.