• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 26 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 26 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 26 ನೇ ವಾರ

14 May 2019 | 1 min Read

Sonali Shivlani

Author | 213 Articles

ಈಗ ನಿಮ್ಮ ಹೊಟ್ಟೆ ನಿಮಗೆ ಫುಟಬಾಲ್ ಮೈದಾನದಂತೆ ಭಾಸವಾಗುತ್ತಿದೆಯೇ?  ಹೌದು ಏಕೆಂದರೆ ನಿಮ್ಮ ಮುದ್ದು ಕಂದಮ್ಮ ಈಗ ಒಳಗಿಡಯಿಂದಲೇ ಫುಟಬಾಲ್ ಪ್ರಾಕ್ಟಿಸ್ ಮಾಡುತ್ತಿದ್ದಾನೆ. ಹೀಗಾಗಿ ಹೆಚ್ಚು ಹೆಚ್ಚು ಕಿಕ್‍ಗಳು! ಈ ವಾರ ನಿಮ್ಮ ಚಿಕ್ಕ ಫುಟ್ಬಾಲ್ ಚಾಂಪಿಯನ್ 14 ಅಂಗುಲ ಉದ್ದ ಮತ್ತು  ಸುಮಾರು 800 ಗ್ರಾಂ ತೂಕ ಹೊಂದಿದೆ.

 

ನೀವು ಮಲಗಿರುವಾಗ ಮತ್ತು ವಿಶ್ರಾಂತಿಯಲ್ಲಿರುವಾಗ ನಿಮ್ಮ ಮಗು ಹೆಚ್ಚು ಕ್ರಿಯಾಶಾಲಿ ಆಗಿರುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ನೀವು ಕೆಲಸದಲ್ಲಿ ನಿರತವಾಗಿರುವಾಗ ಅದು ಅಷ್ಟೊಂದು ಕ್ರಿಯಾಶಾಲಿಯಾಗಿರುವುದಿಲ್ಲ. ಏಕೆಂದರೇ  ನಿಮ್ಮ ಚಲನೆಗಳು ಮಗುವಿಗೆ ತೊಟ್ಟಿಲು ತೂಗಿದ ಅನುಭವ ತರುತ್ತದೆ. ಹೀಗಾಗಿ ನೀವು ಕ್ರಿಯಾಶಾಲಿ ಆದಾಗ ಅವು ಮಲಗಿರುತ್ತವೆ.

 

ನಿಮಗೆ ಹೇಗೆ ಅನಿಸುತ್ತದೆ? ನಿಮ್ಮ ಮಗು ಪಾರ್ಟಿ ಬಯಸುತ್ತಿದ್ದಾನೆಯೇ? ಹೌದು. ಮಗುವಿನ ಈ ಮಾದರಿ ಇನ್ನೂ ಕೆಲವು ವಾರಗಳವರೆಗೆ ಮುಂದುವರೆಯುತ್ತದೆ. ಜೊತೆಗೆ ಜನನದ ನಂತರ ಕೆಲವು ವಾರಗಳವರೆಗೂ. ನಿಮ್ಮ ಮಗು ಹಗಲು ಸಮಯದಲ್ಲಿ ದೇವದೂತನಂತೆ ಮಲಗಿದ್ದರೇ, ರಾತ್ರಿ ಗೂಬೆಯಂತೆ ಎಚ್ಚರದಿಂದ ಇರುತ್ತಾನೆ. ” ಮಗುವಿನ ಹಾಗೆ ಮಲಗಬೇಕು”  ಎಂಬುದು ಒಂದು ಪುರಾಣವಷ್ಟೇ.

 

ರೋಗ ಮತ್ತು ಚಿಹ್ನೆಗಳು

ನಿಮ್ಮ ಗರ್ಭಾಶಯವು ಈಗ ಬೆಳೆಯುತ್ತಿದೆ ಮತ್ತು  ಇದು ನಿಮ್ಮ ಬೆನ್ನಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಆದ್ದರಿಂದ ನಿಮ್ಮ ಭಂಗಿ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ನಿಮ್ಮ ಕಾಲುಗಳ ಹಿಂಭಾಗಗಳು  ಮತ್ತು ಅಡಿಭಾಗಗಳು ನೋಯಲು ಆರಂಭವಾಗಬಹುದು.

ಪ್ರಸವ ಪೂರ್ವ ಮಸಾಜ್ ಕುರಿತು ಚೆನ್ನಾಗಿ ತಿಳಿದಿರುವ ಒಬ್ಬ ಮಸಾಜ್ ತಜ್ಞರ ಬಳಿ ಮಸಾಜ್ ಮಾಡಿಸಿಕೊಳ್ಳುವುದು ಒಂದು ಉತ್ತಮ ಆಲೋಚನೆ. ಇದು ನಿಮ್ಮ ಬೆನ್ನು ನೋವು, ಪಾದಗಳು, ತೊಡೆಗಳು, ಕೈ ಕಾಲುಗಳು ಮುಂತಾದವುಗಳ ನೋವನ್ನು ಕಡಿಮೆ ಮಾಡುತ್ತದೆ.

ನಿಮ್ಮ ವೈದ್ಯರು ನಿಮ್ಮ ಮಗುವಿನ ಚಲನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಹೇಳಬಹುದು.   ವಿಶೇಷವಾಗಿ ಮಗು ಸಕ್ರಿಯವಾಗಿದ್ದಾಗ ಒಂದು ಗಂಟೆಯಲ್ಲಿ ಹತ್ತು ಚಲನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದದ್ದು.

ಆದರೆ ನೆನೆಪಿಡಿ. ಪ್ರತಿಯೊಂದು ಮಗುವೂ  ಚಲನೆಗಳ ಅನನ್ಯ ಮಾದರಿಯನ್ನು ಹೊಂದಿರುತ್ತದೆ. ಗರ್ಭಾವಸ್ಥೆಯ ಅದೇ ಹಂತದಲ್ಲಿರುವ ಇನ್ನೊಂದು ಮಹಿಳೆಯ ಮಗುವಿನ ಚಲನೆಯೊಂದಿಗೆ ನಿಮ್ಮ ಮಗುವಿನ ಚಲನೆಯನ್ನು ಹೋಲಿಸುವುದು ಒಳ್ಳೆಯದಲ್ಲ.

 

ದೈಹಿಕ ಬೆಳವಣಿಗೆ

 

ನಿಮ್ಮ ಬೆನ್ನಿನ ಮೇಲೆ ಹೆಚ್ಚಾದ ಒತ್ತಡವು  ನಿಮಗೆ ಅಸಹನೀಯವಾಗಬಹುದು. ಈಗಿನಿಂದಲೇ ನಿಮ್ಮ ಬೆನ್ನಿನಲ್ಲಿ ಮಲಗುವುದನ್ನು ತಪ್ಪಿಸಿ ಮತ್ತು ಬೆಂಬಲಕ್ಕಾಗಿ ಬಾಡಿ ಪಿಲ್ಲೋ  ಬಳಸಿ. ಈ ಪಿಲ್ಲೋ ಅಂದರೆ ಮೆತ್ತೆ ನಿಮ್ಮನ್ನು ಸರಿಯಾದ ಬದಿಯಲ್ಲಿ ಉಳಿಯಲು ಸಹಾಯ ಮಾಡುತ್ತದೆ.

 

ಭಾವನಾತ್ಮಕ ಬೆಳವಣಿಗೆ

 

ಪ್ರಸವ ವೇದನೆ ಮತ್ತು ಪ್ರಸವದ ಕುರಿತಾದ ನಿಮ್ಮ ಆಲೋಚನೆಗಳು ನಿಮಗೆ ಆತಂಕವನ್ನು ಉಂಟು ಮಾಡಬಹುದು. ಅನುಭವಿ ಅಮ್ಮಂದಿರ ಜೊತೆಗೆ ಈ ಕುರಿತು ಮಾತನಾಡಿ. ಅವರ ಹೆರಿಗೆ ಸಮಯದ ಅನುಭವಗಳನ್ನು ಹಂಚಿಕೊಳ್ಳಲು ಹೇಳಿ. ಆದರೆ ಪ್ರತಿ ಹೆರಿಗೆ ಅನುಭವವೂ ಭಿನ್ನವಾಗಿದೆ ಎಂದು ನೆನೆಪಿನಲ್ಲಿಡಿ. ನಿಮ್ಮ ವೈದ್ಯರ ಸೂಚನೆಗಳನ್ನು ಪಾಲಿಸಿ ಮತ್ತು ಆರೋಗ್ಯಕರವಾಗಿ ಇರಿ. ಆರೋಗ್ಯಕರವಾದ ಗರ್ಭಾವಸ್ಥೆಯು  ಆರೋಗ್ಯಕರವಾದ ಹೆರಿಗೆಗೆ ಕಾರಣವಾಗುತ್ತದೆ.

ಸ್ತನ ಹಾಲು ಉಣಿಸುವಿಕೆ ಕುರಿತು ಪುಸ್ತಕಗಳನ್ನು ಓದುವುದು ಮತ್ತು  ಅವುಗಳ ಕುರಿತಾದ ವಿಶೇಷ ತರಗತಿಗೆ ಹೋಗುವುದು ತುಂಬಾ ಒಳ್ಳೆಯದು. ಇದು ನಿಮ್ಮನ್ನು ಸರಿಯಾದ ಕ್ರಮ ಮತ್ತು ಭಂಗಿಯಲ್ಲಿ ನಿಮ್ಮ ಮಗುವಿಗೆ ಹಾಲು ಕುಡಿಸಲು ಸಿದ್ಧಗೊಳಿಸುತ್ತದೆ. ಜನನದ ನಂತರ  ಹಾಲು ಕುಡಿಸುವಿಕೆಯ ಆರಂಭದ ತೊಂದರೆಗಳನ್ನು ಎದುರಿಸಲು ನಿಮಗೆ ಆತ್ಮ ವಿಶ್ವಾಸ ಬರುತ್ತದೆ.

 

ರೆಡ್ ಫ್ಲಾಗ್ಸ್

 

ನಿಮಗೆ ನೋವು ಮತ್ತು ಸಂಕಟಗಳನ್ನು ಮರೆಯಲು , ಅದರಿಂದ ಮುಕ್ತಿ ಹೊಂದಲು ಬಿಸಿ ನೀರಿನ ಟಬ್ ನಲ್ಲಿ ಇಳಿಯಬೇಕೆಂದು ಅನಿಸಬಹುದು. ಆದರೆ ಇದು ಸರ್ವಥಾ ಒಳ್ಳೆಯದಲ್ಲ. ಗರ್ಭಾವಸ್ಥೆಯ ಸಮಯದಲ್ಲಿ  ಸ್ಟೀಮ್, ಸೌನಾ , ಬಿಸಿನೀರಿನ ಟಬ್ ಬಳಸಲು ಸಲಹೆ ನೀಡುವುದಿಲ್ಲ. ಸೌನಾ ನಿಮ್ಮದೇಹಕ್ಕೆ ಅಧಿಕ ಉಷ್ಣತೆಯನ್ನು ಉಂಟು ಮಾಡಿ ಗರ್ಭಾಶಯದ ತಾಪಮಾನವನ್ನು ಹೆಚ್ಚಿಸಬಹುದು. ಇದು ನಿಮ್ಮ ಮಗುವಿಗೆ ಖಂಡಿತ ಒಳ್ಳೆಯದಲ್ಲ.

ಹಳೆಯ ಹೆಂಡತಿಯರ ಕಥೆಗಳು

ನೀರಿಕ್ಷೆಯಲ್ಲಿರುವ ತಂದೆಯಂದಿರು ಸಂಗಾತಿಯ ಗರ್ಭಾವಸ್ಥೆಯ ಸಮಯದಲ್ಲಿ ದಪ್ಪಗಾದರೇ ಅವರ ಹೆಂಡತಿ ಹೆಣ್ಣು ಮಗುವಿಗೆ , ಅಥವಾ ತೆಳ್ಳಗಾದರೇ ಗಂಡು ಮಗುವಿಗೆ  ಜನ್ಮ ನೀಡುತ್ತಾರೆಂಬ ಇನ್ನೊಂದು ರೀತಿಯ ಜನಪ್ರಿಯ ಕಲ್ಪನೆಯಿದೆ.

ನಿಮ್ಮ ತಿನ್ನುವ ಕಡು ಬಯಕೆಗಳನ್ನು ಪೂರೈಸುವ ಸಮಯದಲ್ಲಿ ಅವರು ನಿಮ್ಮೊಂದಿಗೆ ಇದ್ದು, ತಾವು ತಿಂದು ದಪ್ಪಗಾಗುತ್ತಿದ್ದಾರೆ..ಅವರು ತೆಳುವಾಗಿದ್ದಾರೆ ತಮ್ಮ ಮುದ್ದು ಕಂದಮ್ಮನ ಆಗಮನದ  ಕುರಿತು ಆತಂಕಿತರಾಗಿದ್ದಾರ‍ೆ. ಇದು ಸಹ ಮಗುವಿನ ಲಿಂಗತ್ವವನ್ನು ನಿರ್ಧರಿಸುವುದಿಲ್ಲ. ಇಂತಹ ಸುಳ್ಳು ಕಂತೆಗಳನ್ನು ನಂಬಬೇಡಿ. ತಂದೆಯ ತೂಕದ ಮೇಲೆ ಮಗುವಿನ ಲಿಂಗತ್ವವು ನಿರ್ಧಾರವಾಗುವುದಿಲ್ಲ.

 

#babychakrakannada

A

gallery
send-btn

Related Topics for you