• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 30 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 30 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 30 ನೇ ವಾರ

14 May 2019 | 1 min Read

Sonali Shivlani

Author | 213 Articles

ನೀವು ಈಗ ಗರ್ಭಾವಸ್ಥೆಯ 30 ನೇ ವಾರದಲ್ಲಿದ್ದೀರಿ. ನಿಮ್ಮ ಮಗು 16  ಇಂಚು ಉದ್ದ ಮತ್ತು 1 ಕೀಲೊ ಗ್ರಾಂಗಳಷ್ಟಿದೆ. ಆಮ್ನಿಯೋಟಿಕ್ ದ್ರವದ ಮಟ್ಟಗಳು ಈಗಲೂ ಕೂಡಾ ಸಾಕಾಗುತ್ತದೆ ಆದರೆ ಇದು ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ  ಕಡಿಮೆಯಾಗುತ್ತದೆ. ಈ ದ್ರವವು ಮುಖ್ಯವಾದುದು ಏಕೆಂದರೆ ಅದು ನಿಮ್ಮ ಚಿಕ್ಕಮಗುವನ್ನು ಎಳೆತಗಳಿಂದ ಮತ್ತು ಇತರ ಗಾಯಗಳಿಂದ ಮೆತ್ತಿಸುತ್ತದೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ನೀವು ಈ ವಾರದಿಂದ   ರಾತ್ರಿಯ ಮಧ್ಯದಲ್ಲಿ  ಕಾಲಿನ ಮಧ್ಯ ಭಾಗದಲ್ಲಿ ನೋವು ಅನುಭವಿಸಬಹುದು.  ಇದು ಬಹಳ ಸಾಮಾನ್ಯವಾಗಿದೆ. ಇದು ಬೆಳೆಯುತ್ತಿರುವ ಹೊಟ್ಟೆ ಮತ್ತು ದಪ್ಪವಾಗುವ  ರಕ್ತದಿಂದಾಗಿ ಉಂಟಾದ ರಕ್ತ ಪರಿಚಲನೆ ಕೊರತೆಯ ಪರಿಣಾಮವಾಗಿದೆ.

 

ಉಸಿರುಗಟ್ಟಿಸುವುದು, ಹಸಿವಿನ ನಷ್ಟ ಮತ್ತು ಪಕ್ಕೆಲುಬುಗಳಲ್ಲಿ ನೋವು ಇವೆಲ್ಲವೂ ಸಾಮಾನ್ಯ ಸಮಸ್ಯೆಗಳಾಗಿವೆ. ಏಕೆಂದರೇ  ನಿಮ್ಮ ಗರ್ಭಾಶಯವು ಹೊಟ್ಟೆಯ ಮೇಲೆ ಒತ್ತಡವನ್ನು ಹೇರುತ್ತಿದೆ. ಸಾಕಷ್ಟು ಪ್ರಮಾಣದ ದ್ರವ ಪದಾರ್ಥಗಳು ಮತ್ತು ಪಾನೀಯಗಳನ್ನು ಸೇವಿಸುವುದರ  ಮೂಲಕ ನೀವು ಇದನ್ನು ಸರಿಪಡಿಸಿಕೊಳ್ಳಬಹುದು.

 

ನಿಮ್ಮ ಗರ್ಭವು ಈಗ ವಾರದಿಂದ ವಾರಕ್ಕೆ ಹೆಚ್ಚು ಪ್ರಗತಿಯನ್ನು ಹೊಂದುತ್ತಿದೆ. ಈಗ ನೀವು ನಿಮ್ಮ ಪ್ರಸವಪೂರ್ವ  ಕೆಜೆಲ್ಸ್ ವ್ಯಾಯಾಮಗಳಲ್ಲಿ ನಿಮ್ಮ ಗಮನವನ್ನು ಹರಿಸಿ. ಮೂತ್ರದ ಅಸಂಯಮವನ್ನು ತಡೆಯಲು ಈ ವ್ಯಾಯಾಮಗಳು ನಿಮಗೆ ಸಹಾಯ ಮಾಡುತ್ತದೆ, ವಿಶೇಷವಾಗಿ ಗರ್ಭಾಶಯವು ಬೆಳೆದು ಬ್ಲಾಡರ್  ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಕೆಜೆಲ್ಸ್ ನಿಮಗೆ ಯೋನಿ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತವೆ ಮತ್ತು ಪ್ರಸವ ವೇದನೆಯ ಎರಡನೇ ಹಂತವನ್ನು ಸುಲಭ ಮಾಡುತ್ತದೆ, ಇದು ತಳ್ಳುವ ಹಂತವಾಗಿದೆ.

 

ದೈಹಿಕ ಬೆಳವಣಿಗೆ

 

ನಿಮ್ಮ ಬೆಳೆಯುತ್ತಿರುವ ಹೊಟ್ಟೆಯಿಂದಾಗಿ ನೀವು ಈಗ ನೀವು ಆಂತರಿಕ ಮತ್ತು ಬಾಹ್ಯವಾಗಿ ಹೆಚ್ಚು ದಪ್ಪವಾದಂತೆ ನಿಮಗೆ ಅನಿಸಬಹುದು. ಏಕೆಂದರೇ ನಿಮ್ಮ ಮುದ್ದಿನ ಕಂದಮ್ಮ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.  ನಿಮ್ಮ ಕಿಬ್ಬೊಟ್ಟೆಯು ಬಹುತೇಕ ಪಕ್ಕೆಲುಬುಗಳಲ್ಲಿದೆ ಎಂದು ನಿಮಗೆ ಭಾಸವಾಗಬಹುದು. ಇದು ಆಳವಾದ ಉಸಿರಾಟವನ್ನು ಕಷ್ಟವಾಗಿಸುತ್ತದೆ.

 

ನಿಮ್ಮ ಭಾರೀ ಹೊಟ್ಟೆಯಿಂದಾಗಿ  ಈಗ ನೀವು ಕೆಲವು ಅಸ್ವಸ್ಥತೆಯನ್ನು ಅನುಭವಿಸಬಹುದು; ಉದಾಹರಣೆಗೆ, ಬದಿಗೆ ತಿರುಗಿ ಮಲಗಲು  ಸಹ ನೀವು ಸಾಕಷ್ಟು ಪ್ರಯತ್ನ ಮತ್ತು ಕಷ್ಟ ಪಡಬೇಕಾದಿತು.

 

ಇವೆಲ್ಲವನ್ನೂ ನೀವು ನಿಮ್ಮ ಮಗುವಿಗಾಗಿ ಮಾಡಬೇಕಾಗಿದೆ ಮತ್ತು ಸಹಿಸಬೇಕಾಗಿದೆ. ಹೀಗಾಗಿ ನಗುತ್ತಾ ಇರಿ. ಸಮಯದೊಂದಿಗೆ ಮುನ್ನಡೆಯಿರಿ. ಇದು ಅನಿವಾರ್ಯ.

 

ಭಾವನಾತ್ಮಕ ಬೆಳವಣಿಗೆ

 

ನಿಮ್ಮ ಪ್ರಸವಪೂರ್ವ ಆತಂಕವು ಈಗ ಹೆಚ್ಚಾಗುತ್ತದೆ, ಏಕೆಂದರೆ ನಿಮ್ಮ ಪ್ರಸವ ದಿನಾಂಕ ಹತ್ತಿರವಾಗುತ್ತಿದೆ. ಹೆಚ್ಚಿನ ಮಹಿಳೆಯರು ಈ ಕುರಿತು ಅನಗತ್ಯ ಮತ್ತು ಅವ್ಯಕ್ತ ಭಯಗಳಿಗೆ ಒಳಗಾಗುತ್ತಾರೆ.

 

ನೀವು ಇಂತಹ ಅವ್ಯಕ್ತ ಭಯಗಳಿಂದ ಹೊರಬರಲು  ಗರ್ಭಾವಸ್ಥೆ ಮತ್ತು ಮಗುವಿನ ಜನನದ ಕುರಿತು ಇರುವ  ವಿಶ್ವಾಸಾರ್ಹ ವೆಬಸೈಟಗಳನ್ನು ನೋಡಿ ಮತ್ತು ಅದಕ್ಕೆ ಸಂಬಂಧಿತ ಪುಸ್ತಕಗಳನ್ನು ಓದಿ. ನಮ್ಮ ಬೇಬಿ ಚಕ್ರವೂ ಸಹ ಇಂತಹ ವಿಷಯಗಳ ಕುರಿತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುತ್ತದೆ. ಅನುಭವಸ್ಥ ತಾಯಂದಿರೊಂದಿಗೂ ನೀವು ಈ ಕುರಿತು ಚರ್ಚಿಸಬಹುದು. ಆದರೆ ಪ್ರತಿಯೊಬ್ಬರ ಅನುಭವಗಳು ಮತ್ತು ಲಕ್ಷಣಗಳು ಭಿನ್ನ. ಹೀಗಾಗಿ ಪರಸ್ಪರ ಹೋಲಿಕೆ ಬೇಡ. ಒಟ್ಟಿನಲ್ಲಿ ಎರಡು ಜನನಗಳು ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಏನಾದರೂ ತೀವೃ ಸಂದೇಹವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.

 

ಈ ಆತಂಕವು ನಿಮಗೆ ಕಿರಿ ಕಿರಿಯನ್ನುಂಟು ಮಾಡುತ್ತದೆ. ಕೆಲವೊಮ್ಮೆ, ಈ ಮೂಡ್ ಬದಲಾವಣೆಯು ಹಾರ್ಮೋನ್ ಬದಲಾವಣೆಯಿಂದಾಗಿರಬಹುದು, ನಿಮ್ಮ ದೇಹವು ಜನನ ನೀಡಲು ಸಿದ್ಧವಾದಾಗ ಈ ರೀತಿ ಬದಲಾವಣಿಗಳು ಆಗಬಹುದು.

 

ರೆಡ್ ಫ್ಲಾಗ್ಸ್

 

ನೀವು ಈಗ ನಡೆಯುವಾಗ ಎಚ್ಚರದಿಂದಿರಿ. ನಿಮ್ಮ ಮಧ್ಯದ ಗುರುತ್ವಾಕರ್ಷಣೆಯ ಬಲವು ಶಿಫ್ಟ್ ಆಗಿ ನಿಮಗೆ ವಾಕಿಂಗ್ ಮಾಡುವಾಗ ತೊಂದರೆಯನ್ನು ಕೊಡಬಹುದು. ನೀವು ಈಗ ಆರಾಮದಾಯಕವಾದ ಶೂಗಳನ್ನು ಧರಿಸಿ. ಇದು ದೃಢವಾದ ಪಟ್ಟಿಗಳನ್ನು ಹೊಂದಿರಲಿ. ಇದು ನೀವು ಬೀಳುವ ಸಾಧ್ಯತೆಗಳನ್ನು ಬಹುತೇಕ ಕಡಿಮೆಗೊಳಿಸುತ್ತದೆ.

 

ಹಳೆಯ ಹೆಂಡತಿಯರ ಕಥೆಗಳು

 

ಎಂಟು ತಿಂಗಳಿಗೆ ಜನಿಸಿದ ಮಗು ಬದುಕುವುದಿಲ್ಲ ಎಂದು ನಿಮಗೆ ಹಲವರು  ಹೇಳಬಹುದು. ಇದನ್ನು ಕೇಳಿ ಆತಂಕಿತರಾಗಬೇಡಿ. ಏಳು ತಿಂಗಳಿನ ನಂತರ ಜನಿಸಿದ ಎಲ್ಲ ಮಕ್ಕಳು ಸಾಮಾನ್ಯವಾಗಿ ಆರೋಗ್ಯದಿಂದ ಕೂಡಿರುತ್ತಾರೆ. ಆದಾಗ್ಯೂ ಪೂರ್ಣಾವಧಿಗೆ ಜನಿಸಿದ ಮಕ್ಕಳು ಕಡಿಮೆ ಸಮಸ್ಯೆಗಳನ್ನು ಹೊಂದಿರುತ್ತಾರೆ. ಹೀಗಾಗಿ ಪೂರ್ಣಾವಧಿಯನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.