13 May 2019 | 1 min Read
Sonali Shivlani
Author | 213 Articles
ನಿಮ್ಮ ಮಗು ವೇಗವಾಗಿ ಬೆಳೆಯುತ್ತಿದೆ ಮತ್ತು ನಿಮ್ಮ ಬಂಪ್ ಕೂಡ ಗೋಚರಿಸುತ್ತಿದೆ! ನಿಮ್ಮ ಚಿಕ್ಕ ದೇವದೂತ ಈಗ ಸುಮಾರು 20 ಸೆಂ.ಮೀ ಉದ್ದ ಮತ್ತು ಸುಮಾರು 150 ಗ್ರಾಂ ತೂಕ ಉಳ್ಳದ್ದಾಗಿದೆ. ನಿಮ್ಮ ಮಗುವಿನ ಕೊಬ್ಬಿನ ಪದರಗಳು ಅಭಿವೃದ್ಧಿ ಆಗುತ್ತಿರುವುದರಿಂದ ಈಗ ನಿಮ್ಮ ಮಗು ಶೀಘ್ರ ಬೆಳವಣಿಗೆ ಆಗುತ್ತಿದೆ ಮತ್ತು ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ.
ಈಗ ನೀವು ತಿಳಿದುಕೊಳ್ಳಬೇಕಾದ ಇನ್ನೊಂದು ಆಸಕ್ತಿಯ ಸಂಗತಿ ಎಂದರೇ ನಿಮ್ಮ ಮಗು ಈಗ ಹೊರಜಗತ್ತಿಗೆ ಹೆಚ್ಚು ಕ್ರಿಯಾಶಾಲಿಯಾಗಿದೆ. ಸಂವೇದನಾತ್ಮಕ, ಪ್ರಬಲವಾಗಿದೆ. ಈಗ ಒಳಗಿನ ಕಿವಿಗೆ ಹಾದುಹೋಗುವ ಮೂಳೆಗಳು ಅಭಿವೃದ್ಧಿಗೊಳ್ಳುತ್ತವೆ ಮತ್ತು ನಿಮ್ಮ ಮಗು ಶಬ್ದಗಳಿಗೆ ಹೆಚ್ಚು ಸ್ಪಂದಿಸುತ್ತದೆ.
ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆ ಕೂಡಾ ಬಹಳ ವೇಗವಾಗಿರುತ್ತದೆ. ನರ ಕೋಶಗಳ ರಚನೆ ಮತ್ತು ಅವುಗಳ ನಡುವಿನ ಸಂಪರ್ಕಗಳ ಜೊತೆಗೆ, ಈ ಸಂಪರ್ಕಗಳ ಸುತ್ತ ಮೆಯಿಲಿನ್ ಕೋಶವನ್ನು ರಚಿಸಲಾಗುತ್ತಿದೆ.
ಮೈಲಿನ್ ಕೋಶವು ನರ ಸಂಪರ್ಕಗಳನ್ನು ರಕ್ಷಿಸುತ್ತದೆ ಮತ್ತು ನರ ಕೋಶಗಳ ನಡುವಿನ ಸಂದೇಶಗಳನ್ನು ಬಲವಾದ ಮತ್ತು ವೇಗವಾಗಿ ಹರಡುತ್ತದೆ. ಮೆಯಿಲಿನ್ ಕೋಶವು ಹುಟ್ಟಿದ ನಂತರದ ಕೆಲವೇ ತಿಂಗಳುಗಳವರೆಗೆ ಅಭಿವೃಧಿ ಆಗುತ್ತದೆ.
ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರು ಏನಾದರೂ ಲಘು ಆಹಾರವನ್ನು ತಿನ್ನಬೇಕೆಂದು ಬಯಸುತ್ತಾರೆ. ಕೈಗೆ ಸಿಕ್ಕಿದ್ದನ್ನು ತಿನ್ನಲು ಬಯಸುತ್ತಾರೆ. ಎಲ್ಲ ಸಮಯದಲ್ಲೂ ತಿನ್ನುವುದು ಒಳ್ಳೆಯದಲ್ಲ. ಆದಾಗ್ಯೂ ಗರ್ಭಿಣೆಯು ಆರೋಗ್ಯಕರ ಆಹಾರಗಳನ್ನು ಆಗಾಗ ತಿನ್ನುತ್ತಿರಬೇಕು. ಇದಕ್ಕಾಗಿ ನಿಮ್ಮ ರೆಫ್ರಿಜೇರೆಟರ್ ಮತ್ತು ಪ್ಯಾಂಟ್ರಿಯನ್ನು ಆರೋಗ್ಯಕರ ಆಹಾರಗಳಿಂದ ತುಂಬಿ.
ನಿಮ್ಮ ಮಗುವಿನ ಸಂವೇದನೆ ಈಗ ಬಲವಾಗುತ್ತಾ ಸಾಗುತ್ತದೆ. ಧ್ವನಿಯ ಸಂವೇದನೆ ಎಂದರೇ – ಒಂದು ದೊಡ್ಡದಾದ ಶಬ್ದವನ್ನು ಕೇಳಿದಾಗ ನಿಮ್ಮ ಮಗು ಪ್ರತಿಕ್ರಿಯುಸುತ್ತದೆ. ಅದು ಹೆದರಿ ನಿಮ್ಮ ಹೊಟ್ಟೆಗೆ ಕಿಕ್ ಮಾಡುತ್ತದೆ. ಇಂತಹ ಧ್ವನಿಗಳಿಗೆ ಮಗು ಪ್ರತಿಕ್ರಿಯೆ ನೀಡುತ್ತ ಸಂವೇದನೆಶೀಲತೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುತ್ತವೆ.
ಕೆಲವು ಮಾಂತ್ರಿಕ ಕ್ಷಣಗಳನ್ನು ನೀವು ಇಷ್ಟೇ ಅನುಭವಿಸಬಹುದು. ಇಂತಹ ಕ್ಷಣಗಳ ಅನುಭವಕ್ಕಾಗಿ ನಿಮ್ಮ ಸಂಗಾತಿ ಇನ್ನೂ ಕಾಯಬೇಕು. ಅದು ಕೆಲವು ವಾರಗಳಷ್ಟೇ ಮತ್ತು ನಿಮ್ಮ ಮಗುವಿನ ಚಲನೆಗಳು ತುಂಬಾ ಮುಖ್ಯ ಕ್ಷಣಗಳಾಗಿವೆ ಆನಂದಿಸಿ.
ನಿಮ್ಮ ಗರ್ಭ ಈಗ ಎಲ್ಲರಿಗೂ ಗೋಚರಿಸುತ್ತಿದೆ. ನಿಮ್ಮ ಪ್ರೆಗ್ನೆಸಿ ಫೋಟೊ ಶೂಟ್ ಮಾಡಿಸಲು ಇದು ಸೂಕ್ತ ಸಮಯ. ಚೆನ್ನಾಗಿರುವ ಪೋಸ್‍ಗಳನ್ನು ನೀಡಿ. ಈ ಫೋಟೊಗಳು ನಿಮಗೆ ಉತ್ತಮ ಸೆನೆಪುಗಳಾಗಿ ನಿಮ್ಮ ಜೊತೆ ಸದಾ ಇರಲಿವೆ.
ನಿಮ್ಮ ವ್ಯಾಯಾಮದಲ್ಲಿ ಕೆಗಲ್‍ಗಳನ್ನು ಸೇರಿಸಲು ಇದು ಸರಿಯಾದ ಸಮಯ. ಈ ವ್ಯಾಯಾಮಗಳು ಪೆಲ್ವಿಕ್ ಫ್ಲೋರ್ ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಮೂತ್ರದ ಅಸಂಯಮವನ್ನು ತಡೆಯುತ್ತದೆ (ಬ್ಲಾಡರ್ ನಿಯಂತ್ರಣ ನಷ್ಟ).
ಕೆಗಲ್ ಪೆಲ್ವಿಕ್ ಫೋರ್‌ನ್ನು ಪ್ರಸವ ವೇದನೆಯ ಒತ್ತಡ ಹಂತದಲ್ಲಿ ಸಿದ್ಧಗೊಳಿಸುತ್ತದೆ. ಟೋನ್ ಮಾಡಲ್ಪಟ್ಟ ಪೆಲ್ವಿಕ್ ಫ್ಲೋರ್ ನಿಮಗೆ ಚೇತರಿಕೆಗೊಳ್ಳಲು ಸಹಾಯ ಮಾಡುತ್ತದೆ. ಪ್ರಸವದ ನಂತರ ಮತ್ತೆ ಹಿಂದಿನ ಆಕಾರಕ್ಕೆ ಬರಲು ಸಹಾಯ ಮಾಡುತ್ತದೆ.
ನಿಮ್ಮ ವೈದ್ಯರೊಂದಿಗೆ ಹೆಚ್ಚುವರಿ ವ್ಯಾಯಾಮವನ್ನು ಚರ್ಚಿಸಿ ಮತ್ತು ಒಟ್ಟಾರೆ ಟೋನಿಂಗ್ ಮತ್ತು ಪರಿಚಲನೆಗೆ ಗಮನಹರಿಸುವ ಸೌಮ್ಯವಾದ ಕಾರ್ಯಕ್ರಮದೊಂದಿಗೆ ಆರಂಭಿಸಿ.
ನಿಮ್ಮ ಮಗು ಈಗ ನಿಮ್ಮ ಭಾವನೆಗಳನ್ನು, ಸಂವೇದನಗಳನ್ನು ಗುರುತಿಸುತ್ತದೆ. ನೀವು ಸಂತೋಷವಾದಾಗ, ದುಃಖದಿಂದ ಕೂಡಿದಾಗ, ಒತ್ತಡಕ್ಕೆ ಒಳಗಾಗಾದಾಗ ಎಲ್ಲ ಭಾವನೆಗಳು ನಿಮ್ಮ ಮೇಲೆ ಪರಿಣಾಮವನ್ನು ಬೀರುತ್ತದೆ! ಆದ್ದರಿಂದ ನೀವು ನಿಮ್ಮ ಒತ್ತಡ ಮಟ್ಟವನ್ನು ಕನಿಷ್ಟ ಮಟ್ಟದಲ್ಲಿ ಇಟ್ಟುಕೊಳ್ಳಬೇಕು.
ನೀವು ಎಂಜಾಯ್ ಮಾಡುವಂತಹ, ಖುಷಿ ಅನುಭವಿಸುವಂತಹ ಕೆಲ ಚಟುವಟಿಕೆಗಳನ್ನು ಮಾಡಿ. ಓದುವುದು, ಸಂಗೀತ ಕೇಳುವುದು, ನಿಮ್ಮ ಸ್ನೇಹಿತರೊಂದಿಗೆ ಚಿಟ್ ಚಾಟ್ ಮಾಡುವುದು! ಯಾವಾಗಲೂ ಸಂತೋಷವಾಗಿರಿ!
ಒಂದು ಕಳಪೆ ಹಾರ್ಮೋನ್ ನಿಮ್ಮ ಮನಸ್ಥಿತಿಯನ್ನು ಗೊಂದಲಗೊಳಿಸಿದಾಗ ನೀವು ಶಾಂತವಾಗಿರಲು ಮತ್ತು ಸಂಯೋಜಿಸಲು ಸಹಾಯ ಮಾಡುವಂತಹ ಕೆಲವು ವಿಶ್ರಾಂತಿ ಕ್ರಮಗಳನ್ನು ಅಭ್ಯಾಸ ಮಾಡುವುದು ಒಳ್ಳೆಯದು.
ನಿಮ್ಮ ವೈದ್ಯರು ಈಗ ನಿಮಗೆ ಬದಿಯಲ್ಲಿ ಹೆಚ್ಚು ನಿದ್ದೆ ಮಾಡಲು ಸಲಹೆ ನೀಡುತ್ತಾರೆ. ಗರ್ಭಾಶಯಕ್ಕೆ ರಕ್ತವನ್ನು ಸರಬರಾಜು ಮಾಡುವ ರಕ್ತನಾಳವು ಗರ್ಭಾಶಯದ ಕೆಳಗಿರುತ್ತದೆ ಮತ್ತು ಗರಿಷ್ಟ ಪೂರೈಕೆಯನ್ನು ಖಚಿತಪಡಿಸುತ್ತದೆ, ಇದು ಎರಡೂ ಕಡೆ ನಿದ್ರೆ ಮಾಡುವುದು ಉತ್ತಮ.
ಕೆಲವೊಮ್ಮೆ ನಿಮಗೆ ನಿಮ್ಮ ಬೆನ್ನು ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಎನಿಸಿದರೇ ತಪ್ಪಲ್ಲ. ಇದನ್ನು ಮಾಡುವುದು ಸಂಪೂರ್ಣವಾಗಿ ಸರಿಯಾಗಿದೆ.
ರಾತ್ರಿಯಲ್ಲಿ ನಿಮಗೆ ಒಳ್ಳೆಯ ನಿದ್ದೆ ಬರಲು ತಲೆ, ಬಂಪ್, ತೊಡೆಗಳು ಮತ್ತು ಬೆನ್ನಿಗೆ ಬೆಂಬಲಿಸುವ ಒಂದು ಉತ್ತಮ ಗರ್ಭಾಧಾರಣೆಯ ಮೆತ್ತೆಗಾಗಿ ಶಾಂಪಿಂಗ್ ಮಾಡಿ. ಈ ಮೆತ್ತೆಗಳನ್ನು ನೀವು ಎದೆಹಾಲು ಕುಡಿಸುವಾಗಲೂ ಬಳಸಬಹುದು.
ಹಳೆಯ ಮುದುಕಮ್ಮಕಥೆಗಳು
ಗರ್ಭಾವಸ್ಥೆಯಲ್ಲಿ ತಾಯಿಯು ತೀವ್ರವಾದ ವಾಕರಿಕೆ ಅಥವಾ ಎದೆಯುರಿ ಹೊಂದಿದ್ದರೆ, ಅವಳ ಮಗುವಿನ ಕೂದಲು ಪೂರ್ಣವಾಗಿ ಹುಟ್ಟಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಕೂದಲನ್ನು ಹೊಂದಿರುವ ನವಜಾತ ಶಿಶುಗಳು ಅತ್ಯಂತ ಸುಂದರವಾಗಿ ಕಾಣುತ್ತವೆ, ಆದರೆ ಗರ್ಭಾಶಯದಲ್ಲಿನ ಮಗುವಿನ ಕೂದಲು ಬೆಳವಣಿಗೆಯು ತಾಯಿಯ ವಾಕರಿಕೆ ತೀವ್ರತೆಯ ಮೇಲೆ ಅವಲಂಬಿತವಾಗಿರುವುದಿಲ್ಲ.
A