• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 23 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 23 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 23 ನೇ ವಾರ

14 May 2019 | 1 min Read

Sonali Shivlani

Author | 213 Articles

ನೀವು ಈಗ 23 ನೇ ವಾರಕ್ಕೆ ಕಾಲಿಡುತ್ತಿದ್ದೀರಾ. ನಿಮ್ಮ ಮಗು ಈಗ 30 ಸೆಂ ಮೀ ಉದ್ದ ಮತ್ತು 500 ಗ್ರಾಂಗಳಿಗಿಂತಲೂ ಹೆಚ್ಚಿನ ತೂಕವನ್ನು ಹೊಂದಿದೆ.  ಈಗ ನಿಮ್ಮ ಮಗು ತನ್ನ ಜನನ ಸಮಯದ ಉದ್ದಕ್ಕಿಂತ ಅರ್ಧದಷ್ಟಿದೆ.

ನಿಮ್ಮ ಮಗುವಿನ ಆಲಿಸುವಿಕೆಯ ಸಾಮರ್ಥ್ಯ ಈಗ ಅಭಿವೃದ್ಧಿಗೊಂಡಿದೆ  ಮತ್ತು ಅವರು ಬಾಹ್ಯ ಶಬ್ದಗಳನ್ನು ಉತ್ತಮವಾಗಿ ಗಮನಿಸುತ್ತಿದ್ದಾರೆ. ಕೆಲವೇ ವಾರಗಳಲ್ಲಿ ಮಗು ಹೆಚ್ಚು ಚಲನವಲನಗಳನ್ನು ಮಾಡಲಿದೆ,  ಮತ್ತು “ಹುಟ್ಟುವ ಭಂಗಿ ” ಅಂದರೆ ತಲೆ ಕೆಳಗೆ ಇರುವ ಭಂಗಿಯನ್ನು ಹೊಂದುತ್ತದೆ . ಆದ್ದರಿಂದ ಇದೀಗ, ವೈದ್ಯರು ಪರೀಕ್ಷೆ ಅಥವಾ ಅಲ್ಟ್ರಾಸೌಂಡ್ ಮೂಲಕ  ಮಗು ಬ್ರೀಚ್ ಪ್ರಸ್ತುತಿಯಲ್ಲಿದೆ ಎಂದರೆ ಚಿಂತಿಸಬೇಡಿ.

ದೈಹಿಕ ಬದಲಾವಣಿಗೆಳು: ಏನನ್ನು ನಿರೀಕ್ಷಿಸಬೇಕು.

ನಿಮ್ಮ ಹೊಟ್ಟೆ ಅಹಿತಕರವಾಗಿ ವಿಸ್ತರಿಸಿದೆ ಎಂದು ನಿಮಗೆ ಅನಿಸುತ್ತಿದೆಯಾ ? ಅದಕ್ಕಾಗಿಯೇ ನಿಮ್ಮ ಗರ್ಭಾಶಯವು ವೇಗವಾಗಿ ಬೆಳೆಯುತ್ತಿದ್ದು  ಇದೀಗ ನಿಮ್ಮ ಹೊಟ್ಟೆಯ ಹೊಕ್ಕುಳಿನ ಮೇಲಿರುತ್ತದೆ. ಈ ಕಾರಣದಿಂದಾಗಿ ನಿಮ್ಮ ಕೆಳ ಹೊಟ್ಟೆಯಲ್ಲಿ ನೀವು ಸ್ವಲ್ಪ ಅಸ್ವಸ್ಥತೆ ಅನುಭವಿಸಬಹುದು.

ಕೆಲವೊಮ್ಮೆ ನೀವು ಯಾವುದೇ ಪ್ಯಾಟರ್ನ್ ಇಲ್ಲದ ಕೆಲವು ನೋವು ರಹಿತ, ಚಿಕ್ಕದಾದ ಕೆಲವು ಸಂಕೋಚನಗಳನ್ನು ಅನುಭವಿಸಬಹುದು. ಇದನ್ನು ಬ್ರಾಕ್ಸ್ಟನ್-ಹಿಕ್ಸ್ ಕುಗ್ಗುವಿಕೆಗಳು ಎಂದು ಕರೆಯಲಾಗುತ್ತದೆ. ಇದು ಕೇವಲ ನಿಮ್ಮ ಗರ್ಭಾಶಯಕ್ಕೆ  ಮುಂದಿನ ಹಂತಕ್ಕಾಗಿ ವ್ಯಾಯಾಮವನ್ನು ಮಾಡಿಸುವುದಾಗಿದೆ. ಈ ಸಂಕೋಚನಗಳು ಎಲ್ಲ ಮಹಿಳೆಯರ ಜೀವನದ ಉದ್ದಕ್ಕೂ ಸಂಭವಿಸುತ್ತವೆ ಆದರೆ ಗರ್ಭಧಾರಣೆಯ ದ್ವಿತೀಯಾರ್ಧದಲ್ಲಿ ಹೆಚ್ಚು ಅನುಭವಕ್ಕೆ ಬರುತ್ತದೆ.

ಹೊಟ್ಟೆಯನ್ನು ಹೊರತುಪಡಿಸಿ: ದೈಹಿಕ ಬೆಳವಣಿಗೆ

ನಿಮ್ಮ ಈ ಮುಂದಿನ ವೈದ್ಯರ ಭೇಟಿಯಲ್ಲಿ, ನಿಮ್ಮ ವೈದ್ಯರು ನಿಮ್ಮ ಹೊಟ್ಟೆಯ ಮೇಲೆ ಹೆಚ್ಚು ಒತ್ತಡ ಹಾಕಿ ಮಗುವಿನ ಬೆಳವಣಿಗೆಯನ್ನು ಪರೀಕ್ಷಿಸುತ್ತಾರೆ. ನೀವು ಈಗ 23 ನೇ ವಾರದಲ್ಲಿ ಇರುವುದರಿಂದ ನಿಮ್ಮ ವೈದ್ಯರು ನಿಮ್ಮ ಮಗುವಿನ ವಿವಿಧ ಭಾಗದ ಬೆಳವಣಿಗೆಯನ್ನು ಪರೀಕ್ಷಿಸುತ್ತಾರೆ.

ಕೆಲವು ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ತಮ್ಮ ಪಾದದ ಗಾತ್ರವನ್ನು ಬದಲಾಗುವುದನ್ನು ಗಮನಿಸಬಹುದು. ಇದು ಸಾಮಾನ್ಯವಾಗಿದೆ. ಈಗ ನಿಮ್ಮ ಪಾದದ ಗಾತ್ರವು ಬದಲಾಗಿದ್ದನ್ನು ನೀವು ಗಮನಿಸಿದರೇ ಮುಂದಿನ ಕೆಲವು ತಿಂಗಳುಗಳಿಗಾಗಿ  ಹೊಸ ಪಾದರಕ್ಷೆಯನ್ನು ಖರೀದಿಸಿ.

ನೀವು ಇನ್ನೂ ದಂತ ಪರೀಕ್ಷೆ ಅಥವಾ ನಿಮ್ಮ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಲ್ಲವಾದರೇ, ಇದಕ್ಕೆ ನಿಗದಿತ ವೇಳಾಪಟ್ಟಿಯನ್ನು ಮಾಡಲು ಇದು ಸೂಕ್ತ ಸಮಯವಾಗಿದೆ.

ಮನಸ್ಸಿನ ಪ್ರಾಮುಖ್ಯತೆ: ಭಾವನಾತ್ಮಕ ಬೆಳವಣಿಗೆ

ತಾಯಿ ಆಗುವ ನಿರೀಕ್ಷೆಯಲ್ಲಿರುವ ತಾಯಂದಿರು ಅಸಂಖ್ಯಾತ ಭಾವನೆಗಳನ್ನು ಅನುಭವಿಸಿ, ಅದನ್ನು ವ್ಯಕ್ತಪಡಿಸಲು ಬಯಸಬಹುದು. ಇಂತಹ ಸಮಯದಲ್ಲಿ ನಿಮ್ಮ ಗರ್ಭಧಾರಣೆ ಹಂತದಲ್ಲಿನ ವಿವಿಧ ಆಲೋಚನೆಗಳು, ಸಂತೋಷಗಳು, ಖುಷಿಗಳನ್ನು ಒಂದು ಬಣ್ಣದಿಂದ ಕೂಡಿದ ಪುಸ್ತಕದಲ್ಲಿ ಬರೆದಿಡಿ.  ಅನೇಕ ವರ್ಷಗಳು ಕಳೆದ ನಂತರ ಇದು ಒಂದು ಸುಂದರ ನೆನೆಪುಗಳಾಗಲಿದೆ. ಇದನ್ನು ನೋಡಿ ನೀವು ನಗಬಹುದು. ನಿಮಗೆ ಯಾವಾಗ ನೀವು ಗರ್ಭಿಣಿ ಎಂದು ತಿಳಿಯಿತು? ನಿಮ್ಮ ಮಗು ಯಾವಾಗ ಕಿಕ್ ಮಾಡಿತು. ಮುಂತಾದ ವಿಷಯಗಳು ನಿಮಗೆ ಸಂತೋಷ ಮತ್ತು ನಗು ತರಿಸಲಿದೆ.

ಇದಕ್ಕಾಗಿ ಎದುರು ನೋಡಿ: ಆರಂಭಿಕ ಸಂಕೋಚನಗಳು ಮತ್ತು ನೀರು ತೆಗೆದುಕೊಳ್ಳುವಿಕೆ

ನಿಮಗೆ ಈಗ ಆಗುತ್ತಿರುವ ವಿಸ್ತರಣೆಯ ನೋವುಗಳು ಮಧ್ಯಂತರ ನೋವುಗಳಂತೆ,  ಅಂದರೆ ಬಂದು ಮತ್ತು ಹೋಗುವ ನೋವುಗಳಂತೆ ಅನಿಸಬಾರದು. ಹಾಗೆ ಅನಿಸಿದರೇ ಅದು ಬರುವ ಮತ್ತು ಹೋಗುವ ಸಮಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ. ಇಲ್ಲಿ ಒಂದು ಪ್ಯಾಟರ್ನ್ ಕಂಡು ಬಂದರೇ ತಕ್ಷಣವೇ ನಿಮ್ಮ ವೈದ್ಯರಿಗೆ ಈ  ಕುರಿತು ವರದಿ ನೀಡಿ.

ಗರ್ಭಾವಸ್ಥೆಯ ಸಮಯದಲ್ಲಿ ನೀವು ಹೆಚ್ಚು ಹೈಡ್ರೇಟೇಡ್ ಆಗಿರುವುದು ತುಂಬಾ ಒಳ್ಳೆಯದು. ನೀವು ವ್ಯಾಯಾಮ ಮಾಡುವ ಸಂದರ್ಭದಲ್ಲಿ ಅಥವಾ ಇತರ ಸಂದರ್ಭಗಳಲ್ಲಿಯೂ ಸಹ ನೀರನ್ನು ಕುಡಿಯಿರಿ. ವ್ಯಾಯಾಮ ಮಾಡುವ ಮುಂಚೆ ಮತ್ತು ನಂತರ ಯಾವಾಗಲೂ ನೀರನ್ನು ಗುಟುಕರಿಸಲು ಮರೆಯಬೇಡಿ. ನಿಮಗೆ ಯಾವ ಸಮಯದಲ್ಲಿಯೂ ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳಿ.

ಹಳೆಯ ಹೆಂಡತಿಯರ ಕಥೆಗಳು: ಕೇವಲ ತಮಾಷೆಗಾಗಿ

ನಿಮ್ಮ ಗರ್ಭಾವಸ್ಥೆಯನ್ನು ನೀವು ಘೋಷಿಸಿದ ತಕ್ಷಣವೇ, ಮಾತೃತ್ವಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀವು ಎಲ್ಲ ತಾಯಂದಿರಿಂದ ಪಡೆಯಲು ಆರಂಭಿಸುತ್ತೀರಿ.  ನೀವು ಇಲ್ಲಿ ಕೆಲವು ವಿಷಯಗಳನ್ನು ಇಷ್ಟಪಡುತ್ತೀರಿ, ನಿಮ್ಮ ಸ್ವಂತ ತಾಯಿಯು ಕಠಿಣ ಗರ್ಭಧಾರಣೆಯನ್ನು ಹೊಂದಿದ್ದರೆ , ನೀವು ಸಹ ಕಠಿಣ ಗರ್ಭಧಾರಣೆಯನ್ನು ಹೊಂದುವ ಸಾಧ್ಯತೆಗಳು ಹೆಚ್ಚು ಎನ್ನುವಂತಹ   ಹೇಳಿಕೆಗಳನ್ನು ನೀವು ಕೇಳಿದರೆ ಚಿಂತಿಸಬೇಡಿ. ಗರ್ಭಾವಸ್ಥೆಯ ಬೆಳವಣಿಗೆಯು ತಳಿವಿಜ್ಞಾನದ ಮೇಲೆ ಮಾತ್ರ ಅವಲಂಬಿತವಾಗಿಲ್ಲ, ಇದು ನಿರೀಕ್ಷಿಸುತ್ತಿರುವ ಮಹಿಳೆಯ ಆಹಾರ, ಜೀವನಶೈಲಿ ಮತ್ತು ಗರ್ಭಾಶಯದ ಗಾತ್ರ ಮತ್ತು ಸ್ಥಾನವನ್ನು ಅವಲಂಬಿಸಿರುತ್ತದೆ.

#babychakrakannada

A

gallery
send-btn

Related Topics for you