15 May 2019 | 1 min Read
Medically reviewed by
Author | Articles
ನಿಮ್ಮ ಮುದ್ದು ಕಂದಮ್ಮ ನಗುತ್ತಾ ನಿಮ್ಮ ಮನಸ್ಸಿಗೆ ಸಂತೋಷ ನೀಡುತ್ತಿದೆ ಅಲ್ಲವೇ? ಅದರ ಪುಟ್ಟ ಪುಟ್ಟ ಕಣ್ಣುಗಳು, ಮೂಗು, ಕಿವಿಗಳು, ಉಗುರುಗಳು, ಹಲ್ಲಗಳು ಎಲ್ಲವೂ ಸುಂದರ. ಇವುಗಳ ಆರೈಕೆ ಮಾಡುವುದು ನೀವು ಅಂದುಕೊಂಡಿದ್ದಕ್ಕಿಂತ ತುಂಬಾ ಸುಲಭ. ನಿಮ್ಮ ಮಗುವಿನ ಕಣ್ಣುಗಳು, ಕಿವಿಗಳು ಮತ್ತು ಮೂಗುಗಳನ್ನು ಸ್ವಚ್ಛಗೊಳಿಸುವುದು ಮತ್ತು ಅವನ ಉಗುರುಗಳನ್ನು ಆರೈಕೆ ಮಾಡುವುದರಿಂದ ತುಂಬಾ ಪ್ರಯೋಜನಗಳಿವೆ. ಈ ಚಿಕ್ಕ ಭಾಗಗಳೊಂದಿನ ಈ ಚಿಕ್ಕ ವಾಡಿಕೆಗಳು ನಿಮ್ಮ ಮಗುವಿನೊಂದಿಗೆ ನಿಮ್ಮ ಬಂಧವನ್ನು ನಿರ್ಮಿಸಲು ಸಹಾಯ ಮಾಡುವ ಶಕ್ತಿಯನ್ನು ಹೊಂದಿವೆ. ದಿನನಿತ್ಯದ ಸ್ಪರ್ಶವು ಮಗುವಿಗೆ ಆತ್ಮವಿಶ್ವಾಸ ಮತ್ತು ಇತರರಿಗೆ ಸಂಬಂಧಿಸಿರುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ಹಾಗೆಯೇ ಮಗುವನ್ನು ಸಂತೋಷಕರವಾಗಿಡುತ್ತದೆ, ಆರೋಗ್ಯಕರ ಬೆಳವಣಿಗೆಯನ್ನು ಬೆಳೆಸಿಕೊಳ್ಳುತ್ತದೆ.
ಕೆಲವು ಟಿಪ್ಸ್‌ಗಳು ಇಲ್ಲಿವೆ, ಇದು ನಿಮಗೆ ಸಾಕಷ್ಟು ಚಿತ್ರ ಮತ್ತು ನಿಮ್ಮ ಮಗುವನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ!
ನೀವು ಪ್ರಾರಂಭಿಸುವ ಮೊದಲು, ಸುರಕ್ಷತೆಗೆ ಮೊದಲ ಆದ್ಯತೆ!
ನಿಮ್ಮ ಮಗುವಿನ ಕಿವಿ, ಕಣ್ಣು ಅಥವಾ ಮೂಗುಗಳಲ್ಲಿ ನೇರವಾಗಿ ಏನನ್ನೂ ಇಡಬೇಡಿ. ತನ್ನ ಕಣ್ಣು, ಬಾಯಿ, ಮೂಗು ಅಥವಾ ಹೊರ ಕಿವಿಗಳಿಂದ ಮೃದುವಾದ, ತೇವಗೊಳಿಸಲಾದ ಕಾಟನ್ ಬಡ್‌ನಿಂದ ಯಾವುದೇ ವಸ್ತುವನ್ನು ಸ್ವಚ್ಛಗೊಳಿಸಿ.
ಮಗುವಿನ ಕಿವಿಗಳು
ಮಗುವಿನ ಕಿವಿಗಳನ್ನು ಶುಚಿಗೊಳಿಸುವಾಗ ಜಾಗರೂಕವಾಗಿ ಮಾಡಿರಿ. ಮೆಡಿಕಲ್ ಶಾಪ್‌ನಲ್ಲಿ ಕಿವಿ ಶುಚಿಗೊಳಿಸುವ ಉಪಕರಣಗಳು ಮತ್ತು ಫಾರ್ಮುಲಾಗಳೂ ಸಾಕಷ್ಟು ಇರುತ್ತವೆ. ಆದಾಗ್ಯೂ ನಿಮ್ಮ ವೈದ್ಯರು ನಿಮಗೆ ಅಗತ್ಯವಿದ್ದರೆ ಮಾತ್ರ ಇವುಗಳನ್ನು ಹೇಳಬಹುದು.
ಒಂದು ತೇವಗೊಳಿಸಲಾದ ಮೃದುವಾದ ಕಾಟನ್ ರೌಂಡ್, ವಿಶೇಷವಾಗಿ ಶಿಶುಗಳಿಗೆ ವಿನ್ಯಾಸಗೊಳಿಸಲಾಗಿದೆ, ಇದು ಉತ್ತಮ ಆಯ್ಕೆಯಾಗಿರಬಹುದು ಆದರೆ ನೀವು ಇದನ್ನು ಬಳಸುವುದಾದರೇ ನಿಮ್ಮ ಶಿಶು ವೈದ್ಯರ ಸಲಹೆ ಪಡೆಯಿರಿ. ನಿಮ್ಮ ಮಗುವಿನ ಕಿವಿಗಳನ್ನು ಶುಚಿಗೊಳಿಸುವಾಗ ಜಾಗರೂಕರಾಗಿರಿ – ನೀವು ಏನು ಕಾಣುತ್ತಿದ್ದೀರಿ ಅದನ್ನು ಮಾತ್ರ ಶುಚಿಗೊಳಿಸಿ – ನಿಮ್ಮ ಮಗುವಿನ ಕಿವಿ ಮತ್ತು ಮೂಗಿನಲ್ಲಿ ಏನನ್ನು ಆಳವಾಗಿ ಇಡಲು ಹೋಗಬೇಡಿ.
ಮಗುವಿನ ಕಣ್ಣುಗಳು
ನಿಮ್ಮ ಮಗುವಿನ ಕಣ್ಣುಗಳನ್ನು ರಕ್ಷಿಸುವುದು
ಯಾವ ಮಗುವು ತನ್ನ ಕಣ್ಣುಗಳಲ್ಲಿ ಏನಾದರೂ ಹೋಗಬೇಕೆಂದು ಬಯಸುವುದಿಲ್ಲ. ಮಗುವಿನ ತಲೆಯನ್ನು ತೊಳೆಯುವಾಗ ತಲೆಯನ್ನು ಹಿಡಿದು ತಲೆ ತೊಳೆಯುವುದರ ಮೂಲಕ, ಅಥವಾ ಅದರ ಎದುರಿಗೆ ಕಣ್ಣಿಗೆ ಹೋಗುವಂತಹ ಯಾವುದೇ ವಸ್ತುವನ್ನು ಇಡದೇ ಇರುವ ಮೂಲಕ ನಿಮ್ಮ ಮಗುವಿನ ಕಣ್ಣುಗಳಿಗೆ ಏನು ಹೋಗದಂತೆ ನೋಡಿಕೊಳ್ಳಬಹುದು.
ವಯಸ್ಕರಿಗೆ ಹೋಲಿಸಿದರೇ ನವಜಾತ ಶಿಶುವಿನ ಕಣ್ಣುಗಳು ಇನ್ನೂ ಬೆಳೆಯುತ್ತಿವೆ. ಕಣ್ಣುಗಳನ್ನು ಪದೇ ಪದೇ ಮಿಟುಕುಸುತ್ತವೆ. ಕಡಿಮೆ ಕಣ್ಣೀರು ಬರುತ್ತದೆ. ಬ್ಲಿಂಕ್ ರಿಫ್ಲೆಕ್ಸ್ ಅನ್ನು ಅಭಿವೃದ್ಧಿಪಡಿಸಲು ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಅನಗತ್ಯ ವಸ್ತುಗಳು ಮಗುವಿನ ಕಣ್ಣುಗಳಿಗೆ ಸಿಲುಕುತ್ತದೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.
ನಿಮ್ಮ ಮಗುವಿನ ಕಣ್ಣುಗಳನ್ನು ಸ್ವಚ್ಛಗೊಳಿಸುವುದು
ನಿಮ್ಮ ಮಗುವಿನ ತಲೆಯನ್ನು ಹಿಡಿದುಕೊಳ್ಳಿ, ಪ್ರತಿ ಕಣ್ಣಿನ ಸುತ್ತಲೂ ಸ್ವಚ್ಛವಾದ ಬೆಚ್ಚಗಿನ ನೀರಿನಲ್ಲಿ ಕಾಟನ್ ಬಡ್ ಅದ್ದಿ ಸ್ವಚ್ಛಗೊಳಿಸಬಹುದು. ಪ್ರತಿ ಕಣ್ಣನ್ನು ಸ್ವಚ್ಛಗೊಳಿಸುವಾಗ ಹೊಸ ಕಾಟನ್ ರೌಂಡ್ ಬಳಸಿ ಮತ್ತು ಯಾವಾಗಲೂ ಕಣ್ಣಿನ ಹೊರಭಾಗದ ಒಳ ಭಾಗವನ್ನು ಸ್ವಚ್ಛಗೊಳಿಸಿರಿ.
ಮಗುವಿನ ಮೂಗು
ನಿಮ್ಮ ಮಗುವಿನ ಮೂಗು ಕಟ್ಟಿದರೇ, ನೀವು ಅದಕ್ಕೆ ಕೆಲವು ಪರಿಹಾರಗಳನ್ನು ನೀಡಬಹುದು. ನಿಮ್ಮ ಶಿಶು ವೈದ್ಯರೊಂದಿಗೆ ಸಲೈನ್ ಡ್ರಾಪ್‍ಗಳನ್ನು ಬಳಸುವ ಕುರಿತು ಮಾತನಾಡಿ.
ನಿಮ್ಮ ಮಗುವಿನ ಮೂಗು ಮತ್ತು ಅದರ ಸುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಲು ತೇವಾಂಶಯುಳ್ಳ ಕಾಟನ್ ರೌಂಡ್ ಬಳಸಬಹುದು. ಸ್ವಚ್ಛಗೊಳಿಸುವಾಗ ಎಚ್ಚರದಿಂದ ಇರಬೇಕು. ಮಗು ಮೂಗಿನ ಕೆಳಗೆ ಅಥವಾ ಸುತ್ತಲೂ ಕಿರಿಕಿರಿ ಅನುಭವಿಸುತ್ತಿದ್ದರೇ ಶಿಶುವಿಗೆ ವಿಶೇಷವಾಗಿ ತಯಾರಿಸಿದ ಲೋಷನ್ ಅನ್ನು ನೀವು ಬಳಸಬಹುದು.
ಮಗುವಿನ ಉಗುರುಗಳು
ಉಗುರುಗಳು ಕೊಳಕು ಮತ್ತು ಸೂಕ್ಷ್ಮ ಜೀವಾಣುಗಳನ್ನು ಹರಡಬಹುದು ಮತ್ತು ನಿಮ್ಮ ಮಗು ಸ್ವತಃ ತನ್ನನ್ನು ತಾನೇ ಪರಚಿಕೊಳ್ಳುವುದು. ಹೀಗಾಗಿ ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿ. ಸ್ನಾನದ ನಂತರ ಉಗುರುಗಳು ಮೃದುವಾಗುತ್ತವೆ. ಆಗ ಕತ್ತರಿಸಿ. ಮೊಂಡಾದ ಕತ್ತರಿ ಅಥವಾ ಭೂತಗನ್ನಡಿ ಜೋಡಿಸಿರುವ ಮಗುವಿನ ಉಗುರು ಕತ್ತರಿಯನ್ನು ಬಳಸಿ. ಇಲ್ಲಿ ಮಗುವಿನ ಚಿಕ್ಕ ಉಗುರುಗಳು ಸುಲಭವಾಗಿ ಕಾಣುತ್ತವೆ. ಬೆರಳಿನ ನೈಸರ್ಗಿಕ ರೇಖೆಯನ್ನು ಅನುಸರಿಸಿ, ಬೆರಳಿನ ಪ್ಯಾಡ್ ಅನ್ನು ಉಗುರುಗಳಿಂದ ದೂರವಿರಿಸಿ, ಇದರಿಂದ ಬೆರಳಿನ ಚರ್ಮವನ್ನು ಕತ್ತರಿಸುವುದನ್ನು ತಪ್ಪಿಸಬಹುದು.
ನೀವು ನಿಮ್ಮ ಮಗುವಿನ ಉಗುರುಗಳನ್ನು ಕತ್ತರಿಸುವಾಗ ಅದು ಸಹಕರಿಸುತ್ತಿಲ್ಲವೆಂದರೇ, ಅದಕ್ಕೆ ಅನಾನುಕೂಲವಾಗುತ್ತಿದೆ ಎಂದರೇ ನೀವು ಈ ಕೆಳಗಿನವುಗಳನ್ನು ಪ್ರಯತ್ನಿಸಬಹುದು.-
ನೀವು ಮೊದಲು ಉಗುರುಗಳನ್ನು ಅವನ ಎದುರಿಗೆ ಕತ್ತರಿಸಿಕೊಳ್ಳಿ. ಕತ್ತರಿಸಿಕೊಳ್ಳುವುದು ಎಷ್ಟು ವಿನೋದಮಯವಾಗಿದೆ ಎಂದು ಮಗುವಿಗೆ ತೋರಿಸಿ.
ವಿನೋದವಾದ ಹಾಡುಗಳು, ಕೆಲವು ತಮಾಷೆಯ ಅಭಿವ್ಯಕ್ತಿಗಳು ಅಥವಾ ಬೆರಳುಗಳೊಂದಿಗೆ ಆಟವಾಡುತ್ತಾ ಮಗುವಿನ ಗಮನ ಸೆಳೆಯಿರಿ.
ಕಾಲಾನಂತರದಲ್ಲಿ ಎಲ್ಲವೂ ನಿಮಗೆ ಸುಲಭವಾಗುವುದು. ಏಕೆಂದರೇ ನಿಮ್ಮ ಮಗುವನ್ನು ನಿಮಗಿಂತ ಯಾರು ಹೆಚ್ಚು ಪ್ರೀತಿಸಲಾರದು:-)
A