ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳು : 5 - 6 ತಿಂಗಳವರೆಗೆ

ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳು : 5 - 6 ತಿಂಗಳವರೆಗೆ

 

ಮೂರು ತಿಂಗಳು

  1. ಮೋಟಾರು ಬೆಳವಣಿಗೆ

 

ಮುಷ್ಟಿಯು ಈಗ ಸಾರ್ವಕಾಲಿಕವಾಗಿ ತೆರೆದಿರುತ್ತದೆ. ಮಗುನ ಕೈಯಲ್ಲಿ ಒಂದು ಗಿಲಿಕಿ ನೀಡಿದರೆ, ಅವಳು ಅದನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುತ್ತಾಳೆ ಮತ್ತು ಅದರೊಂದಿಗೆ ಆಟವನ್ನು ಆಡಲು ಪ್ರಾರಂಭಿಸಬಹುದು. ಅವಳನ್ನು ಅಂಗಾತ (ಅವಳ ಬೆನ್ನಿನ ಮೇಲೆ ಮಲಗಿರುವ) ಸ್ಥಾನದಿಂದ ಎತ್ತಿದಾಗ, ಅವಳ ತಲೆಯು ಸ್ವಲ್ಪ ಸಮಯದವರೆಗೆ ಅನುಸರಿಸುತ್ತದೆ. ಅವಳ ಹೊಟ್ಟೆ ಮೇಲೆ ಹಾಕಿದಾಗ, ಅವಳು ತನ್ನ ತಲೆಯನ್ನು ಎತ್ತುತ್ತಾಳೆ ಮತ್ತು ಸುಮಾರು ಒಂದು ನಿಮಿಷ ತನ್ನ ತಲೆಯನ್ನು 90 ಡಿಗ್ರಿ ಕೋನದಲ್ಲಿ ಇಟ್ಟುಕೊಳ್ಳಬಹುದು.

 

  1. ಗ್ರಹಿಕೆ ಮತ್ತು ಸಾಮಾಜಿಕ ಪ್ರತಿಕ್ರಿಯೆ

 

ಮಗುವು ಅಂಗಾತ ಇರುವಾಗ ಪೆನ್ಸಿಲ್ ಅನ್ನು ತೋರಿಸಿದರೆ, ಅವಳ ಕಣ್ಣುಗಳು ಅವಳ ಕಣ್ಣಿನ ಒಂದು ಮೂಲೆಯಿಂದ ಮತ್ತೊಂದಕ್ಕೆ  ಅನುಸರಿಸುತ್ತವೆ.

 

ಈಗ ಗುರುತಿಸಿದೊಡನೆ ನಗುವುದು ಬರುತ್ತದೆ. 6 ನೇ ವಾರಗಳಲ್ಲಿ, ಆಕೆಯೊಂದಿಗೆ ಮಾತನಾಡಿದಾಗ ಆಕೆ ಒಂದು ಕ್ಷಣಿಕ ನಗು ನೀಡುತ್ತಾಳೆ, ಅವಳೊಂದಿಗೆ ಮಾತನಾಡಲು ಇದು ಸಂತೋಷಕರವಾಗಿರುತ್ತದೆ. ಅವಳು ವಯಸ್ಕರು ಮತ್ತು ಮಕ್ಕಳು ಅವಳ ಮೇಲೆ ಗಮನ ಹರಿಸುವುದನ್ನು ಇಷ್ಟಪಡುತ್ತಾಳೆ ಮತ್ತು ಅವುಗಳನ್ನು ಒಂದು ನಗುವಿನ ಮೂಲಕ ಸ್ಪಂದಿಸುತಾಳೆ. ನಗುವು ಇದೀಗ ಹೆಚ್ಚು ಸ್ಪಷ್ಟವಾಗಿದೆ ಮತ್ತು ಅವಳು ತಾಯಿ ಅಥವಾ ತಾಯಿ ಚಿತ್ರವನ್ನು ಗುರುತಿಸುತ್ತಾಳೆ. ಒಂದು ಜಂಟಿ ಕುಟುಂಬದಲ್ಲಿ ಇದ್ದಾಗ, ಅವಳು ಇತರ ಎಲ್ಲ ಕುಟುಂಬ ಸದಸ್ಯರನ್ನು ಸಹ ಗುರುತಿಸುತ್ತಾಳೆ. ಅಪರಿಚಿತರನ್ನು ಇನ್ನೂ ತಿಳಿದಿಲ್ಲದಿದ್ದರೂ, ಅವಳು ಇತರರಿಗೆ ಒಂದು ನಗುವಿನೊಂದಿಗೆ ಸ್ಪಂದಿಸುತಾಳೆ.

 

  1. ಭಾಷಣ

 

ಆಕೆಯು ಸ್ತನಪಾನದ ನಂತರ ಖುಷಿಯಾಗಿದ್ದರೆ, ಅವಳು ಆಹ್, ಗೂ, ಮತ್ತು ಮಾ ನಂತಹ ಧ್ವನಿಯನ್ನು ಮಾಡಬಹುದು.

 

ನಾಲ್ಕು ತಿಂಗಳು

  1. ಮೋಟಾರು ಬೆಳವಣಿಗೆ

 

ಮಗುವಿಗೆ ನೀವು ಇನ್ನಾದ್ರೂ ಕೊಟ್ಟರೆ ಅದು ತನ್ನ ಬಾಯಿಗೆ ತರಲು ಪ್ರಯತ್ನಿಸುತ್ತಾದೆ. ಅವಳನ್ನು ಅಂಗಾತ ಇರಿಸಿದಾಗ, ಈಗ ಅವಳು ತನ್ನ ಕೈಯನ್ನು ನೋಡುತ್ತಾಳೆ. ಅದು ತನ್ನ ದೇಹವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಮಗುವನ್ನು ಸಾರ್ವಕಾಲಿಕವಾಗಿ ಸುತ್ತಿದ ಹಾಗೆ ಇಡದಿರುವುದು ಮುಖ್ಯವಾಗಿದೆ. ಅದೇ ಕಾರಣಕ್ಕಾಗಿ, ಮಕ್ಕಳ ಎಚ್ಚರವಾಗಿರುವಾಗ, ಕೈಗವಸುಗಳನ್ನು ಹಾಕದೆ ತಪ್ಪಿಸಬೇಕು.

 

  1. ಗ್ರಹಿಕೆ ಮತ್ತು ಸಾಮಾಜಿಕ ಪ್ರತಿಕ್ರಿಯೆ

 

ಈಗ, ಅವಳು ನಗುವುದು ಮಾತ್ರವಲ್ಲ, ಆದರೆ ಅವಳು ಸಂತೋಷದಿಂದ ನಗುತ್ತಾಳೆ. ಅವಳ ಶ್ರವಣ ಶಕ್ತಿಯನ್ನು ಈಗ ಉತ್ತಮವಾಗಿ ಪರೀಕ್ಷಿಸಬಹುದಾಗಿದೆ. ಅವಳಿಗೆ ಕಾಣದ ಹಾಗೆ ನೀವು ಅವಳ  ಹಿಂದೆ ನಿಂತುಕೊಳ್ಳಿ. ಅವಳ ಕಿವಿಯಿಂದ 20 ರಿಂದ 24 ಸೆಂ.ಮೀ ದೂರದಲ್ಲಿ ಒಂದು ಗಿಲಕಿ ಅಥವಾ ಗಂಟೆಯ ಧ್ವನಿ ಮಾಡಿ. ಅವಳು ಧ್ವನಿಯ ದಿಕ್ಕಿನಲ್ಲಿ ತನ್ನ ತಲೆಯನ್ನು ತಿರುಗಿಸುತಾಳೆ. ಈ ಪರೀಕ್ಷೆಗಾಗಿ ಕೊಠಡಿಯು  ನಿಶ್ಯಬ್ದವಾಗಿರಬೇಕು.

 

  1. ಭಾಷಣ  ಕಾಣದ

 

ಈಗ, ನೀವು ಅವಳು ನಗುವುದನ್ನು  ಕೇಳಬಹುದು. ಇದು ಅವಳು ಸಂವಹನ ನಡೆಸುವ ಮಾರ್ಗವಾಗಿದೆ.

 

#babychakrakannada

Baby

Read More
ಕನ್ನಡ

Leave a Comment

Recommended Articles