ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 31 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 31 ನೇ ವಾರ

ವಾರದಿಂದ ವಾರಕ್ಕೆ ಬೆಳೆಯುತ್ತಿರುವ ನಿಮ್ಮ ಗರ್ಭವು ನಿಮ್ಮ ಮಗು ಇನ್ನೂ ಚಿಕ್ಕವನ್ನಲ್ಲ ಎಂದು ಹೇಳುತ್ತಿದೆ. ಒಂದು  ಚಿಕ್ಕ ಕೋಶದಿಂದ ನಿಮ್ಮ ಮಗು 16 ಇಂಚು ಉದ್ದಕ್ಕೆ ಬೆಳೆದಿದೆ ಮತ್ತು 1800 ಗ್ರಾಂ ತೂಕವನ್ನು ಹೊಂದಿದೆ. ಅಂದರೆ ಒಂದು ತೆಂಗಿನಕಾಯಿಯಷ್ಟು.

 

ನಿಮ್ಮ ಮಗುವಿಗೆ ಈಗ ಗರ್ಭಾಶಯದ ಸ್ಥಳವು ಸಹ ಚಿಕ್ಕದಾಗುತ್ತದೆ. ಹೀಗಾಗಿ ಅದರ ಚಲನ ವಲನಗಳಿಗೆ ನಿರ್ಬಂಧವನ್ನು ಹೇರಿದ ಹಾಗೆ ಆಗುತ್ತದೆ. ಈಗ ಅದು  ಕಡಿಮೆ ತೀವೃತೆಯಿಂದ ಚಲಿಸುತ್ತದೆ. ಈಗ ಅದರ ಕೈ ಕಾಲುಗಳು ಕಡ್ಡಿ, ಕೋಲುಗಳಂತೆ ಕಾಣಿಸುವುದಿಲ್ಲ. ನಿಮ್ಮ ಮಗುವಿನಲ್ಲಿ ಕೊಬ್ಬು ಶೇಖರಣೆಗೊಂಡಿದೆ. ನಿಮ್ಮ ಮಗು ರಾತ್ರಿಯಲ್ಲಿ ನಿಮಗೆ ಒದೆಯುತ್ತಾ, ನಿಮ್ಮ ನಿದ್ದೆ ಕೆಡಿಸುತ್ತಾ ಇರುತ್ತದೆ. ಆದರೆ  ಬೆಳಗಿನ ಹೊತ್ತು ಆರಾಮವಾಗಿ ಮಲಗಿರುತ್ತದೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

 

ಈ ವಾರದಿಂದ ನಿಮಗೆ ಉಸಿರಾಟಗಟ್ಟುವಿಕೆ, ಹಸಿವಿನ ನಷ್ಟ, ಆಮ್ಲೀಯತೆ ಮತ್ತು ಆಗಾಗ ಮೂತ್ರ ಹೋಗುವಿಕೆ ಮುಂತಾದ ಲಕ್ಷಣಗಳು ಹೆಚ್ಚಾಗಬಹುದು. ನಿಮ್ಮ ಮಗು ವಾರದಿಂದ ವಾರಕ್ಕೆ ಹೆಚ್ಚಾಗಿ ಬೆಳೆಯುತ್ತಿರುವ ಕಾರಣದಿಂದಲೇ ಹೀಗೆ ಆಗುತ್ತಿದೆ. ಇದು ನಿಮಗೆ ಅಹಿತಕರವನ್ನುಂಟು ಮಾಡಬಹುದು.  ಆದರೆ ಇದು ಕೆಲವು ವಾರಗಳ ಕಾಲ ಮಾತ್ರ ಮುಂದುವರೆಯುತ್ತದೆ. ನಂತರ ವಿಶ್ರಾಂತಿ ಪಡೆಯಿರಿ.

 

ದೈಹಿಕ ಬೆಳವಣಿಗೆ

 

ನೀವು ಮೆಟ್ಟಿಲುಗಳನ್ನು ಏರಿದಾಗ ಅಥವಾ ನಿರಂತರವಾಗಿ ವಾಕಿಂಗ್ ಮಾಡಿದಾಗ ನಿಮಗೆ ಉಸಿರುಗಟ್ಟುವಿಕೆಯ ಭಾವನೆ ಉಂಟಾಗಬಹುದು. ಇದರಿಂದ ನೀವು ಚಿಂತಿತರಾಗಬೇಕಿಲ್ಲ. ನಿಮ್ಮ ಗರ್ಭಾಶಯವು ಶ್ವಾಸಕೋಶದ ವಿರುದ್ಧ ತಳ್ಳುವ ಕಾರಣ ಇದು ಸಂಭವಿಸುತ್ತದೆ.  ನೀವು ಆಮ್ಲಜನಕವನ್ನು ತೆಗೆದುಕೊಳ್ಳಲು ತೊಂದರೆ ಪಡುತ್ತಿದ್ದೀರಿ ಎಂದು ನಿಮಗೆ ಅನಿಸಬಹುದು. ಆದರೆ ನಿಮ್ಮ ಮಗುವಿಗೆ ಈಗ ಸಾಕಷ್ಟು ಆಮ್ಲಜನಕ ಸಿಗುತ್ತಿದೆ. ಆತಂಕ ಬೇಡ!

 

ನಿಮ್ಮ ಬ್ರಾ ಗಾತ್ರವು ಇನ್ನೂ ಹೆಚ್ಚುತ್ತಿದೆ ಮತ್ತು  ನಿಮಗೆ ಇನ್ನೂ ದೊಡ್ಡದಾದ ಬ್ರಾದ ಅವಶ್ಯಕತೆ ಬರಬಹುದು. ಆದರೆ ಹಾಲು ಕುಡಿಸುವಾಗ ಅಂಡರ್‌ವೈರ್ ಬ್ರಾ ಬಳಸಬೇಡಿ.

 

ಭಾವನಾತ್ಮಕ ಬದಲಾವಣಿಗಳು

 

ತಾಯಿಯಾಗುವ ನಿರೀಕ್ಷೆಯಲ್ಲಿರುವ ಹಲವು ಮಹಿಳೆಯರ ದೊಡ್ಡ ಭಯವೆಂದರೇ ಪ್ರಸವ ವೇದನೆ ಸಮಯದಲ್ಲಿ ಸರಿಯಾಗಿ  ಆಸ್ಪತ್ರೆಯನ್ನು ತಲುಪಲು ಆಗುವುದಿಲ್ಲ ಮತ್ತು ಕಾರಿನಲ್ಲಿಯೇ ಹೆರಿಗೆ ಆಗುತ್ತದೆ! ಎಂಬುದು. ಇದು ಕೇವಲ ಸಿನಿಮಾದಲ್ಲಿಯೇ ಸಂಭವಿಸುವಂತದ್ದು. ನಿಜ ಜೀವನದಲ್ಲಿ ಈ ರೀತಿ ಆಗುವುದು ತುಂಬಾ ಕಡಿಮೆ. ಮೊದಲ ಬಾರಿಗೆ ತಾಯಂದಿರಾಗುತ್ತಿರುವ ಮಹಿಳೆಯರಿಗೆ  12-24 ಗಂಟೆಗಳ ಕಾಲ ಪ್ರಸವ ವೇದನೆ ಇರುತ್ತದೆ. ಇದು ನಿಮಗೆ ಆಸ್ಪತ್ರೆಗೆ ತೆರಳಲು ಸಾಕಷ್ಟು ಸಮಯವನ್ನು ನೀಡುತ್ತದೆ.

 

ರೆಡ್ ಫ್ಲಾಗ್ಸ್

 

ವಾರದಿಂದ ವಾರಕ್ಕೆ ನಿಮ್ಮ ಗರ್ಭಾವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಮಗುವಿನ ಚಲನವಲನಗಳ ಕುರಿತು ಟ್ರ್ಯಾಕ್ ಇಡಿ. ಮಗು ಕ್ರಿಯಾಶಾಲಿಯಾಗಿ  ಇದ್ದ ಸಮಯದಲ್ಲಿ ಅದು ಒಂದು ಗಂಟೆಯಲ್ಲಿ 10 ಚಲನ ವಲನವನ್ನು ಹೊಂದಿರಬೇಕು. ಚಲನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯು ಅಥವಾ ಚಲನೆ ಸಂಭವಿಸುವ ಅವಧಿಯಲ್ಲಿ ಯಾವುದೇ ಬದಲಾವಣೆಯನ್ನು  ನೀವು ಗಮನಿಸಿದರೆ, ನಿಮ್ಮ ವೈದ್ಯರಿಗೆ ಈ ಕುರಿತು ನೀವು ವರದಿ ನೀಡಿ.

 

ಹಳೆಯ ಹೆಂಡತಿಯರ ಕಥೆಗಳು

 

ಶುಷ್ಕ ಪ್ರಸವ ವೇದನೆ ಎಷ್ಟು ನೋವಿನಿಂದ ಕೂಡಿರುತ್ತದೆ ಎಂಬುದರ ಕುರಿತು ನೀವು ಹಲವಾರು ಕಥೆಗಳನ್ನು ಕೇಳಿರಬಹುದು. ವಾಟರ್ ಬ್ರೇಕ್ ಅಂದರೇ ನೀರು ಹರಿದು ಹೋಗಲು ಆರಂಭವಾಗಿ, ಎಲ್ಲ ಹರಿದು ಹೋದ ನಂತರ ಮುಂದಿನ ಪ್ರಸವ ವೇದನೆಯೂ ಶುಷ್ಕವಾಗುತ್ತದೆ. ಜೊತೆಗೆ ಹೆಚ್ಚು ನೋವಿನಿಂದ ಕೂಡಿರುತ್ತದೆ ಎಂಬ ಕಂತೆಗಳನ್ನು ನೀವು ಕೇಳಿರಬಹುದು.

 

ಇದು ಸಂಪೂರ್ಣವಾಗಿ ಸುಳ್ಳು.  ಆಮ್ನಿಯೋಟಿಕ್ ದ್ರವವು ಮುರಿದಾಗ , ಮಗುವಿನ ತಲೆಯು ಪೆಲ್ವಿಕನಲ್ಲಿ  ಮುಳುಗುತ್ತದೆ ಮತ್ತು ಮೊದಲ ಗುಶ್ ನ ಬಲದೊಂದಿಗೆ ಒಂದು ಪ್ಲಗ್ ರೂಪಿಸುತ್ತದೆ. ಉಳಿದಿರುವ ಆಮ್ನಿಯೋಟಿಕ್ ದ್ರವವು ಮಗುವಿನ ಸುತ್ತ ಇರುತ್ತದೆ. ನಂತರ  ನಿಧಾನವಾಗಿ ಸೋರಿಕೆ ಮುಂದುವರಿಯುತ್ತದೆ ಆದರೆ ಈ ಸಮಯದಲ್ಲಿ ನೀವು ಸುರಕ್ಷಿತವಾಗಿ ಆಸ್ಪತ್ರೆಯನ್ನು ತಲುಪಬಹುದಾಗಿದೆ.

 

#babychakrakannada
logo

Select Language

down - arrow
Personalizing BabyChakra just for you!
This may take a moment!