• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 28 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 28 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 28 ನೇ ವಾರ

14 May 2019 | 1 min Read

Sonali Shivlani

Author | 213 Articles

28 ನೇ ವಾರಕ್ಕೆ ನೀವು ಕಾಲಿಟ್ಟಿದ್ದೀರಾ. ನಿಮ್ಮ ಮಗು ಈಗ ಸಂಪೂರ್ಣ ಸಿದ್ಧಗೊಂಡಿದೆ.  ಈಗ ಕೇವಲ ಮಗುವಿನ ಶ್ವಾಸಕೋಶ ಬಲಿಯಬೇಕು ಮತ್ತು ಚರ್ಮದ ಕೆಳಗೆ ಇನ್ನೂ ಸ್ವಲ್ಪ ಕೊಬ್ಬಿನ ಪದರಗಳು ಶೇಖರಗೊಳ್ಳಬೇಕು. ಈಗ ನಿಮ್ಮ ಮಗುವಿನ ಉದ್ದ 38 ಸೆಂ ಮೀ, ತೂಕ 900 ಗ್ರಾಂಗಳಷ್ಟಿದೆ.

ಚಿಹ್ನೆಗಳು ಮತ್ತು ಲಕ್ಷಣಗಳು

ವಾರದಿಂದ ವಾರಕ್ಕೆ ನಿಮ್ಮ ಗರ್ಭವು ವೃದ್ಧಿಯಾಗುತ್ತಿದೆ. ನಿಮ್ಮ ಮಗು ಹೆಚ್ಚು ಕ್ರಿಯಾಶಾಲಿಯಾಗಿ ಕಿಕ್  ಮಾಡಲು ಆರಂಭಿಸಿದೆ. ಹೀಗಾಗಿ ನೀವು ಒಳ್ಳೆಯ ನಿದ್ದೆಯನ್ನು ಪಡೆಯುವುದು ಕಷ್ಟವಾಗಬಹುದು.

ಈ ಸಮಯದಲ್ಲಿ ನಿಮಗೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸುವುದು ಸಹಜ. ನೀವು ಪದೇ ಪದೇ ಬಾತರೂಮಿಗೆ ಹೋಗಬೇಕಾಗಿ ಬರಬಹುದು.

ನಿಮ್ಮ ಸ್ತನಗಳು ಈಗ ಕೊಲೊಸ್ಟ್ರಮ್ ಎಂಬ ಬಿಳಿ ಪದಾರ್ಥವನ್ನು ಸೋರಿಕೆ ಮಾಡಲು ಆರಂಭಿಸಿರಬಹುದು. ಆದಾಗ್ಯೂ ಕೋಲೊಸ್ಟ್ರಮ್  ಇರುವಿಕೆ ಅಥವಾ ಇಲ್ಲದಿರುವಿಕೆಯು ನೀವು ಹೆರಿಗೆಯ ನಂತರ ಉತ್ಪಾದಿಸುವ ಎದೆಹಾಲಿನ ಪ್ರಮಾಣವನ್ನು ಸೂಚಿಸುವುದಿಲ್ಲ.

ಇನ್ನು ಮುಂದೆ ಈ ವಾರದ ನಂತರ ನೀವು ಪ್ರತಿ ಎರಡು ವಾರಗಳಿಗೊಮ್ಮೆ ವೈದ್ಯರನ್ನು ಭೇಟಿ ಆಗಲಿದ್ದೀರಿ.  ಹೆಚ್ಚಿನ ಆಸ್ಪತ್ರೆಗಳು ಜನನದ ಸಮಯದಲ್ಲಿ ಅಡ್ಡ ಸೋಂಕು ತಡೆಯಲು HIV ಮತ್ತು ಹೆಪಟೈಟಿಸ್ ನಂತಹ ರೋಗಗಳಿಗೆ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ನಿಮಗೆ ಸಲಹೆ ನೀಡುತ್ತವೆ.

ನಿಮ್ಮ ರಕ್ತದ ಗುಂಪು Rh ಋಣಾತ್ಮಕವಾಗಿದ್ದರೆ, ನಿಮ್ಮ ವೈದ್ಯರು ಆಂಟಿಬಾಡಿ  ಚೆಕ್ ಅನ್ನು ಶಿಫಾರಸು ಮಾಡಬಹುದು ಮತ್ತು ನೀವು Rh ಇಮ್ಯುನೊಗ್ಲಾಬ್ಯುಲಿನ್ ಚುಚ್ಚುಮದ್ದು ಪಡೆಯಬಹುದು. ಇದು ನಿಮ್ಮ ದೇಹವನ್ನು ನಿಮ್ಮ ಮಗುವಿನ ರಕ್ತದ ಮೇಲೆ ದಾಳಿ ಮಾಡುವಂತಹ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಗಟ್ಟುವುದು.

ನಿಮ್ಮ ಮಗುವಿನ ಜನನ ಸಮಯದಲ್ಲಿ ಪರೀಕ್ಷೆ ಮಾಡಲಾಗುವುದು ಆಗ  Rh ಧನಾತ್ಮಕವಾಗಿದ್ದರೆ ಹೆರಿಗೆಯ ನಂತರ Rh ಇಮ್ಯುನೊಗ್ಲಾಬ್ಯುಲಿನ್ ಮತ್ತೊಂದು ಶಾಟ್ ಬೇಕು.

ದೈಹಿಕ ಬದಲಾವಣೆಗಳು

ನೀವು ಕಠಿಣವಾದ ವ್ಯಾಯಾಮವನ್ನು ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದರೇ, ಪ್ರಸವ ಪೂರ್ವ ಯೋಗವನ್ನು ಪ್ರಯತ್ನಿಸಿ. ಇದು ಮೃದು ಕೀಲುಗಳಿಗೆ ಉತ್ತಮ ಪರಿಣಾಮಕಾರಿ ಆಗಿದೆ.   ಯೋಗ್ಯ ಶಿಕ್ಷಕನೊಬ್ಬನು ನೀವು ಯಾವ ತ್ರೈಮಾಸಿಕದಲ್ಲಿ ಇದ್ದೀರಿ ಎಂದು ತಿಳಿದುಕೊಂಡು ಉತ್ತಮ ಯೋಗಾಸನಗಳನ್ನು ಸೂಚಿಸಬಹುದು.

ಭಾವನಾತ್ಮಕ ಬದಲಾವಣಿಗಳು

ವಿವಿಧ ರೀತಿಯ ಕನಸುಗಳ ಬೀಳುವಿಕೆಯು ಮುಂದುವರೆಯಬಹುದು. ಅದರಲ್ಲಿ ಕೆಲವು ಹೆಚ್ಚು ಭಯದಿಂದ ಕೂಡಿರಬಹುದು. ಚಿಂತೆ ಬೇಡ. ನಿಮ್ಮ ದೇಹವು ಮುಂದೆ ಬರುವ ಬದಲಾವಣಿಗಳಿಗೆ ಸಿದ್ಧಗೊಳ್ಳುತ್ತಿದೆ.  ಪ್ರತಿ ಕೆಲವು ದಿನಗಳವರೆಗೆ ಪ್ರಸವಪೂರ್ವ ಮಸಾಜ್ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದು ನಿಮಗೆ ವಿಶ್ರಾಂತಿ ಮತ್ತು ನಿದ್ದೆ ಮಾಡಲು ಸಹಾಯ ಮಾಡುತ್ತದೆ.

ರೆಡ್ ಫ್ಲಾಗ್ಸ್

ನಿಮ್ಮ ಮುಖ, ಕೈ, ಕಾಲು ಮುಂತಾದವುಗಳ ಕಡೆ ನಿರಂತರ ಊತವನ್ನು ಗಮನಿಸಿದರೇ ಅಥವಾ ಅಧಿಕ ರಕ್ತದೊತ್ತಡವನ್ನು ಗಮನಿಸಿದರೇ ತಕ್ಷಣವೇ ನಿಮ್ಮ ವೈದ್ಯರಿಗೆ ವರದಿ ನೀಡಿ.  ಇದು ಪ್ರಿಕ್ಲಾಂಪ್ಸಿಯದ ಮುಂಚಿನ ಎಚ್ಚರಿಕೆಯ ಚಿಹ್ನೆಯಾಗಿರಬಹುದು, ಇದು ಅನೇಕ ಅಂಗಗಳ ಮೇಲೆ ಪರಿಣಾಮ ಬೀರುವ ಅಪಾಯಕಾರಿ ಸ್ಥಿತಿಯಾಗಿದೆ. ಪ್ರೆಕ್ಲಾಂಪ್ಸಿಯವು ಪ್ಲೆಸೆಂಟಾ  ಅಸ್ವಸ್ಥತೆಗೆ ಕಾರಣವಾಗಬಹುದು, ಇದರಿಂದ ಮಗುವನ್ನು ಕಳೆದುಕೊಳ್ಳುವ ಸಂಭವ ಇರುತ್ತದೆ. ಸುಮಾರು 5 ಪ್ರತಿಶತ ಗರ್ಭಿಣಿ ಮಹಿಳೆಯರು ಪ್ರಿಕ್ಲಾಂಪ್ಸಿಯದಿಂದ ಬಳಲುತ್ತಾರೆ.

ಹಳೆಯ ಹೆಂಡತಿಯರ ಕಥೆಗಳು

ನೀವು ಮಲಗಿದಾಗ ಇನ್ನೊಂದು ಬದಿಗೆ ಹೊರಳುವ ಮೊದಲು  ಕುಳಿತುಕೊಂಡು ನಂತರ ಇನ್ನೊಂದು ಬದಿಗೆ ಹೊರಳಬೇಕು. ಮಲಗಿದಲ್ಲಿಯೇ ಇನ್ನೊಂದು ಬದಿಗೆ ಹೊರಳುವುದರಿಂದ ಮಗುವಿನ ಕುತ್ತಿಗೆ ಹೊಕ್ಕಳು ಬಳಿಯಲ್ಲಿ ಸುತ್ತಿಕೊಳ್ಳುತ್ತದೆ ಎಂಬ ಜನಪ್ರಿಯ ಕಲ್ಪನೆ ಇದೆ.

ಈ ಕಲ್ಪನೆ ಖಂಡಿತವಾಗಿ ಸುಳ್ಳು. ನೀವು ಮಲಗಿದಾಗಲೂ ಸಹ ಇನ್ನೊಂದು  ಬದಿಗೆ ಆರಾಮವಾಗಿ ಹೊರಳಬಹುದು. ನೀವು ಮಲಗಿದಾಗ ಪ್ರತಿ ಸಾರಿ ಕುಳಿತು ಹೇಗೆ ಇನ್ನೊಂದು ಬದಿಗೆ ಹೊರಳುವಿರಿ? ಇದು ಅಸಾಧ್ಯ.

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.