ಮಗುವಿಗೆ ತೇಗುವಂತೆ ಮಾಡುವುದು ಹೇಗೆ

ಮಗುವಿಗೆ ತೇಗುವಂತೆ ಮಾಡುವುದು ಹೇಗೆ

15 May 2019 | 1 min Read

Payal Rai

Author | 2 Articles

ನಿಮ್ಮ ಮಗುವಿಗೆ ಹಾಲುಣಿಸುವುದು ಸ್ವತಃ ಒಂದು ಸುಮಧುರ ಅನುಭವ!  ತೇಗಿಸುವುದು ಮಗುವಿಗೆ ಹಾಲುಣಿಸುವುದರ ಅಗತ್ಯವಾದ ಭಾಗವಾಗಿರುವ ಹಾಗೆ, ಈ ಕೆಲಸವನ್ನು ಮಾಡಲು  ಹಲವು ಮಾರ್ಗಗಳಿವೆ.

 

ಹಾಲು ಕುಡಿಸಿದ ನಂತರ ತೇಗಿಸುವುದು ಅತ್ಯಗತ್ಯವಾದ ಚಟುವಟಿಕೆಯಾಗಿದೆ. ಶಿಶುಗಳು ಫಾರ್ಮುಲಾ ಹಾಲು ಅಥವಾ ತಾಯಿಯ ಹಾಲನ್ನು ಕುಡಿಯುವಾಗ, ಅವರು ಸಾಕಷ್ಟು ಗಾಳಿಯನ್ನು ನುಂಗುತ್ತಾರೆ. ನಿಮ್ಮ ಮಗುವಿಗೆ ಸಂಪೂರ್ಣವಾಗಿ ತೇಗಿಸದಿದ್ದರೆ  , ತನ್ನ ಚಿಕ್ಕ ಹೊಟ್ಟೆಯೊಳಗಿನ ಸ್ವಲ್ಪ ಗಾಳಿಯ ಗುಳ್ಳೆಗಳು ಅವನನ್ನು ಅಸಮಾಧಾನಗೊಳಿಸಬಹುದು ಮತ್ತು ಹಠ ಮಾಡುವುದಕ್ಕೆ, ಕಕ್ಕುವುದಕ್ಕೆ ಮತ್ತು ಗ್ಯಾಸ್ ಆಗುವುದಕ್ಕೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಮಗುವಿಗೆ ಅಗತ್ಯವಿಲ್ಲದಿದ್ದಾಗಲೂ ಆಹಾರದ ನಡುವೆ ಮತ್ತು ನಂತರ ಆಗಾಗ್ಗೆ ತೇಗಿಸುವುದು ಮುಖ್ಯವಾಗಿದೆ.

 

ಸ್ತನ್ಯಪಾನ ಬೇಬಿ Vs ಎ ಬಾಟಲ್ ಫೆಡ್ ಬೇಬಿ ತೇಗುವಿಕೆ :

 

ತಾಯಿಯ ಹಾಲನ್ನು ಕುಡಿಯುವ ಶಿಶುಗಳನ್ನು ಸಾಮಾನ್ಯವಾಗಿ ಬಾಟಲಿಯಿಂದ ಹಾಲು ಕುಡಿಯುವ  ಶಿಶುಗಳಂತೆ ಆಗಾಗ್ಗೆ ತೇಗಿಸ ಬೇಕಿಲ್ಲ.  ಬಾಟಲಿಯಿಂದ ಹಾಲು ಕುಡಿಯುವ ಶಿಶುಗಳು ಸಾಕಷ್ಟು ಗಾಳಿಯನ್ನು ಹೀರುತ್ತವೆ. ಬಾಟಲ್ ವೇಗವಾಗಿ ಹಾಲಿನ ಹರಿವನ್ನು ಅನುಮತಿಸುತ್ತದೆ, ಇದು ಶಿಶುಗಳು ನಿಕಟ ಅಂತರದಲ್ಲಿ ಹಾಲು ಗುಟುಕರಿಸುವ ನಡುವೆ ಹೆಚ್ಚು ಗಾಳಿ ನುಂಗಲು ಒತ್ತಾಯಿಸುತ್ತದೆ. ತಮ್ಮ ತಾಯಂದಿರಿಂದ ಹಾಲು ಸೇವಿಸುವ ಮಕ್ಕಳು ಹಾಲಿನ ಹರಿವನ್ನು ಹೆಚ್ಚು ನಿಯಂತ್ರಿಸುತ್ತವೆ ಮತ್ತು ಹೀಗಾಗಿ ಅವರು ನಿಧಾನವಾದ ಲಯದಲ್ಲಿ ಹೀರಿಕೊಳ್ಳುತ್ತಾರೆ, ಅದು ಸರಿಯಾಗಿ ಹಾಲು ನುಂಗವ ಮತ್ತು ಉಸಿರಾಟದ ಸಮನ್ವಯವನ್ನು ಸಾಧಿಸಲು ಅವಕಾಶ ನೀಡುತ್ತದೆ.

 

ನಿಮ್ಮ ಮಗು ತೇಗುವ  ವಿಧಾನಗಳು

 

ಮಗುವನ್ನು ತೇಗುವಂತೆ  ಮಾಡುವುದು ಸುಲಭದ ಕೆಲಸವಲ್ಲ. ಕೆಲವೊಮ್ಮೆ, ಹಾಲು ಕುಡಿಸುವುದು ಹೊಸ ಪೋಷಕರಿಗೆ ಭಯಹುಟ್ಟಿಸುವ ಅನುಭವವಾಗಬಹುದು. ಚಿಂತಿಸಬೇಡಿ; ಇನ್ನಷ್ಟು ತಿಳಿಯಲು ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ! ಮೊದಲ ಪಾಠ – ಯಾವಾಗಲೂ ಪ್ರತಿ ಬಾರಿ ಹಾಲು ಕುಡಿಸಿದ ನಂತರ ಮಗುವನ್ನು ತೇಗಿಸಲು  ಮರೆಯದಿರಿ.

ಸಾಮಾನ್ಯವಾಗಿ ಮೂರು ವಿಧದ ತೇಗುವ  ವಿಧಾನಗಳಿವೆ ಮತ್ತು ನೀವು ಅತ್ಯಂತ ಆರಾಮದಾಯಕ ಮತ್ತು ಪರಿಣಾಮಕಾರಿಯಾದ ಯಾವುದಾದರೂ ಪ್ರಯೋಗವನ್ನು ಮಾಡಬಹುದು. ನೀವು ಈ ಕೆಳಗಿನ ಯಾವುದೇ ವಿಧಾನಗಳನ್ನು ಪ್ರಯತ್ನಿಸಬಹುದು:

 

  1. ಕುಳಿತುಕೊಳ್ಳುವುದು  ಮತ್ತು ತೇಗಿಸುವುದು :

 

ನೇರವಾಗಿ ಕುಳಿತುಕೊಂಡು ನಿಮ್ಮ ಮಗುವನ್ನು ನಿಮ್ಮ ಎದೆಯ ವಿರುದ್ಧ ಹಿಡಿದುಕೊಳ್ಳಿ, ನಿಮ್ಮ ಭುಜದ ಮೇಲೆ ಮಗುವಿನ ಗಲ್ಲವನ್ನು ಇರಿಸಿ. ನಿಮ್ಮ ಮಗುವಿಗೆ ಒಂದು ಕೈಯಿಂದ ಬೆಂಬಲ ನೀಡಿ ಮತ್ತು ಇನ್ನೊಂದು ಕೈಯಿಂದ ಬೆನ್ನನ್ನು ಸವರಿ. ಇದು ಮಗುವನ್ನು ಅದರ ಹೊಟ್ಟೆಯೊಳಗೆ ಸಿಕ್ಕಿಬಿದ್ದ ಗಾಳಿಯ ಗುಳ್ಳೆಗಳಿಂದ ನೆಮ್ಮದಿ ಕೊಡುತ್ತದೆ.

ಈ ವಿಧಾನವನ್ನು ಮತ್ತೊಂದು ರೀತಿಯಲ್ಲಿ ಪ್ರಯತ್ನಿಸಬಹುದು. ನಿಮ್ಮ ಮಗುವನ್ನು ನಿಮ್ಮ ಭುಜದ ಇನ್ನಷ್ಟು ಮೇಲೆ ತಂದುಕೊಳ್ಳಿ, ಆದ್ದರಿಂದ ಮಗುವಿನ ಹೊಟ್ಟೆಯು ನಿಮ್ಮ ಹೆಗಲನ್ನು ಸ್ವಲ್ಪವೇ ಒತ್ತಿ ಹಿಡಿಯುತ್ತದೆ, ನಿಧಾನವಾಗಿ ಬೆನ್ನನ್ನು ಸವರಿ. ಇದು ಅವನ ಹೊಟ್ಟೆಯ ಮೇಲೆ ಸೌಮ್ಯವಾದ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ತೇಗುವುದಕ್ಕೆ  ಸಹಾಯ ಮಾಡುತ್ತದೆ.

 

ನೀವು ಪರ್ಯಾಯ ವಿಧಾನವನ್ನು ಪ್ರಯತ್ನಿಸುತ್ತಿದ್ದರೆ, ನಿಮ್ಮ ಮಗುವಿಗೆ ಆರಾಮವಾಗಿ ಉಸಿರಾಡಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಕನ್ನಡಿಯ ಮುಂಭಾಗದಲ್ಲಿ ಕುಳಿತುಕೊಂಡು ಈ ತೇಗುವ  ವಿಧಾನವನ್ನು ಅನ್ವಯಿಸುವುದು ಉತ್ತಮ, ಇದರಿಂದ ಮಗುವಿನ ಕುತ್ತಿಗೆಗೆ ಮತ್ತು ತಲೆಗೆ ಆರಾಮವಾಗಿರುತ್ತದೆ 

 

  1. ತೊಡೆಯಮೇಲೆ ಮಲಗಿಸಿಕೊಂಡು ತೇಗಿಸುವುದು:

 

ನಿಮ್ಮ ಮಗುವಿನ ಎದೆಯ ಭಾಗಕ್ಕೆ ಮತ್ತು ಕೈಗೆ ನಿಮ್ಮ ಒಂದು ಕೈಯಿಂದ ಆಸರೆಯನ್ನು ನೀಡುತ್ತಾ   ಮಗುವನ್ನು ಮೇಲೆ ನಿಮ್ಮ ತೊಡೆಯ ಮೇಲೆ ಎಚ್ಚರಿಕೆಯಿಂದ ಮಲಗಿಸಿ. ನಿಮ್ಮ ಮತ್ತೊಂದು ಕೈಯ ಅಂಗೈಯಿಂದ  ನಿಮ್ಮ ಮಗುವಿನ ದವಡೆಗೆ ಲಘುವಾಗಿ ಹಿಡಿದುಕೊಳ್ಳಿ, ನಿಮ್ಮ ಮಗುವಿಗೆ ತೂಗುವ ಜೊತೆಗೆ ಮಗುವಿನ ಎದೆಯನ್ನು ಬೆಂಬಲಿಸುವ ರೀತಿಯಲ್ಲಿ ನಿಮ್ಮ ಕೈಯನ್ನು ಇರಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. . ಮಗುವಿನ ಗಲ್ಲವನ್ನು ಹಿಡಿದುಕೊಳ್ಳುವಾಗ ಎಚ್ಚರಿಕೆ ಇಂದ ಇರಿ, ಗಂಟಲನ್ನು ಹಿಡಿದುಕೊಳ್ಳಬೇಡಿ! ಮಗುವಿನ ಬೆನ್ನನ್ನು ಇನ್ನೊಂದು ಕೈಯಿಂದ ನಿಧಾನವಾಗಿ ತಟ್ಟಿ.

 

ಇದು ಮಗುವಿನ ಗ್ಯಾಸನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕಕ್ಕಿದುದನ್ನು ಹಿಡಿಯಲು ನಿಮ್ಮ ತೊಡೆಯ ಮೇಲೆ ತೇಗಿಸುವ ಬಟ್ಟೆ ಅಥವಾ ಬಿಬ್ ಜೊತೆ ತಯಾರಾಗಿರಿ.

 

  1. ಮುಖ ಕೆಳಗೆಮಾಡಿ ತೇಗಿಸುವುದು :

 

ನೇರವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಕಾಲುಗಳ ಮೇಲೆ ನಿಮ್ಮ ಮಗುವನ್ನು  ಇರಿಸಿ ಕೊಳ್ಳಿ, ಈಗ ನಿಮ್ಮ ದೇಹಕ್ಕೆ ಲಂಬವಾಗಿ ಮತ್ತು ನಿಮ್ಮ ಮೊಣಕಾಲುಗಳಿಗೆ ಅಡ್ಡವಾಗಿ ಮಗು ಮಲಗಿರಬೇಕು. ನಿಮ್ಮ ಒಂದು ಕೈಯಿಂದ  ದವಡೆ ಮತ್ತು ಗಲ್ಲಕ್ಕೆ ಆಧಾರ ನೀಡುತ್ತಾ, ನಿಮ್ಮ ಇನ್ನೊಂದು ಕೈಯಿಂದ ಬೆನ್ನನ್ನು ನಿಧಾನವಾಗಿ ಉಜ್ಜಿರಿ.

 

ನಿಮ್ಮ ಮಗುವಿನ ತಲೆಯು ಅವನ ದೇಹದ ಉಳಿದ ಭಾಗಕ್ಕಿಂತಲೂ ಕೆಳಗಿಲ್ಲವೆಂದು ಖಚಿತಪಡಿಸಿಕೊಳ್ಳಿ, ಅದನ್ನು 45 ಡಿಗ್ರಿಗಳಷ್ಟು ಎತ್ತರಿಸಬೇಕು. ಈ ವಿಧಾನದಲ್ಲಿಯೂ, ನಿಮ್ಮ ಕಾಲುಗಳ ಮೇಲೆ ತೇಗಿಸುವ ಬಟ್ಟೆ ಹಾಕಬೇಕು, ಯಾವುದೇ ಕಕ್ಕುವುದರಿಂದ ಸೃಷ್ಟಿಸಲ್ಪಡುವ ಅವ್ಯವಸ್ಥೆಯಿಂದ ನಿಮ್ಮನ್ನು  ರಕ್ಷಿಸುತ್ತದೆ.

 

#babychakrakannada

A

gallery
send-btn

Related Topics for you