ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳು : 3 - 4 ತಿಂಗಳವರೆಗೆ

cover-image
ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳು : 3 - 4 ತಿಂಗಳವರೆಗೆ

ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳು : 3-4 ತಿಂಗಳವರೆಗೆ

ಐದು ತಿಂಗಳು

  1. ಮೋಟಾರು ಬೆಳವಣಿಗೆ

 

ಮಗುವು ತನ್ನ ಬೆನ್ನಿನ ಮೇಲೆ ಅಂಗಾತ ಇದ್ದರೆ ನಿಮ್ಮ ಎರಡು ಹೆಬ್ಬೆರಳುಗಳನ್ನು ಅವಳಿಗೆ ನೀಡಿ. ಅವಳು ಅದನ್ನು ಗ್ರಹಿಸಲಿ. ಅವಳು ಕುಳಿತುಕೊಳ್ಳಲು ಸ್ವಲ್ಪ ಬೆಂಬಲ ನೀಡಿ. ಅವಳು ಸ್ವತಃ ಕುಳಿತುಕೊಳ್ಳುವ ಭಂಗಿಗೆ ಬರುವುದನ್ನು ನೀವು ಗಮನಿಸಬಹುದು.

 

ನೀವು ಅವಳನ್ನು ಆಕೆಯ ಹೊಟ್ಟೆಯ ಮೇಲೆ ಬೋರೆ ಹಾಕಿದಾಗ ಅವಳು ತನ್ನ ಬೆನ್ನ ಮೇಲೆ ತಾನೆ ಮಲಗಲು ಮಕಾಡೆಯಾಗಬಹುದು.

 

  1. ಗ್ರಹಿಕೆ ಮತ್ತು ಸಾಮಾಜಿಕ ಪ್ರತಿಕ್ರಿಯೆ

 

ಮಗುವು ಈಗ ಒಂದು ಹೊಸ ವಸ್ತುವನ್ನು ದೀರ್ಘಕಾಲದವರೆಗೆ ಪರಿಶೀಲಿಸುತ್ತದೆ. ಆಕೆಯು ತನ್ನ ಹತ್ತಿರದವರನ್ನು ಮಾತು  ಅಪರಿಚಿತರನ್ನು ಪ್ರತ್ಯೇಕಿಸಲು ಪ್ರಾರಂಭಿಸಬಹುದು. ಅಪರಿಚಿತರು ಅವಳನ್ನು ಸಂಪರ್ಕಿಸಿದಾಗ ಅವಳು ನಗದೆ ಇರಬಹುದು ಅಥವಾ ಅವಳು ಅಳಲು ಪ್ರಾರಂಭಿಸಬಹುದು.

 

ನೀವು ಅವಳೊಂದಿಗೆ ಸಿಟ್ಟಾಗಿದ್ದರೆ ನಿಮ್ಮ ಧ್ವನಿಯಿಂದ ಅವಳು ನೀವು ಸಿಟ್ಟಾಗಿರುವುದನ್ನು ಹೇಳಬಹುದು.

 

  1. ಭಾಷಣ

 

ಭಾಷಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಗಮನಾರ್ಹವಾದ  ರೀತಿ ಏನೂ ನಡೆಯುವುದಿಲ್ಲ.

 

ಆರು ತಿಂಗಳು

  1. ಮೋಟಾರು ಬೆಳವಣಿಗೆ

 

ದೃಢವಾದ ಪ್ರದೇಶದ ಮೇಲೆ ಅವಳನ್ನು ಇರಿಸಿದಾಗ ಅವಳು ಅಂಗಾತದಿಂದ ಬೋರೆ ಮಲಗುವ ರೀತಿ ಮಕಾಡೆ ಆಗುತ್ತಾಳೆ.

ಅವಳನ್ನು ತನ್ನ ಹೊಟ್ಟೆಯ ಮೇಲೆ ಇರಿಸಿದಾಗ, ಆಕೆಯು ಅವಳ ಮುಂದೆ ಹಾಕಿರುವ ಆಟಿಕೆಯನ್ನು ತಲುಪಲು ಪ್ರಯತ್ನಿಸುತ್ತಾಳೆ, ಅವಳು ಈ ಹಂತದಲ್ಲಿ ಯಶಸ್ವಿ ಆಗಬಹುದು ಅಥವಾ ಯಶಸ್ವಿ ಆಗದೆ ಇರಬಹುದು.

ಅವಳು ಇದೀಗ ಒಂದು ಕೈಯಲ್ಲಿ ಇರಿಸಿದ ಗಿಲಿಕಿಯನ್ನು ಇನ್ನೊಂದು ಕೈಗೆ ವರ್ಗಾಯಿಸಬಹುದು. ಅವಳನ್ನು ನಿಲ್ಲುವಂತೆ ಮಾಡಿದರೆ, ಅವಳ ಕಾಲುಗಳು ಅವಳ ಸಂಪೂರ್ಣ ತೂಕವನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿರುತ್ತವೆ.

 

  1. ಗ್ರಹಿಕೆ ಮತ್ತು ಸಾಮಾಜಿಕ ಪ್ರತಿಕ್ರಿಯೆ

 

ಅವರ ಶ್ರವಣ ಶಕ್ತಿಯು ಈಗ ಹೆಚ್ಚು ಸೂಕ್ಷ್ಮವಾಗಿದೆ. ಅವಳಿಗೆ ಕಾಣಿಸದ ಹಾಗೆ, ಕಾಗದದ ತುಣುಕನ್ನು ಅವಳ ಕಿವಿಯ ಹತ್ತಿರ ಸುಕ್ಕು ಮಾಡಿದರೆ ಅಥವಾ ಮುದುರಿದರೆ, ಅವಳು ಧ್ವನಿಯ ಕಡೆಗೆ ಅವಳ ತಲೆಯನ್ನು ತಿರುಗಿಸುತ್ತಾಳೆ.

 

ಅವಳು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದಾಗ ಅವಳು ನಗುತ್ತಾಳೆ.

 

ಅವಳು ಈಗ ಅಪರಿಚಿತರ ಬಗ್ಗೆ ಬಹಳ ಜಾಗರೂಕಳಾಗುತ್ತಾಳೆ ಮತ್ತು ಅಪರಿಚಿತರ ಬಗ್ಗೆ ಎಚ್ಚರದಿಂದಿರುತ್ತಾಳೆ.

 

3 ರಿಂದ 6 ತಿಂಗಳುಗಳ ನಡುವೆ, ಅವಳು ಅಪರಿಚಿತರನ್ನು ಅರಿತುಕೊಳ್ಳಲು ಪ್ರಾರಂಭಿಸುತ್ತಾಳೆ. ಅವಳು ತಮ್ಮ ತಿಳುವಳಿಕೆಗಳಿಗೆ ಪ್ರತಿಕ್ರಿಯೆ ನೀಡದಿರಬಹುದು ಅಥವಾ ಅವಳು ಅವರನ್ನು ನೋಡಿದ ತಕ್ಷಣವೇ ಅಳುಲು ಪ್ರಾರಂಭಿಸಬಹುದು. ಪರಿಣಾಮವಾಗಿ, ಆಕೆಯ ಪೋಷಕರು, ವಿಶೇಷವಾಗಿ ತಾಯಿ, ಆಕೆಯ ಹತ್ತಿರ ಇರಬೇಕೆಂದು ಅವಳು ನಿರೀಕ್ಷಿಸುತ್ತಾಳೆ. ಆ ಸಮಯದಲ್ಲಿ, ಮಗು ತನ್ನ ಒಳ್ಳೆಯತನವನ್ನು ಪ್ರಯೋಜನ ಪಡೆಯುತ್ತಿದೆ ಎಂದು ತಾಯಿ ಭಾವಿಸಬಹುದು. ಆದರೆ ಅವಳನ್ನು ಆಸೆ ಮಾಡಿ! ಈ ವಯಸ್ಸಿನಲ್ಲಿ ನೀವು ಅವಳಿಗೆ ನೀಡುವ ಕಾಳಜಿಯು ಆಕೆಯನ್ನು ಜೀವನದಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತದೆ. ಅವಳು ಜನರನ್ನು ನಂಬಲು ಪ್ರಾರಂಭಿಸುತ್ತಾಳೆ, ನಿಮ್ಮ ಕಾಳಜಿಯನ್ನು ಪಾಲಿಸುತ್ತಾರೆ ಮತ್ತು ಪ್ರತಿಯಾಗಿ, ಇತರರಿಗೆ ಪ್ರೀತಿಯಿಂದ ಕಾಳಜಿ ವಹಿಸುವುದನ್ನು ಕಲಿಯುತ್ತಾರೆ.

 

  1. ಭಾಷಣ

 

ಅವಳು ಕೆಲವು ಅಕ್ಷರಗಳನ್ನು ಸೇರಿಸಲು ಪ್ರಯತ್ನಿಸಬಹುದು  ಮತ್ತು ಡಾ-ಡಾ ಎಂದು ಹೇಳಬಹುದು ಅಥವಾ  ಅವುಗಳನ್ನು 'ಮಾ', 'ಗೂ' ಅಥವಾ 'ಡಾ' ಎಂದು ಪ್ರತ್ಯೇಕವಾಗಿ ಬಳಸಬಹುದು.

 

#babychakrakannada
logo

Select Language

down - arrow
Personalizing BabyChakra just for you!
This may take a moment!