ನಿಮ್ಮ ಮಗುವಿನ ಮೊದಲನೆಯ ವರ್ಷದಲ್ಲಿ ಸಂಭವಿಸಿದ ಮೈಲಿಗಲ್ಲುಗಳ ಒಂದು ಸಂಕ್ಷಿಪ್ತ ನೋಟ

cover-image
ನಿಮ್ಮ ಮಗುವಿನ ಮೊದಲನೆಯ ವರ್ಷದಲ್ಲಿ ಸಂಭವಿಸಿದ ಮೈಲಿಗಲ್ಲುಗಳ ಒಂದು ಸಂಕ್ಷಿಪ್ತ ನೋಟ

ನಿಮ್ಮ ಮಗುವಿನ ಮೊದಲನೆಯ ವರ್ಷದಲ್ಲಿ ಸಂಭವಿಸಿದ ಮೈಲಿಗಲ್ಲುಗಳ ಒಂದು ಸಂಕ್ಷಿಪ್ತ ನೋಟ

 

ಮೊದಲ ತೊದಲು ಶಬ್ದದಿಂದ ಹಿಡಿದು ಒಂದು ಸ್ಪಷ್ಟ ಶಬ್ದ ಮಾತನಾಡುವರೆಗೂ, ತೆವಳುವಿಕೆಯಿಂದ ತಾನೇ ಸ್ವತಂತ್ರವಾಗಿ ನಿಲ್ಲುವರೆಗೂ ನಿಮ್ಮ ಮಗುವು ಹಲವು ವಿವಿಧ ಹಂತಗಳನ್ನು ದಾಟಬೇಕಾಗಿದೆ. ನಿಮಗೆ ನಿಮ್ಮ  ನವಜಾತ ಮಗುವಿನ ಬೆಳವಣಿಗೆಯನ್ನು ನೋಡುವ ಸಂತೋಷಕ್ಕಿಂತ ಇನ್ನೊಂದು ಸಂತೋಷವಿಲ್ಲ. ನಿಮ್ಮ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ವೇಗವಾಗಿ ಬದಲಾವಣಿ ಆಗುತ್ತಿದೆ.

 

ನಿಮ್ಮ ಚಿಕ್ಕ ಮಗು ವಿವಿಧ ಹಂತಗಳಲ್ಲಿ ಏನನ್ನು ಹಾದು ಬರಬೇಕಾಗುತ್ತದೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ  ಎಲ್ಲಾ ಸಂಗತಿಗಳು ಇಲ್ಲಿವೆ:

 

ನಿಮ್ಮ ಮಗು ತನ್ನ ಮೊದಲ ನಾಲ್ಕು ತಿಂಗಳುಗಳಲ್ಲಿ ತುಂಬಾ ಕಡಿಮೆ ದೃಷ್ಟಿ ಶಕ್ತಿಯನ್ನು ಹೊಂದಿರುತ್ತದೆ, ವಸ್ತುಗಳ ಮೇಲೆ ಕೇಂದ್ರೀಕರಿಸಲು ಅದಕ್ಕೆ ತೊಂದರೆ ಆಗುತ್ತದೆ.  ಮತ್ತು ಮಗು ತನ್ನ ಕಣ್ಣುಗಳಿಂದ ಚಿತ್ರಗಳ ರೂಪದಲ್ಲಿ ಅವುಗಳನ್ನು ಸ್ವಲ್ಪಮಟ್ಟಿಗೆ ಗ್ರಹಿಸಬಹುದು. ಅದರ ಚರ್ಮ ತುಂಬಾ ಸೂಕ್ಷ್ಮವಾಗಿದ್ದು ಮತ್ತು ಸುಲಭವಾಗಿ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಒಳಪಡುತ್ತದೆ. ಮಗುವಿಗೆ ಆಹಾರವನ್ನು ತನ್ನ ಬಾಯಿಯ ಹಿಂದುಗಡೆ ಚಲಿಸುವಂತೆ ಮಾಡಲು ಸಹ ಸಾಧ್ಯವಿಲ್ಲ.

 

ನಾಲ್ಕು ಮತ್ತು ಎಂಟು ತಿಂಗಳುಗಳ  ನಡುವೆ ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಒಸಡುಗಳು ಕೆಂಪು ಮತ್ತು ಊದಿಕೊಳ್ಳುವಿಕೆಯಿಂದ ಕೂಡುತ್ತವೆ, ಇದರಿಂದಾಗಿ ನಿಮ್ಮ ಮಕ್ಕಳು  ಡ್ರೂಲಿಂಗ್, ಅಗಿಯುವುದು, ಕಚ್ಚುವುದು, ಮತ್ತು ವಸ್ತುಗಳನ್ನು ಬಾಯಲ್ಲಿ ಹಾಕಿಕೊಳ್ಳುವುದನ್ನು ಹೆಚ್ಚುಮಾಡುತ್ತವೆ. ಇದು ನಿಮ್ಮ ನೋವಿಗೆ ತುಂಬಾ ನೋವುದಾಯಕ ಹಂತವಾಗಿದೆ.  ಇದು ನಿಮ್ಮ ಮಗುವಿನ ಅಳುವಿಕೆಗೆ ಮತ್ತು ಅಸ್ವಸ್ಥತೆಗೆ ಸಾಕಷ್ಟು ಕಾರಣವಾಗುತ್ತದೆ. ನಿಮ್ಮ ಮಗುವಿನ ಈ ಸಂಕಟ ಶಮನಗೊಳಿಸಲು ಸುಮಧುರ ಸಂಗೀತವನ್ನು ಹಾಕಿ. ಈ ವಯಸ್ಸಿನಲ್ಲಿ ನಿಮ್ಮ ಮಗು ಯಾರು ಸಹಾಯವಿಲ್ಲದೇ ಕುಳಿತು ತನ್ನ ಎರಡು ಕೈಗಳಿಂದ ವಸ್ತುಗಳನ್ನು ಹಿಡಿಯಲು ಪ್ರಯತ್ನ ಮಾಡುತ್ತದೆ. ನಿಮ್ಮ ಮಗುವಿಗೆ ಸುಂದರವಾದ ಗೊಂಬೆಯನ್ನು ಆಟವಾಡಲು ನೀಡಿ. ಅದು ತುಂಬಾ ಚಿಕ್ಕದಾಗಿರಬಾರದು ಮತ್ತು ರಾಸಾಯನಿಕ ವಿಷಕಾರಿ ಅಂಶಗಳನ್ನು ಹೊಂದಿರಬಾರದು.

 

ಎಂಟು ಮತ್ತು ಹನ್ನೆರಡು ತಿಂಗಳುಗಳ ನಡುವಿನ ಅವಧಿಯಲ್ಲಿ, ನಿಮ್ಮ ಮಗುವಿನ ಪುಟ್ಟ ತೋಳುಗಳು  ಮತ್ತು ಕೈಗಳು ಅದರ ಪಾದ ಮತ್ತು ಕಾಲುಗಳಿಗಿಂತ ಹೆಚ್ಚು ಅಭಿವೃದ್ಧಿಯನ್ನು ಹೊಂದುತ್ತವೆ. ಅವರಿಗೆ ಈಗ ದೂರದ ವಸ್ತುಗಳನ್ನು ನೋಡಲು ಸಾಧ್ಯವಾಗುತ್ತದೆ . ಜೊತೆಗೆ ಅದನ್ನು ನಿಮಗೆ ತೋರಿಸಬಲ್ಲರು ಸಹ. ಮೇಲೆ ಹಾರುವ ಏರೋಪ್ಲೇನ್‍ನಿಂದ ಹಿಡಿದು ಪಕ್ಕದ ಮನೆಯ ನಾಯಿಯವರೆಗೂ ಅವರು ನಿಮಗೆ ತೋರಿಸಬಲ್ಲರು. ಇದು ನಿಮ್ಮ ಅನುಭವಕ್ಕೆ ಬಂದಾಗ ಆಶ್ಚರ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಗು ತನ್ನ ಕೈಗೆ ಸಿಗುವ ವಸ್ತುಗಳನ್ನು ಜೋಡಿಸುವ ಪ್ರಯತ್ನ ಮಾಡುತ್ತದೆ. ನಿಮ್ಮ ಕಂದಮ್ಮನಿಗೆ ಬಿಲ್ಡಿಂಗ್‍ ಬ್ಲಾಕಗಳನ್ನು ಒದಗಿಸಿ. ಈ ಸಮಯದಲ್ಲಿ ನಿಮ್ಮ ಮಗು ಫರ್ನಿಚರ್, ಗೋಡೆ ಅಥವಾ ಇನ್ನು ಯಾವುದೇ ಗಟ್ಟಿ ವಸ್ತುವನ್ನು ಹಿಡಿದು ನಿಲ್ಲಲ್ಲು ಪ್ರಯತ್ನಿಸುತ್ತದೆ.

 

12 ರಿಂದ 24 ತಿಂಗಳುಗಳ ನಡುವಿನ ಅವಧಿಯಲ್ಲಿ, ಪಾದಗಳನ್ನು ಅಗಲಿಸಿ, ಇನ್ನೊಬ್ಬರ  ಸಹಾಯವಿಲ್ಲದೇ ಹೇಗೆ ನಿಲ್ಲಬೇಕೆಂದು ನಿಮ್ಮ ಮಗು ಕಲಿತಿರಬೇಕು. ಈ ಸಮಯದಲ್ಲಿ ಅವರಿಗೆ ಆಟಿಕೆಗಳನ್ನು ಎಳೆಯುವುದು ಮತ್ತು ಜಗ್ಗುವುದು ಎಂದರೇ ತುಂಬಾ ಇಷ್ಟ. ಈ ಮೂಲಕ ಅವರು ನಡೆಯುವ ಹೊಚ್ಚ ಹೊಸ ಚಟುವಟಿಕೆಯನ್ನು ಅನ್ವೇಷಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ? ಚಲಿಸಬಲ್ಲ ಕಾರುಗಳು, ರೈಲು ಸೆಟ್‍ಗಳು  ಅಥವಾ  ಪ್ಲ್ಯಾಸ್ಟಿಕ್ ಪೆಟ್‍ಗಳಂತಹ ಆಟಿಕೆಗಳನ್ನು ನಿಮ್ಮ ಮಕ್ಕಳಿಗೆ  ನೀಡುವುದು ಒಳ್ಳೆಯದು.

 

#babychakrakannada
logo

Select Language

down - arrow
Personalizing BabyChakra just for you!
This may take a moment!