ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 24 ನೇ ವಾರ

ನಿಮ್ಮ ಮಗುವಿನ ಮೆದುಳು ಈಗ ವೇಗ ಗತಿಯಲ್ಲಿ ಬೆಳೆಯುತ್ತಿದೆ. ಜೊತೆಗೆ ನರಕೋಶಗಳು ಸಾವಿರಾರು ಸಂಪರ್ಕವನ್ನು ಏರ್ಪಡಿಸುತ್ತಿವೆ.  ಇವೇ ನಿಮ್ಮ ಮಗು ಆಲೋಚನೆಗಳು, ಭಾವನೆಗಳು, ಮತ್ತು ನೆನಪುಗಳನ್ನು ಹೊಂದಲು ಕಾರಣವಾಗುತ್ತದೆ. ಕಲ್ಪಿಸಿಕೊಳ್ಳಿ, ನಿಮ್ಮ ಚಿಕ್ಕ ಮಗುವಿನ ಪುಟ್ಟ  ಮಿದುಳಿನಲ್ಲಿ ತುಂಬಾ ನಡೆಯುತ್ತಿದೆ!ನಿಮ್ಮ ಚಿಕ್ಕ ಮಗು ಈಗ ಒಂದು ಅಡಿ ಉದ್ದ ಮತ್ತು 500 ಗ್ರಾಂ ತೂಕವನ್ನು ಹೊಂದಿದೆ. ಮಗುವಿನ  ಪ್ರಮುಖ ಅಂಗಗಳು ಬಹುಪಾಲು ಅಭಿವೃದ್ಧಿ ಹೊಂದಿವೆ. ಆದರೆ ಶ್ವಾಸಕೋಶಗಳು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಆಗಿಲ್ಲ.  ಈ ಹಂತದಲ್ಲಿ ನಿಮ್ಮ ಮಗುವಿಗೆ ಹೊರಗಡೆ ಬದುಕಲು ಕಷ್ಟವಾಗುತ್ತದೆ. ಏಕೆಂದರೇ ಅದು ಕೇವಲ 24 ವಾರದ್ದಾಗಿದೆ. ಆದ್ದರಿಂದ ನಿಮ್ಮ ಮಗು ಇನ್ನೂ ಕೆಲವು ವಾರಗಳು ಗರ್ಭಾಶಯದಲ್ಲಿರುವುದು ಒಳ್ಳೆಯದು.


ನಿಮ್ಮ ಮಗು ಈಗಲೂ ಸ್ಕಿನ್ನಿ ಆಗಿಯೇ ಅನಿಸುತ್ತದೆ. ಶೀಘ್ರದಲ್ಲಿಯೇ ಅದರ ಕೊಬ್ಬಿನ ಪದರಗಳು ಬೆಳೆಯಲಿವೆ. ನಂತರ ಅವಳ ಮೂಳೆಗಳ ಮೇಲೆ ಹೆಚ್ಚು  ಮಾಂಸವು ಕಂಡು ಬಂದು ನಿಮ್ಮ ಮಗುವು ಸುಂದರವಾಗಿ ಕಂಗೊಳಿಸಲಿದೆ.


ಚಿಹ್ನೆಗಳು ಮತ್ತು ಲಕ್ಷಣಗಳು


ನಿಮ್ಮ ಗರ್ಭಾಶಯವು ಇದೀಗ ನಿಮ್ಮ ಹೊಕ್ಕುಳಿನ ಮೇಲೆ ಇದೆ.  ಇದರಿಂದ ನಿಮ್ಮ ಹೊಟ್ಟೆಯ ಚರ್ಮವು ಹಿಗ್ಗುತ್ತಿದೆ. ಹೀಗಾಗಿ ನಿಮ್ಮ  ಹೊಟ್ಟೆಯ ಮೇಲೆ ತುರಿಕೆಯ ಸಂವೇದನೆ ಆರಂಭವಾಗಬಹುದು.


ದಿನಕ್ಕೆ ಎರಡು ಬಾರಿ ನಿಮ್ಮ ಹೊಟ್ಟೆಯನ್ನು ಮಾಯ್ಶ್ಚರೈಸ್ ಮಾಡಲು ಮರೆಯಬೇಡಿ. ರಾತ್ರಿಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ವಿಟಾಮಿನ್ -ಇ ಮಾತ್ರೆಯೊಂದಿಗೆ ಮಿಕ್ಸ್ ಮಾಡಿ ಹೊಟ್ಟೆಯ ಮೇಲೆ ಮಾಲಿಶ್ ಮಾಡಿ.


ನೀವು ಉತ್ಸಾಹ ಮತ್ತು ಶಕ್ತಿಯಿಂದ ಕೂಡಿದ್ದೀರಿ ಎಂದು ಅನಿಸಿದರೇ, ನೀವು ನಿಮ್ಮ ಸಂಗಾತಿ ಸೇರಿ ಒಂದು ಬೇಬಿ ಮೂನ್‍ಗೆ ಸಿದ್ಧತೆಯನ್ನು ಮಾಡಬಹುದು.  ಈ ಸಮಯದಲ್ಲಿ ವಿಮಾನಯಾನ ಮಾಡುವುದಾದರೇ ವೈದ್ಯರ ಅನುಮತಿಯನ್ನು ಪಡೆಯಿರಿ. ಇಲ್ಲದಿದ್ದಲ್ಲಿ ನಿಮಗೆ ಕೆಲವು ವಿಮಾನಯಾನ ಸಂಸ್ಥೆಗಳು ನಿಮಗೆ ಹಾರಲು ಅನುಮತಿ ನೀಡುವುದಿಲ್ಲ.


ಪ್ರಸವಪೂರ್ವ ವ್ಯಾಯಾಮಗಳಲ್ಲಿ ನಿಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಳ್ಳಿ.  ಇನ್ನೂ ವ್ಯಾಯಾಮಗಳನ್ನು ಆರಂಭಿಸಿಲ್ಲವಾದಲ್ಲಿ ಈಗಲೇ ಪ್ರಸವಪೂರ್ವ ವ್ಯಾಯಾಮ ತರಗತಿಗಳನ್ನು ಸೇರಿ. ವ್ಯಾಯಾಮಗಳನ್ನು ನಿಧಾನವಾಗಿ  ಆರಂಭಿಸುವುದು ಒಳ್ಳೆಯದು. ಮುಂದೆ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿ ಹೆಚ್ಚಿನ ವ್ಯಾಯಾಮಗಳನ್ನು ಮಾಡಿ.


ದೈಹಿಕ ಬೆಳವಣಿಗೆ


ಹಲವು ವಿವಿಧ ಉಡುಪುಗಳನ್ನು ಧರಿಸಿ, ಖುಷಿ ಪಡಿ. ನಿಮ್ಮ ಹೊಟ್ಟೆ ಈಗ ದೊಡ್ಡದಾಗಿ ಕಾಣುತ್ತಿದೆ. ಇಂತಹ ಸುಂದರವಾದ ಉಡುಪುಗಳು ನಿಮ್ಮ ಹೊಟ್ಟೆಯನ್ನು ಮತ್ತು ನಿಮ್ಮನ್ನು ಇನ್ನೂ ಸುಂದರಗೊಳಿಸುತ್ತವೆ. ಈ ಸಮಯದ ಆನಂದ ನಿಮ್ಮದಾಗಲಿ.


ಹೆಚ್ಚು ಸುರಕ್ಷಿತವಾದ, ಚೆನ್ನಾಗಿ ಪ್ಯಾಡ್ ಇರುವ ಪಾದರಕ್ಷೆಗಳನ್ನು ಧರಿಸಿ; ಅಸುರಕ್ಷಿತ, ಆರಾಮದಾಯಕವಲ್ಲದ ಪಾದರಕ್ಷೆಗಳು ನಿಮಗೆ ಬೆನ್ನು ನೋವನ್ನು ಉಂಟು ಮಾಡುತ್ತವೆ ಮತ್ತು ಇದರಿಂದ ನೀವು ಬೀಳುವ ಸಂಭವಗಳು ಹೆಚ್ಚು.


ಭಾವನಾತ್ಮಕ ಬೆಳವಣಿಗೆ


ನಿಮ್ಮ ಮಗು ನೀವು ಬದುಕುತ್ತಿರುವ ಪರಿಸರದಲ್ಲಿಯೇ ಜೀವಿಸುತ್ತಿರುವುದರಿಂದ ನೀವು ಒತ್ತಡ ರಹಿತರಾಗಿರಬೇಕು ಮತ್ತು ಆರಾಮದಾಯಕವಾಗಿರಬೇಕು. ಎಲ್ಲ ಸಮಯದಲ್ಲೂ ನಿಮಗೆ ಒತ್ತಡ ರಹಿತ ಮತ್ತು ಆರಾಮದಾಯಕವಾಗಿರುವುದು ಕಷ್ಟ ಎಂದು ನಮಗೆ ತಿಳಿದಿದೆ.  ಏಕೆಂದರೇ ನಿಮ್ಮ ಹೊಟ್ಟೆಯಲ್ಲಿ ತುಂಬಾ ಪ್ರಕ್ರಿಯೆಗಳು ನಡೆಯುತ್ತಿವೆ. ಆದಾಗ್ಯೂ ನಿಮಗೆ ಒತ್ತಡ ಎನಿಸಿದರೇ ತಾಳ್ಮೆ ತಂದುಕೊಳ್ಳಿ. ಶಾಂತರಾಗಿ. ಸ್ನೇಹಿತರೊಂದಿಗೆ ಕೊಂಚ ಹೊತ್ತು ಹರಟೆ ಹೊಡೆಯಿರಿ. ಸಂಗೀತವನ್ನು ಕೇಳಿ. ಇವೆಲ್ಲವೂ ನಿಮ್ಮ ಒತ್ತಡವನ್ನು ಕಂಡಿತವಾಗಿಯೂ ಕಡಿಮೆ ಮಾಡುತ್ತದೆ.


ರೆಡ್ ಫ್ಲಾಗ್ಸ್


ಅತಿಯಾದ ಯೋನಿ ರಕ್ತಸ್ರಾವ, ಸ್ಪಾಟಿಂಗ್, ಕೆಳ ಹೊಟ್ಟೆಯಲ್ಲಿ ಸೆಳೆತ, ಕೆಳ ಬೆನ್ನು ನೋವು ಅಥವಾ ಪೆಲ್ವಿಕ್‍ನಲ್ಲಿ ಹೆಚ್ಚಾದ ಒತ್ತಡ ಇಂತಹ ಮುಂತಾದ ಅಸ್ವಸ್ಥತೆಗಳು ಕಂಡು ಬಂದರೇ ಎಚ್ಚರಿಕೆ ವಹಿಸಿ. ಇವುಗಳು ಪ್ರಸವಪೂರ್ವ ವೇದನೆಯ  ಚಿಹ್ನೆಗಳಾಗಿರಬಹುದು ಮತ್ತು ಅದನ್ನು ತಕ್ಷಣ ನಿಮ್ಮ ವೈದ್ಯರಿಗೆ ವರದಿ ಮಾಡಬೇಕು.


ನಿಮ್ಮ ಮಗು ಗರ್ಭಾವಸ್ಥೆಯ 37 ನೇ ವಾರದ ನಂತರ ಜನಿಸಿದರೇ ಒಳ್ಳೆಯದು. ಇದನ್ನು ಪೂರ್ಣಾವಧಿ ಎಂದು ಪರಿಗಣಿಸಲಾಗುತ್ತದೆ ಮತ್ತು  ಜನನಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಸಹ ಕಡಿಮೆ ಆಗಿರುತ್ತವೆ. 37 ನೇ ವಾರಕ್ಕೆ ಮುಂಚೆ ಜನಿಸಿದ ಮಗು ಆಸ್ಪತ್ರೆಯಲ್ಲಿ ದೀರ್ಘಕಾಲ ಉಳಿಯಬೇಕಾಗುವುದು  ಮತ್ತು ಇದರಿಂದ ಸಂಪೂರ್ಣ ಕುಟುಂಬಕ್ಕೆ ಒತ್ತಡ ಮತ್ತು ಆತಂಕ ಉಂಟಾಗುತ್ತದೆ.


ಹಳೆಯ ಹೆಂಡತಿಯರ ಕಥೆಗಳು


ಕೆಲ ಜನರು ನಿಮಗೆ ಅಹಿತಕರವಾದ ಚಿತ್ರಗಳನ್ನು, ಪ್ರಾಣಿಗಳ ಚಿತ್ರವನ್ನು ನೋಡಬಾರದು ಎಂದು ಸಲಹೆ ನೀಡುತ್ತಾರೆ. ಏಕೆಂದರೆ ನಿಮಗೆ ಹುಟ್ಟುವ ಮಗು ಅದೇ ಮುಖ ಮತ್ತು ಭಾವನೆಗಳನ್ನು ಹೊಂದಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಆದರೆ ಆ ರೀತಿ ಆಗುವುದಿಲ್ಲ. ನಿಮ್ಮ ಹುಟ್ಟುವ ಮಗುವಿನ ಮುಖವು ಬಹುತೇಕ ನಿಮ್ಮ ವಂಶವಾಹಿಯ ಮೇಲೆ ಅವಲಂಬಿತವಾಗಿರುತ್ತದೆ. ನೀವು ಯಾವುದೇ ಚಿತ್ರ ನೋಡಿದರೂ ನಿಮ್ಮ ಮಗು ಮಾನವನಂತೆಯೇ ಇರುತ್ತದೆ ಎಂದು ತಳಿಶಾಸ್ತ್ರವು ಖಚಿತ ಪಡಿಸುತ್ತದೆ.  ಆದಾಗ್ಯೂ ಕೆಲವು ಚಿತ್ರಗಳು ನಿಮ್ಮ ಮನಸ್ಸಿಗೆ ಅಹಿತಕರ ಎನಿಸಿದರೇ ಅದನ್ನು ನೋಡಬೇಡಿ. ನಿಮಗೆ ಹುಟ್ಟುವ ಮಗುವು ಎಲ್ಲ ಶಿಶುಗಳಂತೆ ಸುಂದರವಾಗಿರುತ್ತದೆ ಎಂಬ ಭರವಸೆ ಇರಲಿ.


#babychakrakannada

Pregnancy

Read More
ಕನ್ನಡ

Leave a Comment

Recommended Articles