ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 20 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 20 ನೇ ವಾರ

ನೀವು ಈಗ ಗರ್ಭಾವಸ್ಥೆಯ ಅರ್ಧ ಹಂತವನ್ನು ಪೂರೈಸಿದ್ದೀರಿ. ಸಮಯವು ಮುಂದುವರೆಯುತ್ತದೇ ಅಲ್ಲವೇ?  ನಿಮ್ಮ ಮಗುವಿನ ತೂಕವು ಈಗ 250 ಗ್ರಾಂಗಳಷ್ಟಾಗಿದೆ ಮತ್ತು ಉದ್ದವು 20 ರಿಂದ 25 ಸೆಂ ಮೀ ಗಳಷ್ಟಿದೆ. ಎಷ್ಟೊಂದು ಸಂಭ್ರಮದ ವಿಷಯ!

 

ಇಲ್ಲಿಯವರೆಗೆ ನಿಮ್ಮ ಮಗು ಚಿಕ್ಕ ಚೆಂಡಿನಂತೆ ಸುತ್ತಿಕೊಂಡಿತ್ತು. ಅದರ ಎಲ್ಲ ಅಳತೆಗಳನ್ನು ಅಡಿಯಿಂದ ಮುಡಿಯವರೆಗೆ ಮಾಡಲಾಗಿದೆ. ಈ ವಾರದ ನಂತರ  ನಿಮ್ಮ ಮಗುವನ್ನು ತಲೆಯಿಂದ ಮುಡಿವವರೆಗೆ ಅಳೆಯಲಾಗುತ್ತದೆ . ನಿಮ್ಮ ಕಂದ ಈಗ ಪದೇ ಪದೇ ತನ್ನ ದೇಹವನ್ನು ಪದೇ ಪದೇ ನೇರಗೊಳಿಸುತ್ತವೆ.

 

ನಿಮ್ಮ ಮಗುವಿನ ಸೀಬಾಸಿಯಸ್ ಗ್ರಂಥಿಗಳು (ಚರ್ಮದ ಕೆಳಗಿರುವ ಗ್ರಂಥಿಗಳು) ಈಗ ವರ್ನಿಕ್ಸ್ ಕಸೊಸಾ ಎಂದು ಕರೆಯಲ್ಪಡುವ ಮೇಣದಂಥ ಪದಾರ್ಥವನ್ನು ಸ್ರವಿಸುತ್ತವೆ. ಇದು ನಿಮ್ಮ ಮಗುವಿನ ದುರ್ಬಲ ಚರ್ಮವನ್ನು ಸುತ್ತಮುತ್ತಲಿನ ಆಮ್ನಿಯೋಟಿಕ್ ದ್ರವದಿಂದ ರಕ್ಷಿಸುತ್ತದೆ.

 

ವರ್ನಿಕ್ಸ್ ಕಸೊಸಾ ನಿಮ್ಮ ಮಗುವಿನ ಚರ್ಮದ ಮೇಲೆ ರಕ್ಷಣಾತ್ಮಕ ಪದರವಾಗಿ ಇರುತ್ತದೆ  ಮತ್ತು ಹುಟ್ಟಿದ್ದ ನಂತರವೂ ಸಹ ಕಂಡು ಬರುತ್ತದೆ. ಆದ್ದರಿಂದ ಇದು ನಿಮ್ಮ ಮಗುವಿನ ಚರ್ಮದ  ಮೇಲೆ ಅಂಟಿಸಿದ ಪದರದಂತೆ ಕಾಣುತ್ತದೆ.

 

ನಿಮ್ಮ ಮಗು ಈಗ  ಗರ್ಭದಲ್ಲಿ ಸಕ್ರಿಯವಾಗಿದೆ - ಈಗ ನಿಮ್ಮ ಕಂದ ಕಿಕ್ ಮಾಡುತ್ತಾನೆ,  ತನ್ನ ಹೆಬ್ಬೆರಳು ಚೀಪುತ್ತಾನೆ. ಒಟ್ಟಾರೆ ಅದು ಚಟುವಟಿಕೆಗಳಲ್ಲಿ ಪೂರ್ತಿ ನಿರತ!

 

ನಿಮ್ಮ ಮಗು ಆಮ್ನಿಯೋಟಿಕ್  ದ್ರವದಲ್ಲಿ ಮೂತ್ರವನ್ನು ವಿಸರ್ಜಿಸಿದರೂ ಸಹ, ಅದು ಎಂದು ಗರ್ಭಾಶಯದಲ್ಲಿ ಮಲವನ್ನು ಮಾಡುವುದಿಲ್ಲ ಎಂದು ತಿಳಿದು ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ? ಮಲವು ಮಗುವಿನ ಕರುಳಿನಲ್ಲಿ ಸಂಗ್ರಹವಾಗುತ್ತದೆ. ಇದನ್ನು ಮೆಕೊನಿಯಮ್  ಎಂದು ಕರೆಯಲಾಗುತ್ತದೆ. ಜನನದ ನಂತರ ಇದು ಹೊರಬರುತ್ತದೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಈ ವಾರದ ನಂತರ, ನಿಮ್ಮ ತೂಕದ ಏರಿಕೆಯು ಶೀಘ್ರಗತಿಯಲ್ಲಿ ಹೆಚ್ಚಾಗುತ್ತ ಸಾಗುತ್ತದೆ. ಆರೋಗ್ಯಕರ ಆಹಾರ ತಿನ್ನುವುದನ್ನು  ನೆನಪಿನಲ್ಲಿಡಿ!

 

ನಿಮ್ಮ  ಹೊಟ್ಟೆಯು ಈಗ ದೊಡ್ಡದಾಗಿರುವುದರಿಂದ ನಿಮಗೆ ಮಲಗಿಕೊಳ್ಳಲು ಕಷ್ಟವಾಗಬಹುದು. ನೀವು ಆರಾಮವಾಗಿ ನಿದ್ರಿಸಲು ಮತ್ತು ನಿಮ್ಮ ಕಿಬ್ಬೊಟ್ಟೆಯಲ್ಲಿ ಬೆಳೆಯುತ್ತಿರುವ ತೂಕವನ್ನು ಬೆಂಬಲಿಸಲು ಸಹಾಯ ಮಾಡಲು ಒಂದು ದಿಂಬನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಈ ಸಮಯದಲ್ಲಿ ನಿಮ್ಮ ಕಾಲುಗಳ ಸುತ್ತಲೂ ಸೆಳೆತ ಉಂಟಾಗಲು ಆರಂಭವಾಗುತ್ತದೆ.

 

ದೈಹಿಕ ಬೆಳವಣಿಗೆ

 

ಈ ಹಂತದಲ್ಲಿ ನಿಮ್ಮ ಗರ್ಭಾಶಯವು ನಿಮ್ಮ ಹೊಕ್ಕಳು ತಲುಪಲಿದೆ. ನಿಮ್ಮ ಸೊಂಟದ ಬೆಳವಣಿಗೆ ಈಗಲೂ ಸ್ಥಿರವಾಗಿ ಮುಂದುವರೆಯಲಿದೆ.

 

ನಿಮಗೆ ಮಧ್ಯರಾತ್ರಿಯಲ್ಲಿ ನಿಮಗೆ ಎಚ್ಚರವಾಗುತ್ತಿದ್ದರೇ, ಕಾಲಿನ ಹಿಂಭಾಗದಲ್ಲಿ ಹೆಚ್ಚು ನೋವಾಗುತ್ತಿದ್ದರೇ, ನೀವು ದಿನಕ್ಕೆ 8-10 ಗ್ಲಾಸು ನೀರು ಕುಡಿಯುತ್ತಿದ್ದೀರಿ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.  ನೀವು ಪ್ರತಿದಿನ ಕಡ್ದಾಯವಾಗಿ 8-12- ಗ್ಲಾಸುಗಳಷ್ಟು ನೀರನ್ನು ಸೇವಿಸಬೇಕು.

 

ಕಿಬ್ಬೊಟ್ಟೆಯ ಕೆಳಗೆ ಆಗಾಗ ಸೆಳೆತಗಳು ಉಂಟಾಗುತ್ತವೆ  ಮತ್ತು ಅದು ಆಗಾಗ್ಗೆ ಆಗುತ್ತದೆ ಮತ್ತು ನಿಗದಿತ ಮಧ್ಯಂತರಗಳಲ್ಲಿ ಹೋಗುತ್ತವೆ. ಇವುಗಳು ಪೂರ್ವಭಾವಿಯಾಗಿ ಸಂಕೋಚನಗಳಾಗಿರಬಹುದು ಮತ್ತು ಗರ್ಭಕಂಠವು ಮಗುವಿಗೆ ಕಿರಿದಾಗಬಹುದು  ಎಂದು ಸೂಚಿಸುತ್ತದೆ.

 

ನೀವು ಅಂತಹ ಸೆಳೆತಗಳನ್ನು ಅನುಭವಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ. ವೈದ್ಯರು ಸಿರ್ಕ್ಲೇಜ್ ಅನ್ನು ಶಿಫಾರಸ್ಸು ಮಾಡುತ್ತಾರೆ, ಗರ್ಭಕಂಠದ ಸ್ಥಳದಲ್ಲಿ ಗರ್ಭಕಂಠವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಗರ್ಭಧಾರಣೆಯ ಪೂರ್ಣಾವಧಿಯು ಸಂಪೂರ್ಣಗೊಳ್ಳಲು  ಸಹಾಯ ಮಾಡುತ್ತಾರೆ.

 

ಹಳೆಯ ಮುದುಕಮ್ಮಕಥೆಗಳು

 

ನಿಮ್ಮ ಅಜ್ಜಿಯು ನಿಮಗೆ ತಲೆಯ ಮೇಲೆ ನಿಮ್ಮ ತೋಳುಗಳನ್ನು ವಿಸ್ತರಿಸದಂತೇ ಹೇಳಬಹುದು. ಇದರಿಂದ ನಿಮ್ಮ ಮಗು ಹೊಕ್ಕಳುಬಳ್ಳಿಯಲ್ಲಿ ಸಿಕ್ಕಿಕೊಳ್ಳುತ್ತದೆ ಎಂದು ಆಕೆ ವಿವರಿಸಬಹುದು. ಆದರೆ ಇದು ಸಂಪೂರ್ಣವಾಗಿ ಸುಳ್ಳು ಕಲ್ಪನೆ ಆಗಿದೆ.

 

ಮತ್ತೊಂದೆಡೆ, ಪ್ರತಿದಿನ ಕೆಲವು ತಲೆಯ ಮೇಲೆ ತೋಳುಗಳನ್ನು  ವಿಸ್ತರಣೆ ಮಾಡುವುದರಿಂದ  ಗರ್ಭಧಾರಣೆಯ ಕೊನೆಯ ಕೆಲವು ವಾರಗಳಲ್ಲಿ ಪಕ್ಕೆಲುಬುಗಳಲ್ಲಿ ಅಸ್ವಸ್ಥತೆಯನ್ನು ನಿವಾರಿಸಲು ಇದು  ಸಹಾಯ ಮಾಡುತ್ತದೆ.#babychakrakannada
logo

Select Language

down - arrow
Personalizing BabyChakra just for you!
This may take a moment!