• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 21 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 21 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 21 ನೇ ವಾರ

13 May 2019 | 1 min Read

Sonali Shivlani

Author | 213 Articles

ನೀವು ಈಗ ಗರ್ಭಾವಸ್ಥೆಯ 21 ನೇ ವಾರದಲ್ಲಿದ್ದೀರಾ! ಅಂದರೆ ನೀವು ಗರ್ಭಾವಸ್ಥೆಯ ಅರ್ಧ ದಾರಿಯಲ್ಲಿದ್ದೀರಾ. ಎಂಜಾಯ್ ಮಾಡಿ.  ನಿಮ್ಮ ಮಗು 400 ಗ್ರಾಂ ತೂಕದಷ್ಟಿದ್ದು,26 ಸೆಂ ಮೀ ಉದ್ದವಾಗಿದೆ. ಅಂದರೆ ಮಧ್ಯಮ ಗಾತ್ರದ ಸೌತೆಕಾಯಿಯಷ್ಟು.

 

ನಿಮ್ಮ ಮಗುವಿನ ಚಲನೆಗಳು ಈಗ  ಬ್ಯಾಲೆ ನರ್ತಕನಂತೆ ಇರುತ್ತದೆ- ಸೌಮ್ಯವಾದ ಮತ್ತು ಸರಳವಾಗಿವೆ. ಆದರೆ   ಅವುಗಳು ಇನ್ನೂ ಯಾವುದೇ ನಿರ್ಣಾಯಕ ಮಾದರಿಯನ್ನು ಹೊಂದಿಲ್ಲ. ಹಾಗಾಗಿ ನಿಮ್ಮ ಪತಿ  ನಿಮ್ಮ ಮಗುವಿನ ಒದೆತಗಳ ಆನಂದವನ್ನು ಅನುಭವಿಸಲು ಕಾಯುತ್ತಿದ್ದಾರೆ. ಆದರೆ ಈಗ , ನಿಮ್ಮ ಮಗುವಿನ ತುಂಟಾಟವನ್ನು  ಅನುಭವಿಸುವ ಸೌಭಾಗ್ಯ ನಿಮಗೆ ಮಾತ್ರ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಗರ್ಭಾಶಯವು ಈಗ ಹೊಕ್ಕುಳ ಬಳ್ಳಿಯನ್ನು  ದಾಟಿದೆ ಮತ್ತು ಹೊಟ್ಟೆಯನ್ನು ಮೇಲಿಂದ ಪಕ್ಕೆಲುಬುಗಳ ಕಡೆಗೆ  ತಳ್ಳುತ್ತದೆ. ಇದು ಎದೆಯುರಿ ಅಥವಾ ಆಮ್ಲೀಯತೆಯನ್ನು ಉಂಟುಮಾಡಬಹುದು.

 

ಪರಿಹಾರಕ್ಕಾಗಿ ಕೆಲವು ಆಂಟಿಸಿಡ್‍ಗಳನ್ನು  ಶಿಫಾರಸು ಮಾಡಲು ನಿಮ್ಮ ವೈದ್ಯರನ್ನು ನೀವು ಕೇಳಬಹುದು. ನೀವು ಚಿಕ್ಕ ಚಿಕ್ಕ  ಊಟವನ್ನು ತಿನ್ನುತ್ತಿದ್ದೀರಿ ಮತ್ತು ಹುರಿದ ಆಹಾರವನ್ನು ತಿನ್ನುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.  ಭಾರೀ ಮತ್ತು ಎಣ್ಣೆಯುಕ್ತ ಆಹಾರವು ಆಮ್ಲೀಯತೆಯ ಮುಖ್ಯ ಕಾರಣವಾಗಿದೆ ಎಂದು ತಿಳಿದುಕೊಳ್ಳಿ.

 

ಗರ್ಭಾಶಯವು ಬೆಳೆದಂತೆ, ಅದು ಗುದನಾಳದ ಮೇಲೆ ಒತ್ತಡವನ್ನುಂಟುಮಾಡುತ್ತದೆ, ಇದರಿಂದಾಗಿ ಆ ಪ್ರದೇಶದ ಸುತ್ತಲಿನ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ. ಪೈಲ್ಸ್ ತುಂಬಾ ನೋವುಂಟು ಮಾಡಬಹುದು.

 

ನಿಮ್ಮ ಆಹಾರದಲ್ಲಿ ಹೆಚ್ಚು ಫೈಬರ್ ಇರುವಂತೆ ನೋಡಿಕೊಳ್ಳಿ. ಇದು ಮಲಬದ್ಧತೆಯನ್ನು ದೂರ ಮಾಡುತ್ತದೆ. ಪ್ರತಿ ದಿನ ವಾಕಿಂಗ್‍ನಂತಹ ಹಗುರ ವ್ಯಾಯಾಮಗಳನ್ನು ಮಾಡುವುದರಿಂದ ನೀವು ಇತರ ಅಸ್ವಸ್ಥತೆಗಳಿಂದ ದೂರ ಇರಬಹುದು.

 

ನೀವು ದಿನಲೂ ಸ್ವಲ್ಪ ವ್ಯಾಯಾಮವನ್ನು ಮಾಡುವುದರಿಂದ ಕಾಲುಗಳಲ್ಲಿನ  ಸೆಳೆತ ಮತ್ತು ಆಮ್ಲಿಯತೆಗಳಂತಹ ಇತರ ಸಾಮಾನ್ಯ ಗರ್ಭಧಾರಣೆಯ ತೊಂದರೆಗಳನ್ನು ಸಹ ನಿವಾರಿಸಬಹುದು.

 

ದೈಹಿಕ ಬೆಳವಣಿಗೆ

 

ನಿಮಗೆ  ಇನ್ನೂ ತುಂಬಾ ಹೊಟ್ಟೆ ಬಂದಿಲ್ಲ. ತುಂಬಾ ದಪ್ಪರಾಗಿಲ್ಲ. ನೀವು ಈಗಲೂ ಸುಲಭವಾಗಿ ಮತ್ತು ಆರಾಮದಾಯಕವಾಗಿ ಓಡಾಡಬಹುದು.  ಹೀಗಾಗಿ ನೀವು ಪ್ರವಾಸದ ಯೋಜನೆಗಳನ್ನು ರೂಪಿಸಿ. ನಿಮ್ಮ ಯಾವುದೇ ಕಮಿಂಟ್‍ಗಳನ್ನು ಪೂರೈಸಲು ಇದು ಸರಿಯಾದ ಸಮಯ.

ಭಾವನಾತ್ಮಕ ಬೆಳವಣಿಗೆ

ನೀವು ಚಿಕ್ಕ ಚಿಕ್ಕ ವಿಷಯಗಳಿಗೆ ತುಂಬಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬಹುದು. ಮತ್ತು ಇದು ಏಕೆ ಆಗುತ್ತಿದೆ ಎಂದು ಆಶ್ಚರ್ಯಕ್ಕೆ ಒಳಗಾಗುತ್ತೀರಿ. ಇದೆಲ್ಲವೂ ನಿಮ್ಮ ಹಾರ್ಮೋನ್‍ಗಳ ಕೈವಾಡ. ನಿಮಗೆ ಯಾವಾಗಲಾದರೂ ದುಃಖ ಎನಿಸುತ್ತಿದೆ  ಎಂದಾಗ ನಿಮ್ಮ ಆಲೋಚನೆಗಳನ್ನು ಒಳ್ಳೆಯ ಆಲೋಚನೆಗಳಿಗೆ ಬದಲಾಯಿಸಿ.

 

ಬದಲಾವಣೆ

 

ನಿಮ್ಮ ಕೈ ಮತ್ತು ಮುಖದಲ್ಲೂ ಯಾವುದೇ ರೀತಿಯ ದ್ರವದ ಧಾರಣ ಅಥವಾ ಊತವನ್ನು ಗಮನಿಸಿ. ಊತವು, ಗರ್ಭಧಾರಣೆಯ ಸಾಮಾನ್ಯ ಲಕ್ಷಣವಾಗಿದೆ. ಆದರೆ ಇದು ಮೂತ್ರದಲ್ಲಿ ಪ್ರೊಟೀನ್ ಹೆಚ್ಚಾದ ಸಂಕೇತವಾಗಿರಬಹುದು.  ಇದು ಪ್ರಿಕ್ಲಾಂಪ್ಸಿಯದ ಮುನ್ನೆಚ್ಚರಿಕೆಯ ಸಂಕೇತವಾಗಿದೆ.

ಪ್ರಿಕ್ಲಾಂಪ್ಸಿಯಾವು ಜೀವಘಾತದ ಸ್ಥಿತಿಯಾಗಿದ್ದು, ಇದು ಗರ್ಭಧಾರಣೆಯ ದ್ವಿತೀಯಾರ್ಧದಲ್ಲಿ ಬೆಳವಣಿಗೆಯಾಗುತ್ತಿದೆ, ಆದ್ದರಿಂದ ಅದರ ಎಚ್ಚರಿಕೆಯ ಚಿಹ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಮಗೆ ಯಾವುದೇ ರೀತಿಯ ದದ್ದು ಮತ್ತು ಊತ ಕಂಡುಬಂದರೇ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

 

ಹಳೆಯ ಮುದುಕಮ್ಮ ಕಥೆಗಳು

 

ಸೂರ್ಯ ಮತ್ತು ಚಂದ್ರ ಗ್ರಹಣ ಸಮಯದಲ್ಲಿ  ಹಲವರು ನಿಮಗೆ ಮನೆಯಲ್ಲಿಯೇ ಇರುವಂತೆ ಮತ್ತು ಯಾವುದೇ ಕಾಯಿಪಲ್ಲೆಗಳನ್ನು ಕತ್ತರಿಸಿದಂತೇ ನಿಮಗೆ ತಿಳಿಸಬಹುದು.  ಇದರಿಂದ ಮಗು ಅಂಧವಾಗಿ ಅಥವಾ ಸೀಳುತುಟಿಯನ್ನು ಇಟ್ಟುಕೊಂಡು ಹುಟ್ಟುತ್ತದೆ ನಂಬಿಕೆ ಅವರದಾಗಿದೆ.

ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಮತ್ತು ಸಾಕ್ಷಿಗಳಿಲ್ಲ.  ನೀವು ಇವುಗಳನ್ನು ಪಾಲಿಸಲು ಬಯಸುವಿರಾದರೇ ಇದರಿಂದ ಏನೂ ಹಾನಿ ಇಲ್ಲ. ನೀವು ಹೊರಗಡೆಯಲ್ಲಿದ್ದರೇ , ಗ್ರಹಣವು ನಿಮ್ಮ ಮಗುವಿಗೆ ಯಾವುದೇ ಆಘಾತವನ್ನು ಉಂಟುಮಾಡುವುದಿಲ್ಲ ಎಂದು ತಿಳಿಯಿರಿ.

 

#babychakrakannada

A

gallery
send-btn

Related Topics for you