• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 29 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 29 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 29 ನೇ ವಾರ

14 May 2019 | 1 min Read

Sonali Shivlani

Author | 213 Articles

ನೀವು ಈಗ 29 ನೇ ವಾರದಲ್ಲಿದ್ದೀರಾ. ನೀವು ಈಗ ಹೆಚ್ಚು ಪ್ರೊಟೀನ್, ಕಬ್ಬಿಣ ಮತ್ತು ಕ್ಯಾಲ್ಸಿಯಂಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ನಿಮ್ಮ ಮಗುವಿನ ಅಗತ್ಯತೆಗಳು ಈಗ ಹೆಚ್ಚಾಗಿವೆ.  ಈ ಸಮಯದಲ್ಲಿ ನಿಮ್ಮ ಮಗುವು ವಾರದಿಂದ ವಾರಕ್ಕೆ ಹೆಚ್ಚು ಬೆಳೆಯುತ್ತಾ ಹೋಗುವುದರಿಂದ ಅದಕ್ಕೆ ಕಬ್ಬಿಣವೂ ಹೆಚ್ಚು ಅವಶ್ಯಕವಾಗಿದೆ. ಅದರ ಮೆದುಳಿನ ಬೆಳವಣಿಗೆಗೆ ಪ್ರೋಟಿನ್ ಮತ್ತು ಮೂಳೆಗಳ ಬೆಳವಣಿಗೆಗೆ ಮತ್ತು ಗಡಸುತನಕ್ಕೆ ಕ್ಯಾಲ್ಸಿಯಂ ಮುಖ್ಯವಾಗಿ ಬೇಕಾಗಿದೆ. ಈಗ ನಿಮ್ಮ ಮಗುವು 15 ಇಂಚುಗಳಷ್ಟು ಇದೆ. ಅದರ ತೂಕ ಈಗ 1200 ಗ್ರಾಮ್

 

ನಿಮ್ಮ ಬೆನ್ನಿನ ಮೇಲೆ  ಮಲಗಿರುವಾಗ ನಿಮ್ಮ ಮಗು ತುಂಬಾ ಸಕ್ರಿಯವಾಗಿದೆ ಅಥವಾ ತುಂಬಾ ಶಾಂತವಾಗಿರುವುದನ್ನು  ನೀವು ಕಾಣಬಹುದು. ನಿಮ್ಮ ಬೆನ್ನಿನ ಮೇಲೆ ಮಲಗಿರುವಾಗ ಆಮ್ಲಜನಕದ ಸರಬರಾಜು ಸಂಕುಚಿತಗೊಳ್ಳುವುದರಿಂದ, ತನಗೆ ಹೆಚ್ಚು  ಆಮ್ಲಜನಕ ಅಗತ್ಯವಿದೆಯೆಂದು ನಿಮ್ಮ ಮಗು ಈ ಮೂಲಕ ಹೇಳುತ್ತದೆ. ಎರಡೂ ಬದಿಗೆ ತಿರುಗಿ ಮಲಗಬಹುದು. ನಿಮಗೆ ಆರಾಮದಾಯಕವಾಗುವಂತೆ  ಅನೇಕ ದಿಂಬುಗಳನ್ನು ಬಳಸಿಕೊಳ್ಳಿ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ನಿಮ್ಮ ಗರ್ಭಾಶಯವು ಈಗ ಎಲ್ಲಾ ಕಿಬ್ಬೊಟ್ಟೆಯ ಕುಳಿಯನ್ನು ಆಕ್ರಮಿಸಿಕೊಳ್ಳುತ್ತದೆ. ಇದರ ಅರ್ಥ ನಿಮ್ಮ ಆಂತರಿಕ ಅಂಗಗಳಿಗೆ   ನಿಮ್ಮ ಅಭಿವೃದ್ಧಿಶೀಲ ಮಗುವಿಗೆ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದು ಧ್ವನಿಫಲಕ, ಹೊಟ್ಟೆ ಮತ್ತು ಕರುಳಿನ ಮೇಲೆ ಬಹಳಷ್ಟು ಒತ್ತಡವನ್ನು ಉಂಟುಮಾಡುತ್ತದೆ.

 

ಪರಿಣಾಮವಾಗಿ, ಪಕ್ಕೆಲುಬುಗಳಲ್ಲಿ ನೋವು, ಉಸಿರುಗಟ್ಟುವಿಕೆ, ಆಮ್ಲತೆ ಮತ್ತು ಹಸಿವಿನ ನಷ್ಟ ಮುಂತಾದ ಸಮಸ್ಯೆಗಳಿಂದ  ನೀವು ಸಾಕಷ್ಟು ಒತ್ತಡವನ್ನು ಅನುಭವಿಸಬಹುದು. ಹಾರ್ಮೋನ್ ಪ್ರೊಜೆಸ್ಟರಾನ್ ನಿಮ್ಮ ಕರುಳಿನಲ್ಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಇದರಿಂದ ನಿಮಗೆ ಮಲಬದ್ಧತೆ ಉಂಟಾಗಿ ನಿಮಗೆ ಶೌಚ ಮಾಡಲು ಕಷ್ಟವಾಗಬಹುದು. ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ. ಇದು ನಿಮಗೆ ಪೈಲ್ ಅಥವಾ ಸಂಕೋಚನಗಳನ್ನು ಉಂಟು ಮಾಡಬಹುದು ಎಂಬುದನ್ನು ನೆನೆಪಿನಲ್ಲಿಡಿ.

 

ಹೆರಿಗೆಯ ಸಮಯಕ್ಕೆ ಬೇಕಾದ ಎಲ್ಲ ವಸ್ತುಗಳು ಇರುವ ಬ್ಯಾಗ್‍ನ್ನು ಸಿದ್ಧಪಡಿಸಿಕೊಳ್ಳುವ ಕುರಿತು ಈಗಲೇ ಯೋಚಿಸಿ.  ನಿಮ್ಮ ಆಸ್ಪತ್ರೆಗೆ ಭೇಟಿ ನೀಡಿ. ಅಗತ್ಯ ಇರುವ ವಸ್ತುಗಳ ಪಟ್ಟಿಯನ್ನು ಪಡೆಯಿರಿ. ನರ್ಸಿಂಗ್ ಬ್ರಾಸ್ ಮತ್ತು ಮೆಟರ್ನಿಟಿ ಸ್ಯಾನಿಟರಿ  ಪ್ಯಾಡ್‍ಗಳಂತಹ ಕೆಲವು ವಸ್ತುಗಳು ಅತ್ಯಗತ್ಯವಾಗಿರುತ್ತದೆ.

 

ದೈಹಿಕ ಬೆಳವಣಿಗೆ

 

ನಿಮ್ಮ ಕಾಲುಗಳ ಕುರಿತು ನಿಮಗೆ  ವಿಚಿತ್ರವಾದ ಭಾವನೆ ಮೂಡಲು ಆರಂಭವಾದಲ್ಲಿ  ನಿಧಾನವಾಗಿ ಆದರೆ ಖಚಿತವಾಗಿ ನಡೆಯುವ ಕ್ರಮಗಳನ್ನು  ಅನುಸರಿಸಿ. ನಿಮ್ಮ ಗರ್ಭಧಾರಣೆಯ ಮುಂದುವರೆದಂತೆ, ನಿಮ್ಮ ನಡಿಗೆಯ ಕುರಿತು  ಮುಜುಗರ ಹೆಚ್ಚಾಗಬಹುದು. ಇದು ಸ್ವಾಭಾವಿಕವಾಗಿರುವುದರಿಂದ ಮುಜುಗರಕ್ಕೀಡಾಗುವ ಅಗತ್ಯವಿಲ್ಲ.

 

ಭಾವನಾತ್ಮಕ ಬದಲಾವಣೆಗಳು

 

ನೀವು ಉದ್ಯೋಗ  ಮಾಡುತ್ತಿರುವ ತಾಯಿ ಇದ್ದರೆ ನೀಮಗೆ  ಬಹುಶಃ ಮಾತೃತ್ವ ರಜೆ ತೆಗೆದುಕೊಳ್ಳುವ ಕುರಿತು  ಕೆಟ್ಟ ಭಾವನೆ ಇರಬಹುದು. ಗರ್ಭಿಣಿಯಾಗಿರುವ ಅಮ್ಮಂದಿರಿಗೆ  ಸಾಮಾನ್ಯವಾಗಿ ಹೆಚ್ಚುವರಿ ಪ್ರೊಜೆಕ್ಟಗಳನ್ನು ಮತ್ತು ಪದೋನ್ನತಿಗಳನ್ನು  ನೀಡಲಾಗುವುದಿಲ್ಲ ಅಥವಾ ಸಾಮಾನ್ಯವಾಗಿ ಮುಖ್ಯ ಯೋಜನೆಗಳನ್ನು ನೀಡಲಾಗುವುದಿಲ್ಲ. ಏಕೆಂದರೆ ಗರ್ಭಿಣಿಯರು ತಮ್ಮ ಕೆಲಸಕ್ಕೆ ನ್ಯಾಯವನ್ನು ಒದಗಿಸುವುದಿಲ್ಲ ಎಂಬುದು ಅವರ ಭಾವನೆ ಆಗಿದೆ.

 

ಇದು ನಿಮ್ಮ ವೃತ್ತಿಜೀವನಕ್ಕೆ ತಾತ್ಕಾಲಿಕ ಸ್ಪೀಡ್ ಬ್ರೇಕರ್  ಆಗಿರಬಹುದು. ಮತ್ತು ನೀವು ಖಿನ್ನತೆಯನ್ನು ಅನುಭವಿಸಬಹುದು (ಗರ್ಭಾವಸ್ಥೆಯ ಹಾರ್ಮೋನುಗಳ ಮತ್ತೊಂದು ಅಡ್ಡ ಪರಿಣಾಮ ಇದಾಗಿದೆ). ನಿಮ್ಮ ಕೆಲಸವು  ಅಸುರಕ್ಷಿತವಾಗಿದೆ ನೀವು ಭಾವಿಸಿದರೆ, ನಿಮ್ಮ ಮೇಲ್ವಿಚಾರಕರೊಂದಿಗೆ ಈ ಕುರಿತು ಮಾತನಾಡಿ. ನಿಮ್ಮ ಜವಾಬ್ದಾರಿ ಮತ್ತು ಕೆಲಸದ ಸ್ಥಳ ಮತ್ತು ಸುಗಮತೆಯ ಕುರಿತು ಖಚಿತಪಡಿಸಿಕೊಳ್ಳಿ.

 

ರೆಡ್ ಫ್ಲಾಗ್ಸ್

 

ನೀವು ಸರಿಯಾದ ಪೂರಕಗಳನ್ನು ಮತ್ತು ಪೋಷಕಾಂಶಭರಿತ ಆಹಾರವನ್ನು ಸೇವಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೇ ನಿಮ್ಮ ಮಗು ನಿಮ್ಮ ದೇಹದ ನಿಕ್ಷೇಪಗಳಿಂದರೇ ತನಗೆ ಬೇಕಾದ ಶಕ್ತಿ ಮತ್ತು ಆಹಾರವನ್ನು ಎಳೆದುಕೊಳ್ಳುತ್ತದೆ.

 

ಈ ವಾರದಿಂದ ನಿಮ್ಮ ಮಗುವಿನ ಕಿಕ್‍ಗಳ  ಸಂಖ್ಯೆಯನ್ನು ಎಣಿಸಲು ಮರೆಯಬೇಡಿ. ಈ ವಾರದಿಂದ   ಭ್ರೂಣದ ಒದೆತಗಳನ್ನು ಪ್ರತಿದಿನ ಎರಡು ಬಾರಿ ಎಣಿಸಬೇಕು ಎಂದು ಸೂಚಿಸಲಾಗಿದೆ. ನೀವು ಊಹಿಸಿದಂತೆ ನಿಮ್ಮ ಮಗು ಒದೆಯುತ್ತಿಲ್ಲವೆಂದರೇ ಆತಂಕಕ್ಕೆ ಒಳಗಾಗಬೇಡಿ. ಒಂದು ಸಿಹಿಯಾದ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಕುಡಿದು, ಸ್ವಲ್ಪ ಕಾಲ ಮಲಗಿರಿ. ಈಗ ನಿಮ್ಮ ಮಗುವಿನ ಕಿಕ್ ಪಟ್ಟುಗಳು.

 

ಸಾಕಷ್ಟು ಆಳವಾದ ಉಸಿರಾಟವನ್ನು ಅಭ್ಯಾಸ ಮಾಡುವುದು ಮತ್ತೊಂದು ಟ್ರಿಕ್ ಆಗಿದೆ. ಇದು ಅವರ ಆಳವಾದ ನಿದ್ರಾಸ್ಥಿತಿಯಿಂದ ಅವರನ್ನು ಮೇಲೆ ಏಳಿಸುತ್ತದೆ. ಈ ರೀತಿಯ ಟ್ರಿಕ್ ಪದೇ ಪದೇ ಉಪಯೋಗಿಸಿದ ನಂತರವೂ ನಿಮ್ಮ ಮಗು ಯಾವುದೇ ಚಲನ ವಲನಗಳನ್ನು ಆರಂಭಿಸಿಲ್ಲವೆಂದರೇ ನಿಮ್ಮ ವೈದ್ಯರ ಬಳಿ ತಪಾಸಣೆಗೆ ತೆರಳಿ.

 

ಹಳೆಯ ಹೆಂಡತಿಯರ  ಕಥೆಗಳು

 

ಇಲ್ಲಿ ನಿಮಗೆ ಇನ್ನೊಂದು ತಮಾಷೆಯ ಕಲ್ಪನೆಯನ್ನು ಹೇಳುತ್ತೇವೆ. ಕೇಳಿ. ಕೆಲವು ಸಂಪ್ರದಾಯಗಳಲ್ಲಿ ಸೀಮಂತ ಸಂಭ್ರಮದ ಸಮಯದಲ್ಲಿ ನಿರೀಕ್ಷೆಯಲ್ಲಿರುವ ತಾಯಂದಿರ ಎದುರಿಗೆ ಸಿಹಿ ಪದಾರ್ಥಗಳನ್ನು ಇಟ್ಟು ಯಾವುದಾದರೂ ಒಂದನ್ನು ಆಯ್ಕೆ ಮಾಡುವಂತೆ ಹೇಳಲಾಗುತ್ತದೆ. ಅವರು ಪೇಡೆಯನ್ನು ಆಯ್ಕೆ ಮಾಡಿಕೊಂಡರೇ ಅವರಿಗೆ ಗಂಡು ಮಗು ಆಗುತ್ತದೆ ಎಂದು, ಜೀಲೆಬಿ ಅಥವಾ ಬರ್ಫಿಯನ್ನು ಆಯ್ಕೆ ಮಾಡಿಕೊಂಡರೇ ಹೆಣ್ಣು  ಮಗು ಆಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಸಂಪೂಣವಾಗಿ ಸುಳ್ಳು. ಇದರಿಂದ ಮಗುವಿನ ಲಿಂಗತ್ವದ ನಿರ್ಧಾರ ಸಾಧ್ಯವಿಲ್ಲ. ಇದೊಂದು ತಮಾಷೆಯ ಆಟ ಎಂದು  ನಿಮ್ಮ ಸಹಿತವಾಗಿ ಎಲ್ಲರೂ ತಿಳಿದುಕೊಳ್ಳಬೇಕು.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.