ಬೆಳವಣಿಗೆಯ ಮೈಲಿಗಲ್ಲುಗಳು – 19 -24 ತಿಂಗಳು

ಬೆಳವಣಿಗೆಯ ಮೈಲಿಗಲ್ಲುಗಳು – 19 -24 ತಿಂಗಳು

17 May 2019 | 1 min Read

Medically reviewed by

Author | Articles

19 ತಿಂಗಳಿಂದ 2 ವರ್ಷಗಳ ನಡುವಿನ ಮಗುವಿನ ಅಭಿವೃದ್ಧಿಯ ವಿವಿಧ ಹಂತಗಳನ್ನು ನೋಡೋಣ:

 

ಮಗುವು ಬೆಳೆದಂತೆ, ಅದು ಮಾತನಾಡುವುದು, ನಡೆಯುವುದು, ನೋಡಿ, ಆಟವುದನ್ನು ಕಲಿಯುತ್ತಾರೆ. ಪ್ರತಿ ತಿಂಗಳು ಮಾನವ ಅಭಿವೃದ್ಧಿಯ ಹಂತಗಳಿಗೆ ಮಗುವು ಒಳಗಾಗುತ್ತದೆ. ಇಲ್ಲಿ 19 ಇಂದ 24 ತಿಂಗಳುಗಳ ನಡುವಿನ ಮಕ್ಕಳಲ್ಲಿ ಆಗುವ ಅಭಿವೃದ್ಧಿಯ ಮೈಲಿಗಲ್ಲುಗಳ ಪರಿಶೀಲನಾಪಟ್ಟಿಯು ಕೆಳಕಂಡಂತಿವೆ.

 

19 ತಿಂಗಳಿನಿಂದ 2 ವರ್ಷದೊಳಗಿನ ಶಿಶುಗಳ ಸಾಧಾರಣ ಬೆಳವಣಿಗೆಯ ಮೈಲಿಗಲ್ಲುಗಳು:

 

19 ತಿಂಗಳುಗಳಲ್ಲಿ

 

  • ಫೋರ್ಕ್ ಮತ್ತು ಚಮಚವನ್ನು ಬಳಸಿ ತಿನ್ನಹುದು.
  • ಒಂದು ಸ್ಥಳದ ಸುತ್ತಲೂ ಓಡುತ್ತಾರೆ.

 

. ಚೆಂಡು ಎಸೆತವನ್ನು ಎಸೆಯಬಹುದು.

  • ಮನೆಯ ಸುತ್ತ ಸಹಾಯ ಮಾಡಲು ಇಷ್ಟ ಪಡುತ್ತಾರೆ.
  • 200 ಕ್ಕೂ ಹೆಚ್ಚು ಪದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ.
  • ಸರಿ ಮತ್ತು ತಪ್ಪು ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು (ಉದಾ: ನೀವು ಒಂದು ಆಪಲ್ ಅನ್ನು ಕಿತ್ತಳೆ ಎಂದು ಕರೆದರೆ).

 

. ಕೆಲ ವಸ್ತುಗಳನ್ನು ಹೆಸರಿನಿಂದ ಕರೆದಾಗ ವಸ್ತುಗಳನ್ನು ಎತ್ತಿ ತೋರಿಸಬಹುದು.

 

  • ನಿಮ್ಮ ಸಹಾಯದಿಂದ ಸ್ವಂತ ಕೈಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ.
  • ಅವನು / ಅವಳಿಗೆ ಪೀ ಗೆ ಹೋಗಬೇಕಾದಾಗ ತಿಳಿಯುವುದು.

 

20 ತಿಂಗಳುಗಳಲ್ಲಿ

 

  • ಕಸದಲ್ಲಿ ಏನಾದರೂ ಎಸೆಯುವಂತಹ ವಿಷಯಗಳನ್ನು ಅನುಕರಿಸುತ್ತಾರೆ.

. ಫೋನ್ನಲ್ಲಿ ಮಾತನಾಡುವಂತೆ ನಟಿಸುತ್ತಾ ನಾಟಕ ಮಾಡುತ ಆಟ ಆಡಬಹುದು.

 

  • ಅವನ / ಅವಳ ಬಟ್ಟೆಗಳನ್ನು ಸ್ವತಃ ತಾವಾಗಿಯೇ ಕಳಚುತ್ತಾರೆ.
  • ಗೊಂಬೆಗಳಿಗೆ ತಿನ್ನಿಸಲು ಆನಂದಿಸುತ್ತಾರೆ.
  • ಒಂದು ದಿನದಲ್ಲಿ 10 ಕ್ಕಿಂತ ಹೆಚ್ಚು ಪದಗಳನ್ನು ಕಲಿಯಬಹುದು.
  • ಮೆಟ್ಟಿಲುಗಳನ್ನು ಹತ್ತಬಹುದು.
  • ನೇರ ರೇಖೆಯನ್ನು ಹೇಗೆ ಎಳೆಯಬೇಕು ಎಂದು ಕಲಿಯುತ್ತಾರೆ.
  • ದೇಹದ ಭಾಗಗಳನ್ನು ಸರಿಯಾಗಿ ಹೆಸರಿಸಲು ಸಾಧ್ಯವಾಗುತ್ತದೆ.
  • ಜನನಾಂಗದ ಪ್ರದೇಶವನ್ನು ಅನ್ವೇಷಿಸಲು ಪ್ರಾರಂಭಿಸಬಹುದು.

 

21 ತಿಂಗಳುಗಳಲ್ಲಿ

 

  • ಆರಾಮವಾಗಿ ಮೆಟ್ಟಿಲುಗಳನ್ನು ಹತ್ತಬಹುದು.

. ಆಟಿಕೆಯನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸುವಂತಹ ಸರಳ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

  • ರಾತ್ರಿ 12 ಗಂಟೆಗಳಿಗೂ ಹೆಚ್ಚು ಕಾಲ ನಿದ್ರೆ ಮಾಡುತ್ತಾರೆ.
  • ಚೆಂಡನ್ನು ಓವರ್ ಆರ್ಮ್ ಎಸೆಯುತ್ತಾರೆ.
  • ಫುಟ್ಬಾಲ್ ಅನ್ನು ಒದೆಯಬಹುದು.
  • ಆರು ಬ್ಲಾಕ್ಗಳನ್ನು ಅಥವಾ ಹೆಚ್ಚಿನವುಗಳನ್ನು ಮೇಲಕ್ಕೆ ಜೋಡಿಸುವುದರಲ್ಲಿ  ಖುಷಿ ಪಡುತ್ತಾರೆ.
  • ಸುಲಭವಾಗಿ ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಾರೆ.
  • ಪುಸ್ತಕ ಅಥವಾ ಆಲ್ಬಮ್ ಅಲ್ಲಿ ಇರುವ ಚಿತ್ರ ಮತ್ತು ಫೋಟೋಗಳನ್ನು ಹೆಸರಿಸಬಹುದು.

 

22 ತಿಂಗಳುಗಳಲ್ಲಿ

 

  • 2 ಹಂತದ ವಿನಂತಿಯನ್ನು ಅನುಸರಿಸಲು ಸಾಧ್ಯವಿದೆಮೇಲೆದ್ದು ನಿನ್ನ ಆಟಿಕೆಯನ್ನು ಇಲ್ಲಿ ತಗೊಂಡು ಬಾ“.
  • ನೇರ ರೇಖೆಗಳನ್ನು ಎಳೆಯಬಲ್ಲರು.
  • ಚೆಂಡನ್ನು ಒದೆಯಬಹುದು.
  • ದೇಹದ ಹಲವಾರು ಭಾಗಗಳನ್ನು ಹೆಸರಿಸಲು ಸಾಧ್ಯವಾಗುತ್ತದೆ.
  • ಪದಗಳ ವಿರುದ್ಧ ಪದಗಳನ್ನು ಅರ್ಥೈಸಿಕೊಳ್ಳುವರು.
  • ಸಡಿಲವಾಗಿರುವ ಬಟ್ಟೆಗಳನ್ನು ಧರಿಸುತ್ತಾರೆ.
  • ಮೂತ್ರವನ್ನು ನಿಯಂತ್ರಿಸಬಲ್ಲರು.

 

23 ತಿಂಗಳುಗಳಲ್ಲಿ

 

  • ಪುಸ್ತಕದಲ್ಲಿರುವ  ಚಿತ್ರಗಳನ್ನು ಹೆಸರಿಸಲು ಸಾಧ್ಯವಾಗುತ್ತದೆ.
  • 50 ರಿಂದ 70 ಪದಗಳನ್ನು ಬಳಸಬಹುದು.
  • ಸ್ನೇಹಿತರೊಂದಿಗೆ ಉತ್ತಮವಾಗಿ ಬೆರೆಯಲು ಮತ್ತು ಇತರ ಮಕ್ಕಳೊಂದಿಗೆ ಆಡುವ ಮತ್ತು ಬೆರೆಯುವಲ್ಲಿ ಸಕ್ರಿಯ ಆಸಕ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
  • ಬಾಗಿಲು ತೆರೆಯಬಹುದು.
  • ಸರಳ ರಾಗಗಳನ್ನು ಗುನುಗುವುದರಲ್ಲಿ ಖುಷಿ ಪಡುತ್ತಾರೆ.
  • ಪ್ರಶ್ನೆಗಳಿಗೆಏಕೆಎಂದು ಕೇಳುವುದು ಹೇಗೆ ಎಂದು ಕಲಿಯುತ್ತಾರೆ.

 

24 ತಿಂಗಳುಗಳಲ್ಲಿ

 

. ದೇಹದ ಕನಿಷ್ಠ 6 ಭಾಗಗಳನ್ನು ಸರಿಯಾಗಿ ಹೆಸರಿಸಲು ಸಾಧ್ಯವಿದೆ.

  • 2-3 ಪದದ ವಾಕ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ.
  • ಅರ್ಧದಷ್ಟು ಭಾಷಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು.
  • ತಮ್ಮ ಬಗ್ಗೆ ಮಾತನಾಡುವುದನ್ನು ಪ್ರೀತಿಸುತ್ತಾರೆ.
  • ವರ್ಗಗಳಾಗಿ ವಿಂಗಡಿಸುವ ಮೂಲಕ ವಸ್ತುಗಳನ್ನು ವ್ಯವಸ್ಥೆಗೊಳಿಸಬಹುದು.
  • ಮೆಟ್ಟಿಲುಗಳಿಂದ ಕೆಳಗೆ ಇಳಿಯುತ್ತಾರೆ.
  • ಅಮೂರ್ತ ವಸ್ತುಗಳನ್ನು ಅರ್ಥಮಾಡಿಕೊಳ್ಳಲು ಈಗ ಸಾಧ್ಯವಾಗುತ್ತದೆ.
  • ಜಿಗಿಯಬಲ್ಲರು.

 

. ಲಿಂಗ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ.

 

19 ಮತ್ತು 24 ತಿಂಗಳುಗಳ ನಡುವೆ ಮಕ್ಕಳ ಇತರ ಸಾಮಾನ್ಯ ಬೆಳವಣಿಗೆಯ ಮೈಲಿಗಲ್ಲುಗಳು ಕೆಳಕಂಡಂತೆ ಇವೆ:

ಮಕ್ಕಳಲ್ಲಿ ಭಾವನಾತ್ಮಕ ಬೆಳವಣಿಗೆ

 

  • ಸ್ವಾತಂತ್ರ್ಯದ ಸಂಕೇತವನ್ನು ತೋರಿಸುತ್ತಾರೆ.
  • ನಿರಂತರ ಗಮನವನ್ನು ನೀರಿಕ್ಷಿಸುತ್ತಾರೆ.
  • ತನಗೆ ತಕ್ಷಣವೇ ಬೇಕಾದ ವಸ್ತುಗಳಿಗೆ ಮಗುವು ಹೆಚ್ಚು ಉದ್ವೇಗ ಕೋಪವನ್ನು ತೋರಿಸುತ್ತದೆ.
  • ಇತರರೊಂದಿಗೆ ವಸ್ತುಗಳನ್ನು ಹಂಚಿಕೊಳ್ಳುವುದಿಲ್ಲ.
  • ಅಪರಿಚಿತರನ್ನು ಕಂಡರೆ ನಾಚಿಕೊಳುತ್ತಾರೆ.

 

ವಯಸ್ಸಿನ ಗುಂಪಿನ ಸಮಯದಲ್ಲಿ ಶಿಶು ಅಭಿವೃದ್ಧಿಯ ಇತರ  ಹಂತಗಳಲ್ಲಿ ಕೆಳಗಿನವು ಸೇರಿವೆ:

 

  • ಕೈಬಿಡದೆ ಒಂದು ಕೈಯಿಂದ ಗಾಜಿನ ಲೋಟವನ್ನು ಹಿಡಿದುಕೊಳಬಹುದು.
  • ಬೆರಳು ಮತ್ತು ಕಟ್ಲರಿ ಆಹಾರಗಳ ನಡುವೆ ವ್ಯತ್ಯಾಸ ಮಾಡಬಹುದು.
  • ಬೇರೊಬ್ಬರು ಬಳಸುವ ಪದಗಳನ್ನು ಪ್ರತಿಧ್ವನಿಸುತ್ತಾರೆ.

 

. ಸಮತೋಲನ ಕಳೆದುಕೊಳ್ಳದೆ ಅಥವಾ ಬೀಳದೆ ಆಟಿಕೆ ತೆಗೆದುಕೊಳ್ಳಲು ಕೆಳಗೆ ಬಾಗಬಹುದು.

  • ವೇಗವಾಗಿ ಓಡಬಹುದು.
  • ಮೂತ್ರಕೋಶದ ನಿಯಂತ್ರಣವನ್ನು ಪಡೆಯಲು  ಪ್ರಾರಂಭಿಸುತ್ತಾರೆ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.