ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 25 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 25 ನೇ ವಾರ

ನೀವು ಈಗ ಗರ್ಭಾವಸ್ಥೆಯ ಪ್ರಮುಖ ಹಂತದಲ್ಲಿದ್ದೀರಿ.  ನೀವು ಸೀಮಂತದ ಸಂಭ್ರಮದಲ್ಲಿ ನಿಮ್ಮನ್ನು ನೀವೇ ಮರೆಯಲಿದ್ದೀರಿ. ಎಲ್ಲರೂ ನಿಮ್ಮೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಸಮಯ ಇದಾಗಿದೆ!ಈಗ ನಿಮ್ಮ ಮಗು  13½ ಇಂಚು ಉದ್ದ ಮತ್ತು 680 ಗ್ರಾಂ ತೂಕವುಳ್ಳದ್ದಾಗಿದೆ. ನಿಮ್ಮ ಮುದ್ದು ಕಂದಮ್ಮ ಈಗ ಶೀಘ್ರವಾಗಿ ಬೆಳೆಯುತ್ತಿದ್ದು, ಅದರ ಪರಿಣಾಮ ನಿಮ್ಮ ದೇಹದ ಮೇಲೆ ಉಂಟಾಗಲಿದೆ. ಪ್ರತಿವಾರವೂ ನಿಮ್ಮ ದೇಹವು ಬದಲಾವಣೆಗೊಳ್ಳಲಿದೆ.


ನಾವು ಮುಂಚೆಯೇ ಹೇಳಿದಂತೇ, ನೀವು ಏಳನೇ ತಿಂಗಳಿಗೆ ಕಾಲಿಡುತ್ತಿದ್ದಂತೇ, ನಿಮ್ಮ ಕುಟುಂಬದವರು ನಿಮಗೆ ಸೀಮಂತ ಕಾರ್ಯಕ್ರಮವನ್ನು ಮಾಡುವ ಸುಂದರ ಯೋಜನೆಯನ್ನು ಹಾಕುತ್ತಾರೆ. ನೀವು ಆಚರಿಸುವ ವಿಧಾನ ಯಾವುದೇ ಇರಲಿ. ಒಟ್ಟಿನಲ್ಲಿ  ನೀವು ಸುಖ ಮತ್ತು ಸಂತೋಷದಿಂದ ಇರಬೇಕು. ನಿಮ್ಮ ಎಲ್ಲ ಹಿತೈಷಿಗಳ, ಸ್ನೇಹಿತರ, ಕುಟುಂಬದವರ ಆಶೀರ್ವಾದವು ನಿಮ್ಮ ಮೇಲೆ ಈ ಸಂದರ್ಭದಲ್ಲಿ ಹರಿದು ಬರಲಿದೆ.


ಚಿಹ್ನೆಗಳು ಮತ್ತು ಲಕ್ಷಣಗಳು


ನಿಮ್ಮ ವೈದ್ಯರು ಈಗ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್ (GTT) ನ್ನು ಮಾಡಿಸಿಕೊಳ್ಳಲು ಸಲಹೆ ನೀಡಬಹುದು. ಇದು ಒಂದು ನಿರ್ದಿಷ್ಟ ಪ್ರಮಾಣದ ಗ್ಲೂಕೋಸ್ ಸೇವಿಸುವ ಮೊದಲು ರಕ್ತದ ಮಾದರಿಯನ್ನು ಒದಗಿಸುವುದನ್ನು  ಮತ್ತು ನಂತರ ಒಂದು ಅಥವಾ ಎರಡು ಗಂಟೆಗಳ ನಂತರ ಉಪಹಾರ ಸೇವನೆ ಬಳಿಕ ಮತ್ತೆ ಮಾದರಿಯನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ ಮಟ್ಟಕ್ಕೆ ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಈ ಪರೀಕ್ಷೆಯು  ತಿಳಿಸುತ್ತದೆ.


ಕೆಲವು ತಾಯಂದಿರಿಗೆ  ಗರ್ಭಧಾರಣೆಯ ಮಧುಮೇಹವು  ಮೂರನೇ ತ್ರೈಮಾಸಿಕದಲ್ಲಿ ಕಂಡುಬರುತ್ತದೆ. ಇದು ನಿಮಗೆ ಚಿಂತೆಯನ್ನುಂಟು ಮಾಡಬಹುದು.  ಆದರೆ ಸರಿಯಾದ ರೋಗನಿರ್ಣಯ ಮತ್ತು ನಿರ್ವಹಣೆಯಿಂದಾಗಿ, ನೀವು ಸುರಕ್ಷಿತ ಗರ್ಭಧಾರಣೆ ಮತ್ತು ಆರೋಗ್ಯಕರ ಮಗುವನ್ನು ಹೊಂದಬಹುದು.


ನಿಮ್ಮ ಮಗುವಿನ ಜನನ ಸ್ಥಳವನ್ನು ನೀವು ಇನ್ನೂ ನಿರ್ಧರಿಸದಿದ್ದರೇ ಹೇಗೆ? ಈಗ ಇದು ನಿರ್ಧರಿಸಲು ಸೂಕ್ತ  ಸಮಯ. ಬಹುತೇಕ ಆಸ್ಪತ್ರೆಗಳು 28 ನೇ ವಾರದೊಳಗೆ ನೀವು ಪೂರ್ಣ ನೊಂದಾವಣಿ ಮಾಡಿಕೊಳ್ಳಬೇಕೆಂದು ಬಯಸುತ್ತವೆ.


ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ತಿಳಿದುಕೊಳ್ಳಲು  ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ. ಹೆರಿಗೆ ಸ್ಥಳದ ಆಯ್ಕೆಯು ನಿಮ್ಮ ವೈಯಕ್ತಿಕ ಗರ್ಭಾವಸ್ಥೆಯ ಅಗತ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ನೀವು ಕಡಿಮೆ ಅಪಾಯದ ಗರ್ಭಧಾರಣೆ ಹೊಂದಿದ್ದರೆ, ನೀವು ಒಂದು ಮೆಟರ್ನಿಟಿ ಆಸ್ಪತ್ರೆಯಲ್ಲಿ  ಹೆರಿಗೆಯನ್ನು ಮಾಡಿಸಿಕೊಳ್ಳಬಹುದು. ಒಂದು ವೇಳೆ ನೀವು ಹೆಚ್ಚು ಅಪಾಯದ ಗರ್ಭಧಾರಣೆಯನ್ನು ಹೊಂದಿದ್ದರೇ NICU ಸಂಯೋಜಿತಗೊಂಡಿರುವ ,ಬ್ಲಡ್ ಬ್ಯಾಂಕ್ ಮತ್ತು ಇತರ ಬ್ಯಾಕ್ ಅಪ್‍ ಸೌಲಭ್ಯಗಳಿರುವ ಟೆರಿಟರಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು.


ದೈಹಿಕ ಬೆಳವಣಿಗೆ


ನೀವು ಈಗ ನಿಮ್ಮ ಬಂಪ್ ಅನ್ನು ಇತರ ಗರ್ಭಿಣಿ ಮಹಿಳೆಯರ ಹೊಟ್ಟೆಯೊಂದಿಗೆ ಹೋಲಿಸಬಹುದು. ಇದು ಮಗುವಿನ ಹೋಲಿಕೆಯವರೆಗೆ ಮುಂದುವರೆಯುತ್ತದೆ. ಇದು ಒಂದು ಸಹಜ ಭಾವನೆಯಾಗಿದೆ. ನೆನೆಪಿಡಿ ಪ್ರತಿಯೊಂದು ಗರ್ಭಾಧಾರಣೆಯು ವಿಭಿನ್ನವಾಗಿ ಮುಂದುವರೆಯುತ್ತದೆ. ಆದ್ದರಿಂದ ಬಂಪ್ ಆಕಾರ ಮತ್ತು ಗಾತ್ರದ ಕುರಿತು ತಲೆ ಕೆಡಿಸಿಕೊಳ್ಳಬೇಡಿ.


ಭಾವನಾತ್ಮಕ ಬೆಳವಣಿಗೆ


ನಿಮ್ಮ ಮಗು ಕಿಕ್ ಮಾಡುವುದನ್ನು ನೀವು ಸ್ಪಷ್ಟವಾಗಿ ಅನುಭವಿಸಲಿದ್ದೀರಿ. ನಿಮ್ಮ ಸಂಗಾತಿಗೂ ನಿಮ್ಮ ಮಗುವಿನ್ ಕಿಕಿಂಗ್‍ನ ಅದ್ಭುತ ಅನುಭವ ಆಗಲಿದೆ. ನೀವು ಇಬ್ಬರೂ ಪ್ರತಿ ದಿನ ಸ್ವಲ್ಪ ಸಮಯದವರೆಗೆ ಒಟ್ಟಾಗಿ ಸೇರಿ ಸಮಯ ಕೇಳಿಯಿರಿ. ಇದರಿಂದ ನಿಮ್ಮ ಮಗುವಿನೊಂದಿಗೆ ಬದ್ಧತೆ ಉಂಟಾಗುತ್ತದೆ. ನಿಮ್ಮ ಪತಿಗೆ ಇದು ತುಂಬಾ ಮುಖ್ಯ. ಏಕೆಂದರೇ ಅವರು ಇನ್ನು ಕೆಲವೇ ವಾರಗಳಲ್ಲಿ ತಂದೆಯಾಗಲಿದ್ದಾರೆ. ಮಗುವಿಗೆ ತಂದೆಯ ಕಾಳಜಿ ಮತ್ತು ಪ್ರೀತಿ ಈಗಿನಿಂದಲೇ ಅರ್ಥವಾಗಬೇಕು.


ರೆಡ್ ಫ್ಲಾಗ್ಸ್


ನಿಮ್ಮಲ್ಲಿ ಯಾವುದೇ ರಕ್ತಸ್ರಾವ, ತಲೆ ಸುತ್ತುವಿಕೆ, ಕಿಬ್ಬೊಟ್ಟೆ ಕೆಳಗೆ ನೋವು  ಕಂಡು ಬಂದರೇ, ಅಕಸ್ಮಾತ್ತಾಗಿ ಕೆಳಗೆ ಬಿದ್ದಾಗ ಅಥವಾ ಗಾಯವಾದಾಗ, ತಕ್ಷಣವೇ ಈ ಕುರಿತು ನಿಮ್ಮ ವೈದ್ಯರಿಗೆ ಮಾಹಿತಿ ನೀಡಿ. ಶಿಶುಗಳು ಸಾಮಾನ್ಯವಾಗಿ ಗರ್ಭಾಶಯದೊಳಗೆ ಹಿತವಾಗಿರುತ್ತವೆ, ಆದರೆ ಯಾವುದೇ ತೊಡಕುಗಳಿಗೆ ಒಳಗಾಗುವ ಮೊದಲು ಸುರಕ್ಷಿತವಾಗಿರುವುದು ಒಳ್ಳೆಯದು.


ಹಳೆಯ ಹೆಂಡತಿಯರ ಕಥೆಗಳು


ಸುಂದರವಾದ ಮಗುವಿನ ಬಟ್ಟೆಗಳು ಮತ್ತು ಆಟಿಕೆ ಸಾಮಾನುಗಳು ನಿಮ್ಮ ಮಗುವಿಗಾಗಿ ಶಾಪಿಂಗ್ ಮಾಡುವಂತೆ ನಿಮ್ಮನ್ನು ಪ್ರಚೋದಿಸಬಹುದು.  ಆದರೆ ಕೆಲವು ಕುಟುಂಬಗಳು ಮಗುವಿನ ಜನನವಾಗುವುದಕ್ಕಿಂತ ಮುಂಚೆಯೇ ಮಗುವಿಗಾಗಿ ಶಾಪಿಂಗ್ ಮಾಡುವುದು ಒಳ್ಳೆಯ  ಲಕ್ಷಣವಲ್ಲ ಎಂದು ಹೇಳುತ್ತವೆ.


ನೀವು ಅವರ ಭಾವನೆಯನ್ನು ಗೌರವಿಸಲು ಇಚ್ಛಿಸುವುದಾದರೇ, ನೀವು ಕೇವಲ ವಿಂಡೋ ಶಾಪಿಂಗ್ ಮಾಡಲು ಹೋಗಿ. ನೀವು ಮಗುವಿಗಾಗಿ ತೆಗೆದುಕೊಳ್ಳಲು ಬಯಸುವ ವಸ್ತುಗಳ ಫೋಟೊಗ್ರಾಫ್ಗಳನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಪಟ್ಟಿ ಮಾಡಿ. ನಿಮ್ಮ ಮಗುವಿನ ಜನನದ ನಂತರ ನೀವು ಬಯಸಿದ ಎಲ್ಲವನ್ನು ನಿಮ್ಮ ಮಗುವಿಗಾಗಿ ತರಬಹುದು.


#babychakrakannada
logo

Select Language

down - arrow
Personalizing BabyChakra just for you!
This may take a moment!