ಮಗುವಿನ ಬೆಳವಣಿಗೆಯ ಮೈಲಿಗಲ್ಲುಗಳು : 9 - 10 ತಿಂಗಳವರೆಗೆ

ಒಂಬತ್ತು ತಿಂಗಳು

  1. ಮೋಟಾರು ಬೆಳವಣಿಗೆ

 

ಮಗು ವಯಸ್ಸಿನಲ್ಲಿ ತೆವಳಲು ಶುರು ಮಾಡಬಹುದು. ಚಿಕ್ಕ ವಯಿಸ್ಸಿನ್ನಿಂದಲು ಮಕ್ಕಳು ಎಚ್ಚರ ಇದ್ದಾಗ ತನ್ನ ಹೊಟ್ಟೆಯ ಮೇಲೆ ಬೋರೆ ಇರಿಸಿದ ಮಕ್ಕಳು ಬೇರೆ ತೊಡೆಯ ಮೇಲೆ ಮಲಗಿರುವ ಅಥವಾ ಅಂಗಾತ ಇರಿಸಿದ ಮಕ್ಕಳಿಗಿಂತ ಬೇಗ ತೆವಳುತ್ತಾರೆ.

ನಿಮ್ಮ ಮಗುವು ಈಗ ಮಲಗಿರುವ ಸ್ಥಾನದಿಂದ ತಾನೇ ತನ್ನ ಪ್ರಯತ್ನದಿಂದ ಕುಳಿತುಕೊಳ್ಳುತ್ತಾಳೆ.

ಅವಳ ಕೈಯನ್ನು ಹಿಡಿದು ನಡೆದುಕೊಂಡು ಹೋಗಲು ಪ್ರೋತ್ಸಾಹಿಸಿದಾಗ, ಅವಳು ಕೆಲವು ಹೆಜ್ಜೆಗಳನ್ನು ಮುಂದಕ್ಕೆ ಇಡಲು ಪ್ರಯತ್ನಿಸುತ್ತಾಳೆ.

ಈಗ ಕುಳಿತುಕೊಳ್ಳುವ ಸ್ಥಾನದಿಂದ, ಅವಳು ಕೆಲವು ಪೀಠೋಪಕರಣಗಳ ಸಹಾಯದಿಂದ ಅದನ್ನು ಹಿಡಿದುಕೊಂಡು ತಾನಾಗಿಯೇ ನಿಂತುಕೊಳ್ಳಬಹುದು.

 

  1.  ಗ್ರಹಿಕೆ ಮತ್ತು ಸಾಮಾಜಿಕ ಪ್ರತಿಕ್ರಿಯೆ

 

ಈಗ ನಿಮ್ಮ ಮಗುವು ಗಡಿಯಾರದ ಶಬ್ಧಕ್ಕೆ ಅಥವಾ ಸಂಗೀತ ವಾದ್ಯಗಳ ಮೃದುವಾದ ಶಬ್ದಗಳಲ್ಲಿ ಆಸಕ್ತಿಯನ್ನು ತೋರಿಸಬಹುದು.

ಈಗ ಅವಳು ನೆಲದ ಮೇಲೆ ವಸ್ತುಗಳನ್ನು ಪದೇ ಪದೇ ಬೀಳಿಸುವುದು ಮತ್ತು ನೀವು ಅದನ್ನು ತೆಗೆದುಕೊಂಡು ಅವಳಿಗೆ ಮರಳಿ ನೀಡಲು ಬಯಸುತ್ತಾಳೆ ಮತ್ತು ಇದನ್ನು ತುಂಬ ಇಷ್ಟಪಡುತ್ತಾಳೆ.

ಅವಳು ಈಗ "ಕಣ್ಣಮುಚ್ಚೆ" ಆಟವನ್ನು ಆಡಲು ಇಷ್ಟಪಡುತ್ತಾಳೆ.

 

  1. ಭಾಷಣ ಕಲಿಕೆ

 

ಈಗ ಅವಳು ಎರಡು ಪದಗಳನ್ನು  ಸರಿಯಾಗಿ ಸೇರಿಸಿ "ದಾದಾ", "ಮಾಮಾ", ಅಥವಾ "ಬಾಬಾ" ಎಂದು ಉಚ್ಛಾರಿಸಬಹುದು.

 

ಹತ್ತು ತಿಂಗಳು

 

  1. ಮೋಟಾರು ಬೆಳವಣಿಗೆ

 

ಮಗುವಿನ ಕೈಯನ್ನು ಹಿಡಿದು ನಡೆಸಿದರೆ ಅವಳು ಈಗ ಹೆಚ್ಚು ವಿಶ್ವಾಸದಿಂದ ನಡೆಯುತ್ತಾಳೆ.

ಅವಳು ಈಗ ನಿಮ್ಮ ಬೆಂಬಲದಿಂದ ಅಥವಾ ಪೀಠೋಪಕರಣಗಳ  ಬೆಂಬಲದ ಮೂಲಕ ನಿಂತಿರುವ ಸ್ಥಾನದಿಂದ ಕುಳಿತುಕೊಳ್ಳುತ್ತಾಳೆ.

ಅವಳು ಈಗ ಅವಳ ಕೈ ಮತ್ತು ಮೊಣಕಾಲುಗಳನ್ನು ಊರಿ ಮನೆ ಪೂರ್ತಿ ಅಂಬೆಗಾಲಿನಲ್ಲಿ ಸುತ್ತುತ್ತಾಳೆ.

ಒಂದು ಮಣಿ ಅಥವಾ ಒಂದು ಗುಂಡಿ ಅಥವಾ ಒಂದು ಮಾತ್ರೆ ಮುಂತಾದ ಸಣ್ಣ ವಸ್ತುವನ್ನು ಅವಳ ಮುಂದೆ ಇರಿಸಿದಾಗ, ಅವಳು ಈಗ ಅವಳ ಹೆಬ್ಬೆರಳು ಮತ್ತು ತೋರು ಬೆರಳುಗಳಿಂದ ಅದನ್ನು ಎತ್ತಿಕೊಳ್ಳುತ್ತಾರೆ. ಮುಂಚಿನ ತಿಂಗಳುಗಳಲ್ಲಿ, ತನ್ನ ಹಸ್ತದಿಂದ ಅದನ್ನು ತೆಗೆದುಕೊಳ್ಳಲಾಗದೆ ಮತ್ತು ಉತ್ತಮ ಸಮನ್ವಯ ಚಲಾವಣೆಯಿಲ್ಲದೆ ಅದನ್ನು ಪಡೆಯಲು ಪ್ರಯತ್ನಿಸಿ ಸಾಕಾಗಿರಬಹುದು.

 

  1. ಗ್ರಹಿಕೆ ಮತ್ತು ಸಾಮಾಜಿಕ ಪ್ರತಿಕ್ರಿಯೆ

 

ಅವಳು ಈಗ ಚಪ್ಪಾಳೆ ಹೊಡೆಯುತ್ತಾಳೆ, "ಟಾ-ಟಾ" ಅಥವಾ "ಬೈ-ಬೈ"ಯನ್ನು ಅನುಕರಿಸುತ್ತಾಳೆ ಪುಸ್ತಕದಲ್ಲಿ ಇರುವ ಚಿತ್ರವನ್ನು ನೋಡಲು ಇಷ್ಟಪಡುತ್ತಾಳೆ ಮತ್ತು ನೋ 'ಎಂಬ ಅರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ.

 

3.ಭಾಷಣ ಕಲಿಕೆ

 

ಅವಳು ನಿಮ್ಮ ನಂತರ "ಡಾ-ಡಾ" ಅಥವಾ "ಮಾ-ಮಾ" ಅನ್ನು ಪುನರ್ ಉಚ್ಛರಿಸುತ್ತಾಳೆ. 'ಪಾಪಾ ಎಲ್ಲಿದೆ',  ಅಥವಾ 'ಫ್ಯಾನ್ ಎಲ್ಲಿದೆ' ಎಂದು ಹೇಳುವ ಮೂಲಕ ಪರಿಚಿತ ವ್ಯಕ್ತಿಗಳ ಅಥವಾ ವಸ್ತುಗಳ ಬಗ್ಗೆ ನೀವು ಕೇಳಿದಾಗ, ನಿರ್ದಿಷ್ಟ ವ್ಯಕ್ತಿಯ ಅಥವಾ ವಸ್ತುವಿನ ದಿಕ್ಕಿನಲ್ಲಿ ಅವಳು ಈಗ ನೋಡಬಹುದು.

 

#babychakrakannada

Baby

Read More
ಕನ್ನಡ

Leave a Comment

Recommended Articles