14 May 2019 | 1 min Read
Sonali Shivlani
Author | 213 Articles
ಇದು 22 ನೇ ವಾರ ! ನಿಮ್ಮ ಹೊಟ್ಟೆಯು ಈಗ ಉಬ್ಬುತ್ತಿದೆ. ಈ ವಾರ ನಿಮ್ಮ ಸುಂದರ ಮಗುವಿನ ಮುಖವು ಹೆಚ್ಚು ಸ್ಪಷ್ಟವಾಗಲಿದೆ. ನಿಮ್ಮ ಮಗುವಿನ ತೂಕವು ಸುಮಾರು 500 ಗ್ರಾಂ ಮತ್ತು ಉದ್ದ 28 ಸೆಂ.ಮೀ ಇದೆ. ಮತ್ತು ಮುಖದ ಎಲ್ಲ ಲಕ್ಷಣಗಳು ಅಭಿವೃದ್ಧಿ ಹೊಂದಲಿವೆ. ಕಣ್ಣುಗುಡ್ಡೆಗಳು, ಹುಬ್ಬುಗಳು ಮತ್ತು ತುಟಿಗಳು ಹೆಚ್ಚು ವಿಶಿಷ್ಟ ಸರಿಯಾದ ಆಕಾರವನ್ನು ಹೊಂದಿವೆ. ಈಗ, ಅಂತಿಮ ಸ್ಪರ್ಶ ಮಾತ್ರ ಬಾಕಿ ಇದೆ. ಎಂತಹ ಅಧ್ಬುತವಲ್ಲವೇ?
ನಿಮ್ಮ ಮಗು ತನ್ನ ಕಣ್ಣುರೆಪ್ಪೆಗಳನ್ನು ಮುಚ್ಚಿದಾಗಲೂ ಸಹ, ನಿಮ್ಮ ಹೊಟ್ಟೆಯ ಮೇಲೆ ಟಾರ್ಚ್ ಲೈಟ್ ಹಾಕಿದರೇ, ಅದು ಅದಕ್ಕೆ ಸ್ಪಂದಿಸುತ್ತದೆ. ನಿಮ್ಮ ಮಗುವಿನ ದೇಹವು ಕೊಬ್ಬಿನ ಹೆಚ್ಚಿನ ಪದರಗಳೊಂದಿಗೆ ಪ್ಯಾಡ್ ಮಾಡುತ್ತಿರುವಾಗ ದೇಹದಾದ್ಯಂತ ಆಳವಾದ ಸುಕ್ಕುಗಳು ಕಂಡು ಬರುತ್ತವೆ.
ದೈಹಿಕ ಬದಲಾವಣೆಗಳು: ಏನನ್ನು ನಿರೀಕ್ಷಿಸಬೇಕು.
ನೀವು ಗಮನಿಸಿರಬಹುದು. ನಿಮ್ಮ ಗರ್ಭಾವಸ್ಥೆಯು ಮುಂದುವರೆದಂತೆ ನಿಮ್ಮ ಚರ್ಮ ಹೆಚ್ಚು ಹೊಳೆಯುತ್ತಿರುತ್ತದೆ. ಕೂದಲು ಆಕರ್ಷಕವಾಗಿರುತ್ತದೆ. ನಿಮ್ಮ ಉಗುರುಗಳು ವೇಗ ಮತ್ತು ಬಲವಾಗಿ ಬೆಳೆಯುತ್ತಿವೆ. ಈ ಸಮಯದಲ್ಲಿ ನಿಮ್ಮನ್ನು ವಿವಿಧ ಕೇಶವಿನ್ಯಾಸ ಮತ್ತು ಮೇಕ್ ಅಪ್‍ಗಳಿಂದ ಶೃಂಗರಿಸಿಕೊಂಡು ಖುಷಿ ಪಡಿ.
ಮತ್ತೊಂದೆಡೆ ಈಗ ನೀವು ಪಿಗ್ಮೆಂಟೇಷನ್ ಅಭಿವೃದ್ಧಿ ಆಗುವುದನ್ನು ಗಮನಿಸಬಹುದು. ಆದರೆ ಸ್ಟ್ರೆಚ್ ಮಾರ್ಕಗಳನ್ನು ಮರೆಯುವಂತಿಲ್ಲ. ಸ್ಟ್ರೆಚ್ ಮಾರ್ಕ್ಸ್ ಹೆಚ್ಚಿನ ಸಂದರ್ಭಗಳಲ್ಲಿ ಅನುವಂಶಿಕವಾಗಿದೆ, ಮತ್ತು ಅವುಗಳ ಕುರಿತು ಮಾಡಬಹುದಾಗಿರುವುದು ಅತೀ ಕಡಿಮೆ ಇರುತ್ತದೆ. ಅದು ಎರಡನೇ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಗರ್ಭಧಾರಣೆಯ ಕೊನೆಯ ಎರಡು ವಾರಗಳಲ್ಲಿ ಕಾಣಿಸಿಕೊಳ್ಳಬಹುದು. ಅವುಗಳನ್ನು ಸಂಪೂರ್ಣವಾಗಿ ಮರೆಮಾಡುವುದು ಸ್ವಲ್ಪ ಕಷ್ಟವಾಗಬಹುದು, ಆದರೆ ಅವುಗಳು ಬರುಬರುತ್ತ ಮಸಕಾಗುತ್ತವೆ.
ನಿಮ್ಮ ಹೊಟ್ಟೆ, ಎದೆ ಮತ್ತು ಪೃಷ್ಟಗಳಿಗೆ ವಿಟಾಮಿನ್ ಇ ಆಧಾರಿತ ತೈಲವನ್ನು ಹಚ್ಚಿ ದಿನಕ್ಕೆ ಎರಡು ಬಾರಿ ಮಸಾಜ್ ಮಾಡಿ. ಇದು ನಿಮ್ಮ ದೇಹವನ್ನು ನಯವಾಗಿಡುತ್ತದೆ.
ನಿಮ್ಮ ಸ್ತನಗಳಲ್ಲಿ ಬಿಳಿಯ ಹಳದಿ ದ್ರವವು ಸೋರುತ್ತಿರುವಂತೆ ನಿಮಗೆ ಕಾಣಿಸಬಹುದು. ಇದನ್ನು ಕೋಲೋಸ್ಟ್ರಮ್ ಎಂದು ಕರೆಯಲಾಗುತ್ತದೆ ಮತ್ತು ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ನಿಮ್ಮ ದೇಹವು ಎದೆಹಾಲು ಉತ್ಪತ್ತಿ ಮಾಡಲು ತಯಾರಿ ಮಾಡುತ್ತಿದೆ ಎಂಬುದರ ಸಂಕೇತವಾಗಿದೆ.
ಹೊಟ್ಟೆಯಾಚೆ: ದೈಹಿಕ ಬೆಳವಣಿಗೆ
ಈಗಲೂ ಸಹ ಕೆಲವು ಮಹಿಳೆಯರು ತಮ್ಮ ತೂಕ ಹೆಚ್ಚಾಗಿದೆ ಎಂದು ಹೇಳುವ ಮೂಲಕ ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಡಬಹುದು. ಆದರೆ ಬಹುತೇಕ ಮಹಿಳೆಯರಿಗೆ ಇದು ಸಾಧ್ಯವಿಲ್ಲ.
ನಿಮ್ಮ ಬೆಳೆಯುತ್ತಿರುವ ಹೊಟ್ಟೆಯು ನಿಮ್ಮ ಬೆನ್ನು ನೋವಿಗೆ ಕಾರಣವಾಗಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಕುಳಿತುಕೊಳ್ಳುವ, ನಿಲ್ಲುವ ಮುಂತಾದ ಭಂಗಿಗಳ ಕುರಿತು ಎಚ್ಚರದಿಂದ ಇರಿ. ಬ್ಯಾಕ್ ಸಪೋರ್ಟ್ ತೆಗೆದುಕೊಂಡು ನೇರವಾಗಿ ಕುಳಿತುಕೊಳ್ಳಿ ಮತ್ತು ಎಚ್ಚರಪೂರ್ವಕವಾಗಿ ನಿಮ್ಮ ಭುಜಗಳನ್ನು ನೇರವಾಗಿರಿಸಿ.
ಮನಸ್ಸಿನ ಪ್ರಾಮುಖ್ಯತೆ: ಭಾವನಾತ್ಮಕ ಬೆಳವಣಿಗೆ
ನಿಮಗೆ ಈಗ ಆಶ್ಚರ್ಯಕರವಾದ ಮತ್ತು ವಿಚಿತ್ರವಾದ ಕನಸುಗಳು ಕಾಡಬಹುದು. ಮತ್ತು ನೀವು ಈಗ ಅನೇಕ ಭಾವನೆಗಳ ಮೂಲಕ ಹಾದು ಹೋಗುತ್ತಿರುವುದರಿಂದ ಗರ್ಭಧಾರಣೆಯಲ್ಲಿ ಕನಸುಗಳನ್ನು ಹೊಂದುವುದು ಈಗ ತುಂಬಾ ಸಾಮಾನ್ಯವಾಗಿದೆ. ಇಂತಹ ಕಸಸುಗಳು ನಿಮ್ಮ ನಿದ್ರೆಯನ್ನು ಭಂಗಗೊಳಿಸಿದರೇ ಸುಮಧುರ ಸಂಗೀತವನ್ನು ಕೇಳಿ. ಪುಸ್ತಕಗಳನ್ನು ಓದಿ.
ಇದಕ್ಕಾಗಿ ನೋಡಿ: ಹೆಚ್ಚುವರಿ ತೂಕ ಮತ್ತು ದ್ರವ ಧಾರಣತೆ
ಪ್ರಸವಪೂರ್ವ ತೂಕ ಹೆಚ್ಚಾಗುವಿಕೆ ಅಥವಾ ಗರ್ಭಾವಸ್ಥೆಯ ತೂಕವು ಹೆಚ್ಚಿನ ಅಮ್ಮಂದಿರಿಗೆ-ಸಂಬಂಧಿಸಿದ ಒಂದು ವಿಷಯವಾಗಿದೆ. ಮತ್ತು ನೀವು ಗರ್ಭಿಣಿ ಆಗಿರುವುದರಿಂದ ಎಲ್ಲ ತಿನ್ನುವ ವಸ್ತುಗಳನ್ನು ಬಿಡಬೇಕೆಂದರ್ಥವಲ್ಲ. ಪ್ರಸವಪೂರ್ವ ತೂಕವನ್ನು ನಂತರ ಕಳೆದುಕೊಳ್ಳುವುದು ಬಹಳ ಕಷ್ಟ, ಆದ್ದರಿಂದ ನೀವು ಗೂಫಿ ಚಾಕೊಲೇಟ್ ಕೇಕ್ ಅಥವಾ ಫ್ರೈಡ್ ಚಿಕನ್ ರುಚಿಯನ್ನು ಅನುಭವಿಸುತ್ತಿದ್ದೀರಾ?, ನೀವು ಈಗ ತಿನ್ನುತ್ತಿದ್ದೀರಿ ಎಂಬುದರ ಮೇಲೆ ಗಮನವಿರಲಿ.
ನಿಮ್ಮ ಬೆರಳ ಉಂಗುರಗಳೆಲ್ಲವೂ ನಿಮಗೆ ಸರಿಹೊಂದುತ್ತವೆಯೇ ಎಂದು ಖಚಿತಪಡಿಸಿಕೊಳ್ಳುವುದು ತೂಕವನ್ನು ಪರೀಕ್ಷಿಸುವ ಉತ್ತಮ ಮಾರ್ಗವಾಗಿದೆ. ನಿಮ್ಮ ಉಂಗುರಗಳು ಬಿಗಿಯಾಗಿವೆ ಎಂದು ನೀವು ಭಾವಿಸಿದರೆ, ನೀವು ಏನು ತಿನ್ನುತ್ತಿದ್ದೀರಿ ಎಂದು ಒಂದು ಟಿಪ್ಪಣೆ ಮಾಡಿ.
22 ನೇ ವಾರದಲ್ಲಿ ನೀವು ಎದುರಿಸಬಹುದಾದ ಮತ್ತೊಂದು ಸಮಸ್ಯೆ ಎಂದರೆ ದ್ರವದ ಧಾರಣ(ದೇಹದಲ್ಲಿ ನೀರನ್ನು ಹಿಡಿದಿಡುವುದು). ಇದನ್ನು ನೀವು ತಕ್ಷಣವೇ ವೈದ್ಯರಿಗೆ ತಿಳಿಸಬೇಕು. ನಾಲ್ಕು ವಾರಗಳಲ್ಲಿ ಒಮ್ಮೆ ನಿಮ್ಮ ವೈದ್ಯರನ್ನು ನೀವು ಭೇಟಿಯಾಗುವುದರಿಂದ, ಈ ರೀತಿಯ ಸ್ವಲ್ಪ ಸ್ವಯಂ ಪರೀಕ್ಷೆಗಳು ನೀವು ಮತ್ತು ನಿಮ್ಮ ಮಗು ಚೆನ್ನಾಗಿವೆ ಎಂದು ಖಚಿತಪಡಿಸುತ್ತದೆ.
ಯಾವುದೇ ರೀತಿಯ ತೊಟ್ಟುಗಳ ಉತ್ತೇಜನವನ್ನು ತಪ್ಪಿಸಲು ನೀವು ಗಮನಹರಿಸಬೇಕು. ಅತಿಯಾದ ತೊಟ್ಟುಗಳ ಪ್ರಚೋದನೆಯು ಹಾರ್ಮೋನು ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡಬಲ್ಲದು, ಇದು ಸಹ ಪ್ರಸವದ ಸಂಕೋಚನಗಳಿಗೆ ಕಾರಣವಾಗುತ್ತದೆ.
ಹಳೆಯ ಹೆಂಡತಿಯರ ಕಥೆಗಳು: ಕೇವಲ ತಮಾಷೆಗಾಗಿ
ಒಂದು ಜನಪ್ರಿಯ ಹಳೆಯ ಹೆಂಡತಿಯರ ಕಾಲ್ಪನಿಕ ಕಥೆ ಇದೆ. ಅದು ಮಗುವಿನ ಲಿಂಗತ್ವವನ್ನು ಬಂಗಾರದ ಚೈನ್ ಮತ್ತು ಡೈಮಂಡ್ ರಿಂಗ್ನಿಂದ ಊಹಿಸುತ್ತದೆ.
ಈ ಆಟವನ್ನು ಕೇವಲ ವಿನೋದಕ್ಕಾಗಿ ಅಡಿ. ಈ ಆಟವು ಮಗುವಿನ ಲಿಂಗತ್ವದ ನಿರ್ಧಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
A