• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 27 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 27 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 27 ನೇ ವಾರ

14 May 2019 | 1 min Read

Sonali Shivlani

Author | 213 Articles

ನೀವು ಈಗ 27 ನೇ ವಾರಕ್ಕೆ ಕಾಲಿರಿಸಿದ್ದೀರಾ.  ಅಂದರೆ ಮೂರನೇ ಮತ್ತು ಕೊನೆಯ ತ್ರೈಮಾಸಿಕ. ಅಂದರೆ ಇದೊಂದು ಅದ್ಭುತ ವಿಷಯವಲ್ಲವೇ?  ನೀವು ಈಗಾಗಲೇ ಒಟ್ಟು ಗರ್ಭಧಾರಣೆಯ ಎರಡು ಭಾಗದಷ್ಟು ಕಳೆದಿದ್ದೀರಿ ಮತ್ತು ತಾಯಿ ಆಗಲು ಇನ್ನೂ ಕೆಲವೇ ವಾರಗಳು ಬಾಕಿ ಇವೆ.

ನಿಮ್ಮ ಮಗುವಿನ ತೂಕ ಈಗ ಒಂದು ಕಲೋದಷ್ಟಿದೆ ಮತ್ತು ಉದ್ದ 14½ ಇಂಚು ಉದ್ದ.  ಮಗುವಿನ ಚರ್ಮವು ಆಮ್ನಿಯೋಟಿಕ್ ದ್ರವದ ಕಾರಣದಿಂದ ಸುಕ್ಕುಗಟ್ಟಿದಂತೆ ಕಾಣುತ್ತದೆ ಆದರೆ ವರ್ನಿಕ್ಸಿನಿಂದ  ರಕ್ಷಿಸಲ್ಪಟ್ಟಿದ್ದು, ಇದು ಆವರಿಸುವ ಬಿಳಿ ಪದಾರ್ಥವಾಗಿದೆ. ನಿಮ್ಮ ಮಗು ಈಗ ಬಹಳಷ್ಟು ಆಮ್ನಿಯೋಟಿಕ ದ್ರವವನ್ನು ನುಂಗುತ್ತದೆ. ಇದು ಅದರ ಹೊಟ್ಟೆಯನ್ನು ತುಂಬುತ್ತದೆ.

ನಿಮ್ಮ ಮುದ್ದು ಕಂದಮ್ಮ ಈಗ ನಿಮ್ಮ ಗರ್ಭದಲ್ಲಿ ನಿಯಮಿತವಾಗಿ  ಮಲಗುತ್ತದೆ, ವಾಕಿಂಗ್ ಮಾಡುತ್ತದೆ ಮತ್ತು ತನ್ನ ಕಣ್ಣುಗಳನ್ನು ಮುಚ್ಚುವ ಮತ್ತು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.  ಅದರ ಶ್ವಾಸಕೋಶಗಳು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಆಗಿಲ್ಲ. ಈ ಹಂತದಲ್ಲಿ ನಿಮ್ಮ ಮಗು ಜನಿಸಿದರೇ ಅದಕ್ಕೆ ಹೊರಜಗತ್ತಿನಲ್ಲಿ ಬದುಕಲು ಸಾಕಷ್ಟು ಸಹಾಯ ಬೇಕಾಗಬಹುದು. ಇದು ಜನನವಾಗಲು ಸೂಕ್ತ ಸಮಯವಲ್ಲ.

ಚಿಹ್ನೆಗಳು ಮತ್ತು ಲಕ್ಷಣಗಳು

ಈ ವಾರದಿಂದ ನಿಮ್ಮ ಬೆನ್ನು ನೋವು ಹೆಚ್ಚಾಗಬಹುದು. ಹೀಗಾಗಿ ನೀವು ನಿಯಮಿತವಾಗಿ ಬೆನ್ನು ನೋವಿನ ವ್ಯಾಯಾಮಗಳನ್ನು ಮಾಡಿ. ಜೊತೆಗೆ ಬ್ಯಾಕ್ ಸಪೋರ್ಟ್ ತೆಗೆದುಕೊಳ್ಳಿ.

ನಿಮಗೆ ಈಗ ನಿಮ್ಮ ಹೊಟ್ಟೆಯಿಂದ ಚಿಕ್ಕದಾದ ” ನಾಕಿಂಗ್”  ಶಬ್ದಗಳು ಕೇಳಬಹುದು. ಇದು ಮತ್ತೇನೂ ಅಲ್ಲ. ನಿಮ್ಮ ಮುದ್ದು ಕಂದಮ್ಮನ ಬಿಕ್ಕಳಿಕೆ.

ನಿಮ್ಮ ಸಂಗಾತಿಯೊಂದಿಗೆ ಜನನ  ಯೋಜನೆ ಬರೆಯುವ ಕುರಿತು ಯೋಚಿಸಿ. ಜನನ  ಯೋಜನೆ ಕೇವಲ ನಿಮ್ಮ ಹೆರಿಗೆ ಸಮಯದಲ್ಲಿ ನೀವು ಹೊಂದಿರುವ ಆದ್ಯತೆಗಳ ಪಟ್ಟಿಯಾಗಿದೆ. ಇಂತಹ ವಿಷಯಗಳನ್ನು  ಒಳಗೊಂಡಿರಬಹುದು ..

ನೀವು ಯಾವಾಗ ಆಸ್ಪತ್ರೆಗೆ ಹೋಗಲು ಬಯಸುತ್ತೀರಿ ( ನಿಮಗೆ ನೋವು ಆರಂಭವಾದ ತಕ್ಷಣವೇ ಅಥವಾ ವಾಟರ್  ಬ್ರೇಕ್ ಆದ ನಂತರವೇ ಇತ್ಯಾದಿ?).

ಜನನ ಸಮಯದಲ್ಲಿ ನಿಮ್ಮೊಂದಿಗೆ ಯಾರು ಇರಬೇಕೆಂದು ನೀವು ಬಯಸುವಿರಿ ( ಗಂಡ, ಅತ್ತೆ, ಅಥವಾ ತಾಯಿ)

ನಿಮಗೆ ಸಾಮಾನ್ಯ ಹೆರಿಗೆ ಆಗಲು ನೀವು ಯಾವ ವಿಧಾನವನ್ನು ಇಷ್ಟಪಡುವಿರಿ. · ಔಷಧೀಯ ನೋವು ಪರಿಹಾರ ಅಥವಾ ಇತರ ನೈಸರ್ಗಿಕ ವಿಧಾನಗಳು (ಎಪಿಡ್ಯೂರಲ್, ಅನ್ಮೆಡಿಕೇಟೆಡ್ ಜನ್ಮ, ಬರ್ಥಿಂಗ್ ಬಾಲ್ ಮುಂತಾದ ವಸ್ತುಗಳ  ಬಳಕೆ)

ನೀವು ನಿಮ್ಮ ಮಗುವಿಗೆ ಹೇಗೆ ಎದೆಹಾಲನ್ನು ನೀಡಬೇಕೆಂದು ಬಯಸುವಿರಿ ( ಜನನದ ನಂತರ ತಕ್ಷಣವೇ ಅಥವಾ ಹಾಲುಣಿಸುವ ಸಲಹೆಗಾರಳ ಪ್ರಸ್ತುತಿಯಲ್ಲಿ)

ನಿಮಗೆ ಹೆರಿಗೆ ನೋವು ಬಂದಾಗ ಎಲ್ಲವನ್ನು ನೆನೆಪು ಮಾಡಿಕೊಳ್ಳುವುದು ಮತ್ತು ಅವುಗಳನ್ನು ಜೋಡಿಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ನೀವು ನಿಮ್ಮ ಸಂಗಾತಿಗೆ ಜನನ ಯೋಜನೆಯನ್ನು ತೋರಿಸಿ. ಎಲ್ಲ ವಸ್ತುಗಳನ್ನು ಜೋಡಿಸುವಂತೆ ಹೇಳಿ. ಇದರಿಂದ ಇಬ್ಬರಿಗೂ ಸಹಾಯಕವಾಗಲಿದೆ. ನಿಮ್ಮ ಮಗುವಿನ ಜನನ ಯೋಜನೆಯನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಹೆರಿಗೆಗಳು ನಾವು ಅಂದುಕೊಂಡ ಸಮಯದಲ್ಲಿ ಆಗುವುದಿಲ್ಲ. ಹೀಗಾಗಿ ಎಲ್ಲ ಸಮಯದಲ್ಲಿಯೂ ಸಿದ್ಧವಾಗಿ ಇರಿ.

ದೈಹಿಕ ಬೆಳವಣಿಗೆ

ಈಗ ನಿಮ್ಮ ತೂಕ ಶೀಘ್ರವಾಗಿ ಏರಲು ಆರಂಭಿಸಬಹುದು ಮತ್ತು ಇದು ನಿಮ್ಮ ಗಮನಕ್ಕೂ ಬರಲಿದೆ. ಸಡಿಲವಾದ, ಆರಾಮದಾಯಕವಾದ ಉಡುಪುಗಳನ್ನು ಧರಿಸಿ ಮತ್ತು ಸೂಕ್ತ, ಅನುಕೂಲಕರವಾದ ಪಾದರಕ್ಷೆಗಳನ್ನು ಹಾಕಿಕೊಳ್ಳಿ.

ಭಾವನಾತ್ಮಕ ಬೆಳವಣಿಗೆ

ಎರಡನೇ ತ್ರೈಮಾಸಿಕ ಮುಗಿಯುತ್ತಿದ್ದಂತೇ ನಿಮಗೆ ಆತಂಕ ಶುರುವಾಗಲು ಆರಂಭವಾಗಬಹುದು.  ಎಕೆಂದರೆ ಜನನ ಸಮಯವು ಹತ್ತಿರವಾಗುತ್ತಿರುವುದರಿಂದ ನಿಮಗೆ ಒಂದು ರೀತಿಯ ಕಳವಳ ಮತ್ತು ಆತಂಕ ಶುರುವಾಗಬಹುದು.

ಈಗಿನಿಂದ ನಿಮಗೆ ನಗರದ ಹೊರಗಡೆ ಪ್ರಯಾಣ ಬೆಳೆಸಲು ನಿಮ್ಮನ್ನು  ನಿಮ್ಮ ಮಗುವಿನ ಸುರಕ್ಷಿತ ದೃಷ್ಟಿಯಿಂದ ನಿರ್ಭಂದಿಸಲಾಗುತ್ತದೆ. ಆದಾಗ್ಯೂ ಸಹ ನೀವು ನಗರ ಒಳಗಡೆ ಸುರಕ್ಷಿತವಾಗಿ  ಓಡಾಡಬಹುದು. ನಿಮಗೆ ಬೇಕಾದನ್ನು ಮಾಡಬಹುದು.

ರೆಡ್ ಫ್ಲಾಗ್ಸ್

ನಿಮ್ಮ ತೂಕವು ಪ್ರತಿ ತಿಂಗಳು  ಒಂದುವರೆ ಕಲೋಗಿಂತ ಹೆಚ್ಚಾಗುತ್ತಿದ್ದರೇ ಗಮನಿಸಿ. ಇದು ಗರ್ಭಧಾರಣೆಯ ಮಧುಮೇಹ ಅಥವಾ ದ್ರವ ಧಾರಣದ ಸಂಕೇತವಾಗಿದೆ. ಗರ್ಭಾವಸ್ಥೆಯಲ್ಲಿ ಹೆಚ್ಚು ತೂಕ ಪಡೆಯುವುದು ಸಹ ಹೆರಿಗೆಯನ್ನು  ಕಷ್ಟಕರವಾಗಿಸುತ್ತದೆ. ಹೆಚ್ಚುವರಿ ತೂಕದ ಮಗುವನ್ನು ಹಡೆಯುವುದು ತುಂಬಾ ಕಷ್ಟವಾಗುತ್ತದೆ.

ಹಳೆಯ ಹೆಂಡತಿಯರ ಕಥೆಗಳು

ಮಗುವಿನ ಲಿಂಗತ್ವ ನಿರ್ಧಾರದ  ಕುರಿತು ಇನ್ನೊಂದು ಜನಪ್ರಿಯವಾದ ಕಲ್ಪನೆಯೊಂದಿದೆ. ಅದೆನೇಂದರೇ ನಿರೀಕ್ಷೆಯಲ್ಲಿರುವ ತಾಯಂದಿರು ಬ್ರೆಡ್ಡಿನ ಅಂಚನ್ನು ತಿನ್ನಲು ಇಷ್ಟಪಟ್ಟರೇ, ಅವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆಂದು, ಅಥವಾ ಬ್ರೆಡ್ಡಿನ ಮಧ್ಯ ಭಾಗವನ್ನು ತಿನ್ನಲು ಇಷ್ಟ ಪಟ್ಟರೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಹೇಳಲಾಗುತ್ತದೆ.

ಇಂತಹ ಸುಳ್ಳಿನ ಕಂತೆಗಳನ್ನು ನಂಬಬೇಡಿ ಮತ್ತು ಓದಬೇಡಿ. ಇವೆಲ್ಲವೂ ಕೇವಲ ತಮಾಷೆ  ಎಂದು ತಿಳಿಯಿರಿ.

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.